Asianet Suvarna News Asianet Suvarna News

Vastu Tips: ಈ 6 ಮಂಗಳಕರ ವಸ್ತುಗಳಿದ್ದಲ್ಲಿ ತಾಯಿ ಲಕ್ಷ್ಮಿಯೂ ಇರುತ್ತಾಳೆ, ಇಂದೇ ಮನೆಗೆ ತನ್ನಿ..

ವಾಸ್ತು ಶಾಸ್ತ್ರದ ಪ್ರಕಾರ, ಈ 6 ಶುಭ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ತಾಯಿ ಲಕ್ಷ್ಮಿ ಸಂತೋಷವಾಗಿರುತ್ತಾಳೆ, ಆಕೆ ಸದಾ ಮನೆಯಲ್ಲಿ ನೆಲೆಸಿರುತ್ತಾಳೆ. ಇಂದೇ ಮನೆಗೆ ತನ್ನಿ.

Vastu Tips Mother Lakshmi remains happy by keeping these 6 auspicious things skr
Author
First Published Feb 2, 2023, 3:06 PM IST

ವಾಸ್ತು ನಮ್ಮ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ನಮ್ಮ ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಜೀವನದಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ. ಮತ್ತೊಂದೆಡೆ, ವಾಸ್ತು ಪ್ರಕಾರ ಮನೆ ನಿರ್ಮಿಸದಿದ್ದರೆ, ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಹೆಚ್ಚು. ಇದರೊಂದಿಗೆ ಮನೆಯಲ್ಲಿ ಅಪಶ್ರುತಿಯ ವಾತಾವರಣ, ಋಣಾತ್ಮಕತೆ ಹೆಚ್ಚುತ್ತದೆ. ಇಲ್ಲಿ ನಾವು ನೆಗಟೀವ್ ಎನರ್ಜಿ ಹೋಗಲಾಡಿಸಲು ಮನೆಯಲ್ಲಿ ಇಡಬಹುದಾದ ಕೆಲವು ವಸ್ತುಗಳ ಬಗ್ಗೆ ಹೇಳಲಿದ್ದೇವೆ. ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ತಾಯಿ ಲಕ್ಷ್ಮಿಯು ಸಂತೋಷವಾಗಿರುತ್ತಾಳೆ ಮತ್ತು ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಮತ್ತೇಕೆ ತಡ, ಇಂದೇ ಈ ವಸ್ತುಗಳನ್ನು ಮನೆಗೆ ತನ್ನಿ.

ಲೋಹದ ಆನೆ(metal elephant)
ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಆನೆಯನ್ನು ಇಡಬಹುದು. ಹಿಂದೂ ಧರ್ಮದಲ್ಲಿ, ಆನೆಯನ್ನು ದೇವರ ರೂಪವೆಂದು ಪೂಜಿಸಲಾಗುತ್ತದೆ. ಇದರೊಂದಿಗೆ ಆನೆಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಆನೆಯ ಲೋಹವನ್ನು ಇಡುವುದರಿಂದ ಅದು ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.

ಲೋಹದ ಆಮೆ(metal turtle)
ಶಾಸ್ತ್ರಗಳ ಪ್ರಕಾರ, ತಾಯಿ ಲಕ್ಷ್ಮಿ ಸ್ವತಃ ಆಮೆಯಲ್ಲಿ ನೆಲೆಸಿದ್ದಾಳೆ. ಅದಕ್ಕಾಗಿಯೇ ಲೋಹದ ಆಮೆಯನ್ನು ಮನೆಯಲ್ಲಿ ಇಡಬೇಕು. ಆಮೆಯ ಮುಖವು ಮನೆಯೊಳಗೆ ಹೋಗುವುದನ್ನು ನೋಡಬೇಕು ಎಂಬುದನ್ನು ನೆನಪಿನಲ್ಲಿಡಿ. ಮನೆಯಲ್ಲಿ ಲೋಹದ ಆಮೆ ​​ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ.  ಹಿಂದೂ ಧರ್ಮದ ಪ್ರಕಾರ, ವಿಷ್ಣುವು ಸಮುದ್ರ ಮಂಥನದ ಸಮಯದಲ್ಲಿ ಆಮೆಯ ರೂಪವನ್ನು ಪಡೆದನು. ಅದಕ್ಕಾಗಿಯೇ ಆಮೆಯು ವಿಷ್ಣುವಿಗೆ ಸಂಬಂಧಿಸಿದೆ. ವಿಷ್ಣುವಿದ್ದಲ್ಲಿ ಲಕ್ಷ್ಮಿಯೂ ಇರುತ್ತಾಳೆ.

