Vastu Tips: ದೇವರ ಕೋಣೆಯ ಈ ಬದಲಾವಣೆಗೆ ಸಿಗಲಿದೆ ಲಕ್ಷ್ಮೀ ಕೃಪೆ!

ಲಕ್ಷ್ಮೀಯು ಧನಸಂಪತ್ತಿನ ಅಧಿದೇವತೆ. ಯಾರ ಮೇಲೆ ದೇವಿ ಲಕ್ಷ್ಮೀಯ ಕೃಪೆ ಇರುವುದೋ ಅವರ ಬಳಿ ಸದಾ ಸಿರಿ-ಸಂಪತ್ತು ಇರುತ್ತದೆ. ಸಂಪತ್ತನ್ನು ಪಡೆಯಬೇಕೆಂದರೆ ಲಕ್ಷ್ಮೀ ದೇವಿ ಒಲಿಯಬೇಕು. ಇದಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ವಾಸ್ತುವಿನ ಪ್ರಕಾರ ದೇವರ ಮನೆಯಲ್ಲಿ ಈ ಬದಲಾವಣೆಯನ್ನು ತಂದುಕೊಳ್ಳಿ, ಆರ್ಥಿಕವಾಗಿ ಸ್ಥಿತಿವಂತರಾಗಿ.

These changes in your home temple will make you rich

ಕಷ್ಟಪಟ್ಟು ದುಡಿದರೂ ಕೈಯಲ್ಲಿ ಕಾಸು ನಿಲ್ಲುವುದಿಲ್ಲ. ಒಳ್ಳೆಯ ಸಂಬಳವಿದ್ದರೂ (Salary) ಯಾವುದಾದರೂ ಸಮಸ್ಯೆಗಳಿಂದ ನಷ್ಟವಾಗುತ್ತಿರಯತ್ತದೆ, ಅಚ್ಚುಕಟ್ಟಾಗಿ ಹಣಕಾಸು (Money) ವ್ಯವಹಾರವನ್ನು ಇಟ್ಟುಕೊಂಡಿದ್ದರೂ ಒಂದಲ್ಲಾ ಒಂದು ಸಮಸ್ಯೆ. ಇದಕ್ಕೆ ಹಲವು ರೀತಿಯ ಪರಿಹಾರಗಳನ್ನು (Solution) ಮಾಡಿಕೊಂಡರೂ ಸಣ್ಣ ತೊಡಕುಗಳು ಇದ್ದೇ ಇರುವುದು ಸಹ ಹಲವರಿಗೆ ಕಾಣುತ್ತದೆ. ಹಣಕಾಸಿನ ಅಧಿದೇವತೆ ಲಕ್ಷ್ಮೀ ದೇವಿಯಾಗಿದ್ದು. ಲಕ್ಷ್ಮೀ ದೇವತೆಯನ್ನು ಪ್ರಸನ್ನಗೊಳಿಸಲು, ಆಕೆಯ ಆಶೀರ್ವಾದವನ್ನು (Blessings) ಸದಾ ಕಾಪಾಡಿಕೊಳ್ಳಲು ನಿಮ್ಮ ಮನೆಯ ದೇವರ ಕೋಣೆಯೊಳಗೆ ಯಾವೆಲ್ಲ ವಸ್ತುಗಳನ್ನು ಇಟ್ಟುಕೊಳ್ಳಬೇಕೆಂದು ವಾಸ್ತು ಶಾಸ್ತ್ರ (Vastu) ಹೇಳುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವೂ ಸಹ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವು ವಸ್ತುಗಳು ಪಾಸಿಟಿವ್ (Positive) ಅಂಶವನ್ನು ತಂದರೆ ಮತ್ತೆ ಕೆಲವು ನೆಗೆಟಿವ್ (Negative) ಪರಿಣಾಮವನ್ನು ಬೀರುತ್ತವೆ. ಆದರೆ, ವಾಸ್ತುವಿನಲ್ಲಿ     ಇದ್ದರೆ ಮಾಡುವ ಪ್ರತಿ ಕೆಲಸದಲ್ಲೂ ತೊಂದರೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಲು, ದೇವಿಯ ಅನುಗ್ರಹಕ್ಕೆ ಪಾತ್ರವಾಗಲು ದೇವರಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನು ನೋಡೋಣ...

