Asianet Suvarna News Asianet Suvarna News

Feng Shui for Money: ಧನಲಕ್ಷ್ಮೀ, ಮನೆಗೆ ಬಾರಮ್ಮಾ...

ಒಬ್ಬೊಬ್ಬ ದೇವರನ್ನು ಒಂದೊಂದು ರೀತಿ ಮೆಚ್ಚಿಸಬೇಕಾಗುತ್ತದೆ. ಅಂತೆಯೇ ಧನಲಕ್ಷ್ಮೀ ಆಹ್ವಾನಕ್ಕೆ ವಾಸ್ತುವಿನಲ್ಲಿ ಕೆಲ ಉಪಾಯಗಳಿವೆ, ಪೂಜಾ ವಿಧಾನಗಳಿವೆ, ಚೈನೀಸ್ ಫಿಲಾಸಫಿಯ ಫೆಂಗ್‌ಶುಯ್‌ನಲ್ಲಿ ಕೂಡಾ ಕೆಲ ಸರಳ ವಿಧಾನಗಳಿವೆ. ಅವೇನು ನೋಡೋಣ.

Top Feng Shui Tips to Attract Money skr
Author
Bangalore, First Published Dec 2, 2021, 12:53 PM IST

ಫೆಂಗ್ ಶುಯ್ ಎಂಬುದು ಜನಪ್ರಿಯ ಚೈನೀಸ್ ವಾಸ್ತುಶಾಸ್ತ್ರ. ಮನೆ ಅಥವಾ ಕಚೇರಿ ಕಡೆ ಧನಲಕ್ಷ್ಮೀ ಯಾಕೋ ತಲೆ ಹಾಕುತ್ತಿಲ್ಲ ಎನಿಸುತ್ತಿದ್ದರೆ, ಫೆಂಗ್ ಶುಯ್‌(Feng Shui)ನಲ್ಲಿ ಹೇಳಿರುವ ಈ ಸರಳವಾಗಿಯೂ ಪರಿಣಾಮಕಾರಿ ಎನಿಸಿರುವ ವಿಧಾನಗಳನ್ನು ಅನುಸರಿಸಿ ನೋಡಿ. ಇವು ಹಣ, ಸಂಪತ್ತನ್ನು ನಿಮ್ಮ ಮನೆ ಅಥವಾ ಕಚೇರಿ ಕಡೆ ಆಕರ್ಷಿಸಲು ನೆರವಾಗುತ್ತದೆ. ಈ ವಿಧಾನಗಳು ನಿಮ್ಮ ಸ್ಥಳಾವಕಾಶನ್ನು ಅಂದಗೊಳಿಸಲೂ ಸಹಕಾರಿಯಾಗಿವೆ. ಧನಾಗಮಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ. 

ಎದುರಿನ ಬಾಗಿಲು
ಮನೆ ಅಥವಾ ಕಚೇರಿಯ ಮುಖ್ಯ ದ್ವಾರ ಆಕರ್ಷಕವಾಗಿರಬೇಕು. ಅದೇ ಆ ಕಟ್ಟಡದ ಮುಖವಾಗಿರುತ್ತದೆ. ಹಾಗಾಗಿ ಚೆಂದದ ದ್ವಾರದೊಂದಿಗೆ ಅದರ ಬಳಿ ಗಿಡಗಳೂ, ಅಂದದ ಮ್ಯಾಟ್ ಇರುವಂತೆ ನೋಡಿಕೊಳ್ಳಿ. 

