Asianet Suvarna News Asianet Suvarna News

Valentine's Day 2023: ವಾಸ್ತು ಪ್ರಕಾರ ಈ ಉಡುಗೊರೆ ಕೊಟ್ರೆ ಪ್ರೀತಿ ಹೆಚ್ತಾನೇ ಇರುತ್ತೆ..

ಪ್ರೇಮಿಗಳ ದಿನದಂದು ತಮ್ಮ ಸಂಗಾತಿಗೆ ವಿಶೇಷ ಉಡುಗೊರೆಯನ್ನು ನೀಡಲು ಕೆಲವರು ಯೋಚಿಸುತ್ತಾರೆ. ಈ ಬಾರಿ ಪ್ರೇಮಿಗಳ ದಿನದಂದು ವಾಸ್ತು ಪ್ರಕಾರ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಿ, ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ..

Valentines Day 2023 you can give these vastu related gifts to enhance love skr
Author
First Published Feb 9, 2023, 3:42 PM IST

ಪ್ರೀತಿಯ ತಿಂಗಳು ಅಂದರೆ ಫೆಬ್ರವರಿ ಆರಂಭವಾಗಿದೆ. ಪ್ರೀತಿಯಲ್ಲಿರುವವರಿಗೆ ಈ ತಿಂಗಳು ತುಂಬಾ ವಿಶೇಷವಾಗಿದೆ. ಅದಕ್ಕಾಗಿಯೇ ಜನರು ಈ ತಿಂಗಳಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಫೆಬ್ರುವರಿ ಬಂತೆಂದರೆ 14 ಅಂದರೆ ಪ್ರೇಮಿಗಳ ದಿನ ಯಾವಾಗ ಬರುತ್ತದೋ ಎಂದು ಜನರು ತುದಿಗಾಲ ಮೇಲೆ ನಿಂತು ಕಾಯುತ್ತಾರೆ. ಪ್ರೀತಿಯ ಜೋಡಿಗಳು ಈ ದಿನವನ್ನು ಸ್ಮರಣೀಯವಾಗಿಸಲು ವರ್ಷಪೂರ್ತಿ ಕಾಯುತ್ತಾರೆ. ಈ ದಿನ ಎಲ್ಲರಿಗೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅವಕಾಶ ಸಿಗುತ್ತದೆ. ಪ್ರೇಮಿಗಳ ದಿನದಂದು ತಮ್ಮ ಸಂಗಾತಿಗೆ ವಿಶೇಷ ಉಡುಗೊರೆಯನ್ನು ನೀಡಲು ಕೆಲವರು ಯೋಚಿಸುತ್ತಾರೆ. ನೀವೂ ಸಹ ನಿಮ್ಮ ಸಂಗಾತಿಗೆ ಏನಾದರೂ ಉಡುಗೊರೆಯನ್ನು ನೀಡಲು ಬಯಸಿದರೆ, ವಾಸ್ತು ಪ್ರಕಾರ, ನಿಮ್ಮ ಸಂಗಾತಿಗೆ ನೀವು ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಅಂತಹ ಉಡುಗೊರೆಗಳು ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ತರುತ್ತವೆ. ವಾಸ್ತು ಪ್ರಕಾರ ಯಾವ ಉಡುಗೊರೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಯೋಣ.

ಬಿದಿರಿನ ಗಿಡ(bamboo plant)
ವಾಸ್ತು ಶಾಸ್ತ್ರದಲ್ಲಿ ಬಿದಿರಿನ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಪ್ರಗತಿ ಮತ್ತು ಸಮೃದ್ಧಿಯ ಸಂಕೇತವೆಂದು ಹೇಳಲಾಗುತ್ತದೆ. ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಬಿದಿರಿನ ಗಿಡವನ್ನು ಉಡುಗೊರೆಯಾಗಿ ನೀಡಿದರೆ, ನಿಮ್ಮ ಸಂಬಂಧದಲ್ಲಿ ಪ್ರೀತಿ, ಸಂತೋಷ ಮತ್ತು ಶಾಂತಿ ಉಳಿಯುತ್ತದೆ.

ನಗುವ ಬುದ್ಧ(Laughing buddha)
ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಬಹುದು. ವಾಸ್ತು ಶಾಸ್ತ್ರದಲ್ಲಿ ಲಾಫಿಂಗ್ ಬುದ್ಧನನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಪ್ರತಿಮೆಯು ನಿಮ್ಮ ಮತ್ತು ನಿಮ್ಮ ಸಂಗಾತಿಯ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ.

Kumbh Sankranti 2023: ಈ ದಿನ ಈ ಒಂದು ಕೆಲಸದಿಂದ ಸಾಡೇಸಾತಿಯ ದುಷ್ಪರಿಣಾಮ ತಗ್ಗುತ್ತೆ..

