ಮನೆ ಬಾಡಿಗೆಗೆ ನೀಡುವ ಮುನ್ನ ಈ vastu tips ಗಮನಿಸಿ
ಮನೆಯನ್ನು ಬಾಡಿಗೆಗೆ ನೀಡುವಾಗ ಮಾಲೀಕರು ಕೆಲವೊಂದು ವಾಸ್ತು ಸಲಹೆಗಳನ್ನು ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮನೆ ದೊಡ್ಡದಾಗಿದೆ ಎಂದಾಗ ಬಾಡಿಗೆಗೆ ನೀಡುವುದು ಅತ್ಯುತ್ತಮ ನಿರ್ಧಾರ. ಏಕೆಂದರೆ ಇದರಿಂದ ಆದಾಯ ಹೆಚ್ಚುವುದು. ಆದರೆ, ಬಾಡಿಗೆಗೆ ಕೊಡುವಾಗ ಕೂಡಾ ಕೆಲ ವಾಸ್ತು(vastu) ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಏಕೆಂದರೆ, ಬಾಡಿಗೆಗೆ ಕೊಟ್ಟ ಮನೆಯ ಭಾಗದ ವಾಸ್ತು ದೋಷಗಳು ಮಾಲೀಕನ ಮೇಲೆ ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ, ಕೆಲ ವಾಸ್ತುವು ಬಾಡಿಗೆದಾರನಿಗೆ ಅದೃಷ್ಟವಾಗಿಯೂ, ಮಾಲೀಕನಿಗೆ ದುರದೃಷ್ಟವಾಗಿಯೂ ಪರಿಣಮಿಸುತ್ತವೆ.
- ನೀವು ಕೇವಲ ಒಂದು ಕೋಣೆಯನ್ನು ಬಾಡಿಗೆಗೆ ನೀಡಲು ಬಯಸಿದರೆ, ಅದು ವಾಯುವ್ಯ(North West) ಅಥವಾ ಆಗ್ನೇಯ(South East) ಮೂಲೆಗಳಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಲು ನೀವು ನಿರ್ಧರಿಸಿದ್ದರೆ, ಉತ್ತರ(North) ಅಥವಾ ಪೂರ್ವದ ಮನೆಯ ಭಾಗವನ್ನು ನಿಮಗಾಗಿ ಉಳಿಸಿಕೊಳ್ಳಿ ಮತ್ತು ದಕ್ಷಿಣ ಮತ್ತು ಪಶ್ಚಿಮದ ಭಾಗಗಳನ್ನು ಬಾಡಿಗೆಗೆ ನೀಡಿ.
ಪುರಾಣಗಳ ಈ 8 ಪಾತ್ರಗಳು ಇಂದಿಗೂ ಜೀವಂತವಾಗಿದ್ದಾರೆ!
- ನೀವು ಈಗಾಗಲೇ ಎರಡನೇ ಅಂಶವನ್ನು ಅನುಸರಿಸಿದ್ದು ದಕ್ಷಿಣ ಅಥವಾ ಪಶ್ಚಿಮ ಮೂಲೆಯನ್ನು ಬಾಡಿಗೆಗೆ ಬಿಟ್ಟಿರುತ್ತೀರಿ. ಅಂಥ ಸಂದರ್ಭದಲ್ಲಿ ಬಾಡಿಗೆದಾರರು ಮನೆ ಖಾಲಿ ಮಾಡಿದರೆ, ಆದಷ್ಟು ಬೇಗ ಹೊಸ ಬಾಡಿಗೆದಾರರನ್ನು ಪಡೆಯಿರಿ ಅಥವಾ ಆ ಭಾಗವನ್ನು ನೀವೇ ಬಳಸಲು ಪ್ರಾರಂಭಿಸಿ. ಅಲ್ಲಿ ಖಾಲಿ ಜಾಗವನ್ನು ಹೆಚ್ಚು ಸಮಯ ಬಿಡುವುದರಿಂದ ಆರ್ಥಿಕ ನಷ್ಟ(financial loss) ಮತ್ತು ಮಾನಸಿಕ ಒತ್ತಡ(mental stress) ಉಂಟಾಗಬಹುದು.
- ನಿಮ್ಮ ಮನೆಯ ಈಶಾನ್ಯ ಭಾಗವು ಬಾಡಿಗೆದಾರರಿಗೆ ಅದೃಷ್ಟವನ್ನು ನೀಡುತ್ತದೆ. ಆದರೂ, ಅದನ್ನು ಎಂದಿಗೂ ಬಾಡಿಗೆಗೆ ಬಿಡಬೇಡಿ. ಇದರಿಂದ ನಿಮಗೆ ಮಾನಸಿಕ ಒತ್ತಡ, ಗರ್ಭ ಧರಿಸುವಲ್ಲಿ ಸಮಸ್ಯೆಗಳು ಮತ್ತು ಆದಾಯದ ನಷ್ಟ ಉಂಟಾಗಬಹುದು.
- ನೈಋತ್ಯ(South West) ಭಾಗವು ಬಾಡಿಗೆದಾರನಿಗೆ ಧನಾತ್ಮಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಆದರೆ ಅದು ಸಹ ಮಾಲೀಕರೊಂದಿಗೆ ಸಂಪರ್ಕ ಹೊಂದಿರುವುದರಿಂದ, ಅದನ್ನು ಬಾಡಿಗೆಗೆ ನೀಡುವುದರಿಂದ ನಿಮ್ಮ ಜೀವನದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು ಮತ್ತು ನಿಮ್ಮ ಮೇಲೆ ಬಾಡಿಗೆದಾರರ ಪ್ರಾಬಲ್ಯ ಹೆಚ್ಚಾಗಬಹುದು.
ಈ ಐದು ರಾಶಿಗಳಿಗೆ ಹಳೆಯ ಪ್ರೇಮಿಯನ್ನು ಮರೆಯೋದು ಸುಲಭವಲ್ಲ!
- ನೆಲಮಹಡಿ ಮತ್ತು ಮೊದಲ ಅಂತಸ್ತಿನ ಬಾಡಿಗೆಗೆ ಚರ್ಚೆಯಾಗಿದ್ದರೆ, ಮೆಟ್ಟಿಲುಗಳ ಸ್ಥಾನ ಮತ್ತು ಹಿನ್ನಡೆಗಳನ್ನು ನೋಡಿ. ಉತ್ತರ ಮತ್ತು ಪೂರ್ವದ ಹಿನ್ನಡೆಗಳು ತೆರೆದಿದ್ದರೆ, ನೆಲಮಹಡಿಯನ್ನು ಉಳಿಸಿಕೊಳ್ಳಿ;
- ನಿಮ್ಮ ಮನೆ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿದರೆ ಮತ್ತು ಮೆಟ್ಟಿಲು ದಕ್ಷಿಣ ಅಥವಾ ಪಶ್ಚಿಮದಲ್ಲಿ ನೆಲೆಗೊಂಡಿದ್ದರೆ, ಮೇಲಿನ ಅಂತಸ್ಥನ್ನು ಬಾಡಿಗೆಗೆ ನೀಡುವುದು ಉತ್ತಮ.
- ನೆಲದಡಿಯ ನೀರಿನ ಟ್ಯಾಂಕ್‌ಗಳು, ಬೋರ್‌ವೆಲ್‌ಗಳು ಮತ್ತು ನೆಲಮಾಳಿಗೆಗಳು ನೆಲ ಮಹಡಿಯಲ್ಲಿ ವಾಸಿಸುವ ಜನರ ಮೇಲೆ ಪರಿಣಾಮ ಬೀರುತ್ತವೆ, ಟೆರೇಸ್‌ಗೆ ಹೋಗುವ ಮೆಟ್ಟಿಲುಗಳ ಛಾವಣಿಗಳು, ಲಿಫ್ಟ್ ರೂಮ್‌ಗಳು, ಓವರ್‌ಹೆಡ್ ವಾಟರ್ ಟ್ಯಾಂಕ್‌ಗಳು ಇತ್ಯಾದಿಗಳು ಮೇಲಿನ ಮಹಡಿಗಳಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಮನೆಯ ಯಾವ ಭಾಗವನ್ನು ಬಾಡಿಗೆಗೆ ನೀಡಬೇಕೆಂದು ನಿರ್ಧರಿಸುವಾಗ ಈ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
- ಸಾಧ್ಯವಾದಷ್ಟು, ಉಳಿಸಿಕೊಂಡಿರುವ ಮತ್ತು ಬಾಡಿಗೆಗೆ ನೀಡುತ್ತಿರುವ ಭಾಗಗಳು ಆಯತಾಕಾರ ಅಥವಾ ಚೌಕಾಕಾರವಾಗಿರಬೇಕು.
- ನೀವು ಬಾಡಿಗೆದಾರನೊಂದಿಗೆ ನ್ಯಾಯಾಲಯದ ಪ್ರಕರಣವನ್ನು ಎದುರಿಸುತ್ತಿದ್ದರೆ, ಅಥವಾ ಅವನು ಬಾಡಿಗೆಗೆ ನೀಡಿದ ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದರೆ ಮನೆಯ ನೈಋತ್ಯ ಮೂಲೆಯನ್ನು ಎತ್ತರಿಸಿ ಮತ್ತು ಅದಕ್ಕೆ ಹೋಲಿಸಿದರೆ ಈಶಾನ್ಯವನ್ನು ಕೆಳಕ್ಕೆ ಇರಿಸಿ. ನಿಮ್ಮ ಸಮಸ್ಯೆ ತಕ್ಷಣ ಪರಿಹಾರವಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.