Vastu Tips: ಶಂಖನಾದದಿಂದ ಮನೆಯಲ್ಲಿ ತುಂಬಲಿದೆ ಸಂಪತ್ತು.. ನಿಮಯ ಪಾಲನೆ ಅಗತ್ಯ

ಮನೆಯಲ್ಲೇ ಶಂಖ ಪೂಜೆ ಮಾಡುವುದು ಹೇಗೆ? ಶಂಖವನ್ನಿಟ್ಟುಕೊಳ್ಳುವಾಗ ಕೆಲ ವಾಸ್ತು ಸಲಹೆಗಳನ್ನು ಪಾಲಿಸಬೇಕು. 

Vastu Tips for keeping Shankha at home skr

ಶಂಖ(Conch)ವು ಸಮುದ್ರದಲ್ಲಿ ವಾಸಿಸುವ ಮೃದ್ವಂಗಿ. ವೈದಿಕ ಗ್ರಂಥಗಳಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮದಲ್ಲಿ, ಶಂಖವನ್ನು ವಿಷ್ಣು(Lord Vishnu)ವಿನ ಲಾಂಛನ(emblem) ಎಂದು ಭಾವಿಸಲಾಗುತ್ತದೆ. ಮನೆಯಲ್ಲಿರುವ ಯಾವುದೇ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಶಂಖನಾದದಿಂದ ಉಂಟಾಗುವ ಕಂಪನಗಳು ಶಕ್ತವಾಗಿವೆ. ಜೊತೆಗೆ, ಇದನ್ನು ಊದುವುದರಿಂದ ಶ್ವಾಸಕೋಶಕ್ಕೆ ಉತ್ತಮ ವ್ಯಾಯಾಮವಾಗಿ ಹೃದಯ, ಶ್ವಾಸಕೋಶಗಳ ಆರೋಗ್ಯ ಚೆನ್ನಾಗಿರುತ್ತದೆ. 

ವಿಷ್ಣುವಿನ ಆಯುಧ(weapon)
ಭಗವಾನ್ ವಿಷ್ಣುವು ತನ್ನ ವಿವಿಧ ಅವತಾರಗಳಲ್ಲಿ ಪ್ರಪಂಚದಾದ್ಯಂತ ಇರುವ ನಕಾರಾತ್ಮಕತೆ(negativity)ಯನ್ನು ನಾಶ ಮಾಡಲು ಶಂಖವನ್ನು ಊದುತ್ತಾನೆ ಎಂದು ಹಿಂದೂ ಪುರಾಣಗಳಲ್ಲಿ ವಿವರಿಸಲಾಗಿದೆ. ಶಂಖವು ಆತನ ಆಯುಧವಾಗಿದೆ. ಶಂಖಕ್ಕೆ ಕೇವಲ ಹಿಂದೂ ಧರ್ಮದಲ್ಲಲ್ಲ, ಬೌದ್ಧ ಧರ್ಮದಲ್ಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. 

ಶಂಖವು ಮನೆಯಲ್ಲಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಪೂಜೆಯಲ್ಲಿ ಬಳಸಬೇಕು ಹಾಗೂ ದಿನಕ್ಕೆ ಎರಡು ಬಾರಿಯಾದರೂ (ಬೆಳಿಗ್ಗೆ ಮತ್ತು ಸಂಜೆ) ಊದಬೇಕು. ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಅದು ಆರಂಭಕ್ಕೆ ಮುನ್ನ ಶಂಖ ಊದುವುದರಿಂದ ನಕಾರಾತ್ಮಕ ಶಕ್ತಿಗಳು ದೂರ ಹೋಗಿ ಕಾರ್ಯ ಚೆನ್ನಾಗಿ ನಡೆಯುತ್ತದೆ. ನಂತರ ಕಾರ್ಯ ಮುಗಿದ ಬಳಿಕವೂ ಒಮ್ಮೆ ಶಂಖ ಊದಿದರೆ ಶುಭಕಾರ್ಯದ ಫಲ ಹೆಚ್ಚಾಗಿ ದೊರಕುವುದು.  ಶಂಖವನ್ನು ಪ್ರತಿ ದಿನ ಮನೆಯಲ್ಲಿ ಎರಡು ಬಾರಿ ಊದುವುದರಿಂದ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಬರುವುದಿಲ್ಲ. ನಕಾರಾತ್ಮಕ ಶಕ್ತಿಗಳು ತಗ್ಗಿ ಸಂತೋಷ, ನೆಮ್ಮದಿ ನೆಲೆಸುತ್ತದೆ. ಇದರಿಂದ ಅದೃಷ್ಟ ಹಾಗೂ ಸಂಪತ್ತು ಕೂಡಾ ಮನೆಯನ್ನು ಅರಸಿ ಬರುತ್ತದೆ. ಅಭಿಷೇಕ ಮಾಡಲು ಬಳಸುವ ಶಂಖವನ್ನು ಪೂಜೆಗೆ ಬಳಸಬಾರದು ಎಂಬುದು ನಿಮಗೆ ನೆನಪಿರಲಿ. 

