Vastu tips: ಮನೆಗೆ ಸಂಪತ್ತು ಆಕರ್ಷಿಸೋಕೆ ಈ ಅಪರೂಪದ ಸಸ್ಯ ನೆಡಿ..

ಮರಗಿಡಗಳಿಗೆ ಒಳ್ಳೇದು ಮಾಡೋದು ಬಿಟ್ಟು ಬೇರೆ ತಿಳಿದಿಲ್ಲ. ಅವನ್ನು ಸಾಧ್ಯವಾದಷ್ಚು ಬೆಳೆಸುವುದು ಒಳ್ಳೆಯದೇ. ವಾಸ್ತು ಶಾಸ್ತ್ರದಲ್ಲಿ ಕೆಲ ಸಸ್ಯಗಳನ್ನು ಲಕ್ಕಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಈ ಅಪರೂಪದ ಸಸ್ಯ ಬೆಳೆಸಿದರೆ ಮನೆಗೆ ಸಂಪತ್ತು ಆಕರ್ಷಿಸುತ್ತದೆ. 

Plant this miraculous Laxmana plant in your house to become wealthy skr

ಸಸ್ಯಗಳು ಮನೆಗೆ ಉತ್ತಮ ಕಳೆ ತರುತ್ತವೆ. ಅವು ಮನೆಯಲ್ಲಿದ್ದರೆ ಮನೆಯ ಗಾಳಿ ಸ್ವಚ್ಛಗೊಳಿಸುವ ಜೊತೆಗೆ, ಧೂಳು, ಕಸ ಮನೆಗೆ ಬರುವುದು ಕಡಿಮೆಯಾಗುತ್ತದೆ. ವಾಸ್ತು(Vastu)ವಿನಲ್ಲಿ ಕೆಲ ಸಸ್ಯಗಳಿಗೆ ಬಹಳ ಮಹತ್ವವಿದೆ. 
ಆ ಸಸ್ಯಗಳನ್ನು ವಾಸ್ತುವಿನ ನಿಯಮದ ಪ್ರಾಕಾರವೇ ಬೆಳೆಸಿದಾಗ ಅವು ಮನೆಗೆ ಅದೃಷ್ಟ, ಧನಾತ್ಮಕ ಶಕ್ತಿ, ಸಂಪತ್ತನ್ನು ತರುತ್ತವೆ. ಮತ್ತೆ ಕೆಲವನ್ನು ಮನೆಯಲ್ಲಿ ಬೆಳೆಸಬಾರದೆಂದೂ ವಾಸ್ತು ಹೇಳುತ್ತದೆ. 

ಇಂದು ಅಪರೂಪದ ಸಸ್ಯವೊಂದರ ಬಗ್ಗೆ ತಿಳಿಯೋಣ. ಇದಕ್ಕೆ ವಾಸ್ತುವಿನಲ್ಲಿ ಬಹಳ ಮಹತ್ವವಿದೆ. ಇದನ್ನು ಮನೆಯಲ್ಲಿ ಬೆಳೆಸುವುದರಿಂದ ನಿಮ್ಮ ಆಸ್ತಿ ಕೂಡಾ ಬೆಳೆಯುತ್ತದೆ. ಸಂಪತ್ತನ್ನು ಆಕರ್ಷಿಸುತ್ತದೆಂದು ವಾಸ್ತು ಹೇಳುವ ಈ ಗಿಡವೇ ಅಪರಾಜಿತಾ. ಸಾಮಾನ್ಯ ಆಡು ಭಾಷೆಯಲ್ಲಿ ಲಕ್ಷ್ಮಣ ಗಿಡ, ಗುಮಾ ಎಂದೆಲ್ಲ ಕರೆಸಿಕೊಳ್ಳುವ ಅಪರಾಜಿತಾವನ್ನು ಮನೆಯಲ್ಲಿ ನೆಡಲು ಸಲಹೆ ನೀಡುತ್ತದೆ ವಾಸ್ತು. 

ಲಕ್ಷ್ಮಣ ಗಿಡ(Lakshmana plant) ಕಾಣುವುದು ಬಹಳ ಅಪರೂಪ. ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಈ ಸಸ್ಯ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಟ್ಟರೆ ತುಂಬಾ ಶುಭ. ಮನೆಯಲ್ಲಿ ಈ ಗಿಡ ನೆಟ್ಟರೆ ಹಣದ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಏಕೆಂದರೆ ತಾಯಿ ಲಕ್ಷ್ಮಿ ಇದರ ಎಲೆಗಳಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ಬೆಳೆಸುವುದಾದರೆ ದೊಡ್ಡ ತೊಟ್ಟಿಯನ್ನು ಬಳಸಬೇಕು. ಅಲ್ಲಿ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಲಕ್ಷ್ಮಣ ಗಿಡದ ಎಲೆ ಬೇಲ್ ಅಥವಾ ವೀಳ್ಯದೆಲೆಯಂತೆ ಇರುತ್ತದೆ. ಈ ಗಿಡವನ್ನು ಎಲ್ಲಿ ನೆಟ್ಟರೂ ಅಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ(Lakshmi) ನೆಲೆಸುತ್ತಾಳೆ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಪರಿಸರ ತಾಜಾವಾಗಿರುತ್ತದೆ.

ಲಕ್ಷ್ಮಣ ಸಸಿ ನೆಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ನೋಡೋಣ. 

  • ಶ್ವೇತ ಅಪರಾಜಿತಾ ಗಿಡವು ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಆಕರ್ಷಿಸುವಂತೆ ಲಕ್ಷ್ಮಣ ಗಿಡವೂ ಆಕರ್ಷಿಸುತ್ತದೆ. ತಂತ್ರಿಗಳು ಶ್ವೇತಾ ಲಕ್ಷ್ಮಣನನ್ನು ಸಹ ಬಳಸುತ್ತಾರೆ. ತಂತ್ರಶಾಸ್ತ್ರದಲ್ಲಿ ಅಪರಾಜಿತಾ ಗಿಡದ ಅನೇಕ ಅದ್ಭುತ ಉಪಯೋಗಗಳನ್ನು ವರದಿ ಮಾಡಲಾಗಿದೆ.

    ಕಪ್ಪು, ನೇರಳೆ, ಕಿತ್ತಳೆ.. ನಿಮ್ಮ ರಾಶಿಚಕ್ರದ ಆಧಾರದ ಮೇಲೆ ನೀವು ಧರಿಸಬೇಕಾದ ಬಣ್ಣಗಳಿವು..
     
  • ಈ ಸಸ್ಯದಿಂದ ಆಯುರ್ವೇದ ಚಿಕಿತ್ಸೆಯನ್ನೂ ಮಾಡಲಾಗುತ್ತದೆ. ಈ ಸಸ್ಯವು ಕಡಿತ, ಸುಟ್ಟಗಾಯಗಳು, ಕಿವಿಯ ಉರಿಯೂತ, ಬಿಳಿ ಚುಕ್ಕೆಗಳು ಮತ್ತು ಕಲ್ಲುಗಳಂತಹ ಇತರ ಕಾಯಿಲೆಗಳಲ್ಲಿ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ.
  • ನಿಮ್ಮ ಮನೆಯಲ್ಲಿ ವಾಸ್ತು ದೋಷ(Vastu dosha)ವಿದ್ದರೆ ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಡಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ(positive energy) ಸಂಚರಿಸುತ್ತದೆ. ನಕಾರಾತ್ಮಕ ಶಕ್ತಿಯು ಒಳಬರದಂತೆ ತಡೆಯೊಡ್ಡುತ್ತದೆ. 
  • ಬಡತನ(Poverty) ತನ್ನನ್ನು ಎಂದಿಗೂ ಮುಟ್ಟಬಾರದು ಎಂದು ಎಲ್ಲರೂ ಬಯಸುತ್ತಾರೆ. ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣದ ಕೊರತೆ ಇರುವುದಿಲ್ಲ. ಲಕ್ಷ್ಮಣನ ಗಿಡವು ಲಕ್ಷ್ಮಿ ದೇವಿಯನ್ನು ತನ್ನತ್ತ ಆಕರ್ಷಿಸುತ್ತದೆ.
  • ಕೆಲಸದಲ್ಲಿ ವಿಫಲತೆಯಿಂದಾಗಿ ಮನದಲ್ಲಿ ಹತಾಶೆಯ ಭಾವ ಮೂಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಲಕ್ಷ್ಮಣ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಅರ್ಧಕ್ಕೆ ನಿಂತ, ವಿಫಲವಾದ ಕೆಲಸಗಳು ಪುನಾಃ ಪ್ರಾರಂಭವಾಗುತ್ತವೆ. ಆದಾಯ ಹೆಚ್ಚುತ್ತದೆ.

    ಚಾಣಕ್ಯ ನೀತಿ: ಯಶಸ್ಸು ಬೇಕಂದ್ರೆ ಈ ಮಾತುಗಳನ್ನು ಮರೆಯಬೇಡಿ!
     
  • ಈಶಾನ್ಯ ದಿಕ್ಕಿನಲ್ಲಿ(North east direction) ಲಕ್ಷ್ಮಣ ಸಸಿಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ನೆಡುವುದರಿಂದ ಸಂಪತ್ತು ಲಾಭದಾಯಕವಾಗಿದೆ. ಹಣಕಾಸಿನ ತೊಂದರೆಗಳು ದೂರವಾಗುತ್ತವೆ.

    ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios