ಹಿಂದೂಗಳಲ್ಲಿ ಓಂ ಚಿಹ್ನೆಗೆ ಇರುವಂತೆಯೇ ಸ್ವಸ್ತಿಕ ಚಿಹ್ನೆಗೆ ಕೂಡ ತುಂಬಾ ಮಹತ್ವ ಇದೆ. ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು, ಮನೆಗಳಲ್ಲಿ ಸ್ವಸ್ತಿಕ ಚಿಹ್ನೆಯ ಗುರುತನ್ನು ಹಾಕಲಾಗುತ್ತದೆ. ಇದರಿಂದ ಇನ್ನಿತರ ಹಲವು ವಾಸ್ತು ಪ್ರಯೋಜನಗಳೂ ಇವೆ. ಅವುಗಳನ್ನು ತಿಳಿಯೋಣ ಬನ್ನಿ.
ಹಿಂದೂ ಧರ್ಮೀಯರಲ್ಲಿ ಓಂ ಚಿಹ್ನೆಗೆ ತುಂಬ ಮಹತ್ವವಿದೆ. ಹಾಗೇ ಸ್ವಸ್ತಿಕ ಗುರುತು ಅಥವಾ ಚಿಹ್ನೆಯೂ ವಿಶೇಷ ಮಹತ್ವವನ್ನು ಹೊಂದಿದೆ. ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು, ಮನೆಗಳಲ್ಲಿ ಸ್ವಸ್ತಿಕ ಚಿಹ್ನೆಯ ಗುರುತನ್ನು ಹಾಕಲಾಗುತ್ತದೆ. ಈ ಸಂಪ್ರದಾಯ ಬಹಳ ಸಮಯದಿಂದ ನಡೆಯುತ್ತಿದೆ. ಜೈನ ಧರ್ಮ ಮತ್ತು ಬೌದ್ಧ ಧರ್ಮದಲ್ಲೂ ಸ್ವಸ್ತಿಕ ಗುರುತುಗಳನ್ನು ಹಾಕುವ ಸಂಪ್ರದಾಯವಿದೆ. ಸ್ವಸ್ತಿಕ ಎಂಬ ಪದದಲ್ಲಿ ಸು ಎಂದರೆ ಶುಭ ಮತ್ತು ಅಸ್ತಿ ಎಂದರೆ ಇರಬೇಕು. ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯಗಳನ್ನು ಮಾಡುವ ಮೊದಲು, ಗಣೇಶ ಮತ್ತು ಸ್ವಸ್ತಿಕ ಎಂಬ ಗುರುತು ಹಾಕಲಾಗುತ್ತದೆ.
ಸ್ವಸ್ತಿಕದ ಮಾಡಿದ ನಾಲ್ಕು ಸಾಲುಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಸ್ವಸ್ತಿಕದ ಈ ನಾಲ್ಕು ಸಾಲುಗಳು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ನಾಲ್ಕು ದಿಕ್ಕುಗಳ ಕಡೆಗೆ ಸೂಚಿಸುತ್ತವೆ ಎಂದು ಕೆಲವರು ನಂಬುತ್ತಾರೆ. ಅದೇ ಸಮಯದಲ್ಲಿ, ಈ ನಾಲ್ಕು ಸಾಲುಗಳು ನಾಲ್ಕು ವೇದಗಳ ಸಂಕೇತವೆಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಈ ನಾಲ್ಕು ಸಾಲುಗಳು ಬ್ರಹ್ಮ ದೇವರ ನಾಲ್ಕು ತಲೆಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳುತ್ತಾರೆ.
ಸ್ವಸ್ತಿಕ ಯಾವಾಗಲೂ ಕೆಂಪು ಬಣ್ಣದಿಂದ ಚಿತ್ರಿಸಲಾಗುತ್ತದೆ. ಏಕೆಂದರೆ ಕೆಂಪು ಬಣ್ಣವು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ, ಪೂಜೆಯ ಸಮಯದಲ್ಲಿ ಅಥವಾ ಯಾವುದೇ ಶುಭ ಕೆಲಸ ಮಾಡುವಾಗ ಕೆಂಪು ಬಣ್ಣವನ್ನು ವಿಶೇಷವಾಗಿ ಬಳಸಲಾಗುತ್ತದೆ.
