Vastu Tips : ತಪ್ಪಾದ ಸ್ವಸ್ತಿಕ್ ಚಿಹ್ನೆ ನೀಡುತ್ತೆ ಅಶುಭ ಫಲ
ಸ್ವಸ್ತಿಕ್ ಚಿಹ್ನೆ ಬಗ್ಗೆ ಕೆಲವರಿಗೆ ತಿಳಿದಿದೆ. ಅದು ಸಂತೋಷ, ನೆಮ್ಮದಿ, ವ್ಯಾಪಾರದಲ್ಲಿ ವೃದ್ಧಿಯನ್ನು ನೀಡುತ್ತದೆ. ಆದ್ರೆ ಅದನ್ನು ಬಿಡಿಸುವಾಗ ತಪ್ಪಾದ್ರೆ, ಅದನ್ನು ಸೂಕ್ತ ಸ್ಥಳದಲ್ಲಿ ಬಿಡಿಸದೆ ಹೋದ್ರೆ ಸಮಸ್ಯೆ ಕಾಡುತ್ತದೆ.
ಹಿಂದೂ ಧರ್ಮದಲ್ಲಿ ಬರೀ ದೇವರ ಪೂಜೆ, ಆರಾಧನೆ, ಮಂತ್ರದ ಬಗ್ಗೆ ಮಾತ್ರ ಹೇಳಿಲ್ಲ. ಅಲ್ಲಿ ಅನೇಕ ವಿಷ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ರಂಗೋಲಿ, ಹೂ, ಮನೆಯ ಮುಖ್ಯದ್ವಾರ ಹೀಗೆ ಅನೇಕಾನೇಕ ವಿಷ್ಯಗಳನ್ನು ಹೇಳಲಾಗಿದೆ. ಅದ್ರಲ್ಲಿ ಸ್ವಸ್ತಿಕ್ ಚಿಹ್ನೆ ಕೂಡ ಸೇರಿದೆ. ಸ್ವಸ್ತಿಕ್ ಚಿಹ್ನೆಯನ್ನು ಹೇಗೆ ಬಿಡಿಸಬೇಕು ಹಾಗೆ ಅದನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆಯೂ ಹೇಳಲಾಗಿದೆ. ನಿಮಗೆಲ್ಲ ತಿಳಿದಿರುವಂತೆ ಸ್ವಸ್ತಿಕ್ ಚಿಹ್ನೆಯನ್ನು ಪ್ರತಿ ಶುಭ ಕಾರ್ಯದಲ್ಲಿ ಬಳಸಲಾಗುತ್ತದೆ. ಸ್ವಸ್ತಿಕವನ್ನು ಗಣೇಶನ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಅನೇಕ ಮಹಿಳೆಯರು ಬೆಳಿಗ್ಗೆ ದೇವರ ಮುಂದೆ ಮತ್ತು ಮುಖ್ಯ ದ್ವಾರ (Entrance) ದ ಮುಂದೆ ರಂಗೋಲಿ (Rangoli) ಯಲ್ಲಿ ಸ್ವಸ್ತಿಕ (Swastik) ಚಿಹ್ನೆಯನ್ನು ಬಿಡಿಸುತ್ತಾರೆ. ಇನ್ನು ಕೆಲವರ ಮನೆಯ ಮುಖ್ಯ ದ್ವಾರಕ್ಕೆ ಸ್ವಸ್ತಿಕ್ ಚಿಹ್ನೆಯನ್ನು ಹಾಕಿರಲಾಗುತ್ತದೆ. ನಂಬಿಕೆಗಳ ಪ್ರಕಾರ ಸ್ವಸ್ತಿಕವನ್ನು ಸರಿಯಾದ ದಿಕ್ಕಿನಲ್ಲಿ ಬಿಡಿಸಿದ್ರೆ ಮಾತ್ರ ಶುಭ ಫಲಿತಾಂಶ ಸಿಗುತ್ತದೆ. ವಾಸ್ತು ಶಾಸ್ತ್ರಗಳಲ್ಲಿ ಸ್ವಸ್ತಿಕ್ ಗೆ ಸಂಬಂಧಿಸಿದಂತೆ ಏನೆಲ್ಲ ಮಾಹಿತಿ ನೀಡಲಾಗಿದೆ ಎಂಬುದನ್ನು ನಾವಿಂದು ಹೇಳ್ತೆವೆ.
Hair Astrology: ತೆಳುವಾದ ಕೂದಲಿದ್ದೋರಿಗೇ ಸ್ಯಾಲರಿ ಜಾಸ್ತಿನಾ?!
ಸ್ವಸ್ತಿಕ್ ಬಿಡಿಸುವ ವಿಧಾನ : ಸ್ವಸ್ತಿಕ ಬಿಡಿಸುವ ವಿಧಾನ ತಪ್ಪಾದ್ರೆ ಯಾವುದೇ ಫಲಿತಾಂಶ ನಿಮಗೆ ಸಿಗುವುದಿಲ್ಲ. ಹಾಗಾಗಿ ಮೊದಲು ಸ್ವಸ್ತಿಕವನ್ನು ಹೇಗೆ ಬಿಡಿಸಬೇಕು ಎಂಬುದನ್ನು ಕಲಿತಿಯರಬೇಕು. ನೀವು ಸ್ವಸ್ತಿಕ್ ಬಿಡಿಸುತ್ತಿದ್ದರೆ ಮೊದಲು ಬಲ (Right) ಭಾಗವನ್ನು ಮಾಡಿ. ಇದರ ನಂತರ ಸ್ವಸ್ತಿಕದ ಎಡ (Left) ಭಾಗವನ್ನು ಮಾಡಿ. ಬಹುತೇಕ ಜನರು ಸ್ವಸ್ತಿಕ ಬಿಡಿಸುವ ಮೊದಲು ಪ್ಲಸ್ ಚಿಹ್ನೆ ಹಾಕುತ್ತಾರೆ. ನಂತ್ರ ಗೆರೆ ಎಳೆದು ಸ್ವಸ್ತಿಕ್ ಬಿಡಿಸುತ್ತಾರೆ. ಶಾಸ್ತ್ರಗಳ ಪ್ರಕಾರ, ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸುವಾಗ ಅದನ್ನು ಎಂದಿಗೂ ಪ್ಲಸ್ ಚಿಹ್ನೆಯಿಂದ ಪ್ರಾರಂಭಿಸಬಾರದು. ಪ್ಲಸ್ ಚಿಹ್ನೆಯೊಂದಿಗೆ ಸ್ವಸ್ತಿಕವನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಸ್ವಸ್ತಿಕ್ ನಿಂದಾಗುವ ಲಾಭಗಳು :
ಸಂತೋಷ ಮತ್ತು ಸಮೃದ್ಧಿಗೆ ಸ್ವಸ್ತಿಕ : ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಬೇಕು. ಇಲ್ಲವೆ ನೀವು ಸ್ವಸ್ತಿಕ ಚಿಹ್ನೆಯನ್ನು ಮುಖ್ಯ ದ್ವಾರಕ್ಕೆ ಅಂಟಿಸಬಹುದು. ಒಟ್ಟಿನಲ್ಲಿ ಮನೆ ಮುಖ್ಯ ದ್ವಾರದ ಬಳಿ ಸ್ವಸ್ತಿಕ್ ಇದ್ರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ವ್ಯಾಪಾರದಲ್ಲಿ ಪ್ರಗತಿ ಸಿಗಬೇಕೆಂದ್ರೆ ಹೀಗೆ ಮಾಡಿ : ವ್ಯಾಪಾರದಲ್ಲಿ ಸಮಸ್ಯೆಯಾಗ್ತಿದೆ, ಯಾವುದೇ ಲಾಭ ಸಿಗ್ತಿಲ್ಲ ಎನ್ನುವವರು ವ್ಯಾಪಾರದಲ್ಲಿ ಆಗ್ತಿರುವ ನಷ್ಟ ತಪ್ಪಿಸಲು ಸ್ವಸ್ತಿಕದ ಈ ಉಪಾಯ ಮಾಡಬಹುದು. ನೀವು ಕೆಂಪು ಬಣ್ಣದ ವೇಲಿನ ಮೇಲೆ ಸ್ವಸ್ತಿಕ್ ಬಿಡಿಸಿ ಅದನ್ನು ಕಪಾಟಿನಲ್ಲಿ ಇಡಬೇಕು.
ಹಣದ ಕೊರತೆ ನೀಗುತ್ತದೆ : ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಉತ್ತರ ದಿಕ್ಕಿನಲ್ಲಿ ಸ್ವಸ್ತಿಕವನ್ನು ಬಿಡಿಸುವುದ್ರಿಂದ ಮನೆಯಲ್ಲಿ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಲಕ್ಷ್ಮಿ ಮನೆಯಲ್ಲಿ ಹಣದ ಹೊಳೆ ಹರಿಸುತ್ತಾಳೆ.
ಮನೆಯಲ್ಲಿ ಸಂತಸ ಹೆಚ್ಚಾಗಲು ಈ ಉಪಾಯ ಮಾಡಿ : ಮನೆಯಲ್ಲಿ ಸದಾ ಗಲಾಟೆ ನಡೆಯುತ್ತಿದೆ ನೆಮ್ಮದಿ ಇಲ್ಲ ಎನ್ನುವವರು ಸ್ವಸ್ತಿಕ್ ಸಹಾಯ ಪಡೆಯಬಹುದು. ನೀವು ಮನೆಯ ಸುಖ ಸಂತೋಷ ಹೆಚ್ಚಬೇಕೆಂದರೆ ಮನೆಯ ದಕ್ಷಿಣ ದಿಕ್ಕಿಗೆ ಸ್ವಸ್ತಿಕ್ ಹಚ್ಚಬೇಕು.
Garuda Purana: ಸ್ನಾನ ಮಾಡದಿದ್ರೆ ಪಾಪ ಸುತ್ತಿಕೊಳ್ಳತ್ತಾ?
ಹೀಗೆ ಮಾಡಿದ್ರೆ ಸಿಗುತ್ತದೆ ಪ್ರತಿ ಕೆಲಸದಲ್ಲಿ ಯಶಸ್ಸು : ನಿಮ್ಮ ಕೆಲಸ ಪೂರ್ಣಗೊಳ್ಳದಿದ್ದರೆ ಅಥವಾ ಯಶಸ್ವಿಯಾಗದಿದ್ದರೆ ನೀವು ಮನೆಯ ಪಶ್ಚಿಮ ದಿಕ್ಕಿನಲ್ಲಿ ಸ್ವಸ್ತಿಕ ಗುರುತು ಮಾಡಬೇಕು. ಹೀಗೆ ಮಾಡಿದ್ರೆ ಅಪೂರ್ಣಗೊಂಡ ಕೆಲಸ ಪೂರ್ಣಗೊಳ್ಳುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ.