Vastu Shastra: ಮನೆಯಲ್ಲಿ ಈ 5 ವಸ್ತುಗಳು ಖಾಲಿಯಾದರೆ ಆರ್ಥಿಕ ಬಿಕ್ಕಟ್ಟು ತಪ್ಪಿದ್ದಲ್ಲ!

ಮನೆಯಲ್ಲಿ ಕೆಲವು ವಸ್ತುಗಳು ಎಂದೂ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಈ ವಸ್ತುಗಳು ಖಾಲಿಯಾಗಿರುವುದು ಯಾವಾಗಲೂ ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವಸ್ತುಗಳು ಖಾಲಿಯಾಗಿದ್ದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ವಾಸ್ತು ದೋಷವೂ ಹೆಚ್ಚುತ್ತದೆ. ಈ ವಸ್ತುಗಳು ಯಾವುವು ಎಂದು ತಿಳಿಯೋಣ.

Vastu Shastra five things kept empty in house can make you poor skr

ನಿಮ್ಮ ಒಳ್ಳೆಯ ದಿನಗಳು ಇದ್ದಕ್ಕಿದ್ದಂತೆ ಕೆಟ್ಟ ದಿನಗಳಾಗಿ ಬದಲಾಗುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಮನೆಯಲ್ಲಿರುವ ವಸ್ತುಗಳ ಬಗ್ಗೆ ಗಮನ ಕೊಡಿ. ಸಾಮಾನ್ಯವಾಗಿ ಮನೆಯಲ್ಲಿ ಇರುವ ಕೆಲವು ವಸ್ತುಗಳು  ಖಾಲಿಯಾದಾಗ ಕೆಟ್ಟ ಪರಿಣಾಮಗಳನ್ನು ನೀಡಲಾರಂಭಿಸುತ್ತವೆ.  ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಈ ವಸ್ತುಗಳು ಎಂದಾದರೂ ಖಾಲಿಯಾದರೆ ಅವು ನಿಮ್ಮ ಪ್ರಗತಿಯ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಅನೇಕ ಬಾರಿ ವ್ಯಕ್ತಿಯ ಅದೃಷ್ಟ ಸಣ್ಣ ವಿಷಯದಿಂದ ನಿಂತು ಹೋಗುತ್ತದೆ ಮತ್ತು ಅದು ನಿಧಾನವಾಗಿ ಬಡತನಕ್ಕೆ ಕಾರಣವಾಗುತ್ತದೆ. ಈ ವಿಷಯಗಳು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತವೆ ಮತ್ತು ಹೊಸ ಸಮಸ್ಯೆಗಳು ಒಂದರ ನಂತರ ಒಂದರಂತೆ ಬರಲು ಪ್ರಾರಂಭಿಸುತ್ತವೆ. ಆದುದರಿಂದಲೇ ಆಯುಷ್ಯ ವೃದ್ಧಿ ಮತ್ತು ಭಾಗ್ಯ ವೃದ್ಧಿಗಾಗಿ ಈ ಐದು ವಸ್ತುಗಳನ್ನು ಮನೆಯಲ್ಲಿ ಎಂದೂ ಖಾಲಿಯಾಗದಂತೆ ನೋಡಿಕೊಳ್ಳಿ.  ಈ ಐದು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ಕಣಜ (Rice bowl)
ವಾಸ್ತು ಶಾಸ್ತ್ರದ ಪ್ರಕಾರ ಅಕ್ಕಿ ಡಬ್ಬಿಯನ್ನು ಮನೆಯಲ್ಲಿ ಎಂದೂ ಖಾಲಿ ಇಡಬಾರದು. ಅದು ಖಾಲಿಯಾಗುತ್ತಿದ್ದರೆ, ಪೂರ್ತಿ ಖಾಲಿಯಾಗುವ ಮುನ್ನ ಮೊದಲು ಅದನ್ನು ಭರ್ತಿ ಮಾಡಿ. ಇದರಿಂದ ಅದು ನಿಮ್ಮ ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲ. ಪೂರ್ಣ ಧಾನ್ಯವು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ನಿಮ್ಮ ಸಮೃದ್ಧಿ ಹೆಚ್ಚಿಸುತ್ತದೆ. ಇದರೊಂದಿಗೆ ಪ್ರತಿದಿನ ತಾಯಿ ಅನ್ನಪೂರ್ಣೆಯನ್ನು ಪೂಜಿಸಿ. ಅನ್ನಪೂರ್ಯುಣೆ ಸಂಪತ್ತು- ಧಾನ್ಯಗಳು, ಐಶ್ವರ್ಯ ಮತ್ತು ಅದೃಷ್ಟದ ದೇವತೆ. ಮನೆಯಲ್ಲಿ ಧಾನ್ಯಗಳ ಕೊರತೆಯಾದರೆ ಅಲ್ಲಿ ಅನ್ನಪೂರ್ಣೆಯ ಕೃಪೆ ಕಳೆಯುತ್ತಿದೆ ಎಂದರ್ಥ. 

ನಾಳೆ ಆಷಾಢ ಶುಕ್ರವಾರ, ಪೂಜೆಗೆ 25 ಸಾವಿರ ಮ್ಯಾಂಗೋ ಬರ್ಫಿ ಪ್ರಸಾದ...

ಖಾಲಿ ಬಕೆಟ್(Empty bucket)
ವಾಸ್ತು ಶಾಸ್ತ್ರದ ಪ್ರಕಾರ ಬಾತ್ ರೂಂನಲ್ಲಿ ಖಾಲಿ ಬಕೆಟ್ ಇಡಬಾರದು. ಸ್ನಾನಗೃಹದಲ್ಲಿ ಇರಿಸಲಾಗಿರುವ ಖಾಲಿ ಬಕೆಟ್ ನಕಾರಾತ್ಮಕ ಶಕ್ತಿಯನ್ನು ತರುತ್ತದೆ, ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಬಕೆಟ್ ಅನ್ನು ಬಳಸದಿದ್ದರೆ, ಅದನ್ನು ಯಾವಾಗಲೂ ನೀರಿನಿಂದ ತುಂಬಿಸಿ. ಇದರೊಂದಿಗೆ, ಕಪ್ಪು ಅಥವಾ ಮುರಿದ ಬಕೆಟ್ ಅನ್ನು ಬಳಸಬಾರದು ಎಂದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ನಾನದ ಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಬಳಸಿ. ಬಕೆಟ್‌ನಲ್ಲಿ ನೀರು ತುಂಬಿಸಿ, ಖಾಲಿ ಬಿಡಬೇಡಿ.

ಪೂಜಾ ಮನೆಯಲ್ಲಿ ನೀರಿನ ಪಾತ್ರೆ 
ಹೆಚ್ಚಿನ ಮನೆಗಳಲ್ಲಿ ಪೂಜಾ ಸ್ಥಳವಿರುತ್ತದೆ ಮತ್ತು ನೀರಿನ ಪಾತ್ರೆಗಳು, ಗಂಟೆಗಳು ಮುಂತಾದ ಪೂಜೆಗೆ ಸಂಬಂಧಿಸಿದ ವಸ್ತುಗಳು ಇರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಮನೆಯಲ್ಲಿ ಇಟ್ಟಿರುವ ನೀರಿನ ಪಾತ್ರೆ ಖಾಲಿ ಇಡಬಾರದು. ಪೂಜೆಯ ನಂತರ ನೀರಿನ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಸ್ವಲ್ಪ ಗಂಗಾಜಲ ಮತ್ತು ತುಳಸಿ ಎಲೆಯನ್ನು ಹಾಕಬೇಕು. ದೇವರಿಗೂ ಸಹ ಬಾಯಾರಿಕೆಯಾಗುತ್ತದೆ ಎಂದು ನಂಬಲಾಗಿದೆ. ಅಂತಹ ನೀರು ತುಂಬಿದ ಪಾತ್ರೆಯನ್ನು ಪೂಜೆಯ ಮನೆಯಲ್ಲಿಟ್ಟರೆ ದೇವರು ಬಾಯಾರಿಕೆಯಿಲ್ಲದೆ ತೃಪ್ತನಾಗಿರುತ್ತಾನೆ. ಈ ಕಾರಣದಿಂದಾಗಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಮತ್ತು ಧನಾತ್ಮಕ ಶಕ್ತಿಯ ಸಂವಹನವಿರುತ್ತದೆ. ಮತ್ತೊಂದೆಡೆ, ಖಾಲಿ ನೀರಿನ ಪಾತ್ರೆಯು ಮನೆ ಮತ್ತು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದರಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

Ketu Gochar 2023ದ ಅಶುಭ ಪರಿಣಾಮಕ್ಕೆ 5 ರಾಶಿಗಳು ವಿಲವಿಲ

ಪರ್ಸ್ ಖಾಲಿ ಮಾಡಬೇಡಿ
ವಾಲ್ಟ್ ಅಥವಾ ಪರ್ಸ್ ಎಂದಿಗೂ ಖಾಲಿಯಾಗಿರಬಾರದು ಎಂದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಪರ್ಸ್ ಇಲ್ಲವೇ ತಿಜೋರಿಯಲ್ಲಿ ಸ್ವಲ್ಪ ಹಣವನ್ನು ಯಾವಾಗಲೂ ಇಟ್ಟುಕೊಳ್ಳಬೇಕು. ಖಾಲಿ ವಾಲ್ಟ್ ಅಥವಾ ಪರ್ಸ್ ಬಡತನಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ವಾಲ್ಟ್ ಅಥವಾ ಪರ್ಸ್ನಲ್ಲಿ ಸ್ವಲ್ಪ ಹಣ ಇರಬೇಕು. ಒಂದೇ ಬಾರಿಗೆ ಖಾಲಿ ಮಾಡಬೇಡಿ. ಇದರೊಂದಿಗೆ, ನೀವು ಕಮಾನು, ಗೋಮತಿ ಚಕ್ರ, ಶಂಖವನ್ನು ಸಹ ವಾಲ್ಟ್ನಲ್ಲಿ ಇರಿಸಬಹುದು. ಇದು ನಿಮ್ಮ ಸಮೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಭಾಷಾ ಬಡತನ
ನಮ್ಮ ಏಳಿಗೆಯಲ್ಲಿ ಭಾಷೆಗೆ ಬಹುಮುಖ್ಯ ಸ್ಥಾನವಿದೆ. ಅದಕ್ಕೇ ಅಪ್ಪಿತಪ್ಪಿಯೂ ಮಾತಿಗೆ ಬರ ಬರದಂತೆ ನೋಡಿಕೊಳ್ಳಿ. ನಾಲಿಗೆಯಿಂದ ಯಾರನ್ನೂ ಅವಮಾನಿಸಬೇಡಿ. ಮನೆಯ ಹಿರಿಯರಿಗೆ ಮಾನಸಿಕವಾಗಿ ನೋವುಂಟು ಮಾಡುವಂಥ ಮಾತುಗಳನ್ನು ಹೇಳಬೇಡಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಂಡು ದಾರಿ ಬದಲಿಸುತ್ತಾಳೆ. ಆದುದರಿಂದಲೇ ಮನೆಯ ಹಿರಿಯರನ್ನು ಯಾವತ್ತೂ ಅಗೌರವದಿಂದ ನೋಡಿಕೊಳ್ಳಬಾರದು. 

Latest Videos
Follow Us:
Download App:
  • android
  • ios