Astro remedies: ಜನ್ಮಕುಂಡಲಿಯಲ್ಲಿ ಕುಜ ದೋಷವಿದ್ದರೆ ಈ ರೀತಿ ಪರಿಹಾರ ಮಾಡಿಕೊಳ್ಳಿ..
ಮಂಗಳ ದೋಷದಿಂದಾಗಿ ವಿವಾಹವಾಗುತ್ತಿಲ್ಲ, ಅಥವಾ ವಿವಾಹ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದಾದಲ್ಲಿ ನೀವೇನು ಮಾಡಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ.
ಮಂಗಳನು ಸಂಬಂಧಗಳು(relationship) ಹಾಗೂ ಸಂತೋಷಮಯ ಪ್ರೇಮ, ವಿವಾಹ ಜೀವನಕ್ಕೆ ಕಾರಣಕಾರಕ. ವಿವಾಹ ಜೀವನದಲ್ಲಿ ಮಂಗಳನ ಕಾರಣದಿಂದಲೇ ಉತ್ಸಾಹ, ಸಂತೋಷ ಹೆಚ್ಚುವುದು. ಆದರೆ, ಮಂಗಳನು ಜಾತಕದಲ್ಲಿ ತಪ್ಪು ಸ್ಥಾನದಲ್ಲಿದ್ದರೆ ಅದರಿಂದ ಬಹಳಷ್ಟು ಸಮಸ್ಯೆಗಳು ಏಳುತ್ತವೆ. ಹೀಗೆ ಜಾತಕದಲ್ಲಿ ಮಂಗಳನ ಅವಕೃಪೆ ಇದ್ದರೆ ಅದನ್ನೇ ಮಂಗಳ ದೋಷ(Mangal dosha) ಅಥವಾ ಕುಜ ದೋಷ ಎನ್ನುವುದು. ಇದಕ್ಕೆ ಭೌಮ್ ದೋಷ, ಕಾಳತ್ರ ದೋಷ ಎಂದೂ ಕರೆಯುತ್ತಾರೆ. ಹೀಗೆ ಕುಂಡಲಿಯಲ್ಲಿ ಕುಜ ದೋಷ ಇರುವವರನ್ನು ಮಾಂಗಳಿಕ್ ಎನ್ನಲಾಗುತ್ತದೆ.
ಮಂಗಳನು ನಮ್ಮ ಕುಂಡಲಿಯ 1, 2, 4, 7, 8 ಹಾಗೂ 12ನೇ ಮನೆಯಲ್ಲಿದ್ದಾಗ ಮಂಗಳ ದೋಷ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ವಿವಾಹಕ್ಕೆ ಅಡೆತಡೆಗಳು ಉಂಟಾಗುವ ಜೊತೆಗೆ, ವಿವಾಹಿತರಲ್ಲಿ ಜಗಳ, ಮುನಿಸು ಇತ್ಯಾದಿಗಳು ಹೆಚ್ಚುತ್ತವೆ. ಆದರೆ, ಬುಧ, ಗುರು ಹಾಗೂ ಶುಕ್ರ(Venus)ನ ಅನುಗ್ರಹವಿದ್ದರೆ ಕುಜ ದೋಷ ಕೊಂಚ ಮಟ್ಟಿಗೆ ಕಡಿಮೆಯಾಗುತ್ತದೆ.
Personality Traits: ಈ ರಾಶಿಯವರು ತಮ್ಮ ಭಾವನೆಗಳನ್ನು ಮುಚ್ಚಿಡೋದ್ರಲ್ಲಿ ನಂಬರ್ ಒನ್!
ಜಾತಕದಲ್ಲಿ ಮೊದಲನೇ ಮನೆಯು ಆರೋಗ್ಯ(health), ಎರಡನೆಯ ಮನೆ ಸಮೃದ್ಧಿ(wealth), ಮೂರನೆಯ ಮನೆ ಕುಟುಂಬ(family) ಹಾಗೂ ಅಧಿಕಾರ(power)ವನ್ನು ಪ್ರತಿನಿಧಿಸುತ್ತವೆ. ನಾಲ್ಕನೇ ಮನೆಯು ಸಂತೋಷ ಹಾಗೂ ಭೌತಿಕ ಸಂತೋಷ(material pleasures), ಏಳನೇ ಮನೆಯು ವಿವಾಹ ಜೀವನ ಹಾಗೂ ಸಂಗಾತಿಯೊಂದಿಗಿನ ಸಂಬಂಧವನ್ನು, ಎಂಟನೇ ಮನೆಯು ವಧುವಿನ ಅದೃಷ್ಟ(good luck)ವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲ, ಈ ಮನೆಯು ವಧುವರರ ವಯಸ್ಸನ್ನು ಕೂಡಾ ಹೇಳುತ್ತದೆ. ಇದು ಸಂತೋಷವನ್ನು ಸೂಚಿಸುತ್ತದೆ. ಈ ಮನೆಗಳಲ್ಲಿ ಮಂಗಳ ದೋಷವಿದ್ದಾಗ ಆಯಾ ವಿಷಯ ಸಂಬಂಧ ಸಮಸ್ಯೆಗಳು ಹೆಚ್ಚುತ್ತವೆ. ಆದರೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಮಂಗಳ ದೋಷಕ್ಕೂ ಪರಿಹಾರಗಳಿವೆ. ಇವು ದೋಷವನ್ನು ಸಂಪೂರ್ಣ ತೆಗೆಯುವುದಿಲ್ಲವಾದರೂ ಕೊಂಚ ಮಟ್ಟಿಗೆ ಪರಿಣಾಮವನ್ನು ತಗ್ಗಿಸಬಲ್ಲವು. ಆದರೆ, ಕೆಲವರ ವಿಷಯದಲ್ಲಿ ಮಾತ್ರ, ಇತರೆ ಗ್ರಹಗಳ ಕಾರಣದಿಂದ ಸಂಪೂರ್ಣ ಮಂಗಳ ದೋಷ ಪರಿಹಾರವಾಗುತ್ತದೆ.
ಮಂಗಳನ ಸ್ಥಾನ
ಮಂಗಳನು ಮೇಷ, ಕಟಕ, ಕನ್ಯಾ, ಮಕರ ರಾಶಿಯಲ್ಲಿದ್ದಾಗ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಮೇಷ ಹಾಗೂ ವೃಶ್ಚಿಕ ಮಂಗಳನ ಸ್ವಂತ ರಾಶಿಯಾಗಿದ್ದು, ಇವುಗಳಿಗೆ ಕುಜ ದೋಷ ಇರುವುದಿಲ್ಲ. ಇನ್ನು ಸೂರ್ಯ, ಚಂದ್ರ, ಗುರುವಿನಂಥ ಸ್ನೇಹಿ ಗ್ರಹಗಳು ದೋಷ ಇರುವ ಮನೆಯಲ್ಲೇ ಇದ್ದಾಗಲೂ ಮಂಗಳ ದೋಷ ಇರುವುದಿಲ್ಲ. ಕಟಕವು ದುರ್ಬಲ ರಾಶಿಯಾಗಿದ್ದು ಅಲ್ಲಿಯೂ ಮಂಗಳ ದೋಷ ಉಂಟಾಗುವುದಿಲ್ಲ. ಜಾತಕದಲ್ಲಿ ಚಂದ್ರು ಕೇಂದ್ರ ಸ್ಥಾನದಲ್ಲಿದ್ದಾಗ ಕೂಡಾ ಮಂಗಳ ದೋಷ ಅಂಟುವುದಿಲ್ಲ. ಹೀಗೇ ಕೆಲವೊಂದು ರಾಶಿಗಳಿಗೆ ಕೆಲ ಕಾರಣಗಳಿಗೆ ದೋಷ ಸ್ಥಾನದಲ್ಲಿ ಮಂಗಳನಿದ್ದರೂ ದೋಷ ಅಂಟುವುದಿಲ್ಲ.
Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!
ಮಂಗಳ ದೋಷ ಪರಿಣಾಮಗಳು(Malefic Effects Of Mars)
ಒಂದು ವೇಳೆ ಕುಜ ದೋಷ ಜೋರಾಗಿಯೇ ಇದೆ ಎಂದರೆ ಅದರಿಂದ ಸಾಕಷ್ಟು ಹಾನಿಗಳಿವೆ. ಅಂತೂ ಮಂಗಳ ದೋಷ ಜಾತಕದಲ್ಲಿದೆ ಎಂದಾದರೆ ವಿವಾಹ ಆಗುವುದಿಲ್ಲ ಎಂಬುದರಿಂದ ಹಿಡಿದು ವಿವಾಹ ಜೀವನದಲ್ಲಿ ವಿಚ್ಚೇದನದವರೆಗೆ ಸಾಕಷ್ಟು ಸಮಸ್ಯೆಗಳು ಏಳಬಹುದು.
ದೋಷ ಪರಿಹಾರ
- ವಧು ಹಾಗೂ ವರ ಇಬ್ಬರ ಜಾತಕದಲ್ಲೂ ಮಂಗಳ ದೋಷವಿದ್ದಾಗ ಅವರಿಬ್ಬರೂ ವಿವಾಹವಾದರೆ ದೋಷ ತಾನಾಗಿಯೇ ಪರಿಹಾರವಾಗುತ್ತದೆ. ಅವರಿಬ್ಬರ ಜೀವನ ಚೆನ್ನಾಗಿರುತ್ತದೆ.
