ಫೆಂಗ್ ಶೂಯಿ ಪರಿಹಾರ ಅನುಸರಿಸಿ ಮನೆಯ ಎಲ್ಲಾ ದೋಷ ನಿವಾರಿಸಿ
ಫೆಂಗ್ ಶೂಯಿ ಎಂಬುದು ಚೀನಾದ ವಾಸ್ತು ಶಾಸ್ತ್ರವಾಗಿದ್ದು, ಇದು ಈಗ ಭಾರತದಲ್ಲೂ ಸಾಕಷ್ಟು ಜನಪ್ರಿಯವಾಗುತ್ತಿದೆ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೀವು ಬಯಸೋದಾದ್ರೆ, ಫೆಂಗ್ ಶೂಯಿ ಟಿಪ್ಸ್ ನಿಮಗೆ ಸಾಕಷ್ಟು ಸಹಾಯ ಮಾಡುತ್ತೆ.
ಫೆಂಗ್ ಶೂಯಿಯ(Feng Shui) ಈ ಸಲಹೆಗಳನ್ನು ಪ್ರಯತ್ನಿಸುವ ಮೂಲಕ, ಜೀವನ (Life) ಮತ್ತು ಮನೆ ಎರಡರಲ್ಲೂ ಸಕಾರಾತ್ಮಕ ಶಕ್ತಿ (Positive Vibes) ಹರಿಯುತ್ತೆ. ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರೋಗ್ಯ (Health) ಮತ್ತು ಮನೆಗೆ ಸಂಬಂಧಿಸಿದ ದೋಷಗಳನ್ನು ತೆಗೆದುಹಾಕಬಹುದು. ಹಣೆಬರಹವನ್ನು (Fate) ಉಜ್ವಲಗೊಳಿಸಲು ಸಹಾಯ ಮಾಡುವ ಕೆಲವು ಪ್ರಮುಖ ಫೆಂಗ್ ಶೂಯಿ ಪರಿಹಾರಗಳನ್ನುಇಲ್ಲಿ ತಿಳಿಯೋಣ.
ಫಿಶ್ ಟ್ಯಾಂಕ್ ನಲ್ಲಿ ಯಾವಾಗಲೂ ಎಂಟು ಗೋಲ್ಡ್ ಫಿಶ್(Gold fish) ಇರಿಸಿ
ಫೆಂಗ್ ಶೂಯಿ ಕ್ರಮಗಳ ಪ್ರಕಾರ, ಅದೃಷ್ಟ (Luck) ಹೆಚ್ಚಿಸಲು ಯಾವಾಗಲೂ ಎಂಟು ಗೋಲ್ಡ್ ಫಿಶ್ (Gold Fish) ಮತ್ತು ಒಂದು ಕಪ್ಪು ಫಿಶ್ ಮನೆಯ ಫಿಶ್ ಟ್ಯಾಂಕಿನಲ್ಲಿ ಇರಿಸಿ. ಇದನ್ನು ಮಾಡೋದರಿಂದ, ಗೌರವ ಹೆಚ್ಚಾಗುತ್ತೆ ಮತ್ತು ಸಮೃದ್ಧಿ ಹೆಚ್ಚಾಗುತ್ತೆ.
ಯಾವಾಗಲೂ ಅಕ್ವೇರಿಯಂ(Aquarium) ಅನ್ನು ಡ್ರಾಯಿಂಗ್ ರೂಮ್ ನಲ್ಲಿ ಇಡಬೇಕು ಅಲ್ಲದೆ ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಅಲ್ಲ ಎಂಬುದನ್ನು ನೆನಪಿನಲ್ಲಿಡಿ. ಈ ಫೆಂಗ್ ಶೂಯಿ ಪರಿಹಾರ ಅನುಸರಿಸೋದ್ರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತೆ.
ಡ್ರ್ಯಾಗನ್ ನಿಂದ(Dragon) ಮನೆಯ ಸಮೃದ್ಧಿ ಹೆಚ್ಚುತ್ತೆ
ಫೆಂಗ್ ಶೂಯಿ ವಾಸ್ತು ಶಾಸ್ತ್ರದಲ್ಲಿ, ಡ್ರ್ಯಾಗನನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಡ್ರ್ಯಾಗನ್ ಮೂರ್ತಿಯನ್ನು ಮನೆಯ ಪೂರ್ವದಲ್ಲಿ ಇಡುವುದು ಮಂಗಳಕರ.
ಪುರುಷತ್ವ, ಧೈರ್ಯ (Courage) ಮತ್ತು ಶೌರ್ಯದ ಸಂಕೇತ ಡ್ರ್ಯಾಗನ್. ಇದನ್ನು ಖರೀದಿಸುವಾಗ, ಅದರ ಉಗುರು (Nails) ಮುತ್ತು ಅಥವಾ ಸ್ಫಟಿಕವನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡೋದರಿಂದ, ಜೀವನದಲ್ಲಿ ಪ್ರಗತಿ ಉಂಟಾಗುತ್ತೆ ಮತ್ತು ಮಾನಸಿಕ ಒತ್ತಡವನ್ನು (Mental Stress) ತೆಗೆದುಹಾಕಲಾಗುತ್ತೆ.
ಮನೆಯಲ್ಲಿ ಆಮೆಯನ್ನು(Tortoise)
ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಆಮೆಯನ್ನು ಇಟ್ಟುಕೊಳ್ಳುವುದು ಯಶಸ್ಸು ಮತ್ತು ಸಂತೋಷವನ್ನು ತರುತ್ತೆ. ಆಮೆಯನ್ನು ಮನೆ ಅಥವಾ ಕಚೇರಿಯ ಉತ್ತರ ದಿಕ್ಕಿನಲ್ಲಿ ಇರಿಸಬಹುದು.
ಆಮೆಯ ಮುಖವು ಯಾವಾಗಲೂ ಒಳಗೆ ಇರಬೇಕು ಮತ್ತು ಅದನ್ನು ಎಲ್ಲಾ ಸಮಯದಲ್ಲೂ ಏಕಾಂಗಿಯಾಗಿ ಇಡಬೇಕು ಎಂಬುದನ್ನು ನೆನಪಿಡಿ. ಫೆಂಗ್ ಶೂಯಿಯ ಈ ಸಲಹೆಗಳನ್ನು ಅನುಸರಿಸೋ ಮೂಲಕ ಖುಷಿಯಾದ ಜೀವನ(Happy life) ನಿಮ್ಮದಾಗಿಸಿಕೊಳ್ಳಿ.