ವಾಸ್ತು ದೋಷವನ್ನು ತೆಗೆದುಹಾಕಲು ಸ್ವಸ್ತಿಕವನ್ನು ವಿಶೇಷವಾಗಿ ಬಳಸಲಾಗುತ್ತದೆ. ಮನೆಯ ಮುಖ್ಯದ್ವಾರದ ಮೇಲುಗಡೆ ಸ್ವಸ್ತಿಕ ಗುರುತು ಹಾಕುವುದರ ಮೂಲಕ ಮನೆಯ ಎಲ್ಲಾ ರೀತಿಯ ವಾಸ್ತು ಸಮಸ್ಯೆಗಳನ್ನು ನಿವಾರಣೆ ಮಾಡಿದಂತಾಗುತ್ತದೆ ಎನ್ನುವ ನಂಬಿಕೆಯಿದೆ. ಅಂತಹ ಮನೆಯಲ್ಲಿ ಎಂದಿಗೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಬಡತನ, ಹಣಕಾಸಿನ ಸಮಸ್ಯೆಗೆ ಬೇಸತ್ತಿದ್ದೀರಾ? ಹಸಿರು ಏಲಕ್ಕಿಯ ಈ 4 ಪರಿಹಾರದಿಂದ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತೆ!
ವ್ಯವಹಾರದಲ್ಲಿ ನಷ್ಟವಾಗುತ್ತಿದ್ದರೆ ಅಥವಾ ಪದೇ ಪದೇ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ ಆಗ ನೀವು ಈಶಾನ್ಯ ದಿಕ್ಕಿನಲ್ಲಿ ಸತತ 7 ಗುರುವಾರ ಒಣ ಅರಿಶಿನದೊಂದಿಗೆ ಸ್ವಸ್ತಿಕ ಗುರುತು ಮಾಡಿ. ಇದರಿಂದ ವ್ಯವಹಾರದಲ್ಲಿ ಲಾಭ ದೊರೆಯಲು ಪ್ರಾರಂಭವಾಗುತ್ತದೆ. ಸ್ವಸ್ತಿಕದ ಗುರುತು ಮಾಡಿದ ಪೆಟ್ಟಿಗೆಯಲ್ಲಿ ಹಣ ಅಥವಾ ಚಿನ್ನಾಭರಣ ಇಡುವುದು ಕೂಡ ನಿಮ್ಮ ಸಂಪತ್ತು ವೃದ್ಧಿಸಲು ಸಹಾಯಕಾರಿ. ಆದರೆ ಇದನ್ನು ಆಗಾಗ ದೂಳು ತೆಗೆಯುತ್ತ ಸ್ವಚ್ಛ ಮಾಡುತ್ತಿರಬೇಕು.
ನೀವು ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಬಯಸಿದರೆ, ಮನೆಯ ಉತ್ತರ ದಿಕ್ಕಿನಲ್ಲಿ ಒಣ ಅರಿಶಿನದೊಂದಿಗೆ ಸ್ವಸ್ತಿಕ ಗುರುತು ಮಾಡಿ. ಇದರಿಂದ ನೀವು ಪ್ರತೀ ಕೆಲಸದಲ್ಲೂ ಯಶಸ್ಸನ್ನು ಪಡೆದುಕೊಳ್ಳುತ್ತೀರಿ. ಯಾವುದೇ ಕೆಲಸಕ್ಕೆ ಮನೆಯಿಂದ ಹೊರಡುವಾಗ ಮನೆದೇವರಿಗೆ ನಮಸ್ಕರಿಸಿದಂತೆಯೇ, ಸ್ವಸ್ತಿಕಕ್ಕೂ ಒಂದು ನಮಸ್ಕಾರ ಸಲ್ಲಿಸಿ. ಧರ್ಮಕಾರ್ಯ ನಡೆಯುವ ಮನೆಯಲ್ಲಿ ದೇವತೆಗಳು ಬಂದು ಸ್ವಸ್ತಿಕದಲ್ಲಿ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಈ ದೇವತೆಗಳು ನಿಮಗೆ ಯಶಸ್ಸು ತಂದುಕೊಡುತ್ತಾರೆ.