Budh Gochar 2023: ಬುಧ ಮಕರ ಪ್ರವೇಶದಿಂದ 4 ರಾಶಿಗಳಿಗೆ ಅದೃಷ್ಟದ ದಿನಗಳ ಆರಂಭ

ಹಾರ್ಸ್ ಶೂ(Horse Shoe)
ಹಾರ್ಸ್‌ ಶೂ ಇಟ್ಟುಕೊಳ್ಳುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಅದಕ್ಕಾಗಿಯೇ ಹಾರ್ಸ್‌ ಶೂ ಅನ್ನು ಮನೆಯ ಮುಖ್ಯ ಬಾಗಿಲಿಗೆ ಇಡಬೇಕು.ಅಲ್ಲದೆ, ನೀವು ಹಣವನ್ನು ಇರಿಸುವ ಸ್ಥಳದಲ್ಲಿ ಹಾರ್ಸ್‌ ಶೂ ಇರಿಸಬಹುದು.

ನಗುವ ಬುದ್ಧ(laughing buddha)
ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಇಟ್ಟುಕೊಳ್ಳುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಈಶಾನ್ಯ ದಿಕ್ಕಲ್ಲಿ ಲಾಫಿಂಗ್ ಬುದ್ಧ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಣ ಮತ್ತು ಧಾನ್ಯಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ. ನೀವು ಯಾರಿಗಾದರೂ ಲಾಫಿಂಗ್ ಬುದ್ಧನನ್ನು ಉಡುಗೊರೆಯಾಗಿ ನೀಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಉಳಿಯುತ್ತದೆ.

ಮನೆಯಲ್ಲಿ ಮುತ್ತುಗಳನ್ನು ಇರಿಸಿ(keep pearls at home)
ವಾಸ್ತು ಪ್ರಕಾರ, ಮುತ್ತಿನ ಶಂಖವು ಮಾ ಲಕ್ಷ್ಮಿಗೆ ಸಂಬಂಧಿಸಿದೆ. ಈ ಶಂಖವನ್ನು ಬುಧವಾರದಂದು ಪೂಜಿಸಿ ಕಮಾನಿನಲ್ಲಿ ಇಡಬೇಕು. ಅದರಿಂದ ಹಣವು ಮನೆ, ಕೆಲಸದ ಸ್ಥಳ, ವ್ಯಾಪಾರ ಸ್ಥಳ ಮತ್ತು ಅಂಗಡಿಗಳಲ್ಲಿ ಉಳಿಯಲು ಪ್ರಾರಂಭಿಸುತ್ತದೆ. ಇದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರಲು ಪ್ರಾರಂಭಿಸುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲಾಗುತ್ತದೆ.

Valentine Day 2023: ನಿಮ್ಮ ಜಾತಕದಲ್ಲಿ ಪ್ರೇಮ ವಿವಾಹ ಯೋಗವಿದೆಯೇ?

ಗೋಮತಿ ಚಕ್ರ(Gomati Chakra)
ಗೋಮತಿ ಚಕ್ರವು ನಿಮ್ಮ ಮನೆಯ ಪ್ರಮುಖ ವಾಸ್ತು ವಸ್ತುಗಳಲ್ಲಿ ಒಂದಾಗಿದೆ. ಇದು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ನಂಬಲಾಗಿದೆ. ಇದು ಸುದರ್ಶನ ಚಕ್ರವನ್ನು ಹೋಲುವುದರಿಂದ ಇದು ಭಗವಾನ್ ವಿಷ್ಣುವಿಗೂ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅದೃಷ್ಟ ಮತ್ತು ಸಮೃದ್ಧಿಗಾಗಿ ಇದನ್ನು ನಿಮ್ಮ ಮನೆಯಲ್ಲಿ ಇರಿಸಿ. ವಾಸ್ತು ದೋಷಗಳನ್ನು ತೊಡೆದು ಹಾಕಲು, ಗೋಮತಿ ಚಕ್ರವನ್ನು ಆಗ್ನೇಯ ದಿಕ್ಕಿನಲ್ಲಿ ಅಥವಾ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಇರಿಸಿ. ಅದನ್ನು ನಿಮ್ಮ ವಾಣಿಜ್ಯ ಕಚೇರಿ ಸ್ಥಳಗಳು, ಅಂಗಡಿಗಳು ಇತ್ಯಾದಿಗಳಲ್ಲಿ ಇರಿಸಿ.

Follow Us:
Download App:
  • android
  • ios