New Year 2023: ಹೊಸ ವರ್ಷಕ್ಕೆ ಮನೆ ಮುಖ್ಯ ಬಾಗಿಲಲ್ಲಿ ಇದನ್ನಿಟ್ಟು ಅದೃಷ್ಟ ಬದಲಿಸಿಕೊಳ್ಳಿ
ಆರ್ಥಿಕ ಸ್ಥಿತಿ ವೃದ್ಧಿಯಾಗಬೇಕೆಂದೇ ಪ್ರತಿಯೊಬ್ಬರೂ ಬೆವರು ಸುರಿಸಿ ಕೆಲಸ ಮಾಡ್ತಾರೆ. ಏನು ಮಾಡಿದ್ರೂ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗುತ್ತದೆ. 2022ರಲ್ಲಿ ಆಗಿದ್ದು ಆಯ್ತು. 2023ರಲ್ಲಿ ಲಕ್ಷ್ಮಿ ನಿಮ್ಮ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡ್ಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಲ ವಸ್ತುಗಳು ಧನಾತ್ಮಕ ಪರಿಣಾಮ ಬೀರಿದ್ರೆ ಕೆಲ ವಸ್ತುಗಳು ನಕಾರಾತ್ಮಕ ಪ್ರಭಾವ ಬೀರುತ್ತವೆ. ವಾಸ್ತು ಶಾಸ್ತ್ರದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೇಗೆ ಧನಾತ್ಮಕ ಮಾಡಬೇಕು ಎನ್ನುವುದನ್ನು ಕೂಡ ಹೇಳಲಾಗಿದೆ. ಮನೆ (House) ಯಲ್ಲಿ ಧನಾತ್ಮಕ (Positive) ಶಕ್ತಿ ಇದ್ದರೆ ಇದು ಮನೆಯ ಸಂತೋಷ (Happiness) ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಆದ್ರೆ ಮನೆಯನ್ನು ನಕಾರಾತ್ಮಕ ಶಕ್ತಿ ಆವರಿಸಿದ್ರೆ ಜೀವನದಲ್ಲಿ ಸುಖ ಮಾಯವಾಗುತ್ತದೆ. ಮನೆಯಲ್ಲಿ, ಜೀವನದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಯಾವಾಗ್ಲೂ ನೆಲೆಸಬೇಕು, ಲಕ್ಷ್ಮಿ (Lakshmi) ಕೃಪೆ ಮನೆಯ ಮೇಲಿರಬೇಕು ಎನ್ನುವವರು ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮನೆಯ ಮುಖ್ಯ ಬಾಗಿಲು ಯಾವಾಗ್ಲೂ ವಿಶೇಷವಾಗಿರುತ್ತದೆ.
ಮುಖ್ಯ ಬಾಗಿಲಿನಿಂದಲೇ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ವಾಸ್ತು ದೋಷವನ್ನು ಕಡಿಮೆ ಮಾಡಬಹುದು. ಹಾಗೆಯೇ ಮನೆಯ ಆರ್ಥಿಕ ಬಿಕ್ಕಟ್ಟನ್ನು ಕಡಿಮೆ ಮಾಡಬಹುದು. ಹೊಸ ವರ್ಷದಲ್ಲಿ ನೀವು ಮನೆಯ ಮುಖ್ಯ ಬಾಗಿಲಿನ ಬಳಿ ಕೆಲ ವಸ್ತುಗಳನ್ನಿಟ್ಟು ಅದೃಷ್ಟ ಬದಲಿಸಿಕೊಳ್ಳಿ.
ಸ್ವಸ್ತಿಕ ಚಿಹ್ನೆ : ಪ್ರತಿಯೊಬ್ಬರೂ ಆರ್ಥಿಕ ಸ್ಥಿತಿ ಸುಧಾರಿಸಬೇಕೆಂದು ಬಯಸ್ತಾರೆ. ವರ್ಷದ ಮೊದಲ ದಿನದಿಂದಲೇ ಮನೆಗೆ ಹಣದ ಆಗಮನವಾಗಬೇಕೆಂದುಕೊಳ್ತಾರೆ. ನಿಮ್ಮ ಈ ಹಣದ ಹರಿವಿಗೆ ಮನೆಯ ವಾಸ್ತು ದೋಷ ಅಡ್ಡಿಯಾಗ್ತಿರಬಹುದು. ಮುಖ್ಯ ಬಾಗಿಲಿನಲ್ಲಿರುವ ನಕಾರಾತ್ಮಕ ಶಕ್ತಿ, ಆರ್ಥಿಕ ಪ್ರಗತಿಯನ್ನು ತಡೆಯುತ್ತಿರಬಹುದು. ಇಂಥ ಸಂದರ್ಭದಲ್ಲಿ ನೀವು ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ ಚಿಹ್ನೆಯನ್ನು ಹಾಕಿ. ಇದ್ರಿಂದ ಮನೆಗೆ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಮನೆಯ ಮುಖ್ಯ ಬಾಗಿಲಿನ ಬಲಭಾಗದಲ್ಲಿ ನೀವು ಸ್ವಸ್ತಿಕ ಚಿಹ್ನೆಯನ್ನು ಹಾಕಬೇಕು. ಇದರಿಂದ ಮನೆಯ ಋಣಾತ್ಮಕ ಶಕ್ತಿ ಕಡಿಮೆಯಾಗಿ, ನಿಮ್ಮ ಆದಾಯದಲ್ಲಿ ಸುಧಾರಣೆಯಾಗುತ್ತದೆ.