ಈ ಬಣ್ಣಗಳ ಹೂವುಗಳು(Colour of flowers)
ವಾಸ್ತು ಶಾಸ್ತ್ರದ ಪ್ರಕಾರ, ಪ್ರೇಮಿಗಳ ದಿನದಂದು ಕೆಂಪು ಮತ್ತು ಗುಲಾಬಿ ಹೂವುಗಳನ್ನು ನೀಡುವುದು ಅತ್ಯಂತ ಮಂಗಳಕರವಾಗಿದೆ. ಗುಲಾಬಿ ಮತ್ತು ಕೆಂಪು ಹೂವುಗಳು ಸ್ನೇಹ ಮತ್ತು ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ.

ಹೂವುಗಳನ್ನು ನೀಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಪ್ರೇಮಿಗಳ ದಿನದಂದು ಹೆಚ್ಚಿನ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಗುಲಾಬಿಗಳನ್ನು ನೀಡುತ್ತಾರೆ. ಆದರೆ ಗುಲಾಬಿ ಹೂವನ್ನು ಕೊಡುವಾಗ ಅದರಲ್ಲಿ ಮುಳ್ಳು ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಮುಳ್ಳಿನ ಗಿಡಗಳು ಅಥವಾ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡುತ್ತದೆ.

ಉಡುಗೊರೆ ಸುತ್ತುವ ಕಾಗದದ ಬಣ್ಣವನ್ನು ಸಹ ನೆನಪಿನಲ್ಲಿಡಿ
ವಾಸ್ತು ತಜ್ಞರ ಪ್ರಕಾರ ಪ್ರೇಮಿಗಳ ದಿನದಂದು ಸಂಗಾತಿಗೆ ಕೊಡುವ ಉಡುಗೊರೆಯನ್ನು ಸುತ್ತುವ ಕಾಗದದ ಬಣ್ಣವೂ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಿಶೇಷ ಸಂದರ್ಭದಲ್ಲಿ ನೀಲಿ, ಕಪ್ಪು ಅಥವಾ ಬಿಳಿ ಬಣ್ಣದ ಕಾಗದದಿಂದ ಉಡುಗೊರೆಯನ್ನು ಕಟ್ಟಬೇಡಿ. ಗೋಲ್ಡನ್, ಕೆಂಪು, ಗುಲಾಬಿ, ಹಳದಿ ಇತ್ಯಾದಿ ಬಣ್ಣಗಳನ್ನು ಸುತ್ತುವುದಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ.

ತ್ರಿಡಿ ಕ್ರಿಸ್ಟಲ್ ಯಂತ್ರ
ಮುರಿದ ಸಂಬಂಧಗಳನ್ನು ಸರಿಪಡಿಸಲು, ನೀವು ನಿಮ್ಮ ಸಂಗಾತಿಗೆ 3D ಕ್ರಿಸ್ಟಲ್ ಯಂತ್ರವನ್ನು ಉಡುಗೊರೆಯಾಗಿ ನೀಡಬಹುದು. ಈ 3D ಸ್ಫಟಿಕ ಯಂತ್ರವು ವಾಸ್ತು ಶಾಸ್ತ್ರದ ಒಂದು ಗಮನಾರ್ಹ ಆವಿಷ್ಕಾರವಾಗಿದೆ, ಇದು ಮುರಿದ ಸಂಬಂಧಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

Valentine Day 2023: ಈ ಉಡುಗೊರೆಗಳನ್ನು ನೀಡಬೇಡಿ, ಸಂಬಂಧದಲ್ಲಿ ಬಿರುಕು ಉಂಟಾಗಬಹುದು!

ಚೌಕಾಕಾರದ ಫೋಟೋಫ್ರೇಮ್
ನಿಮ್ಮ ಪ್ರೀತಿಯಲ್ಲಿ ಪದೇ ಪದೆ ಆನ್ ಆ್ಯಂಡ್ ಆಫ್ ಸಮಸ್ಯೆ ಇದ್ದರೆ, ಸಂಗಾತಿಗೆ ಚೌಕಾಕಾರದ ಫೋಟೋ ಫ್ರೇಮ್ ಹೊಂದಿರುವ ಫೋಟೋ ನೀಡಿ.. ಇದರಿಂದ ಸಂಬಂಧಕ್ಕೆ ಸ್ಥಿರತೆ ಒದಗುವುದು. ಉಡುಗೊರೆ ಕೂಡಾ ನೆನಪಿನಲ್ಲುಳಿಯುವುದು.

Follow Us:
Download App:
  • android
  • ios