- ಮದುವೆಯಲ್ಲಿ ಒಬ್ಬರಿಗೆ ಮಂಗಳ ದೋಷವಿದ್ದಾಗ ಕುಂಭ ವಿವಾಹ ನಡೆಸುವ ಮೂಲಕ ದೋಷ ಪರಿಹಾರ ಮಾಡಬಹುದು. ಅಂದರೆ ದೋಷವಿರುವ ವ್ಯಕ್ತಿಯು ಮೊದಲು ಬಾಳೆಮರ(Banana tree), ಅಶ್ವತ್ಥ ಮರ ಅಥವಾ ಬೆಳ್ಳಿ ಅಥವಾ ಬಂಗಾರದ ವಿಷ್ಣುವಿನ ವಿಗ್ರಹದೊಂದಿಗೆ ವಿವಾಹವಾಗಬೇಕು. ನಂತರ ತಾವು ಇಚ್ಛಿಸಿದ ವ್ಯಕ್ತಿಯೊಂದಿಗೆ ಮದುವೆ ಆಗಬಹುದು.
- ಮೊದಲ ಮನೆ ಮೇಷವಾಗಿದ್ದರೆ, ಮಂಗಳವೂ ಅಲ್ಲೇ ಇದ್ದರೆ ಆಗ ಮಂಗಳ ದೋಷ ಇರುವುದಿಲ್ಲ.
- ಮಂಗಳವಾರ ಉಪವಾಸ ಆಚರಿಸುವುದರಿಂದ ಕೂಡಾ ದೋಷ ಪರಿಹಾರ ಸಾಧ್ಯವಾಗಲಿದೆ. ಮಾಂಗಳಿಕರು ಮಂಗಳವಾರ ಕೇವಲ ತೊಗರಿ ಬೇಳೆ(toor daal) ಪದಾರ್ಥ ಸೇವಿಸಬಹುದು.
- ಮಂಗಳ ದೋಷ ಇರುವವರು ಮಂಗಳವಾರದಂದು ನವಗ್ರಹ ಮಂತ್ರ ಹೇಳಿಕೊಳ್ಳಬೇಕು. ಜೊತೆಗೆ, ಪ್ರತಿದಿನ ಗಾಯತ್ರಿ ಮಂತ್ರವನ್ನು 108 ಬಾರಿ ಇಲ್ಲವೇ ಹನುಮಾನ್ ಚಾಳೀಸ(Hanuman Chalisa)ನ್ನು ಹೇಳಿಕೊಳ್ಳಬೇಕು.
- ನವಗ್ರಹ ಇರುವ ದೇವಾಲಯಗಳಿಗೆ ಭೇಟಿ ನೀಡುವುದು, ಅಲ್ಲಿ ಮಂಗಳವಾರ ವಿಶೇಷ ಪೂಜೆಗಳನ್ನು ನಡೆಸುವುದರಿಂದಲೂ ಮಂಗಳ ದೋಷ ಮುಕ್ತರಾಗಬಹುದು. ಇಲ್ಲದಿದ್ದಲ್ಲಿ ಮಂಗಳವಾರದಂದು ಆಂಜನೇಯ ದೇವಾಲಯಕ್ಕೆ ಭೇಟಿ ಕೊಡುವ ಅಭ್ಯಾಸ ಇಟ್ಟುಕೊಂಡರೂ ಒಳ್ಳೆಯದು.
- ಕುಜ ದೋಷ ಇರುವವರು ಮಂಗಳವಾರ ಚಾಕು, ಕೆಂಪು ಬಣ್ಣದ ಬೇಳೆಕಾಳುಗಳು, ಗೋಧಿ ಬ್ರೆಡ್, ಕೆಂಪು ರೇಶ್ಮೆ ವಸ್ತ್ರ, ಕೆಂಪು ಹವಳ ಮುಂತಾದವನ್ನು ದಾನ ಕೊಡುವುದರಿಂದಲೂ ದೋಷ ಮುಕ್ತರಾಗಬಹುದು.
- ಬಲಗೈಯ ಉಂಗುರ ಬೆರಳಿನಲ್ಲಿ ಬಂಗಾರದ ಉಂಗುರಕ್ಕೆ ಕೆಂಪು ಹವಳ(red coral) ಹಾಕಿ ಧರಿಸುವುದು ಕೂಡಾ ದೋಷ ಕಡಿಮೆ ಮಾಡುತ್ತದೆ.