Vastu Tips: ನಿಮ್ಮನೆಯಲ್ಲೂ ಬಾಳೆ ಗಿಡ ಇದ್ಯಾ? ಶುಭ ಫಲ ಬೇಕಂದ್ರೆ ಹೀಗ್ ಮಾಡಿ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಗಿಡ –ಮರಕ್ಕೂ ಮಹತ್ವದ ಸ್ಥಾನ ನೀಡಲಾಗಿದೆ. ಅದ್ರಲ್ಲಿ ಬಾಳೆ ಗಿಡ ಕೂಡ ಒಂದು. ಬಹುಪಯೋಗಿ ಬಾಳೆ ಗಿಡ ಬೆಳೆಸುವಾಗ ವಾಸ್ತು ನಿಯಮಗಳನ್ನು ತಿಳಿದಿರಬೇಕು. ಇಲ್ಲವೆಂದ್ರೆ ಸಮಸ್ಯೆ ಬೆನ್ನತ್ತುತ್ತದೆ. 
 

Vastu Tips For Banana Tree

ಬಾಳೆ ಹಣ್ಣು (Banana Fruit) ಬಹುತೇಕ ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಕೂಡ. ಯಾವುದೇ ಪೂಜೆ ಸಂದರ್ಭದಲ್ಲಿ ಬಾಳೆ ಹಣ್ಣನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಇಡಲಾಗುತ್ತದೆ. ಬರೀ ಬಾಳೆ ಹಣ್ಣು ಮಾತ್ರವಲ್ಲ  ಹಿಂದೂ ಧರ್ಮದಲ್ಲಿ ಬಾಳೆ ಮರಕ್ಕೆ ಪೂಜ್ಯ ಸ್ಥಾನವಿದೆ. ಬಾಳೆ ಮರದಲ್ಲಿ ((Banana Plant) ) ಭಗವಂತ ಗುರು ಮತ್ತು ವಿಷ್ಣು (Vishnu) ನೆಲೆಸಿದ್ದಾರೆ ಎಂದು ನಂಬಲಾಗಿದೆ. ಬಹುತೇಕರ ಮನೆಯಲ್ಲಿ ಬಾಳೆ ಗಿಡವನ್ನು ಬೆಳೆಸಲಾಗುತ್ತದೆ. ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬಾಳೆ ಗಿಡವಿರುತ್ತದೆ. ಬಾಳೆ ಹಣ್ಣು, ಬಾಳೆ ಎಲೆ, ಬಾಳೆ ದಿಂಡಿನ ಬಳಕೆ ಜೊತೆಗೆ ಬಾಳೆ ಗಿಡವನ್ನು ಕತ್ತರಿಸಿ ಶುಭ ಸಂದರ್ಭದಲ್ಲಿ ಮಂಟಪ ಮಾಡ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವ ಪಡೆದಿರುವ ಹಾಗೂ ವಿಷ್ಣು ವಾಸವಾಗಿರುವ ಈ ಬಾಳೆ ಗಿಡವನ್ನು ಬೆಳೆಸಲು ಹಾಗೂ ಅದನ್ನು ಕತ್ತರಿಸಲು ಕೆಲ ನಿಯಮಗಳಿವೆ. ವಾಸ್ತು ಪ್ರಕಾರ, ಬಾಳೆ ಮರವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಬಾಳೆ ಮರವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಅದು ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಆದ್ದರಿಂದ, ಮನೆಯ ಮುಂದೆ ಬಾಳೆ ಮರವನ್ನು ನೆಡುವ ಮೊದಲು, ಅದರ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅವಶ್ಯಕ. ನಾವಿಂದು ಬಾಳೆ ಗಿಡ ಬೆಳೆಸುವ ನಿಯಮಗಳ ಬಗ್ಗೆ ಹೇಳ್ತೆವೆ. 

ಗುರುವಾರ ಬಾಳೆ ಗಿಡ ಕತ್ತರಿಸ್ಬೇಡಿ : ಮೊದಲೇ ಹೇಳಿದಂತೆ ಬಾಳೆ ಗಿಡದಲ್ಲಿ ಗುರು ವಾಸವಾಗಿದ್ದಾನೆ. ಹಾಗಾಗಿ ಅಪ್ಪಿತಪ್ಪಿಯೂ ಗುರುವಾರ ಬಾಳೆ ಗಿಡವನ್ನು ಕತ್ತರಿಸಬಾರದು. ಹಾಗೆಯೇ ಅದ್ರ ಎಲೆಗಳನ್ನು ಕೀಳುವುದು ಕೂಡ ನಿಷಿದ್ಧ. ಹಾಗೆಯೇ ಬಾಳೆ ಗಿಡವನ್ನು ಮನೆಯಲ್ಲಿ ನೆಡುವ ಪ್ಲಾನ್ ಇದ್ದರೆ ಅಥವಾ ಈಗಾಗಲೇ ಬಾಳೆ ಗಿಡವಿದ್ದರೆ ಕೆಲವೊಂದು ಮುಖ್ಯ ವಿಷ್ಯಗಳನ್ನು ತಿಳಿದುಕೊಳ್ಳಿ.

ಅಂಗಾಂಗಗಳ ಶುಭ, ಅಶುಭಗಳ ಬಗ್ಗೆ 'ಜ್ಯೋತಿಷ್ಯ ಶಾಸ್ತ್ರ' ಏನು ಹೇಳುತ್ತದೆ?

ಬಾಳೆ ಗಿಡಕ್ಕೆ ಪೂಜೆ : ಮನೆಯಲ್ಲಿ ಬಾಳೆ ಗಿಡವಿದ್ದರೆ ವಾಸ್ತು ಪ್ರಕಾರ  ನಿತ್ಯ ಅದರ ಪೂಜೆ ಮಾಡಬೇಕು. ಹಾಗೆಯೇ ಪ್ರತಿ ದಿನ ಬಾಳೆ ಗಿಡಕ್ಕೆ ನೀರು ಹಾಕಬೇಕು. ಅಲ್ಲದೆ, ಗುರುವಾರದಂದು ಬಾಳೆ ಗಿಡಕ್ಕೆ ಅರಿಶಿನವನ್ನು ಅರ್ಪಿಸಿದ್ರೆ ಶುಭವಾಗುತ್ತದೆ ಎಂದು ನಂಬಲಾಗಿದೆ. ಸಂಜೆ ಬಾಳೆ ಗಿಡದ ಕೆಳಗೆ ದೀಪ ಹಚ್ಚಬೇಕು.  ಹೀಗೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ.

ಬಾಳೆ ಗಿಡದ ಅಕ್ಕಪಕ್ಕ ತುಳಸಿ : ಬಾಳೆ ಗಿಡದ ಪಕ್ಕದಲ್ಲಿ ತುಳಸಿ ಗಿಡವನ್ನು ನೆಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಬಾಳೆ ಗಿಡದಲ್ಲಿ ವಿಷ್ಣು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯು ತುಳಸಿಯಲ್ಲಿ ನೆಲೆಸಿದ್ದಾಳೆ. ಹಾಗಾಗಿ ಈ ಎರಡು ಗಿಡಗಳನ್ನು ಒಟ್ಟಿಗೆ ನೆಡುವುದರಿಂದ ಇಬ್ಬರ ಆಶೀರ್ವಾದವೂ ನಮಗೆ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Zodiac signs: ಇವರು Break-up ಸನ್ನಿವೇಶವನ್ನು ನಾಜೂಕಾಗಿ ನಿರ್ವಹಿಸುತ್ತಾರೆ!

ಈ ದಿಕ್ಕಿನಲ್ಲಿ ಬಾಳೆ ಗಿಡವಿರಲಿ : ಮನೆಯಲ್ಲಿ ಬಾಳೆ ಗಿಡ ಬೆಳೆಸುವ ಮೊದಲು ಸರಿಯಾದ ದಿಕ್ಕಿನ ಬಗ್ಗೆ ಜ್ಞಾನವಿರಲಿ. ಈಶಾನ್ಯ ಮೂಲೆಯಲ್ಲಿ ಬಾಳೆ ಗಿಡ ನೆಡುವುದು ಯಾವಾಗಲೂ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಇದನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿಯೂ ನೆಡಬಹುದು. ಈ ದಿಕ್ಕನ್ನು ಪೂಜೆಗೆ ಒಳ್ಳೆಯದು ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ವಾಸ್ತು ಪ್ರಕಾರ, ಇದನ್ನು ಮನೆಯ ದಕ್ಷಿಣ, ಪಶ್ಚಿಮ ಮತ್ತು ಅಗ್ನಿ ದಿಕ್ಕಿನಲ್ಲಿ ಬೆಳೆಸುವುದು ಅಶುಭವೆಂದು ಪರಿಗಣಿಸಲಾಗಿದೆ.

ಮನೆ ಮುಂದೆ ಬಾಳೆ ಗಿಡ : ವಾಸ್ತು ಪ್ರಕಾರ ಮನೆಯ ಮುಂಭಾಗದಲ್ಲಿ ಬಾಳೆ ಗಿಡವನ್ನು ನೆಡಬಾರದು. ಮನೆಯ ಹಿಂಬದಿಯಲ್ಲಿ ಯಾವಾಗಲೂ ಬಾಳೆಗಿಡವನ್ನು ನೆಡಬೇಕು. 

ಶುದ್ಧ ಸ್ಥಳ : ಬಾಳೆ ಗಿಡವನ್ನು ನೆಡುವ ಮೊದಲು ದಿಕ್ಕಿನ ಜೊತೆ ಜಾಗದ ಬಗ್ಗೆ ಗಮನವಿರಲಿ. ಸ್ವಚ್ಛವಾದ ಸ್ಥಳದಲ್ಲಿಯೇ ಅದನ್ನು ಬೆಳೆಸಿ. ಕೊಳಕಾದ ಪ್ರದೇಶದಲ್ಲಿ, ಚರಂಡಿ ನೀರು ಸೇರುವ ಪ್ರದೇಶದಲ್ಲಿ ಬಾಳೆ ಗಿಡವನ್ನು ಬೆಳೆಸಬೇಡಿ.

Vastu Tips For Banana Tree


 

Latest Videos
Follow Us:
Download App:
  • android
  • ios