ತುಳಸಿ ಗಿಡ : ಸಾಮಾನ್ಯವಾಗಿ ಹಿಂದುಗಳ ಮನೆಯ ಮುಂದೆ ನೀವು ತುಳಸಿ ಗಿಡವನ್ನು ನೋಡ್ತಿರಿ. ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ, ವಿಷ್ಣುವಿಗೆ ಬಹಳ ಪ್ರಿಯವಾದದ್ದು. ತುಳಸಿಯನ್ನು ಲಕ್ಷ್ಮಿಯ ರೂಪ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ತುಳಸಿ ಗಿಡವನ್ನು ನೆಡಬೇಕು. ಇದ್ರಿಂದ ಆರ್ಥಿಕ ವೃದ್ಧಿಯಾಗುತ್ತದೆ.
ತೋರಣ : ಮನೆಯ ಮುಖ್ಯ ಬಾಗಿಲು ಖಾಲಿಯಿದ್ದರೆ ಅದು ಶುಭಫಲ ನೀಡುವುದಿಲ್ಲ. ಮನೆಯ ಮುಖ್ಯ ಬಾಗಿಲಿಗೆ ಹಬ್ಬದ ಸಂದರ್ಭದಲ್ಲಿ ಮಾವಿನ ಎಲೆ ತೋರಣವನ್ನು ಹಾಕಲಾಗುತ್ತದೆ. ಅಶೋಕ ಎಲೆಯಿಂದಲೂ ಇದನ್ನು ತಯಾರಿಸಲಾಗುತ್ತದೆ. ನೀವು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಈ ತೋರಣವನ್ನು ಹಾಕಿ.
ಈ ನಾಲ್ಕು ರಾಶಿಗಳಿಗೆ 2023ರಲ್ಲಿ ರಾಹು ಕಾಟ ತಪ್ಪಿದ್ದಲ್ಲ, ಹಾಗಾದರೆ ಏನು ಮಾಡಬೇಕು?
ಹೂವಿನ ಕುಂಡ : ಹಣ ಸಂಪಾದನೆ ಮಾಡುವುದು ಹೇಗೆ ಕಷ್ಟವೋ ಅದೇ ರೀತಿ ಗ್ರಹಗಳು ಹಾಗೂ ದೇವರ ಕೃಪೆಗೆ ಪಾತ್ರರಾಗುವುದು ಕೂಡ ಸುಲಭವಲ್ಲ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಬೇಕು ಅಂದ್ರೆ ನೀವು ಶುಕ್ರನ ಆಶೀರ್ವಾದ ಪಡೆಯಬೇಕು. ಶುಕ್ರನ ಬಲ ನಿಮಗೆ ಸಿಗಬೇಕು ಎಂದ್ರೆ ನೀವು ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸುಗಂಧಭರಿತ ಹೂವುಗಳ ಕುಂಡಗಳನ್ನು ಬೆಳೆಸಿ. ಪ್ರತಿನಿತ್ಯ ಈ ಗಿಡಗಳಿಗೆ ನೀರನ್ನು ಹಾಕಿ. ಹೀಗೆ ಮಾಡುವುದರಿಂದ ಲಕ್ಷ್ಮಿ ಮನೆಯನ್ನು ಪ್ರವೇಶ ಮಾಡುತ್ತಾಳೆ ಎಂದು ನಂಬಲಾಗಿದೆ.
ಹೊಸ ವರ್ಷದ ಮೊದಲ ದಿನ ಸಾಸಿವೆಯನ್ನು ಈ ರೀತಿ ಬಳಸಿದ್ರೆ ವರ್ಷವಿಡೀ ಅದೃಷ್ಟ!
ಸೂರ್ಯನ ಆಶೀರ್ವಾದ ಮುಖ್ಯ : ಮನೆಯಲ್ಲಿ ಧನಾತ್ಮಕ ಶಕ್ತಿ ಸೂರ್ಯನ ಬೆಳಕಿನಿಂದ ಬರುತ್ತದೆ. ಪ್ರತಿಯೊಬ್ಬರ ಜೀವನಕ್ಕೆ ಸೂರ್ಯನ ಕೃಪೆ ಕೂಡ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯ ಯಂತ್ರವನ್ನು ಮನೆಯ ಮುಖ್ಯ ಬಾಗಿಲಲ್ಲಿ ಇಟ್ಟರೆ ಅದು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಮನೆಯಲ್ಲಿ ಸದಾ ಸಂಪತ್ತು ಇರುವಂತೆ ಮಾಡುತ್ತದೆ.