Asianet Suvarna News Asianet Suvarna News

ಹೊಸದಾಗಿ ಏನಾದ್ರೂ ಟ್ರೈ ಮಾಡ್ಬೇಕಾ? ಮನೆಯನ್ನು ಇಕೋ ಫ್ರೆಂಡ್ಲಿಯಾಗಿ ಮಾಡಿ!

ಹೊಸ ವರ್ಷವನ್ನು ಈ ಬಾರಿ ಹಸಿರಿನೊಂದಿಗೆ ವೆಲ್‌ಕಂ ಮಾಡಿ. ಕೃತಕ ಬಣ್ಣ, ರಾಸಾಯನಿಕ ಮಿಕ್ಸ್‌ ಇರೋ ಆರ್ಟಿಫಿಶಿಯಲ್‌ ಡೆಕೊರೇಶನ್‌ಗಿಂತ ಇಕೋ ಫ್ರೆಂಡ್ಲಿಯಾಗಿರುವ ಈ ಸಹಜ ಅಲಂಕಾರ ನಿಮ್ಮ ಮನಸ್ಸಿನ ಖುಷಿ ಹೆಚ್ಚಿಸೋದರ ಬಗ್ಗೆ ಡೌಟೇ ಬೇಡ.
 

simple tips to make your home eco friendly in 2020
Author
Bangalore, First Published Jan 4, 2020, 10:16 AM IST

ಹೊಸ ವರ್ಷವನ್ನು ಹೆಚ್ಚಿನವರು ಕೇಕ್‌ ಕಟ್‌ ಮಾಡೋ ಮೂಲಕ, ಬೆಲೂನ್‌ ಹಾರಿಸೋದರ ಮೂಲಕ, ಗುಂಡು ಪಾರ್ಟಿ ಮಾಡೋ ಮೂಲಕ ಸೆಲೆಬ್ರೇಟ್‌ ಮಾಡುತ್ತಾರೆ. ಎಲ್ಲರ ಹಾಗೆ ನಾವಿದ್ರೆ ಅದ್ರಲ್ಲಿ ಮಜಾ ಇರಲ್ಲ. ಸ್ವಲ್ಪ ಡಿಫರೆಂಟ್‌ ಆಗಿ ಯೋಚಿಸಿದಷ್ಟೂ ನಾವು ಸ್ಪೆಷಲ್‌ ಆಗ್ತಾ ಹೋಗ್ತೀವಿ. ಅಂಥಾ ಐಡಿಯಾಗಳಲ್ಲಿ ಒಂದು ಮನೆಯನ್ನು ಹಸಿರಿನಿಂದ ಸಿಂಗರಿಸೋದು. ನೀವು ಮನೆಗೆ ಬೇರೆ ಯಾವ ಅಲಂಕಾರ ಮಾಡಿದರೂ ಎರಡು ದಿನ ಆದ ಮೇಲೆ ಅದನ್ನು ತೆಗೆಯಲೇ ಬೇಕು.

ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

ಎಲ್ಲವಾದರೆ ಧೂಳು ಕೂತು ಮನೆಯ ಅಂದ ಹಾಳು ಮಾಡುತ್ತೆ. ಆದರೆ ಈ ಗಿಡಗಳನ್ನು ಇಟ್ಟರೆ ಹಾಗಾಗಲ್ಲ. ಇಡೀ ವರ್ಷ ನಿಮ್ಮ ಜೊತೆಗೇ ಇದ್ದು, ನಿಮ್ಮ ಖುಷಿಯನ್ನು ಹಾರೈಸುತ್ತಲೇ ಇರುತ್ತವೆ. ಮನಸ್ಸಿನ ಒತ್ತಡ ನಿವಾರಿಸಿ ಹಾಯೆನಿಸೋ ಫೀಲ್‌ ಕೊಡುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಗಿಡಗಳು ಸಹಜ ಏರ್‌ ಫ್ರೆಷ್ನರ್‌ಗಳಂತೆ ಕೆಲಸ ಮಾಡುತ್ತವೆ. ಸಾಧ್ಯವಾದಷ್ಟು ಮಟ್ಟಿಗೆ ಮಾಲಿನ್ಯ ನಿವಾರಿಸಿ ನಿಮ್ಮ ಉಸಿರಾಟಕ್ಕೆ ಫ್ರೆಶ್‌ ಗಾಳಿ ಕೊಡುತ್ತವೆ. ಹೀಗೆ ಕೊನೆಯುಸಿರಿನವರೆಗೂ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹೇರಳ ಪ್ರಯೋಜನ ನೀಡುವ ಇಂಥ ಗಿಡಗಳಿಗೆ ನಾವೂ ಗ್ರೇಟ್‌ ಸ್ಥಾನ ಕೊಡಲೇ ಬೇಕಲ್ಲಾ..

ಮೊದಲು ಪಾಟ್‌ಗಳನ್ನು ಸೆಲೆಕ್ಟ್ ಮಾಡಿ

ಮನೆಗೆ ಗಿಡಗಳು ಎಂಟ್ರಿ ಕೊಡೋ ಮುಂಚೆ ಅವುಗಳನ್ನು ಹಾಕಿಡುವ ಪಾಟ್‌ಗಳನ್ನು ಸೆಲೆಕ್ಟ್ ಮಾಡಿ. ಬಿಳಿ ಬಣ್ಣ ಅಥವಾ ಮಣ್ಣಿನ ಬಣ್ಣದ ಪಾಟ್‌ಗಳು ವೈಬ್ರೆಂಟ್‌ ಲುಕ್‌ ನೀಡುತ್ತವೆ. ಮನೆಯ ಗೋಡೆ ಪೈಯಿಂಟ್‌ ಯಾವ ಬಣ್ಣದಲ್ಲಿದ್ದರೂ ಈ ಪಾಟ್‌ಗಳು ಅಕ್ವರ್ಡ್‌ ಅನಿಸಲ್ಲ. ನಿಮ್ಮ ಮನೆಯ ಯಾವ ಜಾಗದಲ್ಲಿ ಎಂಥಾ ಪಾಟ್‌ಗಳನ್ನಿಡುತ್ತೀರಾ ಅನ್ನೋದರ ಮೇಲೆ ಅವುಗಳ ಆಕಾರ ಗಾತ್ರ ನಿರ್ಧರಿಸಿ.

ಜೇಬಿನಲ್ಲಿ ಈ ವಸ್ತುಗಳಿದ್ದರೆ ಅದೃಷ್ಟವೋ ಅದೃಷ್ಟ

ಮನೆಯ ಮೆಟ್ಟಿಲ ಕೆಳಗೆ ಮೂಲೆಯಲ್ಲಿ ಗಿಡ ಹಾಕಲು ದೊಡ್ಡ ಗಾತ್ರದ ಪಾಟ್‌ ಇದ್ದರೆ ಚೆಂದ ತುಸು ಎತ್ತರದ ಗಿಡವನ್ನು ಅಲ್ಲಿ ಹಾಕಬಹುದು. ಅದೇ ಮನೆಯ ಡೈನಿಂಗ್‌ ಟೇಬಲ್‌ ಮೇಲೆ ಪುಟ್ಟದಾದ ಕ್ಯೂಟ್‌ ಪಾಟ್‌ ಇಟ್ಟರೆ ಉತ್ತಮ. ಅಡುಗೆ ಮನೆಯ ಕಿಟಕಿಯ ಮೇಲೆ ಚಿಕ್ಕ ಪಾಟ್‌ನಲ್ಲಿ ಗಿಡ ಹಾಕಬಹುದು. ಲಿವಿಂಗ್‌ ರೂಂನಲ್ಲಿ ಸೋಫಾದ ಪಕ್ಕ ಗಿಡ ಹಾಕಬಹುದು. ಅದೇ ರೀತಿ ನಿಮ್ಮ ಬೆಡ್‌ರೂಮ್‌ ಕಾರ್ನರ್‌ಗೆ  ಒಂದು ಪಾಟ್‌ ಹಾಕಬಹುದು. ಹೀಗೆ ಮನೆಯಲ್ಲಿ ಎಲ್ಲೆಲ್ಲಾ ಪಾಟ್‌ ಹಾಕಬಹುದು ಅಂತ ನೋಡಿ, ಅದಕ್ಕೆ ತಕ್ಕಂಥಾ ಗಾತ್ರ, ಬಣ್ಣ, ಆಕಾರದ ಪಾಟ್‌ಗಳನ್ನು ಸೆಲೆಕ್ಟ್ ಮಾಡಿ.

ಇಂಡೋರ್‌ ಪ್ಲಾಂಟ್‌ಗಳಲ್ಲಿ ಯಾವುದು ನಿಮ್ಮ ಮನೆಗೆ ಒಪ್ಪುತ್ತೆ?

ಮನಿಪ್ಲಾಂಟ್‌ ಗಳನ್ನು ಡೈನಿಂಗ್‌ ಟೇಬಲ್‌ನಲ್ಲಿ ಹಾಕಬಹುದು. ತುಸು ಎತ್ತರದ ಗಿಡಗಳನ್ನು ಸೋಫಾ ಪಕ್ಕದಲ್ಲಿ  ಮನೆಯ ಕಾರ್ನರ್‌ಗಳಲ್ಲಿ ಹಾಕಬಹುದು. ಅದೇ ರೀತಿ ಆ್ಯಂಢೋರಿಯಂಗಳನ್ನು  ಮನೆಯ ಸ್ಟೇರ್‌ ಕೇಸ್‌ ಪಕ್ಕದಲ್ಲಿ ಹಾಕಬಹುದು. ಅರೆಕಾ ಪಾಲ್ಮ್‌ ನಂಥಾ ಗಿಡಗಳು ಮನೆಯ ಎಂಟ್ರೆನ್ಸ್‌ನಲ್ಲಿ ಹೊಸ್ತಿಲ ಅಕ್ಕಪಕ್ಕದಲ್ಲಿರಲಿ.  ನಸು ಗುಲಾಬಿ ಬಣ್ಣ ಆರ್ಕೆಡ್‌ ಗಿಡ ಲಿವಿಂಗ್‌ ರೂಂನ ಟೇಬಲ್‌ ಮೇಲೆ ನಗುತ್ತಿರಲಿ.

ಅದೇ ರೀತಿ ಪಾರ್ಕಿಂಗ್‌ ಜಾಗದಲ್ಲಿ ಅಲಂಕಾರಿಕ ಬಳ್ಳಿಗಳನ್ನು ಹಬ್ಬಿಸಿ. ಹ್ಯಾಂಗಿಂಗ್‌ ಪಾಟ್‌ಗಳಲ್ಲಿ ಹುಲ್ಲಿನಂಥಾ ರಚನೆಯ ಪಾಟ್‌ನಾಚೆ ಇಳಿಬೀಳುವ ಗಿಡಗಳನ್ನು ನೆಡಿ. ಪಾರ್ಕಿಂಗ್‌ ಏರಿಯಾದಲ್ಲಿ ವರ್ಟಿಕಲ್‌ ಗಾರ್ಡನ್‌ ಮಾಡಿದ್ರೂ ಚೆನ್ನಾಗಿರುತ್ತೆ.

ಮನೆಮಂದಿಯ ಆರೋಗ್ಯ ಕಾಪಾಡುವ ಅಡುಗೆ ಕೋಣೆಯ ವಾಸ್ತು; ಎಲ್ಲಿ ಏನಿದ್ದರೆ ಮಸ್ತ್?

ಇದಕ್ಕೆಲ್ಲ ಎಷ್ಟು ಖರ್ಚಾಗುತ್ತೋ ಅಂತ ಚಿಂತೆ ಬೇಡ. ಎಷ್ಟೇ ಆದ್ರೂ ನೀವು ಕೃತಕವಾಗಿ ಅಲಂಕರಿಸೋ ವಸ್ತುಗಳಿಗಿಂತ ಸ್ವಲ್ಪ ಜಾಸ್ತಿ ಆಗಬಹುದು. ಆದರೆ ಇವುಗಳಿಂದಾಗುವ ಪ್ರಯೋಜನ ಊಹಿಸಿದರೆ ಅದೆಲ್ಲ ಲೆಕ್ಕವೇ ಅಲ್ಲ.
 

Follow Us:
Download App:
  • android
  • ios