Feng Shui Tips: ಮನೆಯಿಂದ ನೆಗೆಟಿವ್ ವೈಬ್ಸ್ ಹೊರಹಾಕಲು ಇಲ್ಲಿವೆ ಶಕ್ತಿಯುತ ಮಾರ್ಗಗಳು..
ಮನೆಯಲ್ಲಿ ನೆಗೆಟಿವ್ ವೈಬ್ಸ್ ಹೆಚ್ಚಿದ್ದರೆ ಸಂತೋಷ, ನೆಮ್ಮದಿ ಇರಲು ಸಾಧ್ಯವಿಲ್ಲ. ಮನೆಯ ಕೆಟ್ಟ ವೈಬ್ಸ್ ತೊಡೆದುಹಾಕಲು ಫೆಂಗ್ ಶುಯ್ ಹೇಳಿರುವ 4 ಮಾರ್ಗಗಳು ಇಲ್ಲಿವೆ..
ಎಲ್ಲರಿಗೂ ಆಗಾಗ ಮೂಡ್ ಆಫ್ ಆಗುತ್ತದೆ. ಬೇಜಾರೆನಿಸುತ್ತದೆ. ಆದರೆ, ಈ ದುಃಖ, ಖಿನ್ನತೆಯ ಯೋಚನೆಗಳು ಸುತ್ತಲಿನ ನೆಗೆಟಿವ್ ವೈಬ್ಸ್‌ನಿಂದ ಹುಟ್ಟಿರುವುದಾದರೆ ಈ ವೈಬ್ಸ್ ಹೋಗುವವರೆಗೂ ನೀವು ಸಂತೋಷ ಅನುಭವಿಸಲು ಸಾಧ್ಯವಿಲ್ಲ. ಚೈನೀಸ್ ವಾಸ್ತು ಶಾಸ್ತ್ರವಾದ ಫೆಂಗ್ ಶುಯ್ ಪ್ರಕಾರ ಈ ಕೆಲವೊಂದು ಮಾರ್ಗಗಳನ್ನು ಅನುಸರಿಸುವ ಮೂಲಕ ಸುತ್ತಲೂ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡಬಹುದಾಗಿದೆ. ಕಲೆ ಮತ್ತು ವಿಜ್ಞಾನ ಎರಡರ ಸಮ್ಮಿಲನವಾಗಿರುವ ಫೆಂಗ್ ಶೂಯಿಯು ವಾಸಿಸುವ ಜಾಗದಲ್ಲಿ ಹೆಚ್ಚಿನ ಶಕ್ತಿ ಮತ್ತು ಉತ್ಪಾದಕತೆಯನ್ನು ಬೆಳೆಸಲು ಏನು ಮಾಡಬೇಕೆಂಬುದನ್ನು ಹೇಳುತ್ತದೆ. ಇದರಿಂದ ಮನೆಗಳಲ್ಲಿ ಸಂತೋಷದಾಯಕ ಕಂಪನದ ಸೃಷ್ಟಿಯಾಗುತ್ತದೆ. ಕೆಟ್ಟ ವೈಬ್‌ಗಳನ್ನು ತೊಡೆದುಹಾಕುವ ನಾಲ್ಕು ಮಾರ್ಗಗಳನ್ನು ಇಲ್ಲಿ ನೀಡುತ್ತೇವೆ.
ಚೂಪಾದ ಮೂಲೆಗಳನ್ನು ತೆಗೆದು ಹಾಕಿ(Remove sharp corners)
ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಚೂಪು ಮೂಲೆಗಳ ಪೀಠೋಪಕರಣಗಳಿದ್ದರೆ ಶಾ ಚಿ ಎಂದು ಕರೆಯಲ್ಪಡುವ ಆಕ್ರಮಣಕಾರಿ ಶಕ್ತಿಯು ನಿಮ್ಮ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ನಿಮ್ಮ ಸುತ್ತಮುತ್ತಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದರಿಂದ ನಿಮ್ಮ ಮನೆಯಿಂದ ಚೂಪಾದ ಮೂಲೆಗಳನ್ನು ತೆಗೆದು ಹಾಕುವುದು ಬಹಳ ಮುಖ್ಯ. ನೀವು ಎಲ್ಲ ಚೂಪಾದ ತುದಿಯ ಪೀಠೋಪಕರಣಗಳನ್ನು ತೊಡೆದುಹಾಕಲು ಸಾಧ್ಯವಾಗದಿದ್ದರೆ, ತೀಕ್ಷ್ಣವಾದ ಕೋನವು ನಿಮ್ಮ ಕಡೆಗೆ ತೋರಿಸುವ ಸ್ಥಳದಲ್ಲಿ ಎಂದಿಗೂ ಕುಳಿತುಕೊಳ್ಳಬೇಡಿ. ರೌಂಡ್ ಟೇಬಲ್‌ಗಳು, ಹೂದಾನಿಗಳು ಮತ್ತು ಕುರ್ಚಿಗಳು ನಿಮ್ಮ ನಿವಾಸಕ್ಕೆ ಧನಾತ್ಮಕ ಶಕ್ತಿಯನ್ನು ತರುತ್ತವೆ. ಹಾಗೆ ಚೂಪಿಲ್ಲದ ಪೀಠೋಪಕರಣಗಳನ್ನೇ ಮನೆಗಾಗಿ ಆರಿಸಿ.
ಈ ರಾಶಿವರು ಖರ್ಚು ಮಾಡೋದು ಕಡಿಮೆ, ಹಾಗಾದ್ರೆ Savings ಮಾಡ್ತಾರಾ?
ಹಸಿರು ಬೆಳೆಸಿ(Bring in some greens)
ಮನೆಯಲ್ಲಿ ಬೆಳೆಸುವ ಗಿಡಗಳು ವಿಶೇಷವಾಗಿ ತುಳಸಿ, ಅದೃಷ್ಟದ ಬಿದಿರು, ಮಲ್ಲಿಗೆ ಮತ್ತು ಅಲೋವೆರಾದಂಥ ಗಿಡಗಳು ನಿಮ್ಮ ಮನೆಯ ಚೈತನ್ಯವನ್ನು ಹೆಚ್ಚಿಸುತ್ತದೆ ಮತ್ತು ಅದರ ಸಾವಯವ ಗುಣವು ನಿಮ್ಮನ್ನು ಪ್ರಕೃತಿಯೊಂದಿಗೆ ಬೆಸೆಯುತ್ತದೆ. ಈ ಮೂಲಕ ಸಂತೋಷವನ್ನು ನಿಮ್ಮ ದಾರಿಗೆ ಕಳುಹಿಸುತ್ತದೆ. ಇದು ಮಾತ್ರವಲ್ಲದೆ, ಈ ಸಸ್ಯಗಳು ನಿಮ್ಮ ಇಂದ್ರಿಯಗಳನ್ನು ಸಂತೋಷಪಡಿಸುವ ಜೊತೆಗೆ ಪರಿಸರದ ಹಾನಿಕಾರಕ ವಿಷಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ನಿಮ್ಮ ಮುಖ್ಯ ಬಾಗಿಲ ಬಳಿ ಈಶಾನ್ಯ ಸ್ಥಾನದಲ್ಲಿ ಇರಿಸಿ. ಈ ಮೂಲಕ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ಹೊರ ಹಾಕಿ.
ಸುಗಂಧ ಚಿಕಿತ್ಸೆ(incense therapy)
ನಿಮ್ಮ ಮನೆಯಲ್ಲಿ ಸುಗಂಧವನ್ನು ಹರಡುವ ಮೂಲಕ ನೆಗೆಟಿವ್ ವೈಬ್ಸ್ ಹೊರ ಹಾಕಿ ಪ್ರಶಾಂತ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿದೆ. ಈ ಸುಗಂಧವು ನಿಮ್ಮೊಳಗಿನ ಭಾವನಾತ್ಮಕ ಕ್ರಾಂತಿಯನ್ನು ಶಾಂತಗೊಳಿಸುತ್ತದೆ. ಕರ್ಪೂರವನ್ನು ಬೆಳಗಿಸುವುದು ಮೆದುಳಿಗೆ ಆಧ್ಯಾತ್ಮಿಕ ಸ್ಥಿರತೆಯನ್ನು ನೀಡುತ್ತದೆ ಮತ್ತು ನಿಮ್ಮ ನರಗಳನ್ನು ಶಾಂತಗೊಳಿಸುವ ಮೂಲಕ ನಿಮಗೆ ನೆಮ್ಮದಿ ತರುತ್ತದೆ. ಉತ್ತೇಜಕ ವೈಬ್‌ಗಳನ್ನು ಪಡೆಯಲು ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಪರಿಮಳವನ್ನು ಹರಡಿ. ಯೂಕಲಿಪ್ಟಸ್ ಸುವಾಸನೆಯು ಆಶಾವಾದವನ್ನು ಪ್ರೇರೇಪಿಸುತ್ತದೆ ಮತ್ತು ತಾಜಾ ಗಾಳಿಯ ಉತ್ತಮ ಉಸಿರಾಟವನ್ನು ನೀಡುತ್ತದೆ. ಇನ್ನು ನಿಂಬೆ ಮತ್ತು ದ್ರಾಕ್ಷಿಹಣ್ಣುಗಳ ಪರಿಮಳವು ಮನೆಯನ್ನು ಹೆಚ್ಚು ಪುನರುಜ್ಜೀವನಗೊಳಿಸುತ್ತವೆ. ಅವು ಅರೆನಿದ್ರಾವಸ್ಥೆಯನ್ನು ದೂರವಿರಿಸಿ ನಿಮ್ಮನ್ನು ಹುರಿದುಂಬಿಸುತ್ತದೆ.
ಈ ನಾಲ್ಕು ರಾಶಿಗಳು ಮದ್ವೆಯ ನಂತ್ರನೂ ತಮ್ಮ ಎಕ್ಸ್ ಬಗ್ಗೆ ಕನಸು ಕಾಣ್ತಾರೆ!
ಶಬ್ದ ಚಿಕಿತ್ಸೆ(The sound therapy)
ಸಕಾರಾತ್ಮಕ ವಾತಾವರಣವನ್ನು ಉತ್ತೇಜಿಸಲು ಮನೆಯೊಳಗೆ ನೈಸರ್ಗಿಕ ಶುದ್ಧ ಗಾಳಿಯನ್ನೇ ಚೆಂದದ ತರಂಗಗಳಾಗಿ ಹೊಮ್ಮಿಸುವುದು ಒಳ್ಳೆಯದು. ಹೌದು, ಒಳ್ಳೆಯ ಶಬ್ದ ತರಂಗಗಳು ನಿಮ್ಮ ಮನೆಯಿಂದ ನೆಗೆಟಿವ್ ವೈಬ್ಸ್ ಹೊರಹಾಕಲು ಪರಿಣಾಮಕಾರಿ ಪರಿಹಾರವಾಗಿದೆ. ಧ್ವನಿಯು ಚೈತನ್ಯವನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸಕ್ರಿಯವಾಗಿ ವರ್ಗಾಯಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಧನಾತ್ಮಕವಾಗಿ ಪರಿವರ್ತಿಸುತ್ತದೆ. ವಿಂಡ್ ಚೈಮ್‌ಗಳು, ಹಾಡುವ ಟಿಬೆಟಿಯನ್ ಬೌಲ್‌ಗಳು ಮತ್ತು ಸಂಗೀತದ ಶಾಂತವಾದ ಬೀಟ್‌ಗಳು ಏಕತಾನತೆಯ ನಕಾರಾತ್ಮಕ ಶಕ್ತಿಯ ಮಾದರಿಯನ್ನು ಮುರಿಯಲು ಮತ್ತು ನಿಮ್ಮ ಜಾಗಕ್ಕೆ ಆರೋಗ್ಯಕರ ಶಕ್ತಿಯನ್ನು ತರಲು ಸಹಾಯ ಮಾಡುತ್ತದೆ. ನಿಶ್ಚಲವಾಗಿರುವ ನಕಾರಾತ್ಮಕ ಶಕ್ತಿಯನ್ನು ಸರಿಸಲು ನೀವು ಕೆಲವು ಮಂತ್ರಗಳನ್ನು ಸಹ ಪ್ಲೇ ಮಾಡಬಹುದು.