ಲಾಫಿಂಗ್ ಬುದ್ಧ(Laughing Buddha)
ಲಾಫಿಂಗ್ ಬುದ್ಧ ತನ್ನ ಸಂತೋಷ ಹಾಗೂ ಉಲ್ಲಾಸಭರಿತ ಸ್ವಭಾವಕ್ಕಾಗಿ ಜನಪ್ರಿಯ. ಲಾಫಿಂಗ್ ಬುದ್ಧ ವಿಗ್ರಹವನ್ನು ನಿಮ್ಮ ಮನೆ ಅಥವಾ ಕಚೇರಿಯ ಪೂರ್ವ ಭಾಗದಲ್ಲಿ ಮುಖ್ಯದ್ವಾರಕ್ಕೆ ಕಾಣುವ ಹಾಗೆ ಇಡುವುದರಿಂದ ಆತ ಅದೃಷ್ಟ ಹಾಗೂ ಸಂಪತ್ತನ್ನು ತರುತ್ತಾನೆ ಎನ್ನುತ್ತದೆ ಫೆಂಗ್ ಶುಯ್. ಅದರಲ್ಲೂ ಸಂಪತ್ತಿನ ಬ್ಯಾಗ್ ಹೊತ್ತುಕೊಂಡ ಲಾಫಿಂಗ್ ಬುದ್ಧ ಧನಾಕರ್ಷಿಸಲು ಒಳ್ಳೆಯದು. 

Never admit mistakes: ಈ ರಾಶಿಯವರು ತಪ್ಪನ್ನು ಒಪ್ಪಿಕೊಳ್ಳೋರಲ್ಲ!

ಅಗತ್ಯದ ವಸ್ತುಗಳಷ್ಟೇ ಇರಲಿ
ಹಲವರಿಗೆ ಬೇಕೋ ಬೇಡವೋ, ಒಮ್ಮೆ ಮನೆಗೆ ಬಂದ ವಸ್ತುಗಳನ್ನು ಎಸೆಯುವುದೆಂದರೆ ಆಗುವುದಿಲ್ಲ. ಯಾವತ್ತಾದರೂ ಉಪಯೋಗಕ್ಕೆ ಬರಬಹುದು ಎಂದು ಶೇಖರಿಸಿಕೊಳ್ಳುತ್ತಿರುತ್ತಾರೆ. ಅವು ಕಡೆಗೂ ತ್ಯಾಜ್ಯವಾಗಿಯೇ ಮನೆಯ ಜಾಗ ತಿನ್ನುತ್ತವೆ. ಮನೆ, ಕಚೇರಿ ಅಥವಾ ಎಲ್ಲೇ ಆಗಲಿ, ಬೇಡದ ಸರಕುಗಳನ್ನು ತುಂಬಿಸಿಕೊಳ್ಳುವುದರಿಂದ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ಯಾವಾಗಲೂ ನಾವು ಇರುವ ಸ್ಥಳ ಆದಷ್ಟು ಖಾಲಿ ಜಾಗವನ್ನು ಹೊಂದಿರಬೇಕು. 

ಈವಿಲ್ ಐ ಟ್ರೀ(Evil Eye Tree)
ಐವಿಲ್ ಐ ಟ್ರೀಯನ್ನು ಮನೆಯ ಹಾಲ್‌ನಲ್ಲಿಡುವುದರಿಂದ ಕೆಟ್ಟ ಶಕ್ತಿಗಳು ಅಥವಾ ಕೆಟ್ಟ ದೃಷ್ಟಿ ಮನೆಗೆ ಬೀಳದಂತೆ ಅದು ತಡೆಯುತ್ತದೆ. ಇದರಿಂದ ಸಂಪತ್ತು ನಿಮ್ಮ ಮನೆ ಸೇರುವುದು ಸುಗಮವಾಗುತ್ತದೆ. 

ದುಡ್ಡಿನ ಕಪ್ಪೆ(Money Frog)
ಮೂರು ಕಾಲುಗಳ ಗೋಲ್ಡನ್ ಫ್ರಾಗ್ ಅಥವಾ ಆನೆ ಹಾಗೂ ಮನಿಫ್ರಾಗ್ ಇರುವ ವಿಗ್ರಹವು ಹಣವನ್ನು ಆಕರ್ಷಿಸುತ್ತದೆ. ಅದನ್ನು ನಿಮ್ಮ ಮನೆಯ ಯಾವುದೇ ಭಾಗದಲ್ಲಿಡಬಹುದು. ಕಚೇರಿಯಲ್ಲಿ ನೀವು ಕೂರುವ ಸ್ಥಳದಲ್ಲಿರಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಾಣಬಹುದು. 

Money loss: ಈ ವಸ್ತುಗಳು ಮನೆಯಲ್ಲಿದ್ದರೆ ಧನ ನಷ್ಟ ಗ್ಯಾರಂಟಿ, ದೂರವಿಟ್ಟುಬಿಡಿ..!

ಆಗ್ನೇಯ ದಿಕ್ಕು(South-East direction)
ಮನೆಯ ಆಗ್ನೇಯ ದಿಕ್ಕಿನಲ್ಲಿ ಕೆಲ ಜೇಡ್  ಪ್ಲ್ಯಾಂಟ್‌ಗಳನ್ನಿಡುವುದು ಅಥವಾ ನೀರಿರುವ ಮರದ ಶೋಪೀಸ್‌ಗಳನ್ನಿಡುವುದರಿಂದ ಹಣ ಮನೆಗೆ ಬರುತ್ತದೆ. ಬಾಯಿಯಲ್ಲಿ ನಾಣ್ಯ ಕಚ್ಚಿಕೊಂಡಿರುವ ಕಪ್ಪೆಯು ಸಮೃದ್ಧಿ ತರುವುದು. ಇದಲ್ಲದೆ, ನೀರಿನ ಹರಿವಿರುವ ಶೋ ಪೀಸ್ ಕೂಡಾ ಒಳ್ಳೆಯದು. 

ಅಕ್ವೇರಿಯಂ(fish aquarium)
ಮೀನು ಎಂದರೆ ಲವಲವಿಕೆ, ಚಲನಶೀಲತೆ. ಮನೆಯ ಉತ್ತರ ಭಾಗದಲ್ಲಿ ಅಕ್ವೇರಿಯಂ ಇಡುವುದರಿಂದ ಧನ ಸುಗಮವಾಗಿ ಓಡಾಡುತ್ತದೆ. ಆಗ್ನೇಯ ದಿಕ್ಕಿನಲ್ಲಿಟ್ಟರೆ ಸಂಪತ್ತು ಮನೆ ತುಂಬುತ್ತದೆ. 

ಕ್ರಿಸ್ಟಲ್ಸ್(crystals)
ಫೆಂಗ್ ಶುಯ್ ಪ್ರಕಾರ, ಕ್ರಿಸ್ಟಲ್‌ಗಳು ಎನರ್ಜಿಯ ಪವರ್‌ಹೌಸ್‌ಗಳು. ಸಿಟ್ರಿನ್ ಕ್ರಿಸ್ಟಲ್ ಹಣ ಹಾಗೂ ಸಂಪತ್ತನ್ನು ಮನೆಗೆ ಆಕರ್ಷಿಸುತ್ತದೆ. ಕ್ರಿಸ್ಟಲ್ ಮೌಂಟೇನ್, ಗಾಜಿನ ಆಮೆ, ಪಿಕ್ಸಿ ಬ್ರೇಸ್ಲೆಟ್‌ಗಳೆಲ್ಲ ಬಿಸ್ನೆಸ್‌ನಲ್ಲಿ ಯಶಸ್ಸನ್ನು ತರುತ್ತವೆ. 

ಚೈನೀಸ್ ನಾಣ್ಯಗಳು(Chinese coins)
ಕೆಂಪು ರಿಬ್ಬನ್‌ನಲ್ಲಿ ಸುತ್ತಿದ ಚೀನಾದ ನಾಣ್ಯಗಳಿಗೆ ಫೆಂಗ್‌ ಶುಯ್‌ನಲ್ಲಿ ವಿಶೇಷ ಸ್ಥಾನವಿದೆ. ಅವು ಆರ್ಥಿಕ ಬಲವನ್ನು ಎಳೆದು ತರುತ್ತವೆ. ಅಂಥ ನಾಣ್ಯಗಳನ್ನು ನಿಮ್ಮ ಮನೆಯ ಡ್ರಾದಲ್ಲಿಡುವುದು ಅಥವಾ ಪೂಜಾ ಕೋಣೆಯಲ್ಲಿಡುವುದರಿಂದ ಹಣವಂತರಾಗುವಿರಿ. 

Follow Us:
Download App:
  • android
  • ios