Asianet Suvarna News Asianet Suvarna News

ಮಕ್ಕಳ ಏಕಾಗ್ರತೆ ಹೆಚ್ಚಿಸಲು Vaastu tips

ಮಗು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ ಎಂದರೆ ತಂದೆತಾಯಿಗಳಿಗೆ ಚಿಂತೆ ಹೆಚ್ಚುತ್ತದೆ. ಇದರಿಂದ ಮಗುವಿನ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ. ಹೀಗಾಗಿ, ಮಗುವಿನ ಏಕಾಗ್ರತೆ, ಓದಿನ ಪ್ರೀತಿ ಹೆಚ್ಚಿಸಲು ಏನು ಮಾಡಬೇಕು?

Vastu Tips For children To Improve Concentration skr
Author
Bangalore, First Published Dec 21, 2021, 5:07 PM IST

ಮಗುವಿಗೆ ಓದಿನಲ್ಲಿ ಏಕಾಗ್ರತೆಯೇ ಇಲ್ಲವಾದರೆ, ಅದು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆಯುತ್ತದೆ, ದೊಡ್ಡವರಿಂದ ಬೈಸಿಕೊಳ್ಳುತ್ತದೆ, ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಎದುರಿಸುತ್ತದೆ. ಮಗುವಿನ ಏಕಾಗ್ರತೆ ಹೆಚ್ಚಿಸಲು ವಾಸ್ತುಶಾಸ್ತ್ರ(Vastu Shastra) ನೆರವಾಗಬಹುದು. ವಾಸ್ತುವು ದಿಕ್ಕುಗಳ ವಿಜ್ಞಾನವಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಗೆ ನೆರವಾಗುತ್ತದೆ. ವಾಸ್ತುವಿನಂತೆ, ಮಕ್ಕಳ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಿಸಲು ಈ ವಿಷಯಗಳ ಕಡೆ ಗಮನ ಹರಿಸಿ. ಇದರಿಂದ ಮಕ್ಕಳು ಶೈಕ್ಷಣಿಕವಾಗಿಯಷ್ಟೇ ಅಲ್ಲದೆ, ಸೃಜನಾತ್ಮಕವಾಗಿಯೂ ಹೆಚ್ಚು ಅಭಿವೃದ್ಧಿ ಹೊಂದಲಿದ್ದಾರೆ. 

  • ಮಕ್ಕಳ ಸ್ಟಡಿ ರೂಂನ ಬಾಗಿಲು(door) ಪೂರ್ವ ಇಲ್ಲವೇ ಉತ್ತರ ದಿಕ್ಕಿನಲ್ಲಿಯೇ ಇರಬೇಕು. ಇದು ಮಗುವಿನ ಗ್ರಹಣ ಶಕ್ತಿ ಹೆಚ್ಚಿಸುವುದಲ್ಲದೆ, ಮಗುವಿಗೆ ಬೇಗ ಸುಸ್ತಾಗದಂತೆ ನೋಡಿಕೊಳ್ಳುತ್ತದೆ. ಏಕೆಂದರೆ, ಈ ದಿಕ್ಕುಗಳಲ್ಲಿ ಎನರ್ಜಿ ಹೆಚ್ಚಿರುತ್ತದೆ. 
  • ಅಧ್ಯಯನ ಕೋಣೆಯು ಶೌಚಾಲಯದ ಕೆಳಗಿರಬಾರದು. ಅಥವಾ ಮೆಟ್ಟಿಲ ಕೆಳಗಿರಬಾರದು. 
  • ಓದುವ ಸ್ಥಳದಿಂದ ಕಾಣುವಂತೆ ಕನ್ನಡಿ ಇರಬಾರದು. ಅಥವಾ ಕನ್ನಡಿಯಲ್ಲಿ ಪುಸ್ತಕಗಳ ಪ್ರತಿಬಿಂಬ(reflection) ಕಾಣುವಂತಿರಬಾರದು. ಇದರಿಂದ ಮಕ್ಕಳ ಮನಸ್ಸಿನ ಒತ್ತಡ(pressure) ಹೆಚ್ಚುತ್ತದೆ. 

    Strong spirits: ಈ ರಾಶಿಯವರು ಗಟ್ಟಿ ಮನೋಬಲದ ಜಗಜಟ್ಟಿಗಳು ..
     
  • ದೇಹ ಹಾಗೂ ಭೂಮಿಯ ಗಟ್ಟಿತನ ಕಾಯ್ದುಕೊಳ್ಳಬೇಕೆಂದರೆ ಮಗುವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು. 
  • ಓದುವಾಗ ಕೋಣೆಯಲ್ಲಿ ಸೂರ್ಯನ ಬೆಳಕು(Sunlight) ಬರುತ್ತಿರಬೇಕು. ಬೆಳಗ್ಗೆ ಹೊತ್ತಿನಲ್ಲಿ ಕೂಡಾ ದೀಪ ಹಚ್ಚಿಕೊಂಡು ಓದುವಂತಿರಬಾರದು. ಮಗುವು ಓದಲು ಕುಳಿತಾಗ ತನ್ನದೇ ನೆರಳು ಪುಸ್ತಕದ ಮೇಲೆ ಬೀಳುವಂತಿರಬಾರದು. 
  • ಪೂರ್ವದಲ್ಲಿ ಕುಳಿತು ಕಲಿತರೆ ಏಕಾಗ್ರತೆ(concentration) ಹೆಚ್ಚುತ್ತದೆ. 
  • ಸ್ಟಡಿ ರೂಮಿನಲ್ಲಿ ಪಶ್ಚಿಮ ಅಥವಾ ನೈಋತ್ಯ ಭಾಗದಲ್ಲಿ ಲೈಬ್ರೆರಿ ಮಾಡುವುದು ಉತ್ತಮ.
  • ಏಕಾಗ್ರತೆಗೆ ಭಂಗ ತರುವಂತ ಕಂಬಗಳು, ಪೀಠೋಪಕರಣಗಳು, ಓಪನ್ ಶೆಲ್ಫ್‌ ಕೋಣೆಯಲ್ಲಿ ಇರಕೂಡದು. 

    Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ
     
  • ಓದಲು ಬಳಸುವ ಟೇಬಲ್ ಯಾವಾಗಲೂ ಚೌಕ(square) ಇಲ್ಲವೇ ಆಯತಾಕಾರ(rectangle)ದಲ್ಲಿರಬೇಕು. ಟೇಬಲ್ ಮೂಲೆಗಳು ಚುಚ್ಚುವಂತಿರಬಾರದು. 
  • ಸ್ಟಡಿ ಟೇಬಲ್ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಮಗುವು ಓದುವಾಗ ಇವೆರಡರಲ್ಲಿ ಒಂದು ದಿಕ್ಕಿಗೆ ಮುಖ ಮಾಡುವಂತಿರಬೇಕು. 
  • ಕೋಣೆಯ ಗೋಡೆಯ ಬಣ್ಣ ಬಿಳಿ ಇಲ್ಲವೇ ತಿಳಿ ಹಳದಿ ಇರಬೇಕು. ಇದು ವಿದ್ಯಾರ್ಥಿಗಳ ಗ್ರಹಣ ಶಕ್ತಿ ಹೆಚ್ಚಿಸುತ್ತದೆ. 
  • ಸ್ಟಡಿ ಕೋಣೆಯ ಬಲ್ಬ್‌ನ ಬೆಳಕು ಬಿಳಿ ಇಲ್ಲವೇ ಹಳದಿ ಬಣ್ಣದ್ದಾಗಿರಬೇಕು.
  • ಮಕ್ಕಳ ಅಧ್ಯಯನ ಟೇಬಲ್(table) ಗೋಡೆಗೆ ತಾಕಿಕೊಂಡಿರಬಾರದು. ಇದರಿಂದ ಮಗು ಓದಿನಲ್ಲಿ ನಿರಾಸಕ್ತಿ ತೋರುತ್ತದೆ. 
  • ಅಧ್ಯಯನ ಟೇಬಲ್ ಮೇಲೆ ಪ್ಲಾಸ್ಟಿಕ್, ತಾಮ್ರ ಅಥವಾ ಹರಳಿನ ಪಿರಮಿಡ್(pyramid) ಇಡುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚುತ್ತದೆ. 
  • ಅಧ್ಯಯನ ಟೇಬಲ್ ನ ಮುಂದಿನ ಗೋಡೆಯ ಮೇಲೆ ಸರಸ್ವತಿಯ ಚಿತ್ರ ಇರುವುದರಿಂದ ಆಕೆಯ ಕೃಪಾಕಟಾಕ್ಷ ಸಿಗುತ್ತದೆ. 
  • ಮಕ್ಕಳು ಓದುವಾಗ ಯಾವುದೇ ಕಾರಣಕ್ಕೂ ಹಾಸಿಗೆಯ ಮೇಲೆ ಇಲ್ಲವೇ ಸೋಫಾ ಮೇಲೆ ಕೂರಬಾರದು. ಇದರಿಂದ ಉದಾಸೀನತೆ ಹೆಚ್ಚುತ್ತದೆ. 

    ಇದೆಲ್ಲದರೊಂದಿಗೆ ಮಗುವಿಗೆ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರ(food) ನೀಡುತ್ತಿರುವುದನ್ನು ಖಚಿತ ಪಡಿಸಿಕೊಳ್ಳಿ. ಜೊತೆಗೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮಕ್ಕಳಿಗೆ ಶಾಲೆಯಲ್ಲಿ ಹೇಳಿಕೊಡುವುದು ಅರ್ಥವಾಗುತ್ತಿದೆಯೇ ಇಲ್ಲವೇ ವಿಚಾರಿಸಿ. ಅವರು ಎದುರಿಸುತ್ತಿರಬಹುದಾದ ಮಾನಸಿಕ ಸಮಸ್ಯೆಗಳು, ಒತ್ತಡಗಳು ಇದ್ದರೆ ಅವುಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಿ ತಿಳಿದುಕೊಳ್ಳಿ. ಕೆಲವೊಮ್ಮೆ ಮಕ್ಕಳಿಗೆ ಬೇರೆ ಪ್ರತಿಭೆ ಇದ್ದು, ಅದರ ಬಗ್ಗೆ ಸಂಪೂರ್ಣ ಆಸಕ್ತಿ ಇರಬಹುದು. ಅಂಥ ಸಂದರ್ಭದಲ್ಲಿ ಅವರ ಆಸಕ್ತಿಗೆ ನೀರೆರೆಯುವುದು ಅಗತ್ಯ. ಮಕ್ಕಳ ಬೌದ್ಧಿಕ ಶಕ್ತಿ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳೂ ಮುಖ್ಯ. ಹೀಗಾಗಿ, ಅವರನ್ನು ಆದಷ್ಚು ಹೊರಾಂಗಣ ಆಟದಲ್ಲಿ ತೊಡಗಿಸಿಕೊಳ್ಳುವಂತೆ ನೋಡಿ. 
Follow Us:
Download App:
  • android
  • ios