Vastu Tips: ಈ ದಿಕ್ಕಿನಲ್ಲಿ ಗೋಡೆ ಗಡಿಯಾರವಿದ್ದರೆ ಸಂಪತ್ತನ್ನು ಆಕರ್ಷಿಸುತ್ತದೆ!

ಗಡಿಯಾರ ಎಂದರೆ ಸಮಯದ ಸೂಚಕ. ಮನೆಯ ಗಡಿಯಾರಗಳು ನಮ್ಮ ಸಮಯವನ್ನೂ ನಿರ್ಧರಿಸುತ್ತಿರುತ್ತವೆ. ನಮ್ಮ ಸಮಯ ಉತ್ತಮವಾಗಿರಬೇಕೆಂದರೆ, ನಮಗೂ ಒಳ್ಳೆಯ ಕಾಲ ಬರಬೇಕೆಂದರೆ ಮೊದಲು ಗಡಿಯಾರ ಸಂಬಂಧಿ ವಾಸ್ತು ನಿಯಮ ಪಾಲನೆಯಾಗಬೇಕು. 

Vastu Dos And Donts To Follow For Wall Clock skr

ವಾಸ್ತುವಿನ ವಿಷಯಕ್ಕೆ ಬಂದಾಗ ಬಹುತೇಕರು ಗೋಡೆ ಗಡಿಯಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೇವಲ ಅದರ ಅಂದ ಚೆಂದಕ್ಕೆ ಹೆಚ್ಚು ಮನ್ನಣೆ ನೀಡುತ್ತಾರೆ. ಅದನ್ನು ವಾಸ್ತು ಪ್ರಕಾರ ಇಡಬೇಕೆಂಬುದೇ ಬಹುತೇಕರಿಗೆ ತಿಳಿದಿರುವುದಿಲ್ಲ. ಆದರೆ, ವಾಸ್ತುವಿನಲ್ಲಿ ಗೋಡೆ ಗಡಿಯಾರದ ಸಂಬಂಧ ಸಾಕಷ್ಟು ಸಲಹೆಗಳಿವೆ. ಅವನ್ನು ಪರಿಗಣಿಸುವುದರಿಂದ ಮನೆಯ ಏಳ್ಗೆ ಸಾಧ್ಯವಾಗುತ್ತದೆ. 

ನಿಮ್ಮ ಮನೆಯಲ್ಲಿ ಗೋಡೆ ಗಡಿಯಾರಕ್ಕೆ ಸಂಬಂಧಿಸಿದಂತೆ ಈ ನಿಮಯಗಳು ಪಾಲನೆಯಾಗುತ್ತಿವೆಯೇ ಗಮನಿಸಿ. ಏಕೆಂದರೆ, ಸಮಯ ಪ್ರತಿಯೊಬ್ಬರಿಗೂ ಬಹಳ ಪ್ರಮುಖವಾದುದು. ಗಡಿಯಾರದ ವಾಸ್ತು ಸರಿಯಿಲ್ಲದಿದ್ದರೆ ನಿಮ್ಮ ಟೈಂ ಕೂಡಾ ಸರಿ ಇಲ್ಲದೆ ಹೋಗಬಹುದು. ಗಡಿಯಾರದ ವಾಸ್ತು ಸರಿಯಿದ್ದಾಗ ನಿಮ್ಮ ಸಮಯವೂ ಚೆನ್ನಾಗಿರುತ್ತದೆ. ಮನೆಯಲ್ಲಿ ಸಮೃದ್ಧಿ ತುಂಬುತ್ತದೆ. ಹೀಗಾಗಿ, ಗಡಿಯಾರದ ವಿಷಯಕ್ಕೆ ಬಂದಾಗ ವಾಸ್ತು ಪ್ರಕಾರ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನಿಲ್ಲಿ ವಿವರಿಸಲಾಗಿದೆ. 

ಏನು ಮಾಡಬೇಕು?

  • ಉತ್ತರ(North) ಅಥವಾ ಪೂರ್ವ(East) ದಿಕ್ಕಿನ ಗೋಡೆಗಳ ಮೇಲೆ ಗೋಡೆ ಗಡಿಯಾರಗಳನ್ನು ಇರಿಸುವುದು ಶುಭವಾಗಿದೆ.
  • ಉತ್ತರದಲ್ಲಿ ಗಡಿಯಾರವನ್ನು ನೇತು ಹಾಕುವುದು ಸಂಪತ್ತನ್ನು(wealth) ಆಕರ್ಷಿಸುತ್ತದೆ ಎನ್ನುತ್ತದೆ ವಾಸ್ತು. ಹಾಗಾಗಿ, ಸಾಧ್ಯವಾದಷ್ಟು ಉತ್ತರ ದಿಕ್ಕಿನಲ್ಲಿಯೇ ಗಡಿಯಾರ ಹಾಕಿ.

    ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು!
     
  • ನೀವು ಪಶ್ಚಿಮ(West)ದಲ್ಲಿ ಗಡಿಯಾರವನ್ನು ಇರಿಸಬಹುದು. ಆದರೆ ಅದು ಕೊನೆಯ ಆಯ್ಕೆಯಾಗಿರಬೇಕು. ಹೌದು, ಇನ್ನಾವುದೇ ದಿಕ್ಕಿನ ಗೋಡೆ ಸರಿ ಹೊಂದದಿದ್ದಾಗ ಮಾತ್ರ ಪಶ್ಚಿಮವನ್ನು ಆಯ್ಕೆ ಮಾಡಿ. ದಕ್ಷಿಣವಂತೂ ಬೇಡವೇ ಬೇಡ.
  • ಪೂರ್ವ ಭಾಗದಲ್ಲಿ ಲೋಲಕದ ಗಡಿಯಾರಗಳನ್ನು(pendulum clocks) ಇಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
  • ಮಲಗುವ ಕೋಣೆಯಲ್ಲಿ ಮಲಗಿದ್ದಲ್ಲಿಂದಲೇ ನೋಡುವಂತೆ ಗಡಿಯಾರ ನೇತು ಹಾಕಿಕೊಳ್ಳಿ. ನೀವು ದಕ್ಷಿಣಕ್ಕೆ ತಲೆ ಇರಿಸಿ ಮಲಗಿದರೆ ಉತ್ತರದ ಗೋಡೆಯಲ್ಲಿ ಗಡಿಯಾರವಿರಲಿ. 
  • ಯಾವಾಗಲೂ ಮನೆಯೊಳಗೆ ಗಡಿಯಾರ ಎಂಬುದು ಇರಲೇಬೇಕು. 
  • ಕೆಲಸ ಮಾಡದ ಗಡಿಯಾರಗಳನ್ನು ಕೂಡಲೇ ದುರಸ್ತಿ ಮಾಡಿಸಿ ಅಥವಾ ಬದಲಿಸಿ. ನಡೆಯದ ಗಡಿಯಾರ ಇಡುವುದು ಬೇಡ.
  • ಎಲ್ಲ ಗಡಿಯಾರಗಳು ಸರಿಯಾದ ಸಮಯ ತೋರಿಸುತ್ತಿರಬೇಕು. ಅಥವಾ ಸರಿಯಾದ ಸಮಯಕ್ಕಿಂತ 1-2 ನಿಮಿಷ ಮುಂದಿರಬೇಕು.
  • ಎಲ್ಲ ಗೋಡೆ ಗಡಿಯಾರಗಳನ್ನು ಯಾವಾಗಲೂ ಸ್ವಚ್ಛಗೊಳಿಸಿ. ಬಲೆ ಕಟ್ಟಿರುವ ಅಥವಾ ಧೂಳಿನಿಂದ ತುಂಬಿರುವ ಗಡಿಯಾರ ಮನೆಗೆ ಅಶುಭವಾಗಿದೆ.

    ವಿಷ್ಣುವಿನ ದಶಾವತಾರ ಕಲಿಸುವ ಪಾಠಗಳು..

ಏನು ಮಾಡಬಾರದು?

  • ಮನೆಯ ದಕ್ಷಿಣ ಭಾಗದ ಗೋಡೆ(South wall)ಯಲ್ಲಿ ಗೋಡೆ ಗಡಿಯಾರ ಇಡಕೂಡದು. 
  • ಯಾವುದೇ ಬಾಗಿಲಿನ ಮೇಲೆ ಗಡಿಯಾರವನ್ನು ನೇತು ಹಾಕಬೇಡಿ. 
  • ಮಲಗುವ ಕೋಣೆಯ ಬಾಗಿಲನ್ನು ಎದುರಾಗಿ ನೋಡುವಂತೆ ಯಾವುದೇ ಗಡಿಯಾರ ನೇತು ಹಾಕಬೇಡಿ.  
  • ಮನೆಯ ಹೊರಗೆ ಗೋಡೆ ಗಡಿಯಾರಗಳನ್ನು ಹಾಕಬಾರದು. 
  • ಮನೆಯಲ್ಲಿ ಮುರಿದ ಅಥವಾ ಹಾಳಾದ ಗಡಿಯಾರ ಹಾಕಿಕೊಂಡಿರಬಾರದು. ಅವು ನಕಾರಾತ್ಮಕ ಶಕ್ತಿಯನ್ನು ತುಂಬಿಕೊಳ್ಳುತ್ತವೆ. 
  • ಗಡಿಯಾರಗಳು ಸರಿಯಾದ ಸಮಯಕ್ಕಿಂತ ಹಿಂದೆ ಇರಬಾರದು. ನಾವು ಕೂಡಾ ಯಾವಾಗಲೂ ಸಮಯಕ್ಕಿಂತ ಮುಂದಿರಬೇಕೆ ಹೊರತು ಹಿಂದುಳಿಯಬಾರದು. 
  • ಗಡಿಯಾರದ ಗಾಜು ಒಡೆದಿರಕೂಡದು. ಇವು ನೆಗೆಟಿವ್ ಎನರ್ಜಿ ಆಕರ್ಷಿಸುತ್ತವೆ. 
  • ಆರ್ಟಿಸ್ಟಿಕ್ ಆಗಿದೆ ಎಂದು ನಕಾರಾತ್ಮಕ ಶಕ್ತಿಯ (ದುಃಖ, ಯುದ್ಧ, ಒಂಟಿತನ ಇತ್ಯಾದಿ) ಚಿತ್ರವಿರುವ ಗಡಿಯಾರ ನೇತು ಹಾಕಬಾರದು. 
  • ಮಲಗುವ ಕೋಣೆಯಲ್ಲಿ ಗೋಡೆ ಗಡಿಯಾರದಲ್ಲಿ ಹಾಸಿಗೆಯು ಪ್ರತಿಫಲಿಸಬಾರದು. ಹಾಗದನ್ನು ಮೇಲೆ ನೇತು ಹಾಕಿ. 
     

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios