Vastu Tips : ಲಕ್ ಬದಲಿಸುತ್ತೆ ಕೃಷ್ಣನ ಈ ಫೋಟೋ
ಮನೆ ಅಂದ್ಮೇಲೆ ಒಂದಿಷ್ಟು ಫೋಟೋಗಳಿರುತ್ವೆ. ಅದ್ರಲ್ಲಿ ದೇವಾನುದೇವತೆಗಳ ಫೋಟೋ ಕೂಡ ಸೇರಿದೆ. ಪ್ರತಿ ದಿನ ಜನರು ಅದರ ಮುಂದೆ ಭಕ್ತಿಯಿಂದ ಕೈ ಮುಗಿಯುತ್ತಾರೆ. ಕೃಷ್ಣನ ಭಕ್ತರು ಮನೆಯಲ್ಲಿ ನಾನಾ ಭಂಗಿಯ ಕೃಷ್ಣನ ಫೋಟೋ ಇಟ್ಟಿರ್ತಾರೆ. ಆದ್ರೆ ಯಾವ ಫೋಟೋದಿಂದ ಯಾವ ಪ್ರಯೋಜನ ಅನ್ನೋದು ತಿಳಿದಿರೋದಿಲ್ಲ.
ದೇವರ ಮನೆಯಲ್ಲಿ ಮಾತ್ರವಲ್ಲ ಮನೆಯ ಮುಖ್ಯ ದ್ವಾರದ ಬಳಿ, ಡೈನಿಂಗ್ ಹಾಲ್ ನಲ್ಲಿ, ಟಿವಿ ಹಾಲ್ ನಲ್ಲಿ, ಅಡುಗೆ ಮನೆಯಲ್ಲಿ ಹೀಗೆ ನಮ್ಮಿಷ್ಟದ ಜಾಗದಲ್ಲಿ ನಾವು ದೇವರ ಫೋಟೋವನ್ನು ಹಾಕ್ತೇವೆ. ಬಹುತೇಕ ಎಲ್ಲರ ಮನೆಯಲ್ಲೂ ದೇವರ ಪೋಟೋಕ್ಕೆ ಪೂಜೆ ಮಾಡಲಾಗುತ್ತದೆ. ಶ್ರೀಕೃಷ್ಣನ ಫೋಟೋ ಮನೆಯಲ್ಲಿ ಜಾಗ ಪಡೆದಿರುತ್ತದೆ. ವಿಷ್ಣುವಿನ ಅವತಾರ ಶ್ರೀಕೃಷ್ಣನ ಪೂಜೆ ಮಾಡಿದ್ರೆ ಕಷ್ಟವಲ್ಲ ಪರಿಹಾರವಾಗುತ್ತದೆ. ಜೀವನದಲ್ಲಿ ಪ್ರೀತಿ ಲಭಿಸುತ್ತದೆ ಎಂದು ನಂಬಲಾಗಿದೆ.
ಮನೆ (Home) ಯಲ್ಲಿ ಶ್ರೀಕೃಷ್ಣ (Krishna) ನ ವಿಗ್ರಹ ಅಥವಾ ಫೋಟೋ (Photo) ವನ್ನು ಇಟ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ಅನೇಕ ಗ್ರಂಥಗಳಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರ (Vastu Shastra) ದಲ್ಲೂ, ಶ್ರೀಕೃಷ್ಣನ ಫೋಟೋಗಳು ಮನೆಯಲ್ಲಿ ವಾಸ್ತು ದೋಷ ನಿವಾರಣೆ ಮಾಡುತ್ತವೆ ಎನ್ನಲಾಗಿದೆ. ನಾವಿಂದು, ಕೃಷ್ಣನ ಯಾವ ಫೋಟೋಗಳನ್ನು ಹಾಕಿದ್ರೆ ಯಾವೆಲ್ಲ ಲಾಭವಿದೆ ಎಂಬುದನ್ನು ನಿಮಗೆ ಹೇಳ್ತೆವೆ.
ರುದ್ರಾಕ್ಷಿ ಧರಿಸಿ ಈ 5 ಸ್ಥಳಗಳಿಗೆ ಹೋಗಬೇಡಿ, ಅಪಾರ ನಷ್ಟ ಎದುರಿಸಬೇಕಾದೀತು!
ಮನೆಯಲ್ಲಿರಲಿ ಶ್ರೀಕೃಷ್ಣನ ಇಂಥ ಫೋಟೋ :
ಕಾಳಿಂಗನ ಮೇಲಿರುವ ಶ್ರೀಕೃಷ್ಣ : ಶತ್ರುಗಳ ಕಾಟ ಹೆಚ್ಚಾಗಿದ್ದು, ಅವರನ್ನು ಜಯಿಸಬೇಕು ಎನ್ನುವವರು ನೀವಾಗಿದ್ದರೆ ಮನೆಯಲ್ಲಿ ಕಾಳಿಂಗನ ಮೇಲೆ ನಿಂತಿರುವ ಕೃಷ್ಣನ ಫೋಟೋವನ್ನು ಹಾಕಿ. ಕೃಷ್ಣ ಅನೇಕ ರಾಕ್ಷಸರನ್ನು ಸೋಲಿಸಿದ್ದಾನೆ. ಈ ಫೋಟೋ ಮನೆಯಲ್ಲಿದ್ದರೆ ಇದು ಶತ್ರುಗಳನ್ನು ಸೋಲಿಸಲು ನೆರವಾಗುತ್ತದೆ.
ಅರ್ಜುನನೊಂದಿಗೆ ಇರುವ ಕೃಷ್ಣನ ಫೋಟೋ ಕೂಡ ಹಾಕ್ಬಹುದು : ಕುರುಕ್ಷೇತ್ರದ ಯುದ್ಧದ ಫೋಟೋವನ್ನು ಹಾಕಬಾರದೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದು ಮನೆಯಲ್ಲಿ ಗಲಾಟೆಯನ್ನು ಹೆಚ್ಚಿಸಿ, ಶಾಂತಿ ಕದಡುತ್ತದೆ. ಆದ್ರೆ ಕುರಕ್ಷೇತ್ರದಲ್ಲಿ ಶ್ರೀಕೃಷ್ಣನ ಜೊತೆಗಿರುವ ಅರ್ಜುನನ ಫೋಟೋವನ್ನು ನೀವು ಹಾಕಬಹುದು. ಇದು ನಿಮಗೆ ಸರಿ ಮತ್ತು ತಪ್ಪಿನ ಬಗ್ಗೆ ಅರಿವು ಮೂಡಿಸುತ್ತದೆ. ನಿಮ್ಮನ್ನು ಒಳ್ಳೆ ಮಾರ್ಗದಲ್ಲಿ ಕರೆದೊಯ್ಯಲು ನೆರವಾಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಕೊಳಲು ಹಿಡಿದಿರುವ ಶ್ರೀಕೃಷ್ಣ : ನಿಮ್ಮ ಮನೆಯಲ್ಲಿ ಕೊಳಲು ಹಿಡಿದಿರುವ ಕೃಷ್ಣನ ಫೋಟೋ ಇದ್ದಲ್ಲಿ ಇದು ಮನೆ ವಾತಾವರಣವನ್ನು ಬದಲಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಸಹಾಯವಾಗುತ್ತದೆ. ಮನೆಯಲ್ಲಿರುವ ದುಃಖ ದೂರವಾಗಿ, ಸದಾ ಸಂತೋಷ ಮನೆ ಮಾಡುತ್ತದೆ. ನೀವು ಫೋಟೋ ಬದಲು ಕೊಳಲನ್ನು ಕೂಡ ಮನೆಯಲ್ಲಿ ಇಡಬಹುದು.
ಸುದರ್ಶನ ಚಕ್ರದೊಂದಿಗಿರುವ ಕೃಷ್ಣ : ಸುದರ್ಶನ ಚಕ್ರವನ್ನು ಹಿಡಿದಿರುವ ಕೃಷ್ಣನ ಫೋಟೋವನ್ನು ನೀವು ಹಾಕುವುದ್ರಿಂದಲೂ ಮನೆಯಲ್ಲಿ ಸಕಾರಾತ್ಮಕತೆ ನಲೆಸುತ್ತದೆ. ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ರಾಹುವಿನ ಪ್ರಭಾವ ಕಡಿಮೆಯಾಗುವ ಜೊತೆಗೆ ಗ್ರಹ ದೋಷ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿ ಮನೆ ಮಾಡುತ್ತದೆ.
ಬಾಲ ಗೋಪಾಲನ ಫೋಟೋ : ಮನೆಯಲ್ಲಿ ಮಕ್ಕಳ ನಗು, ಗಜ್ಜೆ ಸಪ್ಪಳ ಕೇಳಬೇಕು ಎನ್ನುವವರು ಬಾಲ ಗೋಪಾಲನ ಫೋಟೋವನ್ನು ಹಾಕ್ಬೇಕು. ಮನೆಗೆ ಲಡ್ಡು ಕೃಷ್ಣನ ಫೋಟೋವನ್ನು ತೆಗೆದುಕೊಂಡು ಬನ್ನಿ. ಆ ಫೋಟೋವನ್ನು ಮನೆಯ ಪೂರ್ವ ದಿಕ್ಕಿನ ಗೋಡೆಗೆ ಹಾಕಿ. ಶೀಘ್ರವೇ ನಿಮಗೆ ಸಂತಾನ ಭಾಗ್ಯ ಲಭಿಸುತ್ತದೆ. ಹುಟ್ಟುವ ಮಗು ಕೃಷ್ಣನಂತ ಹೊಳಪು ಹಾಗೂ ಪ್ರೀತಿಯನ್ನು ಪಡೆಯುತ್ತಾನೆ.
Vastu Tips: ಈ ಆಕಾರದ ಭೂಮಿ ಖರೀದಿಸಿದ್ರೆ ಲೈಫ್ ಬರ್ಬಾದ್ ಆಗೋದು ಗ್ಯಾರಂಟಿ!
ರಾಧೆ ಜೊತೆಗಿರುವ ಶ್ರೀಕೃಷ್ಣ : ದಾಂಪತ್ಯದಲ್ಲಿ ಬಿರುಕು ಮೂಡಿದ್ರೆ, ಪ್ರೀತಿ ಸಿಗ್ತಿಲ್ಲ ಎಂದಾದ್ರೆ, ಕುಟುಂಬದಲ್ಲಿ ಪ್ರೀತಿ ಮಾಯವಾಗ್ತಿದ್ದರೆ ನೀವು ರಾಧೆ ಜೊತೆಗಿರುವ ಕೃಷ್ಣನ ಫೋಟೋವನ್ನು ಮನೆಗೆ ತನ್ನಿ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಾಂಪತ್ಯದಲ್ಲಿ ಮಧುರತೆ ಹೆಚ್ಚಿಸುವ ಜೊತೆಗೆ ಸಂಬಂಧವನ್ನು ಬಲಪಡಿಸುವ ಕೆಲಸವನ್ನು ಇದು ಮಾಡುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಲಭಿಸುತ್ತದೆ. ಮನೆಯ ಈಶಾನ್ಯ ಮೂಲೆಯಲ್ಲಿ ಕೃಷ್ಣ-ರಾಧೆಯ ಫೋಟೋವನ್ನು ಹಾಕಿದ್ರೆ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗುತ್ತದೆ.