Asianet Suvarna News Asianet Suvarna News

Venus Transit 2022: ಈ ರಾಶಿಗಳಿಗೆ ಅಷ್ಟಲಕ್ಷ್ಮೀ ರಾಜಯೋಗ

ಜ್ಯೋತಿಷ್ಯದಲ್ಲಿ ಅಷ್ಟಲಕ್ಷ್ಮಿ ರಾಜಯೋಗವನ್ನು ಬಹಳ ಮುಖ್ಯ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ನವೆಂಬರ್ 11ರಂದು ಶುಕ್ರ ಸಂಕ್ರಮಣದಿಂದ ಈ ವಿಶೇಷ ರಾಜಯೋಗವು ರೂಪುಗೊಳ್ಳುತ್ತಿದೆ. ಇದರ ಫಲ ಯಾವೆಲ್ಲ ರಾಶಿಗಳಿಗೆ ದೊರಕುತ್ತದೆ ನೋಡೋಣ..

Ashtalakshmi Raj Yoga formed on Shukra Gochar the luck of these zodiac signs will shine skr
Author
First Published Nov 13, 2022, 10:36 AM IST

ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿಚಕ್ರದ ಬದಲಾವಣೆಯು ಬಹಳ ಮುಖ್ಯವಾಗಿದೆ. ಏಕೆಂದರೆ ಒಂದೊಂದು ಗ್ರಹದ ಚಲನೆಯ ಬದಲಾವಣೆಯೂ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುವುದು. ನವೆಂಬರ್ 11ರಂದು ಐಷಾರಾಮಿ, ಸಂಪತ್ತು, ವೈಭವ, ಪ್ರಣಯ ಮತ್ತು ಐಶ್ವರ್ಯವನ್ನು ಒದಗಿಸುವ ಶುಕ್ರ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ಅಪರೂಪದ ಅಷ್ಟಲಕ್ಷ್ಮಿ ರಾಜಯೋಗ ಉಂಟಾಗುತ್ತಿದೆ. 

ವೈದಿಕ ಜ್ಯೋತಿಷ್ಯದಲ್ಲಿ ಅಷ್ಟಲಕ್ಷ್ಮಿ ಯೋಗವು ಅತ್ಯಂತ ಪ್ರಭಾವಶಾಲಿ ಯೋಗವಾಗಿದೆ. ಇದು ಲಕ್ಷ್ಮಿ ದೇವಿಯಿಂದ ರೂಪುಗೊಂಡಿರುವ ಆನಂದದ ಸಮೃದ್ಧ ಯೋಗವನ್ನು ನೀಡುತ್ತದೆ. ಇಲ್ಲಿ, ಲಕ್ಷ್ಮಿ ದೇವಿಯು ನೀಡಿದ ಉಡುಗೊರೆಯು ಹಲವಾರು ಪಟ್ಟು ಹೆಚ್ಚಾಗುತ್ತದೆ. ಈ ಯೋಗವಿದ್ದಾಗ ಅಷ್ಟಲಕ್ಷ್ಮಿಯರ ಒಲವೂ ವ್ಯಕ್ತಿಯ ಮೇಲಿರುತ್ತದೆ. ಅಂದರೆ, ಎಲ್ಲ 8 ರೀತಿಯ ಫಲಗಳನ್ನು ಲಕ್ಷ್ಮೀ ನೀಡಲಿದ್ದಾಳೆ. ಈ ಯೋಗದ ಅದೃಷ್ಟದೃಷ್ಟಿಯು ನಾಲ್ಕು ರಾಶಿಗಳ ಮೇಲೆ ಬೀಳಲಿದೆ. 

ಮೀನ(Pisces): ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ರೂಪುಗೊಂಡ ಅಷ್ಟಲಕ್ಷ್ಮಿ ರಾಜಯೋಗವು ಮೀನ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯ ಒಂಬತ್ತನೇ ಮನೆಯಲ್ಲಿ ಅಷ್ಟಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತಿದೆ. ಇದರೊಂದಿಗೆ, ಅವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಪ್ರಯಾಣದ ಸಾಧ್ಯತೆಗಳಿವೆ, ಅದು ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಮದುವೆಗೆ ಸೂಕ್ತ ಸಂಗಾತಿಯ ಹುಡುಕಾಟದಲ್ಲಿ ಯಶಸ್ಸು ಸಿಗಲಿದೆ.