Astro Remidies: ಗ್ರಹ ದೋಷ ನಿವಾರಣೆಗೆ ಸ್ನಾನದಲ್ಲಿ ಪರಿಹಾರ, ಹೇಗಂತೀರಾ?

ಶಂಖದ ಪೂಜಾ ವಿಧಿ
ಇಂದು ಶಂಖವನ್ನು ಮನೆಗೆ ತರುವಾಗ ಗಮನಿಸಬೇಕಾದ ಕೆಲವು ವಾಸ್ತು ಸಲಹೆ(Vastu tips)ಗಳನ್ನು ತಿಳಿಸುತ್ತಿದ್ದೇವೆ.

  • ನೀವು ಶಂಖವನ್ನು ಮನೆಗೆ ತರಲು ಉತ್ಸುಕರಾಗಿದ್ದರೆ, ಕನಿಷ್ಠ ಎರಡನ್ನು ಮನೆಗೆ ತನ್ನಿ ಮತ್ತು ಅವೆರಡನ್ನು ಪ್ರತ್ಯೇಕವಾಗಿ ಇಡಿ. ಅಪ್ಪಿತಪ್ಪಿಯೂ ಜೊತೆಗಿಡಬೇಡಿ. 
  • ಶಂಖವನ್ನು ಉತ್ತರ, ಅಥವಾ ಪೂರ್ವ ಇಲ್ಲವೇ ಈಶಾನ್ಯ ದಿಕ್ಕಿನಲ್ಲಿರುವ ಪೂಜಾ ಕೋಣೆಯಲ್ಲಿಯೇ ಇರಿಸಬೇಕು. ಉಳಿದ ದಿಕ್ಕುಗಳಿಗೆ ಶಂಖ ಅಷ್ಟಾಗಿ ಹೊಂದುವುದಿಲ್ಲ. 
  • ಸಿಕ್ಕಿದರೆ ಬಲದ ಕಡೆ ಕಿವಿ ಇರುವ ಬಲಮುರಿ ಶಂಖ(ದಕ್ಷಿಣಾವರ್ತಿ ಶಂಖ)ವನ್ನೇ ಮನೆಗೆ ತರಬೇಕು. ಶಂಖವನ್ನು ಊದಲು ಹಿಡಿದಾಗ ಅದರ ಕಿವಿ ಬಲಕ್ಕಿರಬೇಕು. ಇದು ಅದೃಷ್ಟ ಹಾಗೂ ಸಂಪತ್ತನ್ನು ಆಕರ್ಷಿಸುತ್ತದೆ. ಆದರೆ ಈ ಶಂಖಗಳು ಅಪರೂಪ. 

    Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ
     
  • ಊದಲು ಬಳಸುವ ಶಂಖದ ಮೇಲೆ ಎಂದಿಗೂ ನೀರು(water) ಹಾಕಬಾರದು. ಹಾಗೂ ಅದಕ್ಕೆ ಯಾವುದೇ ಧಾರ್ಮಿಕ ಪಠಣಗಳನ್ನು ಅರ್ಪಿಸಬಾರದು.
  • ಯಾವಾಗಲೂ ಊದಲು ಬಳಸುವ ಶಂಖವನ್ನು ಹಳದಿ ಬಟ್ಟೆ(yellow cloth)ಯ ಮೇಲಿಡಬೇಕು. 
  • ಇನ್ನು, ಪೂಜೆಯ ಉದ್ದೇಶಕ್ಕಾಗಿ ತಂದ ಶಂಖವನ್ನು ಗಂಗಾಜಲ(gangajal)ದಿಂದ ಶುದ್ಧೀಕರಿಸಬೇಕು ಮತ್ತು ಪವಿತ್ರವಾದ ಬಿಳಿ ಬಟ್ಟೆಯಲ್ಲಿ ಸುತ್ತಿಡಬೇಕು.
  • ಪೂಜಿಸಲ್ಪಡುವ ಶಂಖವನ್ನು ಊದುವ ಉದ್ದೇಶಕ್ಕಾಗಿ ಬಳಸುವ ಶಂಖದ ಮೇಲೆ ಅಥವಾ ಇನ್ನೂ ಎತ್ತರದ ಸ್ಥಳದಲ್ಲಿ ಇಡಬೇಕು.
  • ಶಂಖವನ್ನು ಶಿವಲಿಂಗ(Shivling)ದ ಮೇಲೆ ಇಡಬಾರದು ಅಥವಾ ಯಾವುದೇ ಧಾರ್ಮಿಕ ಆಚರಣೆಯ ಸಮಯದಲ್ಲಿ ಶಿವ ಪಿಂಡಿಯನ್ನು ಮುಟ್ಟಬಾರದು.
  • ಶಂಖವನ್ನು ಶಿವ(Lord Shiva) ಅಥವಾ ಸೂರ್ಯ(Lord Sun)ನಿಗೆ ನೀರನ್ನು ಅರ್ಪಿಸಲು ಎಂದಿಗೂ ಬಳಸಬಾರದು.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios