Asianet Suvarna News Asianet Suvarna News

ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು!

ಇಂದು ಗುರುವಾರ. ರಾಯರ ದಿನ. ಮಂತ್ರಾಲಯದಲ್ಲಿ ಸಮಾಧಿ ಸ್ಥಿತಿಯಲ್ಲಿ ನೆಲೆಸಿರುವ ರಾಯರ ಹಲವಾರು ಪವಾಡಗಳು ಸುದ್ದಿಯಾಗುತ್ತಲೇ ಇರುತ್ತವೆ. ಮಂತ್ರಾಲಯದ ಬಗ್ಗೆ ಹಾಗೂ ರಾಯರ ಅಪರೂಪದ ಪವಾಡಗಳ ಬಗ್ಗೆ ತಿಳಿಯೋಣ. 

Interesting Facts About Mantralayam That One Must Know skr
Author
Bangalore, First Published Apr 21, 2022, 10:38 AM IST

ಗುರು ರಾಘವೇಂದ್ರ ಸ್ವಾಮಿ ನಂಬಿದವರಿಗೆ ಎಂಥದೇ ಕಷ್ಟದ ಪರಿಸ್ಥಿತಿಯಲ್ಲೂ ರಾಯರು ಕೈ ಹಿಡಿದು ಮುನ್ನಡೆಸುವ ಅನುಭವವಾಗುತ್ತದೆ. ಇಂಥ ರಾಯರು ಬೃಂದಾವನವಾದ ಸ್ಥಳ ಮಂತ್ರಾಲಯ(Mantralayam). ಮಂತ್ರಾಲಯ ಎಂಬ ಹೆಸರೇ ಎಷ್ಟು ದೈವಿಕವಾಗಿದೆಯಲ್ಲವೇ? 

ಬೆಂಗಳೂರಿನಿಂದ 400 ಕಿಮೀ, ರಾಯಚೂರಿನಿಂದ 40 ಕಿಮೀ ಮತ್ತು ಕರ್ನೂಲಿನಿಂದ 75 ಕಿಮೀ ದೂರದಲ್ಲಿರುವ ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಈ ತೀರ್ಥಕ್ಷೇತ್ರದ ಪಕ್ಕದಲ್ಲೇ ತುಂಗಭದ್ರಾ ನದಿ(Tungabhadra river) ಹರಿಯುತ್ತಿದೆ. 

ಮಂತ್ರಾಲಯವು ಪ್ರಸಿದ್ಧ ದೇವತಾಶಾಸ್ತ್ರಜ್ಞ, ತತ್ವಜ್ಞಾನಿ, ಸಂತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನೆಲೆವೀಡಾಗಿದೆ. ಗುರು ರಾಘವೇಂದ್ರ ಸ್ವಾಮಿಯು 1595 - 1671 ರ ನಡುವೆ ಇಲ್ಲಿ ವಾಸಿಸುತ್ತಿದ್ದರು. ಇವರ ಅನುಯಾಯಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಯು ಭಕ್ತ ಪ್ರಹ್ಲಾದ(Prahlad)ನ ಅವತಾರ ಎಂದೇ ನಂಬುತ್ತಾರೆ. ತಮ್ಮ ದೈವಿಕ ಗುಣಗಳಿಂದ ದೇವರೇ ಆಗಿ ಹೋದವರು ರಾಯರು. ಇಂಥ ಈ ರಾಯರ ನೆಲೆವೀಡಿನ ಬಗ್ಗೆ ಕೆಲ ಆಸಕ್ತಿಕರ ವಿಷಯಗಳನ್ನಿಂದು ನೀಡುತ್ತೇವೆ. 

ರಾಘವೇಂದ್ರ ಸ್ವಾಮಿಗಳು ಚಿರಾಯು
ಮಂತ್ರಾಲಯವು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನದ ಪವಿತ್ರ ಉಪಸ್ಥಿತಿಗಾಗಿ ಪ್ರಸಿದ್ಧವಾಗಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 700 ವರ್ಷಗಳ ಕಾಲ ಜೀವಂತವಾಗಿ ಬೃಂದಾವನದಲ್ಲಿದ್ದು ಭಕ್ತರನ್ನು ಅನುಗ್ರಹಿಸುತ್ತಾರೆ ಎಂದು ನಂಬಲಾಗಿದೆ. ಭಕ್ತರು ಅವರನ್ನು ರಾಯರು ಮತ್ತು ಗುರುರಾಯರು ಎಂದೂ ಕರೆಯುತ್ತಾರೆ. ಗುರುವಾರ ರಾಘವೇಂದ್ರ ಸ್ವಾಮಿಗಳ ಪೂಜೆಗೆ ಉತ್ತಮವಾಗಿದೆ. 

ಗ್ರಾಮದೇವತೆ ಮಂಚಾಲಮ್ಮ ದೇವಿ(Goddess Manchalamma)
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಆಗಮಿಸುವ ಮೊದಲು, ಮಂಚಾಲಮ್ಮನನ್ನು ಈ ಊರಿನ ಅಧಿದೇವತೆ ಎನ್ನಲಾಗುತ್ತಿತ್ತು. ಆಕೆ ಗ್ರಾಮ ದೇವತೆಯಾಗಿದ್ದ ಕಾರಣದಿಂದಲೇ ಈ ಗ್ರಾಮವನ್ನು ಮಂಚಾಲಿ ಅಥವಾ ಮಂಚಲಾಯ ಎಂದು ಕರೆಯಲಾಗುತ್ತಿತ್ತು. ಇಂದಿಗೂ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಮೊದಲು ಮಂಚಾಲಮ್ಮ ದೇವಿಯ ದರ್ಶನ ಪಡೆದು ನಂತರವೇ ಬೃಂದಾವನದತ್ತ ಸಾಗಬೇಕು.

ನಿಮ್ಮ ಮುಖದ ಮಚ್ಚೆಗಳು ನಿಮ್ಮ ಬಗ್ಗೆ ಏನು ಹೇಳ್ತಿವೆ ಗೊತ್ತಾ?

ಮೂರು ರಥಗಳು(The Three Chariots)
ದೇವಾಲಯದಲ್ಲಿ ಮೂರು ರಥಗಳಿವೆ, ಒಂದು ಚಿನ್ನದ್ದು, ಇನ್ನೊಂದು ಬೆಳ್ಳಿಯದು ಮತ್ತು ಮೂರನೆಯದು ಶ್ರೀಗಂಧದ ಮರದಿಂದ ನಿರ್ಮಿಸಲಾಗಿರುವುದು. ವಿಶೇಷ ಸಂದರ್ಭಗಳಲ್ಲಿ ಬಳಸಲೆಂದು ನವರಥ ಕಲ್ಲುಗಳಿಂದ (9 ಅಮೂಲ್ಯ ಕಲ್ಲುಗಳು) ಹೊಸ ರಥವನ್ನು ತಯಾರಿಸಲಾಗುತ್ತಿದೆ. ಪ್ರತಿ ದಿನ ಪೂಜ್ಯ ಗುರುಗಳ ವಿಗ್ರಹವನ್ನು ದೇವಾಲಯದ ಸುತ್ತಲೂ ಒಯ್ಯಲಾಗುತ್ತದೆ.

ಥಾಮಸ್ ಮುನ್ರೋ ಮತ್ತು ಶ್ರೀ ಗುರು ರಾಯರ ಪವಾಡ(Miracle)
ಥಾಮಸ್ ಮುನ್ರೋ 1800 ರಲ್ಲಿ ಬಳ್ಳಾರಿಯ ಕಲೆಕ್ಟರ್ ಆಗಿದ್ದರು. ಈ ಸಂದರ್ಭದಲ್ಲಿ ಮದ್ರಾಸ್ ಸರ್ಕಾರವು ರಾಘವೇಂದ್ರ ಸ್ವಾಮಿ ಮಠ ಮತ್ತು ಮಂತ್ರಾಲಯ ಗ್ರಾಮದಿಂದ ಸಂಪೂರ್ಣ ಆದಾಯವನ್ನು ಸಂಗ್ರಹಿಸಲು ಆದೇಶಿಸಿತು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸುಮಾರು 130 ವರ್ಷಗಳಿಂದ ಇಲ್ಲಿ ಸಮಾಧಿ ಸ್ಥಿತಿಯಲ್ಲಿದ್ದಾರೆ ಎಂದು ಅವರಿಗೆ ತಿಳಿಸಲಾಯಿತು. ತನಿಖೆಗಾಗಿ ಮಠಕ್ಕೆ ಭೇಟಿ ನೀಡಿದ ಅವರು, ತಮ್ಮ ಟೋಪಿ ಮತ್ತು ಪಾದರಕ್ಷೆಗಳನ್ನು ತೆಗೆದು ಪವಿತ್ರ ಆವರಣವನ್ನು ಪ್ರವೇಶಿಸಿದರು. ಈ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನದಿಂದ ಹೊರಬಂದು ದತ್ತಿಯ ಪುನರಾರಂಭದ ಬಗ್ಗೆ ಮುನ್ರೋ ಜೊತೆ ಸ್ವಲ್ಪ ಸಮಯದವರೆಗೆ ಸಂವಾದ ನಡೆಸಿದರು. ಕೇವಲ ಮುನ್ರೋಗೆ ಮಾತ್ರ ಅವರು ಕಾಣಿಸುತ್ತಿದ್ದರು. ಮುನ್ರೋ ಹಿಂತಿರುಗಿ ಮಠ ಮತ್ತು ಗ್ರಾಮದ ಪರವಾಗಿ ಆದೇಶ ಬರೆಸಿದರು. ಈ ಅಧಿಸೂಚನೆಯನ್ನು ಮದ್ರಾಸ್ ಸರ್ಕಾರಿ ಗೆಜೆಟ್‌ನಲ್ಲಿ ಅಧ್ಯಾಯ XI, ಪುಟ 213 ರಲ್ಲಿ 'ಮಂಚಾಲಿ ಆದೋನಿ ತಾಲೂಕಾ' ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ. ಇಂದಿಗೂ ಈ ಆದೇಶವನ್ನು ಸೇಂಟ್ ಜಾರ್ಜ್ ಕೋಟೆ ಮತ್ತು ಮಂತ್ರಾಲಯದಲ್ಲಿ ಸಂರಕ್ಷಿಸಲಾಗಿದೆ.

Rules ಫಾಲೋ ಮಾಡೋದು ಈ 5 ರಾಶಿಯವರ ಜಾಯಮಾನವಲ್ಲ!

ಪಂಚಮುಖಿ ಆಂಜನೇಯ(panchamukhi anjaneya)
ರಾಯರು ರಾಮ ಮತ್ತು ಶ್ರೀ ಪಂಚಮುಖ ಆಂಜನೇಯನ ಭಕ್ತರಾಗಿದ್ದರು.

ಅದೋನಿಯ ನವಾಬ ನೋಡಿದ ಪವಾಡ
ಮಂತ್ರಾಲಯವು ಆದೋನಿಯ ನವಾಬನ ಆಳ್ವಿಕೆಯಲ್ಲಿತ್ತು. ನವಾಬನು ರಾಯರ ಶಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿ, ಬಿಳಿ ಬಟ್ಟೆಯಿಂದ ಮುಚ್ಚಿದ ಮಾಂಸದ ತಟ್ಟೆಯನ್ನು ತಂದು ರಾಯರಿಗೆ ಅರ್ಪಿಸಿದನು. ರಾಯರು ಸ್ವಲ್ಪ ನೀರು ಚಿಮುಕಿಸಿ ಬಟ್ಟೆ ತೆಗೆದಾಗ ಮಾಂಸ ತಾಜಾ ಹಣ್ಣುಗಳಾಗಿ ಮಾರ್ಪಟ್ಟಿತ್ತು. ಇದನ್ನು ನೋಡಿದ ನವಾಬನು ಗುರುಗಳ ಪಾದಗಳಿಗೆ ಬಿದ್ದು ಕ್ಷಮೆಯನ್ನು ಬೇಡಿದನು. ಹಾಗೂ ರಾಯರಿಗೆ ಏನು ಉಡುಗೊರೆ ಬೇಕೆಂದು ಕೇಳಿದನು. ಆಗ ಗುರುರಾಯರು ಮಂಚಾಳ ಗ್ರಾಮವನ್ನು ಕೇಳಿದರು, ಅದು ನಂತರ ಮಂತ್ರಾಲಯ ಎಂದು ಕರೆಯಲ್ಪಟ್ಟಿತು.
 

Follow Us:
Download App:
  • android
  • ios