Lucky Bamboo ಲಕ್ ತರಬೇಕಂದ್ರೆ ಸುಮ್ನೆ ತಂದಿಟ್ರಾಗಲ್ಲ, ಈ ವಾಸ್ತು ನಿಯಮ ಪಾಲಿಸ್ಬೇಕು!
ಹೆಸರೇ ಅದೃಷ್ಟದ ಬಿದಿರು. ಅಂದ ಮೇಲೆ ಮನೆಯಲ್ಲಿ ಈ ಸಸ್ಯವಿಟ್ಟರೆ ಅದೃಷ್ಟ ತರೋದು ನಿಜ. ಆದರೆ, ಕೆಲ ವಾಸ್ತು ನಿಯಮಗಳನ್ನು ಪಾಲಿಸ್ಬೇಕು.
ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ ಬಿದಿರಿನ ಸಸ್ಯಗಳನ್ನು ಬಹಳ ಅದೃಷ್ಟ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಮತ್ತು ಕಚೇರಿಯಲ್ಲಿ ಬಿದಿರಿನ ಗಿಡಗಳನ್ನು ಇಡುವುದರಿಂದ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಕಾಲಾನಂತರದಲ್ಲಿ, ಬಿದಿರಿನ ಸಸ್ಯಗಳನ್ನು ಮನೆ ಗಿಡವಾಗಿ ಒಳಾಂಗಣದಲ್ಲಿ ಇರಿಸಿಕೊಳ್ಳಲು ಮಾರ್ಪಡಿಸಲಾಗಿದೆ. ಇಂದು, ಬಿದಿರಿನ ಸಸ್ಯಗಳು ವಿವಿಧ ಗಾತ್ರಗಳು ಮತ್ತು ಪ್ರಭೇದಗಳಲ್ಲಿ ಲಭ್ಯವಿವೆ. ಸಣ್ಣ ಗಾತ್ರದ ಲಕ್ಕಿ ಬ್ಯಾಂಬೂವನ್ನು ಜೋಡಿಸಿ ಕೆಂಪು ರಿಬ್ಬನ್‌ನಿಂದ ಕಟ್ಟಲಾಗುತ್ತದೆ. ಕಲ್ಲುಗಳು ಮತ್ತು ನೀರಿನಿಂದ ತುಂಬಿದ ಗಾಜಿನ ಹೂದಾನಿಗಳಲ್ಲಿ ಇರಿಸಲಾಗುತ್ತದೆ. ಉಡುಗೊರೆ ಅಂಗಡಿಗಳು ಮತ್ತು ನರ್ಸರಿಗಳಲ್ಲಿ ನೀವು ವಿವಿಧ ಅದೃಷ್ಟದ ಬಿದಿರಿನ ಸಸ್ಯಗಳನ್ನು ಕಾಣಬಹುದು. ಬಿದಿರಿನ ಸಸ್ಯಗಳು ಮತ್ತು ಅದನ್ನು ಮನೆಯಲ್ಲಿ ಎಲ್ಲಿ ಇರಿಸಬೇಕು ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ಹೇಳುತ್ತೇವೆ.
ಈ ದಿಕ್ಕಿನಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ, ಅದೃಷ್ಟದ ಬಿದಿರಿ(Lucky bamboo)ನ ಗಿಡವನ್ನು ಮನೆಯಲ್ಲಿ ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇಡಬೇಕು.
ಅದೃಷ್ಟದ ಬಿದಿರಿನ ಸಸ್ಯವನ್ನು ಪೂರ್ವ ಮೂಲೆಯಲ್ಲಿ ಇರಿಸಿ. ನೀವು ಸಂಪತ್ತು ಮತ್ತು ಅದೃಷ್ಟವನ್ನು ಆಕರ್ಷಿಸಲು ಬಯಸಿದರೆ ಬಿದಿರಿನ ಸಸ್ಯವನ್ನು ಆಗ್ನೇಯ ವಲಯದಲ್ಲಿ ಇರಿಸಬಹುದು. ಇದನ್ನು ಈ ಮೂಲೆಯಲ್ಲಿಟ್ಟರೆ ನೀವು ಹಣಕಾಸಿನ ತೊಂದರೆಗಳನ್ನು ತೊಡೆದುಹಾಕಬಹುದು ಮತ್ತು ಸಮೃದ್ಧಿ(prosperity)ಯನ್ನು ಸಾಧಿಸಬಹುದು ಎಂದು ನಂಬಲಾಗಿದೆ.
ಶನಿ ಸಾಡೇಸಾತಿ ಮತ್ತು ಧೈಯಾ ಈ 5 ರಾಶಿಗಳ ಮೇಲಿದೆ.. ನಿಮ್ಮ ರಾಶಿ ಇದೆಯೇ ನೋಡಿ..
ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಬಿದಿರಿನ ಸಸ್ಯಗಳನ್ನು ಡೈನಿಂಗ್ ಟೇಬಲ್‌ನ ಮಧ್ಯದಲ್ಲಿ ಇರಿಸಿ.
ಬಿದಿರಿನ ಸಸ್ಯಗಳನ್ನು ಮಲಗುವ ಕೋಣೆಗಳಲ್ಲಿಯೂ ಇರಿಸಬಹುದು. ಇದಕ್ಕೆ ಕನಿಷ್ಠ ಕಾಳಜಿ ಮತ್ತು ಕಡಿಮೆ ಸೂರ್ಯನ ಬೆಳಕು ಅಗತ್ಯವಿರುವುದರಿಂದ, ಮನೆಯಲ್ಲಿ ಬಿದಿರಿನ ಸಸ್ಯವನ್ನು ಸೇರಿಸಲು ಮಲಗುವ ಕೋಣೆಗಳು ಸೂಕ್ತ ಸ್ಥಳವಾಗಿವೆ.
ಅದೃಷ್ಟದ ಬಿದಿರು ಬೆಳವಣಿಗೆ, ಆರಂಭ ಮತ್ತು ಕುಟುಂಬದ ಸಾಮರಸ್ಯವನ್ನು ಸಂಕೇತಿಸುತ್ತದೆ. ಈ ಎಲ್ಲಾ ಸಕಾರಾತ್ಮಕ ವೈಬ್‌ಗಳನ್ನು ಆಕರ್ಷಿಸಲು ಮನೆಯ ಪ್ರವೇಶದ್ವಾರದ ಬಳಿ ಸಸ್ಯವನ್ನು ಇರಿಸಿ.
ಬಿದಿರಿನ ಸಸ್ಯದ ಪ್ರಯೋಜನಗಳು(benefits)
ಬಿದಿರಿನ ಸಸ್ಯಗಳು ವಾಯು ಶುದ್ಧಿಕಾರಕಗಳಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಸುತ್ತಮುತ್ತಲಿನ ಮಾಲಿನ್ಯಕಾರಕಗಳನ್ನು ತೆಗೆದು ಹಾಕುತ್ತವೆ.
ಅವು ಎರಡರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುತ್ತವೆ. ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಂಡ ಬಿದಿರಿನ ಸಸ್ಯವು ಆರೈಕೆ ಮಾಡಲು ಸುಲಭವಾದ ಒಳಾಂಗಣ ಗಿಡಗಳಲ್ಲಿ ಒಂದಾಗಿದೆ. ಇವನ್ನು ನೇರ ಸೂರ್ಯನ ಬೆಳಕಿನಲ್ಲಿ ಇಡುವುದನ್ನು ತಪ್ಪಿಸಿ.
ಬಿದಿರಿನ ಸಸ್ಯವು ಮನೆ ಮಾಲೀಕರಿಗೆ ಧನಾತ್ಮಕ ಶಕ್ತಿ ಮತ್ತು ಸುರಕ್ಷತೆಯನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮನೆಗೆ ಉತ್ತಮ ಅಲಂಕಾರಿಕಗಳಾಗಿ ಕಾಣಿಸುತ್ತವೆ.
Budh Vakri 2022: ವಕ್ರಿ ಬುಧನಿಂದ ಈ ರಾಶಿಗಳಿಗೆ ಕಂಟಕ! ಎಚ್ಚರವಾಗಿರಿ!
ಈ ಸಂಖ್ಯೆಯ ಕಾಂಡ ಬೇಡ
ನಾಲ್ಕನೇ ಸಂಖ್ಯೆಯನ್ನು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬಿದಿರನ್ನು ನಾಲ್ಕು ಗುಂಪುಗಳಲ್ಲಿ ಜೋಡಿಸುವುದನ್ನು ತಪ್ಪಿಸಿ.
ಅದೃಷ್ಟವನ್ನು ಆಹ್ವಾನಿಸಲು ಎಂಟು ಅಥವಾ ಒಂಬತ್ತು ಕಾಂಡಗಳ ಬಿದಿರನ್ನು ಜೋಡಿಸಿ. ಒಂದು ಜೋಡಿ ಬಿದಿರಿನ ಕಾಂಡಗಳು ಪ್ರೀತಿ ಮತ್ತು ಸಂತೋಷದ ವೈವಾಹಿಕ ಸಂಬಂಧ(marital relationship)ವನ್ನು ಸೂಚಿಸುತ್ತವೆ. ಆದರೆ ಮೂರು ಅಥವಾ ಆರು ಬಿದಿರಿನ ಕಾಂಡಗಳು ಜೀವನದಲ್ಲಿ ಸಂತೋಷವನ್ನು ಖಾತ್ರಿ ಪಡಿಸುತ್ತವೆ.
ಆರೋಗ್ಯಕ್ಕಾಗಿ ಐದು ಇಲ್ಲವೇ ಏಳು ಬಿದಿರಿನ ಕಾಂಡಗಳನ್ನು ಒಟ್ಟಾಗಿ ಜೋಡಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ರಾಶಿಯ ಸ್ವಭಾವಗಳು, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.