Asianet Suvarna News Asianet Suvarna News

ಮೈ ತುಂಬ ಸಾಲವಿದೆಯಾ? ಪರಿಹಾರಕ್ಕೆ ಈ Vaastu Tips ಅನುಸರಿಸಿ

ಕೆಲವರು ತುಂಬಾ ದುಡಿಯುತ್ತಾರೆ. ಆದರೆ ಸಾಲ ಸದಾ ಇದ್ದೇ ಇರುತ್ತದೆ. ಸಾಲದಿಂದ ಮುಕ್ತಿ ಪಡೆಯೋಕೆ ನೀವು ಈ ಕೆಳಗಿನ ವಾಸ್ತು ಸೂತ್ರಗಳನ್ನು ಅನುಸರಿಸಬಹುದು.

 

Vastu tips to get rid of debt
Author
Bengaluru, First Published May 8, 2022, 12:40 PM IST

ಸಾಲಕ್ಕೆ ಹಲವು ಕಾರಣಗಳಿವೆ. ಆದಾಯಕ್ಕಿಂತ ಅಧಿಕ ಖರ್ಚು ಮಾಡುವುದು. ನಮ್ಮ ಸಾಮರ್ಥ್ಯ ಮಿತಿಗಳು ಗೊತ್ತಿಲ್ಲದೇ ಮನೆ ಸಾಲ, ಕಾರು ಸಾಲ ಮಾಡುವುದು- ಹೀಗೆ. ಅದ್ದೂರಿಯಾಗಿ ಮದುವೆ ಗಿದುವೆ ಎಂದೆಲ್ಲ ಮಾಡುತ್ತಾ ಹೋದರೆ ಸಾಲವೂ ಹೆಗಲೇರುತ್ತದೆ. ಹಾಗೆಂದು ಎಲ್ಲವೂ ನಮ್ಮ ಸ್ವಂತ ಕೈಯಲ್ಲೂ ಇರುವುದಿಲ್ಲ. ಬಹುಪಾಲು ನಾವಿರುವ ಮನೆಯ ವಾಸ್ತು ಕೂಡ ಅದಕ್ಕೆ ಕಾರಣ ಆಗಿರುತ್ತೆ. 
ಕೆಲವು ಸೂಕ್ಷ್ಮ ಸಂಗತಿಗಳನ್ನು ಗಮನಿಸಿ ನೋಡಿ. ಇವು ನಿಮ್ಮ ಮೈಮೇಲಿನ ಸಾಲದ ಹೊರೆಗೆ ಕಾರಣ ಆಗಿರಬಹುದು. ಅದರಿಂದ ಪಾರಾಗುವ ಟಿಪ್ಸ್ ಕೂಡ ಇಲ್ಲಿ ಕೊಟ್ಟಿದೆ. 

  • ಉತ್ತರ ದಿಕ್ಕಿನಲ್ಲಿ ಇರಬಹುದಾದ ಅಡೆತಡೆ ಸಾಲಗಳಿಗೆ ದೊಡ್ಡ ಕಾರಣ. ಉತ್ತರದ ಗೋಡೆಯ ಪಕ್ಕದಲ್ಲಿ ಭಾರವಾದ ಪೀಠೋಪಕರಣಗಳನ್ನು ಇಡುವುದು, ಉತ್ತರ ಗೋಡೆಯ ಮೇಲೆ ಕ್ಲೋಸೆಟ್‌ಗಳನ್ನು ಹಾಕುವುದು, ಉತ್ತರ ಗೋಡೆಯಲ್ಲಿ ವಾರ್ಡ್‌ರೋಬ್ ಮಾಡುವುದು, ಅಸ್ತವ್ಯಸ್ತತೆ, ಉತ್ತರದ ಗೋಡೆಯಲ್ಲಿ ಕಡಿಮೆ ತೆರೆದ ಜಾಗಗಳು ಇವೆಲ್ಲವೂ ವಾಸ್ತು ದೋಷಗಳು.
  • ಕಟ್ಟಡದ ರಚನೆಯನ್ನು ಉತ್ತರದಿಂದ ಎತ್ತರಿಸಿದರೆ, ಅದು ವಾಸ್ತು ದೋಷವನ್ನು ಉಂಟುಮಾಡುತ್ತದೆ. ಮೇಲಿನ ಮಹಡಿಯನ್ನು ನಿರ್ಮಿಸುವಾಗ ಉತ್ತರದ ಪ್ರದೇಶವನ್ನು ಆವರಿಸಿದರೆ ಮತ್ತು ದಕ್ಷಿಣ ದಿಕ್ಕನ್ನು ಖಾಲಿ ಬಿಟ್ಟರೆ ಅದು ವಾಸ್ತು ದೋಷವನ್ನು ಉಂಟುಮಾಡುತ್ತದೆ.

Vastu tips: ಮಣ್ಣಿನ ಮಡಿಕೆಯನ್ನು ಈ ದಿಕ್ಕಿನಲ್ಲಿಟ್ಟರೆ… ಸಂಪತ್ತು ವೃದ್ಧಿ

  • ಇದಲ್ಲದೆ, ನೈರುತ್ಯ ದಿಕ್ಕಿನಲ್ಲಿ ನೀರಿನ ಭೂಗತ ಸಂಪ್ ಅಥವಾ ಟ್ಯಾಂಕ್‌ಗಳು ಸಾಲಗಳಿಗೆ ಕಾರಣವಾಗಬಹುದು.
  • ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಏನಿದೆ ಎಂದು ಪರಿಶೀಲಿಸಿ. ಆದರ್ಶ ವಾಸ್ತುವಿನ ಪ್ರಕಾರ, ಆಗ್ನೇಯ ದಿಕ್ಕು ಅಗ್ನಿದೇವನ ಆವಾಸಸ್ಥಾನ. ಹೀಗಾಗಿ ಅಲ್ಲಿ ಅಡುಗೆ ಮನೆ ಇರಬೇಕು. ಆಗ್ನೇಯವು ಬೆಂಕಿಯ ಸ್ಥಳವಾಗಿದೆ, ಅದರ ಒಡೆಯ ಅಗ್ನಿದೇವ. ಬೆಂಕಿ ಮತ್ತು ನೀರು ಇವೆರಡೂ ವಿರೋಧಿ ಅಂಶಗಳು. ಹೀಗಾಗಿ ಆಗ್ನೇಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇರಬಾರದು. ಭೂಗತ ಟ್ಯಾಂಕ್ ಸಹ ಇರಬಾರದು ಹಾಗೂ ಮನೆಯ ಮೇಲಿನ ನೀರಿನ ಟ್ಯಾಂಕ್ ಸಹ ಇರಬಾರದು. ಇವು ಇದ್ದರೆ ಮನೆಯೊಳಗೇ ಜಗಳ ವಿವಾದ ಹಾಗೂ ಸಾಲ ಖಚಿತ. 
  • ಮನೆಯ ಫ್ಲೋರಿಂಗ್ ಹೇಗಿದೆ ಎಂದು ನೋಡಿ. ಯಾವುದೇ ಫ್ಲೋರಿಂಗ್ ಇರಲಿ, ಅಲ್ಲಿ ಬಿರುಕು ಇರಬಾರದು. ಬಿರುಕು ಇದ್ದರೆ ಅದು ಲಕ್ಷ್ಮಿಯನ್ನು ಬಿರುಕಿನ ಮೂಲಕ ನೆಲದೊಳಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಬಿರುಕು ಇದ್ದರೆ ಅದನ್ನು ಮುಚ್ಚಿ. ಅಥವಾ ಸದ್ಯ ಅದಕ್ಕೆ ಅನುಕೂಲ ಇಲ್ಲವಾದರೆ, ನೆಲದ ಮೇಲೆ ದಪ್ಪ ಕಾರ್ಪೆಟ್ ಹಾಸಿದರೆ ಸಾಲದ ಹೊರೆಯನ್ನು ತಪ್ಪಿಸಬಹುದು. 
  • ನೈರುತ್ಯದಲ್ಲಿ ನೀರಿನ ಟ್ಯಾಂಕ್ ಇದ್ದರೆ ಅದಕ್ಕೆ ಅಭಿಮುಖವಗಿ ನೆಲದ ಮೇಲೆ ತಲೆಕೆಳಗಾದ ಒಂದು ಕನ್ನಡಿಯನ್ನು ಇರಿಸಿ. ಅದು ನೆಲವನ್ನು ಮೇಲಕ್ಕೆತ್ತಿದಂತೆ ಕಾಣುತ್ತದೆ. ಇದು ಋಣಭಾರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಮನೆ ಬಾಡಿಗೆಗೆ ನೀಡುವ ಮುನ್ನ ಈ vastu tips ಗಮನಿಸಿ

  • ಆದರೆ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮರೆತೂ ಕನ್ನಡಿಯನ್ನು ಹಿಮ್ಮುಖವಾಗಿ ಇಡಬೇಡಿ. ಹೀಗೆ ಮಾಡಿದರೆ ಸಾಲದ ಹೊರೆ ಹೆಚ್ಚಬಹುದು. ಏಕೆಂದರೆ ತಪ್ಪು ದಿಕ್ಕಿನಲ್ಲಿ ಇಟ್ಟ ಕನ್ನಡಿಯು ವಾಸ್ತು ದೋಷದ ಅಂಶವಾಗುತ್ತದೆ.
  • ಉತ್ತರಕ್ಕೆ ಅಥವಾ ಪೂರ್ವಕ್ಕೆ ಕನ್ನಡಿಯನ್ನು ಇಡಬಹುದು. ಅಂದರೆ ನೀವು ಕನ್ನಡಿಯನ್ನು ನೋಡುವಾಗ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರುವಂತೆ ಇರಬೇಕು. ಇದಕ್ಕೆ ವಿರುದ್ಧ ದಿಕ್ಕುಗಳಲ್ಲಿ ನಿಂತು ಕನ್ನಡಿ ನೋಡುವುದಾದರೆ ಸಾಲ ಖಚಿತ.
  • ಉತ್ತರದಲ್ಲಿ ಕೆಂಪು ಬಣ್ಣವನ್ನು ಹಚ್ಚುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಅದೇ ರೀತಿ ಆಗ್ನೇಯದಲ್ಲಿ ನೀಲಿ ಬಣ್ಣವು ನಗದು ಹರಿವಿನ ಶಕ್ತಿಯನ್ನು ಕಲುಷಿತಗೊಳಿಸುತ್ತದೆ. ಆಗ್ನೇಯವು ಬೆಂಕಿಯ ದಿಕ್ಕು ಮತ್ತು ನೀಲಿ ಬಣ್ಣವು ನೀರಿನ ಬಣ್ಣ. ಆದ್ದರಿಂದ ಆಗ್ನೇಯದಲ್ಲಿ ನೀಲಿ ಬಣ್ಣವು ವಾಸ್ತು ಪ್ರಕಾರ ಧಾತುರೂಪದ ಅಸಮತೋಲನ ಉಂಟುಮಾಡುತ್ತದೆ.
  • ದಕ್ಷಿಣ- ನೈರುತ್ಯವು ವ್ಯರ್ಥ ವೆಚ್ಚಗಳ ವಲಯವಾಗಿದೆ. ನೀವು ಈ ವಲಯದಲ್ಲಿ ಮಲಗಿದರೆ ಅಥವಾ ಮನೆ/ಕಚೇರಿಯ ಮುಖ್ಯ ದ್ವಾರವು ಈ ದಿಕ್ಕಿನಲ್ಲಿದ್ದರೆ ಅಥವಾ ನಿಮ್ಮ ಕೆಲಸದ ಟೇಬಲ್ ಕಚೇರಿಯ ಈ ದಿಕ್ಕಿನಲ್ಲಿದ್ದರೆ, ಹೆಚ್ಚುತ್ತಿರುವ ಸಾಲಗಳ ಕೆಟ್ಟ ಚಕ್ರದಿಂದ ಹೊರಬರಲು ನಿಮಗೆ ಕಷ್ಟವಾಗಬಹುದು. ಕೆಲ ಸರಳವಾದ ದಿಕ್ಕು ಬದಲಾವಣೆ ಮೂಲಕ ಇದನ್ನು ಬದಲಾಯಿಸಿ. 

Vastu Tips : ಹೊಸ ಮನೆಯಲ್ಲಿ ಸಂತೋಷ ಉಳೀಬೇಕಂದ್ರೆ ಈ ವಸ್ತು ಬಳಸ್ಬೇಡಿ!

  • ಈಶಾನ್ಯದಲ್ಲಿ ಅಸ್ತವ್ಯಸ್ತತೆ, ಕಸದ ತೊಟ್ಟಿ, ಶೌಚಾಲಯ, ಒಳಚರಂಡಿ ಗುಂಡಿ, ಪೊರಕೆ ಮತ್ತು ಅಂತಹ ಸೂಕ್ತವಲ್ಲದ ವಸ್ತುಗಳು ಇದ್ದರೆ, ಅವು ಸ್ಪಷ್ಟತೆಯನ್ನು ಕಲುಷಿತಗೊಳಿಸುತ್ತವೆ. ಉತ್ತಮ ಶಕ್ತಿಯನ್ನು ಹಾಳು ಮಾಡುತ್ತದೆ. ಕಳಪೆ ಆರ್ಥಿಕ ಯೋಜನೆ, ಸಾಲದ ಬಲೆಗೆ ಆಹ್ವಾನಿಸುವ ಸಂದರ್ಭಗಳಿಗೆ ಕಾರಣವಾಗುತ್ತದೆ. ಈಶಾನ್ಯದಿಂದ ಈ ಗೊಂದಲವನ್ನು ತೆರವುಗೊಳಿಸಿ ಮತ್ತು ಧ್ಯಾನಸ್ಥ ಬುದ್ಧನ ಪ್ರತಿಮೆಯನ್ನು ಇರಿಸಿ.

 

Follow Us:
Download App:
  • android
  • ios