ಈ ದಿಕ್ಕಿನಲ್ಲಿರಲಿ (Direction) ದೇವರ ಕೋಣೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ದೇವಕೋಣೆಯು ಈಶಾನ್ಯ (Northeast) ದಿಕ್ಕಿನಲ್ಲಿದ್ದರೆ ಉತ್ತಮ. ಈ ದಿಕ್ಕಿನಲ್ಲಿದ್ದರೆ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ (Happiness, peace and prosperity) ನೆಲೆಸಲಿದೆ ಎಂದೂ ಶಾಸ್ತ್ರ ಹೇಳುತ್ತದೆ. ದಕ್ಷಿಣ ದಿಕ್ಕಿನಲ್ಲಿ (South) ಮಾತ್ರ ಅಪ್ಪಿತಪ್ಪಿಯೂ ದೇವರ ಕೋಣೆಯನ್ನು ನಿರ್ಮಿಸಬಾರದು. ಒಂದು ವೇಳೆ ದಕ್ಷಿಣ ದಿಕ್ಕಿನಲ್ಲಿ ಮುಖ ಮಾಡಿದರೆ ಧನ ಹಾನಿಯಾಗುವ ಸಾಧ್ಯತೆ ಬಹಳವೇ ಇದೆ. 

ನವಿಲು ಗರಿ  (Peacock feather ) ತಂದಿಡಿ
ಜ್ಯೋತಿಷ್ಯದಲ್ಲಿ ಹೇಳಿರುವಂತೆ, ಜಾತಕದಲ್ಲಿ ಶುಕ್ರ ಗ್ರಹವು ಉಚ್ಛನಾಗಿದ್ದರೆ ಅಂಥವರಿಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಶುಕ್ರ ಗ್ರಹ ಉಚ್ಚವಾಗಿರಲು ದೇವರ ಕೋಣೆಯಲ್ಲಿ ನವಿಲು ಗರಿಯನ್ನು ತಂದಿಡಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಉಂಟಾಗುವುದಲ್ಲದೆ, ಧನ ಸಂಪತ್ತು ವೃದ್ಧಿಸುತ್ತದೆ.

ಶುಭ ತರಲಿದೆ ಶಂಖ (Conch)
ಮನೆಯಲ್ಲಿ ನಿಯಮಿತವಾಗಿ ಶಂಖವನ್ನು ಊದಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಸುಖ, ಶಾಂತಿ, ಸಮೃದ್ಧಿ ಸಹ ನೆಲೆಸುತ್ತದೆ.

ಗಂಗಾ ಜಲ (Ganga Water)
ಹಿಂದೂ ಧರ್ಮದಲ್ಲಿ ಪವಿತ್ರ ಗಂಗಾ ಜಲಕ್ಕೆ ನೀರಿಗೆ ವಿಶೇಷ ಮಹತ್ವವಿದೆ. ಪವಿತ್ರ ನೀರು ಎಂದಿಗೂ ಹಾಳಾಗದು ಎಂಬ ಭಾವನೆ ಇದೆ. ಈ ಕಾರಣಕ್ಕಾಗಿಯೇ ಈ ಪವಿತ್ರ ಜಲವನ್ನು ಪೂಜಾ ಸ್ಥಳದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ. 

ಇದನ್ನು ಓದಿ: Astrology and dreams : ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?

ಸಾಲಿಗ್ರಾಮ
ಸಾಲಿಗ್ರಾಮವು ವಿಷ್ಣುವಿನ (Lord Vishnu) ಒಂದು ರೂಪವೆಂದು ಹೇಳಲಾಗುತ್ತದೆ. ಸಾಲಿಗ್ರಾಮ ದೇವರನ್ನು ಪೂಜಾ ಸ್ಥಳದಲ್ಲಿ ಇಡುವುದು ಅತ್ಯಂತ ಶುಭಕರ. ಇದು ಲಕ್ಷ್ಮಿ ದೇವಿಯನ್ನು ಸಂತೋಷಪಡಿಸುತ್ತದೆ. ಇದಲ್ಲದೆ, ದೇವರ ಮನೆಯಲ್ಲಿ ಲಕ್ಷ್ಮೀ ಮತ್ತು ಗಣೇಶನ ಬೆಳ್ಳಿಯ ವಿಗ್ರಹವನ್ನು ಇಟ್ಟು ದಿನವೂ ಪೂಜಿಸುವುದರಿಂದ ಒಳಿತಾಗುತ್ತದೆ.

ದೇವರ ಕೋಣೆ ಶುಚಿಯಾಗಿರಲಿ (Clean)
ಲಕ್ಷ್ಮೀಯು ನಿಮ್ಮ ಮನೆಯಲ್ಲಿ ವಾಸ ಮಾಡಬೇಕೆಂದರೆ ದೇವರ ಕೋಣೆಯು ಶುಚಿಯಾಗಿರಬೇಕು. ಸ್ವಚ್ಛತೆ ಇಟ್ಟುಕೊಳ್ಳದಿದ್ದರೆ ಅಂಥವರ ಮನೆಗೆ ಲಕ್ಷ್ಮೀದೇವಿ ಇರಲು ಇಷ್ಟಪಡುವುದಿಲ್ಲ. 

ಇನ್ನು ಮನೆಯಲ್ಲಿಯೂ ಸಹ ಕೆಲವು ಕ್ರಮಗಳನ್ನು ಅನುಸರಿಸಿದರೆ, ಆರ್ಥಿಕವಾಗಿ ಧನಲಾಭವನ್ನು ಗಳಿಸಬಹುದಾಗಿದೆ. ಮನೆಯಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಗಮನಿಸೋಣ ಬನ್ನಿ...

ತುಳಸಿ ಗಿಡ (Tulsi plant)
ತುಳಸಿ ಗಿಡದಲ್ಲಿ ಲಕ್ಷ್ಮೀ ವಾಸವಿರುತ್ತಾಳೆ ಎಂಬ ನಂಬಿಕೆ ಇದೆ. ತುಳಸಿ ಗಿಡದ ಸುತ್ತಮುತ್ತ ಶುಚಿಗೊಳಿಸಿ, ರಂಗೋಲಿ ಹಾಕಿ, ನಂತರ ಶುಚಿಯಾಗಿ ತುಳಸಿ ದೇವಿಗೆ ನೀರೆರೆದು, ದೀಪ ಬೆಳಗಿಸಬೇಕು. ಬಳಿಕ ಮನಸ್ಸಿನ ಇಚ್ಛೆಯನ್ನು ಕೇಳಿಕೊಂಡರೆ, ಲಕ್ಷ್ಮೀದೇವಿಯು ಈಡೇರಿಸುತ್ತಾಳೆ. 

ಇದನ್ನು ಓದಿ: Mental Illness And Astrology: ಡಿಪ್ರೆಶನ್, ಆತ್ಮಹತ್ಯೆಗಳಿಗೆ ಈ ಗ್ರಹಗಳು ಕಾರಣ!

ನಾಮಗಳನ್ನು ಜಪಿಸಿ (Chanting Mantra)
ದೇವಿಯ 108 ನಾಮಗಳನ್ನು ಜಪಿಸಿ, ಆಕೆಯ ಸ್ತುತಿ ಮಾಡಬೇಕು. ಲಕ್ಷ್ಮೀಯನ್ನು ಆರಾಧಿಸಲು ಹಲವಾರು ಸ್ತೋತ್ರಗಳಿದ್ದು, ಕೆಲವು ಪ್ರಸಿದ್ಧ ಸ್ತುತಿಗಳೆಂದರೆ ಶ್ರೀ ಮಹಾಲಕ್ಷ್ಮೀ ಅಷ್ಟಕಮ್, ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಮ್, ಶ್ರೀ ಸ್ತುತಿ, ಶ್ರೀ ಚಟುಶ್ಲೋಕಿ, ಶ್ರೀ ಕನಕಧಾರಾ ಸ್ತುತಿ, ಶ್ರೀ ಲಕ್ಷ್ಮೀ ಶ್ಲೋಕ, ಶ್ರೀ ಸೂಕ್ತ ಮುಂತಾದ ದೇವಿ ಸ್ತುತಿಗಳನ್ನು ಪಠಿಸಿದರೆ ದೇವಿಯು ಪ್ರಸನ್ನಳಾಗುತ್ತಾಳೆ.

Latest Videos
Follow Us:
Download App:
  • android
  • ios