ವಾರ ಭವಿಷ್ಯ: ಮೇಷ ವೃಷಭಕ್ಕೆ ಕಾಡುವ ಅತೃಪ್ತಿ, ನಿಮಗೆ ಈ ವಾರ ಹೇಗಿರಲಿದೆ?

ಮಕರ(Capricorn): ಮಕರ ರಾಶಿಯ 11ನೇ ಮನೆಯಲ್ಲಿ ಅಷ್ಟಲಕ್ಷ್ಮಿ ಯೋಗವು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದಲ್ಲಿ, ಈ ಸ್ಥಳವನ್ನು ಆದಾಯದ ಮನೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಈ ಜನರ ಆದಾಯ ಹೆಚ್ಚುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ವೃತ್ತಿಯಲ್ಲಿ ಅನಿರೀಕ್ಷಿತ ಲಾಭಗಳು ಹರಿದು ಬರಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೂಡಿಕೆಯಲ್ಲಿ ಲಾಭ ಸಿಗಲಿದೆ. ಹೂಡಿಕೆಗೆ ಸಮಯ ಅನುಕೂಲಕರವಾಗಿದೆ. 

ಕುಂಭ(Aquarius): ಅಷ್ಟಲಕ್ಷ್ಮಿ ರಾಜಯೋಗದ ಪ್ರಭಾವದಿಂದ ಕುಂಭ ರಾಶಿಯವರಿಗೆ ಆರ್ಥಿಕ ಬಲ ಹೆಚ್ಚಲಿದೆ. ಸಂಪತ್ತು ಸಿಗಲಿದೆ.ಕುಂಭ ರಾಶಿಯ ಹತ್ತನೇ ಮನೆಯಲ್ಲಿ ಅಷ್ಟಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಸ್ಥಳವು ಕೆಲಸದ ಪ್ರದೇಶ ಮತ್ತು ವ್ಯಾಪಾರವಾಗಿದೆ. ಈ ಯೋಗದ ಸೃಷ್ಟಿಯೊಂದಿಗೆ, ಈ ರಾಶಿಚಕ್ರದ ಸ್ಥಳೀಯರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯವು ಅನುಕೂಲಕರವಾಗಿದೆ. ನೀವು ಕಂಡ ಕನಸುಗಳು ನನಸಾಗುವ ಸಮಯ. ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಮಗುವಿನ ಕಡೆಯಿಂದ ಶುಭ ಸುದ್ದಿ ಸಿಗಲಿದೆ. 

Weekly Love Horoscope: ಮೇಷಕ್ಕೆ ಸತಾಯಿಸುವ ಪ್ರೇಮ, ಗುಟ್ಟು ರಟ್ಟಾಗುವ ಸಮಯ

ಸಿಂಹ (Leo): ಈ ರಾಶಿಯ ಜನರು ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳವನ್ನು ನೋಡುತ್ತಾರೆ ಮತ್ತು ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವ್ಯಾಪಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ವೃತ್ತಿಯಲ್ಲಿ ಹೊಸ ಸಾಧನೆಯನ್ನು ಸಾಧಿಸುವಿರಿ. ಸ್ನೇಹಿತರು ಮತ್ತು ಸಂಬಂಧಿಕರಿಂದ ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಗಳಿವೆ. ನೀವು ಬೇರೆ ದೇಶದ ಪೌರತ್ವಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಆ ದೃಷ್ಟಿಕೋನದಿಂದ ಗ್ರಹದ ಸಾಗಣೆಯು ತುಂಬಾ ಮಂಗಳಕರವಾಗಿರುತ್ತದೆ. ನೀವು ವಾಹನವನ್ನು ಸಹ ಖರೀದಿಸಬಹುದು. ಪೋಷಕರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios