Vastu Tips : ಯಶಸ್ಸು ಹಿಂಬಾಲಿಸ್ಬೇಕೆಂದ್ರೆ ಮನೆಯ ಈ ಭಾಗದಲ್ಲಿರಲಿ ಪಕ್ಷಿ ಫೋಟೋ

Vastu Tips in Kannada: ಯಶಸ್ಸು ಸುಲಭವಾಗಿ ಧಕ್ಕುವಂತಹದ್ದಲ್ಲ. ಪರಿಶ್ರಮದ ಜೊತೆ ಸಕಾರಾತ್ಮಕ ಶಕ್ತಿಯಿರಬೇಕು. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರಬೇಕೆಂದ್ರೆ ವಾಸ್ತು ಬಗ್ಗೆ ಗಮನ ನೀಡ್ಬೇಕು. ಮನೆಯಲ್ಲಿ ಯಾವ ಪಕ್ಷಿ ಫೋಟೋ ಹಾಕಿದ್ರೆ ಹೆಚ್ಚಿನ ಫಲ ಸಿಗುತ್ತದೆ ಎಂಬುದು ತಿಳಿದಿರಬೇಕು.
 

Vastu Tips For Placing Pictures Of Birds In The House

ಶಾಂತಿ ಹಾಗೂ ಸಂತೋಷ (Happiness) ಕ್ಕಾಗಿ ಜನರು ಸಾಕಷ್ಟು ಪ್ರಯತ್ನಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ವಾಸ್ತು ಶಾಸ್ತ್ರ (Vastu Shastra) ವನ್ನು ನಂಬುತ್ತಿದ್ದಾರೆ. ಮನೆಯನ್ನು ನಿರ್ಮಾಣ ಮಾಡುವ ವೇಳೆಯಿಂದ ಹಿಡಿದು ಮನೆಗೆ ತರುವ ವಸ್ತುಗಳವರೆಗೆ ಎಲ್ಲವೂ ವಾಸ್ತು ಪ್ರಕಾರ ನಡೆಯುವಂತೆ ನೋಡಿಕೊಳ್ತಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತುವಿಗೆ ಒಳಪಡುತ್ತದೆ. ನೀವು ಗೋಡೆ (Wall) ಗೆ ಯಾವ ಬಣ್ಣ ಹಚ್ಚಿದ್ದೀರಿ ಎಂಬುದರಿಂದ ಹಿಡಿದು ನೀವು ಗೋಡೆ ಮೇಲೆ ಯಾವ ಫೋಟೋ (Photo) ಹಾಕಿದ್ದೀರಿ ಮತ್ತೆ ಎಲ್ಲಿ ಹಾಕಿದ್ದೀರಿ ಎಂಬುದು ಕೂಡ ಮಹತ್ವ ಪಡೆಯುತ್ತದೆ. ಅನೇಕ ಬಾರಿ ನಾವು ಸರಿಯಾಗಿ ತಿಳಿಯದೆ ತಪ್ಪಾದ ಜಾಗದಲ್ಲಿ ವಸ್ತುಗಳನ್ನು ಇಟ್ಟಿರುತ್ತೇವೆ. ಇದ್ರಿಂದಾಗಿ ಸಮಸ್ಯೆ ಹೆಚ್ಚಾಗುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತದೆ. ಆರ್ಥಿಕ (Economic) ವೃದ್ಧಿ ಬದಲು ನಷ್ಟ ಶುರುವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪಕ್ಷಿ (Bird) ಗಳ ಬಗ್ಗೆಯೂ ಹೇಳಲಾಗಿದೆ. ಮನೆಯಲ್ಲಿ ಪಕ್ಷಿಗಳ ಚಿತ್ರಗಳನ್ನು ಹಾಕುವುದು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಶಾಸ್ತ್ರದಲ್ಲಿದೆ. ಜೀವನದಲ್ಲಿ ಪದೇ ಪದೇ ನಿರಾಸೆಯಾಗ್ತಿದೆ ಎನ್ನುವವರು ಮನೆಯಲ್ಲಿ ಪಕ್ಷಿಯ ಚಿತ್ರವನ್ನು ಹಾಕ್ಬೇಕು. ಪಕ್ಷಿಯ ಫೋಟೋಗಳನ್ನು ಸರಿಯಾದ ಜಾಗದಲ್ಲಿ ಹಾಕಿದ್ರೆ ಸಮಸ್ಯೆ ದೂರವಾಗಿ, ಜೀವನ ಸುಖಮಯವಾಗುತ್ತದೆ. 

ಅನೇಕ ಜನರು ತಮ್ಮ ಮನೆಯಲ್ಲಿ ನಿಜವಾದ ಪಕ್ಷಿಗಳನ್ನು ಸಾಕುತ್ತಾರೆ. ಆದ್ರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿ ನೀವು ಮನೆಯಲ್ಲಿ ಪಕ್ಷಿಯ ಫೋಟೋ ಅಥವಾ ವಿಗ್ರಹವನ್ನು ಇಡಬಹುದು.  

ಮನೆಯಲ್ಲಿ ಪಕ್ಷಿಗಳ ಚಿತ್ರ ಫೋಟೋ ಹಾಕಲು ಈ ವಾಸ್ತು ಸಲಹೆ ಪಾಲನೆ ಮಾಡಿ:

ಧನಾತ್ಮಕ ಶಕ್ತಿ : ಪಕ್ಷಿಯ ಫೋಟೋಗಳನ್ನು ಅಥವಾ ವಿಗ್ರಹವನ್ನು ಮನೆಯಲ್ಲಿ ಹಾಕುವುದ್ರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆ ಮತ್ತು ಜೀವನದಲ್ಲಿ ನೆಲೆಗೊಳ್ಳುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದರೊಂದಿಗೆ  ನಿಮ್ಮ ಜೀವನದಲ್ಲಿ ಯಶಸ್ಸು ಸಿಗಲು ಶುರುವಾಗುತ್ತದೆ.  

ಪಕ್ಷಿ ಫೋಟೋ ಹಾಕುವ ದಿಕ್ಕು : ಪಕ್ಷಿಗಳ ಫೋಟೋ ಹಾಕಲು ದಿಕ್ಕು ಕೂಡ ಮುಖ್ಯವಾಗುತ್ತದೆ. ಮನೆಯಲ್ಲಿ ಪಕ್ಷಿ ಫೋಟೋ ಇಡಲು ಮುಂದಾಗಿದ್ದರೆ ಮನೆಯ ಪೂರ್ವ ದಿಕ್ಕನ್ನು ಆಯ್ಕೆ ಮಾಡುವುದು ಉತ್ತಮ. ಈ ದಿಕ್ಕು ಫೋಟೋ ಹಾಕಲು  ಉತ್ತಮವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಕಪ್ಪು, ನೇರಳೆ, ಕಿತ್ತಳೆ.. ನಿಮ್ಮ ರಾಶಿಚಕ್ರದ ಆಧಾರದ ಮೇಲೆ ನೀವು ಧರಿಸಬೇಕಾದ ಬಣ್ಣಗಳಿವು..

ರಣಹದ್ದಿನ ಫೋಟೋ : ವಾಸ್ತು ಪ್ರಕಾರ ಲಿವಿಂಗ್ ರೂಮ್ ಅನ್ನು ಪ್ರಮುಖ ಕೊಠಡಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಚಿತ್ರಗಳು ಕೆಲವೊಮ್ಮೆ ವಾಸ್ತು ದೋಷಗಳನ್ನು ಉಂಟು ಮಾಡುತ್ತವೆ. ತಜ್ಞರ ಪ್ರಕಾರ, ಲಿವಿಂಗ್ ರೂಮಿನಲ್ಲಿ ರಣಹದ್ದಿನ ಚಿತ್ರವನ್ನು ಹಾಕುವುದು ಅಪಾರ ಯಶಸ್ಸನ್ನು ನೀಡುತ್ತದೆ.ಕೋಣೆಯಲ್ಲಿ ರಣಹದ್ದು ಚಿತ್ರವನ್ನು ಹಾಕುವುದು ಅಪಾರ ಯಶಸ್ಸನ್ನು ನೀಡುತ್ತದೆ. ರಣಹದ್ದುಗೆ ಗರುಡ ಎಂದೂ ಹೆಸರು. ಗ್ರಂಥಗಳಲ್ಲಿ ಗರುಡನನ್ನು ಹೇಗೆ ವಿವರಿಸಲಾಗಿದೆಯೋ ಹಾಗೆಯೇ ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಗರುಡನ ಬಗ್ಗೆ ವಿವರಿಸಲಾಗಿದೆ.

ಇದನ್ನೂ ಓದಿ: ಚಾಣಕ್ಯ ನೀತಿ: ಯಶಸ್ಸು ಬೇಕಂದ್ರೆ ಈ ಮಾತುಗಳನ್ನು ಮರೆಯಬೇಡಿ!

ಫೀನಿಕ್ಸ್ ಪಕ್ಷಿ : ವಾಸ್ತು ಪ್ರಕಾರ ಮನೆಯಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ನಿಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ಇಡಬಹುದು. ಫೀನಿಕ್ಸ್ ಹಕ್ಕಿ ಬೆಂಕಿ, ಖ್ಯಾತಿ, ಪ್ರಗತಿ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ವಾಸ್ತು ತಜ್ಞರ ಪ್ರಕಾರ, ಜೀವನದ ಪ್ರಗತಿಯ ಹಾದಿಯಲ್ಲಿನ ತೊಂದರೆಗಳು ಮತ್ತು ವಾಸ್ತು ದೋಷಗಳನ್ನು ನಿವಾರಿಸಲು ಮನೆಯ ದಕ್ಷಿಣ ದಿಕ್ಕಿನಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವನ್ನು ಇಡುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ.
ಮನೆಯಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವಿದ್ರೆ ಧನಾತ್ಮಕ ಶಕ್ತಿಯು ನಿಮ್ಮ ಮನೆ ಪ್ರವೇಶ ಮಾಡುತ್ತದೆ. ಇದು ನಿಮಗೆ ಹೊಸ ಶಕ್ತಿಯನ್ನು ನೀಡುತ್ತದೆ. 

Latest Videos
Follow Us:
Download App:
  • android
  • ios