Asianet Suvarna News Asianet Suvarna News

Vastu Tips: ಎದ್ ಕೂಡ್ಲೇ ಇದ್ನೆಲ್ಲ ನೋಡ್ಬಿಟ್ಟು ದಿನ ಹಾಳ್ ಮಾಡ್ಕೋಬೇಡಿ ಸ್ವಾಮಿ!

ಬೆಳ್‌ಬೆಳ್ಗೆ ಎದ್ ಕೂಡ್ಲೇ ಈ 5 ಕೆಲಸಗಳನ್ನು ಮಾಡುವುದನ್ನು ಶತಾಯಗತಾಯ ತಪ್ಪಿಸಿ ಎನ್ನುತ್ತದೆ ವಾಸ್ತುಶಾಸ್ತ್ರ. ಇಲ್ಲದಿದ್ರೆ ನಿಮ್ಮ ದಿನನ್ನ ನೀವೇ ಹಾಳು ಮಾಡಿಕೊಳ್ತೀರಿ!

Vastu Shastra do not see these things when you get up in the morning badluck will follow skr
Author
First Published May 15, 2023, 10:02 AM IST

ದಿನವು ಉತ್ತಮವಾಗಿ ಪ್ರಾರಂಭವಾದರೆ, ಇಡೀ ದಿನ ಸಂತೋಷ ಮತ್ತು ಯಶಸ್ಸಿನಿಂದ ತುಂಬಿರುತ್ತದೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಬ್ರಹ್ಮ ಏಳುವ ಈ ಸಮಯದಲ್ಲಿ ಏಳುವುದು ಎಂದಿಗೂ ಶುಭವಾಗಿದೆ. ಇದರಿಂದ ದೇವಾನುದೇವತೆಗಳ ಆಶೀರ್ವಾದ ದೊರೆಯುತ್ತದೆ. ಇದು ಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ಬೆಳಿಗ್ಗೆ ಎದ್ದ ನಂತರ ಕೆಲವು ಕೆಲಸಗಳನ್ನು ಮಾಡಲು ಮತ್ತು ಕೆಲವು ಕೆಲಸಗಳನ್ನು ತಪ್ಪಿಸಲು ಜ್ಯೋತಿಷ್ಯ ಹಾಗೂ ವಾಸ್ತುವಿನಲ್ಲಿ ಸಲಹೆ ನೀಡಲಾಗುತ್ತದೆ. ವಾಸ್ತು ಶಾಸ್ತ್ರವು ಬೆಳಿಗ್ಗೆ ಎದ್ದ ನಂತರ ಮಾಡಬಾರದ 5 ವಿಷಯಗಳನ್ನು ಉಲ್ಲೇಖಿಸುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ ದುರದೃಷ್ಟ ಅಟಕಾಯಿಸಿಕೊಳ್ಳುತ್ತದೆ. ಅದ್ಯಾವ ಕೆಲಸಗಳು ನೋಡೋಣ..

1. ಕನ್ನಡಿ ನೋಡಿಕೊಳ್ಳುವುದು
ಶಾಸ್ತ್ರಗಳ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಯಾರೂ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಳ್ಳಬಾರದು. ಇದು ವ್ಯಕ್ತಿಯ ದಿನವನ್ನು ಹಾಳು ಮಾಡುತ್ತದೆ. ಮತ್ತು ಆ ದಿನದ ಕೆಲಸಗಳಲ್ಲಿ  ಒಂದು ಅಡಚಣೆ ಬರುತ್ತದೆ ಮತ್ತು ಕಾರ್ಯದಲ್ಲಿ ವಿಫಲತೆ ಎದುರಾಗುತ್ತದೆ. ಹಾಗಾಗಿ ಬೆಳಗ್ಗೆ ಎದ್ದಾಗ ಕನ್ನಡಿ ನೋಡುವ ಬದಲು ಮೊದಲು ದೇವರ ಚಿತ್ರವನ್ನು ನೋಡಿ ಕೈ ಮುಗಿಯಿರಿ. ನಂತರ ಉತ್ತಮ ದಿನಕ್ಕಾಗಿ ಸ್ಮರಿಸುತ್ತಾ ಆ ದಿನದ ಕೆಲಸಗಳ ಬಗ್ಗೆ ಯೋಜಿಸಿ. ಇದು ದಿನದ ಉತ್ತಮ ಆರಂಭಕ್ಕೆ ಕಾರಣವಾಗುತ್ತದೆ.

Budh Pradosh Vratದಂದು ಈ ಕೆಲಸ ಮಾಡುವುದರಿಂದ ಜಾತಕದಲ್ಲಿ ಬಲವಾಗುತ್ತಾನೆ ಬುಧ

2. ಕೆಟ್ಟ ಗಡಿಯಾರ
ಗಡಿಯಾರಗಳು ವ್ಯಕ್ತಿಯ ಭವಿಷ್ಯದೊಂದಿಗೆ ಸಂಬಂಧ ಹೊಂದಿವೆ. ಮತ್ತು ಕೆಟ್ಟ ಗಡಿಯಾರವು ಕೆಟ್ಟ ಸಮಯವನ್ನು ಸೂಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಬೆಳಗ್ಗೆ ಏಳುತ್ತಿದ್ದಂತೆಯೇ ಕೆಟ್ಟ ಗಡಿಯಾರವನ್ನು ನೋಡುವುದು ವಿವಾದಗಳಿಗೆ ಕಾರಣವಾಗಬಹುದು. ದಿನದ ಪ್ರತಿಯೊಂದು ಕೆಲಸಕ್ಕೂ ಅಡ್ಡಿಯಾಗುತ್ತದೆ. ಕೆಟ್ಟ ಗಡಿಯಾರವು ದೊಡ್ಡ ದುರಂತವನ್ನು ಸೂಚಿಸುತ್ತದೆ. ಹಾಗಾಗಿ ಮನೆಯಲ್ಲಿ ಗಡಿಯಾರ ಒಡೆದರೆ ಅಥವಾ ಕೆಟ್ಟಿದ್ದರೆ ಅದನ್ನು ತಕ್ಷಣ ಸರಿಪಡಿಸಿ. ಅದು ಸಾಧ್ಯವಾಗದಿದ್ದರೆ, ಅದನ್ನು ಮನೆಯಿಂದ ಹೊರ ಹಾಕಿ.

3. ತೊಳೆಯದ ಪಾತ್ರೆಗಳು
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದು ತೊಳೆಯದ ಕೊಳಕು ಪಾತ್ರೆಗಳನ್ನು ನೋಡಿದರೆ ದೇಹದಲ್ಲಿ ನಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ. ಶಾಸ್ತ್ರದ ಪ್ರಕಾರ ರಾತ್ರಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ, ಪಾತ್ರೆ ತೊಳೆದ ನಂತರ ಮಲಗಬೇಕು. ರಾತ್ರಿಯಿಡೀ ಇರಿಸಲಾದ ಪಾತ್ರೆಯು ಲಕ್ಷ್ಮಿಯನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಇದು ಜೀವನದಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಕೊಳಕು ಪಾತ್ರೆಯನ್ನು ನೋಡಿದರೆ ಇಡೀ ದಿನ ಕೆಟ್ಟದಾಗುತ್ತದೆ ಎಂಬ ನಂಬಿಕೆ ಇದೆ. ಈ ಅಭ್ಯಾಸ ಪತಿ-ಪತ್ನಿಯರ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟು ಮಾಡುವ ಜೊತೆಗೆ ಕೌಟುಂಬಿಕ ವಾತಾವರಣವನ್ನು ಕೆಡಿಸುತ್ತದೆ.

4. ನೆರಳು
ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಅಥವಾ ಇತರರ ನೆರಳನ್ನು ನೋಡುವುದು ಶುಭವಲ್ಲ. ನೆರಳುಗಳನ್ನು ನೋಡುವುದು ರಾಹುವಿನ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ನೆರಳುಗಳನ್ನು ನೋಡುವುದು ಜನರಲ್ಲಿ ಖಿನ್ನತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ದಿನದ ಕೆಲಸವನ್ನು ಪೂರ್ಣಗೊಳಿಸಲು ತುಂಬಾ ಕಷ್ಟವಾಗುತ್ತದೆ. ಮತ್ತು ಏಕಾಗ್ರತೆ ಹಾಳಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಬೆಳಿಗ್ಗೆ ಎದ್ದು ಯಾರೊಬ್ಬರ ನೆರಳನ್ನು ನೋಡುವುದು ಹತ್ತಿರದ ಸಂಬಂಧಿಯ ಮರಣವನ್ನು ಸೂಚಿಸುತ್ತದೆ. 

Hair Cut rules: ವಾರದ ಈ ದಿನ ಕೂದಲು ಕತ್ತರಿಸಿದ್ರೆ ಆಯಸ್ಸು ಕಮ್ಮಿಯಾಗುತ್ತೆ!

5. ಕ್ರೂರ ಪ್ರಾಣಿಗಳ ಚಿತ್ರಗಳು
ಶಾಸ್ತ್ರಗಳ ಪ್ರಕಾರ, ಬೆಳಿಗ್ಗೆ ಹಸುಗಳನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಆದರೆ ಬೆಳಗ್ಗೆ ಎದ್ದು ಯಾವತ್ತೂ ಕಾಡು ಪ್ರಾಣಿಗಳ ಚಿತ್ರವನ್ನು ಮೊದಲು ನೋಡಬೇಡಿ. ಇದು ಸಂಬಂಧದಲ್ಲಿ ಅಂತರವನ್ನು ಉಂಟು ಮಾಡುತ್ತದೆ. ಅಲ್ಲದೆ, ಕೆಲಸದ ಸ್ಥಳದಲ್ಲಿ ಘರ್ಷಣೆಗಳು ಉದ್ಭವಿಸಲು ಪ್ರಾರಂಭವಾಗುತ್ತದೆ.

Follow Us:
Download App:
  • android
  • ios