Vastu Tips: ನೆಮ್ಮದಿ ಕೆಡಿಸ್ಬಹುದು ಮನೆ ಕೀಲಿ ಕೈ
ವಾಸ್ತು ಶಾಸ್ತ್ರದಲ್ಲಿ ಸಣ್ಣಪುಟ್ಟ ವಿಷ್ಯಗಳನ್ನು ಕೂಡ ಹೇಳಲಾಗಿದೆ. ನಾವೆಲ್ಲ ಮಾಮೂಲಿಯಾಗಿ ಬಳಸುವ ಕೀ ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲೆಂದರಲ್ಲಿ ಕೀ ಇಡಬಾರದು. ಹಾಗೆ ಯಾವ್ಯಾವುದೋ ಕೀಲಿ ಬಳಸ್ಬಾರದು.
ಪ್ರತಿಯೊಬ್ಬರೂ ಕೀ (Key) ಗಳನ್ನು ಬಳಸ್ತಾರೆ. ಮನೆ (Home), ಬೀರು, ಕಚೇರಿ , ವಾಹನ ಹೀಗೆ ಅನೇಕ ಕಡೆ ನಾವು ಕೀಯನ್ನು ಬಳಕೆ ಮಾಡ್ತೇವೆ. ಸಾಮಾನ್ಯವಾಗಿ ನಾವೆಲ್ಲರೂ ಮನೆಯಲ್ಲಿ ಕೀಲಿ ಇಡೋಕೆ ಒಂದು ಜಾಗವನ್ನು ನಿಗದಿ ಮಾಡಿರ್ತೇವೆ. ವಾಸ್ತು (Vastu) ಶಾಸ್ತ್ರದ ಪ್ರಕಾರ, ಎಲ್ಲೆಂದರೆಲ್ಲಿ ಕೀಲಿಗಳನ್ನು ಇಡುವಂತಿಲ್ಲ. ಕೀಲಿಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಅದು ಜೀವನದಲ್ಲಿ ಅನೇಕ ರೀತಿಯ ತೊಡಕುಗಳನ್ನು ತರುತ್ತದೆ. ಅನೇಕ ಜನರು ಕೀಲಿಗಳನ್ನು ಪೂಜಾ ಸ್ಥಳದಲ್ಲಿ ಅಥವಾ ದೇವರ ಮನೆ ಹತ್ತಿರ ಇಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಸಾಮಾನ್ಯವಾಗಿ ಹೊರಗಿನಿಂದ ಮನೆಗೆ ಬಂದಿರ್ತೇವೆ. ಕಾಲು, ಕೈ ಎಲ್ಲವೂ ಕೊಳಕಾಗಿರುತ್ತದೆ. ಕೀ ಇಡಲು ದೇವರ ಮನೆಗೆ ಹೋದಾಗ ದೇವರ ಮನೆ ಅಶುದ್ಧವಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಕೀ ಇಡುವುದು ತಪ್ಪು. ಇಂದು ನಾವು ವಾಸ್ತು ಪ್ರಕಾರ, ಎಲ್ಲಿ ಕೀಲಿಗಳನ್ನು ಇಡಬಾರದು ಎಂಬುದನ್ನು ಹೇಳ್ತೇವೆ.
ಮನೆಯ ಈ ಜಾಗದಲ್ಲಿ ಇಡಬೇಡಿ ಕೀ :
ಅಡುಗೆಮನೆಯಲ್ಲಿ ಕೀಲಿಗಳನ್ನು ಇಡಬೇಡಿ : ಸುಲಭವಾಗಿ ಸಿಗುತ್ತದೆ ಹಾಗೂ ನೆನಪಿರುತ್ತದೆ ಎಂಬ ಕಾರಣಕ್ಕೆ ಅನೇಕರು ಅಡುಗೆ ಮನೆಯಲ್ಲಿ ಕೀ ಇಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೀ ಇಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ಕೀಲಿಗಳನ್ನು ಮರೆತು ಸಹ ಅಡುಗೆಮನೆಯಲ್ಲಿ ಇಡಬಾರದು. ಅಡಿಗೆ ಮನೆ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.
ಡ್ರಾಯಿಂಗ್ ರೂಮಿನಲ್ಲೂ ಕೀಲಿಗಳನ್ನು ಇಡಬೇಡಿ : ಡ್ರಾಯಿಂಗ್ ರೂಮಿನಲ್ಲಿ ಎಂದಿಗೂ ಕೀಲಿಗಳನ್ನು ಇಡಬೇಡಿ ಎನ್ನುತ್ತದೆ ವಾಸ್ತುಶಾಸ್ತ್ರ. ಡ್ರಾಯಿಂಗ್ ರೂಮಿನಲ್ಲಿ ಕೀಲಿಗಳನ್ನು ಇಡುವುದರಿಂದ ಹೊರಗಿನಿಂದ ಬರುವವರ ಕಣ್ಣುಗಳು ಕೀಗಳ ಮೇಲೆ ಬೀಳುತ್ತವೆ. ಇದರಿಂದಾಗಿ ದೃಷ್ಟಿ ಬೀಳುವ ಸಾಧ್ಯತೆಯಿರುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಡ್ರಾಯಿಂಗ್ ರೂಮಿನಲ್ಲೂ ಕೀಲಿಗಳನ್ನು ಇಡಬಾರದು.
