Vastu Tips: ಹೊಸ ಮನೆಯಲ್ಲಿ ಹಲ್ಲಿ ನೋಡಿ ಬೆದರಿದ್ದೀರಾ; ಕಿರುಚಬೇಡಿ, ಖುಷಿ ಪಡಿ

ಮನೆಯಲ್ಲಿ ಹಲ್ಲಿಗಳ ಓಡಾಟ ಎಲ್ಲರಿಗೂ ರೇಜಿಗೆ ತರುವಂಥದ್ದು. ಆದರೆ, ವಾಸ್ತು ಪ್ರಕಾರ ನೋಡಿದಾಗ ಮನೆಯಲ್ಲಿ ಹಲ್ಲಿಗಳಿದ್ದರೆ ಅದಕ್ಕಾಗಿ ನೀವು ಹೆದರಿ ಕಿರುಚುವುದು ಬಿಟ್ಟು, ಸಂತೋಷದಿಂದ ಕುಣಿದಾಡಬೇಕು. 

Vastu Tips If you see a lizard as soon as you enter a new house jump with joy skr

ಹಲ್ಲಿ ಎಂದರೆ ಪ್ರೀತಿ ಇರುವವರು ಬಹುಷಃ ಸಿಗಲಿಕ್ಕಿಲ್ಲ, ಹೆಚ್ಚಿನವರು ಅವುಗಳನ್ನು ಅನಿವಾರ್ಯವಾಗಿಯೇ ಸಹಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಮನೆಯಿಂದ ಹಲ್ಲಿಗಳನ್ನು ಹೊರ ಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಪ್ರತಿದಿನ ಹಲ್ಲಿಯನ್ನು ನೋಡಿ ಕಿರುಚುತ್ತಾ, ಓಡುತ್ತಾ ಮನೆ ಅವರದೋ, ಹಲ್ಲಿಯದೋ ಎಂಬ ಅನುಮಾನ ಹುಟ್ಟಿಸುತ್ತಿರುತ್ತಾರೆ! ನೀವೂ ನಿಮ್ಮ ಮನೆಯಲ್ಲಿ ಹಲ್ಲಿಯನ್ನು ನೋಡಿ ಅಸಹ್ಯದ ಮುಖ ಮಾಡುತ್ತಿದ್ದರೆ ಅಥವಾ ಭಯದಿಂದ ಕಿರುಚಿಕೊಂಡು ಓಡುತ್ತಿದ್ದರೆ, ಈಗಲೇ ಈ ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸಿ. ಏಕೆಂದರೆ, ವಾಸ್ತುವಿನಲ್ಲಿ ಹಲ್ಲಿಗಳು ಶುಭ ಶಕುನವಾಗಿವೆ. 

ಹೌದು, ವಾಸ್ತವವಾಗಿ, ಹಲ್ಲಿಯನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವಿಷಯ ತಿಳಿದವರು ವಾಸ್ತು ಪೂಜೆಯ ವೇಳೆ ಹಲ್ಲಿಗಳನ್ನೂ ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಏಕೆಂದರೆ ಯಾವ ಮನೆಯಲ್ಲಿ ಹಲ್ಲಿ ಕಾಣಿಸುತ್ತದೋ ಆ ಮನೆಯಲ್ಲಿ  ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಯಾವಾಗಲೂ ಹಣ ಮತ್ತು ಧಾನ್ಯಗಳು ತುಂಬಿರುತ್ತವೆ. ಮನೆಯಲ್ಲಿ ಹಲ್ಲಿ ಕಂಡರೆ ಈ ಲಕ್ಷಣಗಳನ್ನು ತಿಳಿಯಿರಿ.

ಮನೆಯಲ್ಲಿ ಹಲ್ಲಿ ಇದ್ದರೆ ಶುಭವೆಂದು ಪರಿಗಣಿಸಲಾಗಿದೆ. ಅಂತಹ ಮನೆಯಲ್ಲಿ ಸುಖ-ಸಮೃದ್ಧಿ ಉಳಿಯುತ್ತದೆ.
ಒಂದು ವೇಳೆ ಮನೆಯಿಂದ ಹಲ್ಲಿಯನ್ನು ಮನೆಯಿಂದ ಓಡಿಸಲೇಬೇಕಿಂದಿದ್ದರೆ ಹಾಗೆ ಮಾಡಿ. ಆದರೆ ಎಂದಿಗೂ ಕೊಲ್ಲಬೇಡಿ.

ಫೆಂಗ್ ಶೂಯಿ ಪರಿಹಾರ ಅನುಸರಿಸಿ ಮನೆಯ ಎಲ್ಲಾ ದೋಷ ನಿವಾರಿಸಿ

  • ಪೂಜೆಯ ಮನೆಯ ಸುತ್ತಲೂ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರ. ಇದು ದೇವರ ಕೃಪೆಗೆ ಪಾತ್ರವಾಗಲಿದ್ದೀರಿ ಎಂಬುದರ ಸಂಕೇತವಾಗಿದೆ.
  • ದೀಪಾವಳಿಯ ದಿನದಂದು ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮಾ ಲಕ್ಷ್ಮಿಯ ಅನುಗ್ರಹದಿಂದ ಶೀಘ್ರದಲ್ಲೇ ಹಣ ಗಳಿಸುವ ಸಂಕೇತವಾಗಿದೆ. ಈ ಪರಿಸ್ಥಿತಿಯು ವರ್ಷವಿಡೀ ಮುಂದುವರಿಯುತ್ತದೆ.
  • ಅದೇ ರೀತಿ, ಹೊಸ ಮನೆಗೆ ಪ್ರವೇಶಿಸುವಾಗ ಹಲ್ಲಿ ಕಾಣಿಸಿಕೊಂಡರೆ, ಅದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಇದರರ್ಥ ನಿಮ್ಮ ಪೂರ್ವಜರು ಸಂತೋಷವಾಗಿದ್ದಾರೆ, ಆಶೀರ್ವಾದವನ್ನು ನೀಡುತ್ತಾರೆ ಎಂದು.
  • ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಂಡರೆ, ಅದು ನಿಮಗೆ ದೊಡ್ಡ ಆರ್ಥಿಕ ಲಾಭವನ್ನು ನೀಡುತ್ತದೆ ಎಂಬುದರ ಸಂಕೇತವಾಗಿದೆ.
  • ವಾಸ್ತು ಶಾಸ್ತ್ರದ ಪ್ರಕಾರ, ಹಲ್ಲಿಗಳು ನಮ್ಮ ದೇಹದ ಮೇಲೆ ಬೀಳುವ ಬಗ್ಗೆ ಅನೇಕ ರೀತಿಯ ಸಂಕೇತಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಬಲಪಾದ ಅಥವಾ ಹಿಮ್ಮಡಿಯ ಮೇಲೆ ಹಲ್ಲಿ ಬಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ನೀವು ಶೀಘ್ರದಲ್ಲೇ ಪ್ರಯಾಣಿಸಲಿದ್ದೀರಿ ಎಂಬುದರ ಸಂಕೇತವಾಗಿದೆ.

    ಜ್ಯೋತಿಷ್ಯದ ಪ್ರಕಾರ ಅಡುಗೆ ಮಾಡುವಾಗ ಈ ತಪ್ಪು ಮಾಡಿದ್ರೆ ಏಳ್ಗೆ ಕಷ್ಟ
     
  • ನೀವು ಎರಡು ಹಲ್ಲಿಗಳನ್ನು ಒಟ್ಟಿಗೆ ಅನೇಕ ಬಾರಿ ನೋಡಿರಬೇಕು. ಇದು ಹಲ್ಲಿಯ ಹೊಂದಾಣಿಕೆಯನ್ನು ತೋರಿಸುತ್ತದೆ. ನೀವೂ ಇಂತಹ ದೃಶ್ಯವನ್ನು ಕಂಡರೆ ಅದು ಶುಭ ಸಂಕೇತವನ್ನು ನೀಡುತ್ತದೆ. ಗಂಡು ಮತ್ತು ಹೆಣ್ಣು ಹಲ್ಲಿಯ ಹೊಂದಾಣಿಕೆಯು ಮನೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಉತ್ತಮ ಸಾಮರಸ್ಯವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನೆಗೆ ಹಳೆಯ ಸ್ನೇಹಿತನ ಆಗಮನವನ್ನು ಸಹ ಇದು ತೋರಿಸುತ್ತದೆ.
  • ಕನಸಿನಲ್ಲಿ ಹಲ್ಲಿ ಹಿಡಿಯಲು ಪ್ರಯತ್ನಿಸಿದರೆ ಅದು ಭಯದಿಂದ ಓಡಿಹೋಗುವಂತೆ ತೋರಿದರೆ ಅದು ಶುಭ ಸಂಕೇತವೂ ಹೌದು. ಇದರರ್ಥ ಶೀಘ್ರದಲ್ಲೇ ನೀವು ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಮತ್ತು ಹಣದ ಮಳೆ ಬೀಳಲಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios