ಈ ದಿಕ್ಕಲ್ಲಿ ಓಡುಕುದುರೆ ಪೇಂಟಿಂಗ್ ಹಾಕಿದ್ರೆ ಹೆಸರು, ಖ್ಯಾತಿ, ಗೌರವ ಅರಸಿ ಬರುವುದು!
ವಾಸ್ತುವಿನಲ್ಲಿ ಓಡುವ 7 ಕುದುರೆಗಳ ಪೇಂಟಿಂಗ್‌ಗೆ ಬಹಳ ಮಹತ್ವವಿದೆ. ಈ ಪೇಂಟಿಂಗ್ ಹಾಕುವುದರಿಂದ ಏನಾಗುತ್ತದೆ, ಎಲ್ಲಿ ಹಾಕಬೇಕು ಎಲ್ಲದಕ್ಕೂ ವಾಸ್ತು ನಿರ್ದೇಶನಗಳು ಏನಿವೆ ನೋಡೋಣ.
ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ, ಆದರೆ ಇನ್ನೂ ನಿಮಗೆ ಯಶಸ್ಸು ಸಿಕ್ಕಿಲ್ಲ. ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಯಶಸ್ವಿಯಾಗಲು ಅನುಮತಿಸದ ಕಾರಣ ಇದು ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಮನಸ್ಸಿಗೆ ತೊಂದರೆಯಾಗುತ್ತದೆ. ನಿಮ್ಮಿಂದ ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಲು ವಾಸ್ತು ಶಾಸ್ತ್ರದಲ್ಲಿ ಹಲವು ಮಾರ್ಗಗಳಿವೆ. ಹಾಗೆಯೇ ಉತ್ತಮ ಜೀವನವನ್ನು ನಡೆಸಲು ನಮ್ಮ ಸುತ್ತಲೂ ಇರುವ ಉತ್ತಮ ಶಕ್ತಿಯನ್ನು ನಾವು ಬಳಸಿಕೊಳ್ಳಬೇಕು. ನಮ್ಮನ್ನು ಸುತ್ತುವರೆದಿರುವ ಸಕಾರಾತ್ಮಕ ಶಕ್ತಿಯ ಪ್ರಕಾರವನ್ನು ಬಳಸಿಕೊಳ್ಳಲು ವಾಸ್ತು ಸಹಾಯ ಮಾಡುತ್ತದೆ. ನಿಮ್ಮ ಜೀವನದಲ್ಲಿ ಮತ್ತು ಮನೆಗೆ ಧನಾತ್ಮಕತೆಯನ್ನು ತರುವಂಥ ಅನೇಕ ಇತರ ವಿಷಯಗಳಿವೆ. ಮನೆಯಲ್ಲಿ ಏಳು ಕುದುರೆಗಳ ಚಿತ್ರವನ್ನು ನೇತು ಹಾಕುವುದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಧನಾತ್ಮಕತೆಯನ್ನು ತರುತ್ತದೆ. ಈ ಪೇಂಟಿಂಗ್ ಪ್ರಾಮುಖ್ಯತೆ ಏನು ತಿಳಿಯೋಣ.
7 ಕುದುರೆಗಳ ಚಿತ್ರದ ಪ್ರಾಮುಖ್ಯತೆ
ವಾರದ 7 ದಿನಗಳು, ಕಾಮನಬಿಲ್ಲಿನ 7 ಬಣ್ಣಗಳು, ಸಪ್ತಋಷಿ, ಮದುವೆಯಲ್ಲಿ ಸಪ್ತಪದಿ, ಏಳು ಜನ್ಮಗಳು, ಸಂಗೀತದಲ್ಲಿ ಏಳು ಸ್ವರಗಳು ಇತ್ಯಾದಿಯಂತೆ ಏಳು ಕುದುರೆಗಳ ಚಿತ್ರವು ಕೂಡಾ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ.
ಓಡುವ ಕುದುರೆಗಳ ಚಿತ್ರದಲ್ಲಿ ಯಾವಾಗಲೂ 7 ಕುದುರೆಗಳೇ ಏಕಿರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 7 ಸಂಖ್ಯೆ ನೈಸರ್ಗಿಕವಾಗಿದೆ. ಏಳು ಕುದುರೆಗಳು ಸೂರ್ಯನ ರಥ ಎಳೆಯುತ್ತವೆ. ಅವು ಏಳು ಬಣ್ಣಗಳನ್ನು ಸೂಚಿಸುತ್ತವೆ. ಏಳು ಬಣ್ಣ ಸೇರಿಯೇ ಬಿಳಿಯ ಬಣ್ಣವಾಗುವುದು.
Venus Transit 2022: ಈ ರಾಶಿಗಳಿಗೆ ಅಷ್ಟಲಕ್ಷ್ಮೀ ರಾಜಯೋಗ
ಈ ದಿಕ್ಕಿನಲ್ಲಿ 7 ಕುದುರೆಗಳ ವರ್ಣಚಿತ್ರ ಹಾಕಿ
- ಮನೆಯಲ್ಲಿ ಏಳು ಕುದುರೆಗಳ ರಥದ ಮೇಲೆ ಸೂರ್ಯದೇವರು ಸವಾರಿ ಮಾಡುತ್ತಿರುವ ಚಿತ್ರಣವನ್ನು ನೀವು ಹಾಕಿದರೆ ಅದು ತುಂಬಾ ಮಂಗಳಕರವಾಗಿರುತ್ತದೆ. ಶುಭ ಫಲಗಳಿಗಾಗಿ ಈ ಪೇಂಟಿಂಗ್ ಅನ್ನು ಪೂರ್ವ ದಿಕ್ಕಿನಲ್ಲಿ ಹಾಕಬೇಕು.
- ನೀವು ಕೆಲಸದ ಸ್ಥಳದಲ್ಲಿ ಬಡ್ತಿಗಾಗಿ ಕಾಯುತ್ತಿದ್ದರೆ, ಮನೆಯ ಉತ್ತರ ದಿಕ್ಕಿನಲ್ಲಿ ಓಡುವ ಕುದುರೆಗಳ ಚಿತ್ರಗಳನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
- ನೀವು ಜೀವನದಲ್ಲಿ ಹೆಸರು, ಖ್ಯಾತಿ ಮತ್ತು ಗೌರವವನ್ನು ಪಡೆಯಲು ಬಯಸಿದರೆ, ನೀವು ಮನೆಯ ದಕ್ಷಿಣ ದಿಕ್ಕಿನಲ್ಲಿ ಓಡುವ ಕುದುರೆಗಳ ಚಿತ್ರವನ್ನು ಹಾಕಬಹುದು. ಇದು ನಿಮಗೆ ಜೀವನದಲ್ಲಿ ತ್ವರಿತ ಪ್ರಗತಿಯನ್ನು ನೀಡುತ್ತದೆ ಮತ್ತು ನಿಮ್ಮ ಕೆಲಸವನ್ನು ಎಲ್ಲಾ ನಾಲ್ಕು ದಿಕ್ಕುಗಳಲ್ಲಿಯೂ ಪ್ರಶಂಸಿಸಲಾಗುತ್ತದೆ.
- ದಕ್ಷಿಣ ದಿಕ್ಕಿನಲ್ಲಿ ಓಡುವ ಕುದುರೆಗಳ ವರ್ಣಚಿತ್ರವನ್ನು ಹಾಕಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಮನೆಯ ಮುಖ್ಯ ಬಾಗಿಲಿನ ಕಿಟಕಿಯ ಮೇಲೆ ಓಡುವ ಕುದುರೆಯ ಪ್ರತಿಮೆಯನ್ನು ಇರಿಸಬಹುದು. ಕುದುರೆಯ ಮುಖ ಕಿಟಕಿಯಿಂದ ಹೊರಗೆ ನೋಡುತ್ತಿರಬೇಕು.
ವಾರ ಭವಿಷ್ಯ: ಮೇಷ ವೃಷಭಕ್ಕೆ ಕಾಡುವ ಅತೃಪ್ತಿ, ನಿಮಗೆ ಈ ವಾರ ಹೇಗಿರಲಿದೆ?
- ನೀವು ಸಾಲದಿಂದ ತೊಂದರೆಗೊಳಗಾಗಿದ್ದರೆ, ಪಶ್ಚಿಮ ದಿಕ್ಕಿನಲ್ಲಿ ಒಂದು ಜೋಡಿ ಕೃತಕ ಕುದುರೆಗಳನ್ನು ಇಡಬೇಕು. ಇದರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ ಮತ್ತು ಸುಖ, ಸಮೃದ್ಧಿ ಹೆಚ್ಚುತ್ತದೆ.
- ಬಿಳಿ ಕುದುರೆಗಳು ಸಕಾರಾತ್ಮಕ ಶಕ್ತಿಯ ಸಂಕೇತಗಳಾಗಿವೆ. ನೀವು ಈ ಚಿತ್ರವನ್ನು ಎಲ್ಲಿ ಇರಿಸಿದರೂ, ಅದರಲ್ಲಿ ಕುದುರೆಗಳು ಬಿಳಿಯಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದು ಮನೆ ಮತ್ತು ಕಛೇರಿಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.