ಮಂಗಳವಾರ ಹುಟ್ಟಿದ್ದಾ? ನಿಮ್ಮ ಭವಿಷ್ಯದ ಬಗ್ಗೆ ಗ್ರಹಗತಿಗಳೇನಂತಾವೆ?
ಲಾಬಿಯಲ್ಲಿ ಕೀಲಿಗಳನ್ನು ಇರಿಸಿ : ಕೀಲಿಗಳನ್ನು ಲೋಹದಿಂದ ತಯಾರಿಸಲಾಗುತ್ತದೆ. ಮನೆಯ ಯಾವ ಜಾಗದಲ್ಲಿ ಕೀ ಇಡಬೇಕು ಎಂದು ನೀವು ಪ್ರಶ್ನೆ ಮಾಡ್ತಿದ್ದರೆ, ಜಾಗ ಹುಡುಕ್ತಿದ್ದರೆ ನೀವು ಲಾಬಿಯಲ್ಲಿ ಕೀ ಇಡಬಹುದು. ಹಾಗೆಯೇ ನೀವು ಕೀಯನ್ನು ಯಾವ ದಿಕ್ಕಿನಲ್ಲ ಇಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀವು ಕೀಲಿಗಳನ್ನು ಯಾವಾಗ್ಲೂ ಪಶ್ಚಿಮ ದಿಕ್ಕಿನಲ್ಲಿ ಇಡಬೇಕಾಗುತ್ತದೆ.
ಮನೆಯ ಯಾವ ಜಾಗದಲ್ಲಿ ಕೀ ಇಡಬಾರದು ಎಂಬುದನ್ನು ನೋಡಾಯ್ತು. ಈಗ ಯಾವ ಕೀ ಬಳಸಬಾರದು ಎಂಬುದನ್ನು ನೋಡೋಣ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಗಳು ಲಭ್ಯವಿದೆ. ಕೆಲವು ಸೌಂದರ್ಯದಿಂದ ನಮ್ಮನ್ನು ಆಕರ್ಷಿಸುತ್ತವೆ. ಸುಂದರವಾಗಿ ಕಾಣುತ್ತೆ ಎಂಬ ಕಾರಣಕ್ಕೆ ಅನೇಕರು ಬಗೆ ಬಗೆ ಕೀ ಬಂಚ್ (Key Bunch) ಖರೀದಿ ಮಾಡಿರ್ತಾರೆ. ಆದ್ರೆ ಎಲ್ಲ ಕೀ ಬಳಕೆ ತಪ್ಪು.
ದೇವರ ಚಿತ್ರ : ದೇವರ (God) ಚಿತ್ರವಿರುವು ಕೀಗಳು ಸಾಕಷ್ಟು ಲಭ್ಯವಿದೆ. ಭಕ್ತರು ತಮಗಿಷ್ಟವಾದ ದೇವರ ಫೋಟೋ ಇರುವ ಕೀ ಖರೀದಿ ಮಾಡ್ತಾರೆ. ಆದ್ರೆ ಇದು ತಪ್ಪು. ಎಂದಿಗೂ ದೇವರ ಫೋಟೋ ಇರುವ ಕೀ ಬಳಸಬಾರದು.
ಪೂರ್ವಜರು ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಅವರೇನೋ ಸೂಚನೆ ಕೊಡುತ್ತಿರಬಹುದು!
ಮರದ ಹ್ಯಾಂಗರ್ ಗಳು : ವಾಸ್ತು ಪ್ರಕಾರ, ಮರದ ಹ್ಯಾಂಗರ್ ಅನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಅದರಲ್ಲಿ ಕೀಲಿಗಳನ್ನು ಹಾಕಬಹುದು.
ಕನ್ನಡಿ ಕೀ ಹ್ಯಾಂಗರ್ : ಕೀ ಹ್ಯಾಂಗರ್‌ಗೆ ಕನ್ನಡಿ ಹಾಕಿದ್ದರೆ ಅದನ್ನು ಎಂದಿಗೂ ಬಳಸಬೇಡಿ ಎನ್ನುತ್ತದೆ ವಾಸ್ತುಶಾಸ್ತ್ರ.
ಪ್ಲಾಸ್ಟಿಕ್ ಕೀ ಹ್ಯಾಂಗರ್ ಗಳು : ಪ್ಲಾಸ್ಟಿಕ್ ಕೀ ಹ್ಯಾಂಗರ್‌ಗಳನ್ನು ಎಂದಿಗೂ ಬಳಸಬೇಡಿ. ಈ ಕೀಗಳ ಬಳಕೆ ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.