Asianet Suvarna News Asianet Suvarna News

Vastu For Health: ಉತ್ತಮ ಆರೋಗ್ಯಕ್ಕೆ ವಾಸ್ತುವಿನ 10 ಸಲಹೆಗಳು..

ಆರೋಗ್ಯವೇ ಭಾಗ್ಯ. ಅದಿಲ್ಲದೆ ಮತ್ತೇನು ಸಾಧಿಸಿದರೂ ವ್ಯರ್ಥ, ಸಾಧಿಸುವುದೂ ಅಸಾಧ್ಯ.. ಹಾಗಾಗಿ, ಉತ್ತಮ ಆರೋಗ್ಯಕ್ಕಾಗಿ ವಾಸ್ತುವಿನಲ್ಲಿ 10 ಸಲಹೆಗಳಿವೆ. 

Know 10 Vastu Remedies for Your Good Health skr
Author
bangalore, First Published Feb 21, 2022, 9:41 AM IST | Last Updated Feb 21, 2022, 9:41 AM IST

ಜೀವನದಲ್ಲೇ ಏನೇ ಸಾಧಿಸಬೇಕು, ಸಂತೋಷವಾಗಿರಬೇಕೆಂದರೂ ಮೊದಲು ಆರೋಗ್ಯ(health) ಚೆನ್ನಾಗಿರಬೇಕು. ಕೇವಲ ನಮ್ಮ ಆರೋಗ್ಯವಷ್ಟೇ ಅಲ್ಲ, ನಮ್ಮ ಕುಟುಂಬ, ಜೊತೆಗಿರುವವರು, ಆಪ್ತರು ಎಲ್ಲರೂ ಆರೋಗ್ಯವಾಗಿದ್ದಾಗಷ್ಟೇ ಬದುಕಲ್ಲಿ ನೆಮ್ಮದಿ ಸಾಧ್ಯ. ಇಂಥ ಆರೋಗ್ಯ ಸಾಧಿಸಲು ನಮ್ಮ ಜೀವನಶೈಲಿ ಚೆನ್ನಾಗಿರಬೇಕು. ಆಹಾರದಲ್ಲಿ ಪಥ್ಯವಿರಬೇಕು. ಜೊತೆಗೆ ವಾಸ್ತುವೂ ಚೆನ್ನಾಗಿರಬೇಕು. ಆರೋಗ್ಯಕ್ಕಾಗಿ ವಾಸ್ತು ಹೇಳಿದ ಈ 10 ಸಲಹೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸಂತೋಷ, ಸೌಖ್ಯಕ್ಕೆ ಕೊರತೆಯಿರುವುದಿಲ್ಲ.

1. ಮಲಗುವ ದಿಕ್ಕು
ಆರೋಗ್ಯವಂತ ಜೀವನಕ್ಕಾಗಿ ಪ್ರತಿನಿತ್ಯ 6-8 ಗಂಟೆ ನಿದ್ರೆ ಬೇಕೇ ಬೇಕು. ನೆಮ್ಮದಿಯ ನಿದ್ರೆಗಾಗಿ ದಕ್ಷಿಣ(south)ಕ್ಕೆ ತಲೆ ಇಟ್ಟು ಮಲಗಿ. 

2. ಆರೋಗ್ಯದ ಮೆಟ್ಟಿಲು
ಮನೆಯ ಮೆಟ್ಟಿಲು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದರೆ ಆಶ್ಚರ್ಯವಾದೀತು. ಮನೆಗೆ ಮೆಟ್ಟಿಲು ಅಗತ್ಯವಿದ್ದಾಗ ಅದು ಮನೆಯ ಮಧ್ಯಭಾಗದಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮನೆಯ ಮಧ್ಯೆ ಇರುವ ಮೆಟ್ಟಿಲು(staircase) ಗಂಭೀರ ಆರೋಗ್ಯ ಸಮಸ್ಯೆ(health issues)ಗಳಿಗೆ ಕಾರಣವಾಗುತ್ತದೆ. 

3. ಶಕ್ತಿ(Energy)ಯ ಮೂಲ
ಬ್ರಹ್ಮಸ್ಥಾನ ಅಂದರೆ ಮನೆಯ ಮಧ್ಯ ಭಾಗವು ಯಾವಾಗಲೂ ಖಾಲಿ ಇರಬೇಕು. ಅಲ್ಲಿ ಯಾವುದೇ ಭಾರವಾದ ಪೀಠೋಪಕರಣ(furniture)ಗಳು ಇರಕೂಡದು. ಇದರಿಂದ ಮನೆಯ ಒಳ ಹೊರಗೆ ಶಕ್ತಿಯು ಆರಾಮಾಗಿ ಹರಿದಾಡುತ್ತದೆ. ಹೆಚ್ಚು ಪೀಠೋಪಕರಣಗಳಾದಷ್ಟೂ ಶಕ್ತಿಯ ಹರಿದಾಟಕ್ಕೆ ತೊಡಕಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದೇ ಕಾರಣಕ್ಕೆ ಹಳೆಯ ಕಾಲದ ಮನೆಗಳ ಮಧ್ಯೆ ಭಾಗದಲ್ಲಿ ಬಾವಂತಿ ಇರುತ್ತಿತ್ತು. ಅಂದರೆ, ಅಲ್ಲಿ ತೆರೆದ ಕೇಂದ್ರ ಇರುತ್ತಿತ್ತು. 

4. ಪೂಜಾ ಸ್ಥಳ
ಮನೆಯ ಪೂಜಾ ಸ್ಥಳವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವಂತಿರಬೇಕು. ಆಗ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೊರಗೋಡುತ್ತದೆ. ದೇವರ ಪೂಜೆಗಾಗಿ ಒಂದು ಸ್ಥಳ ಮೀಸಲಿರಿಸಿ. ನಿಮಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೂ ಮನೆಯಲ್ಲಿ ದೇವರ ವಿಗ್ರಹವಿರಬೇಕು. 

5. ತಲೆಯ ಮೇಲಿನ ದೀಪ
ಮನೆಯಲ್ಲಿ ದೀಪಗಳು ಸಾಕಷ್ಟು ಬೇಕು. ಈಗಂತೂ ಡೆಕೋರೇಶನ್ ಹೆಸರಲ್ಲಿ ಫಾಲ್ಸ್ ಸೀಲಿಂಗ್ ಮಾಡಿ ಸಾಕಷ್ಟು ಬಲ್ಬ್‌ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಹೀಗೆ ಮಾಡುವಾಗ ಕೋಣೆಯ ಮಧ್ಯೆ ಭಾಗದಲ್ಲಿ ಕಣ್ಣಿಗೆ ಹೊಡೆವಂಥ ಯಾವುದೇ ಲೈಟ್ ಇರಕೂಡದು. ಹಾಗೆ ಅಳವಡಿಸಿದಲ್ಲಿ ಅದು ಪಾಸಿಟಿವ್ ಎನರ್ಜಿ ಹಾಗೂ ಮನಸ್ಸನ್ನು ಬ್ಲಾಕ್ ಮಾಡುತ್ತದೆ. 

Falgun Maas 2022: ಹಿಂದೂ ವರ್ಷದ ಕೊನೆಯ ಮಾಸದ ವ್ರತ, ಹಬ್ಬ ಹರಿದಿನಗಳೇನು?
 
6. ಅಗ್ನಿ ಶಕ್ತಿ(Fire Power)ಯ ಸಮತೋಲನ

ಅಗ್ನಿಯು ಶಕ್ತಿ ಅತಿ ಮುಖ್ಯ ಮೂಲಗಳಲ್ಲೊಂದು. ಹಾಗಾಗಿ, ಮನೆಯಲ್ಲಿ ಅಗ್ನಿತತ್ವ ಪ್ರತಿಷ್ಠಾಪನೆ ಮಾಡುವಾಗ ನಾವು ಹೆಚ್ಚು ಎಚ್ಚರಿಕೆ ವಹಿಸಬೇಕು. ಇದು ಕುಟುಂಬದ ಆರೋಗ್ಯದ ವಿಷಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಮನೆಯಲ್ಲಿ ಅಗ್ನಿಯನ್ನು ಅಡುಗೆ ತಯಾರಿಸಲು ಬಳಸುತ್ತೇವೆ. ಆಹಾರವು ಆರೋಗ್ಯಕ್ಕೆ ಮೂಲವಾಗಿದೆ. ಕುಟುಂಬದ ಶಕ್ತಿಗೆ ಮೂಲವಾಗಿದೆ. ಹಾಗಾಗಿ, ಅಡುಗೆ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಸ್ಟೌವ್ ಇರಬೇಕು. 

7. ದೀಪದ ಬೆಳಕು
ಪ್ರತಿ ದಿನ ಮನೆಯಲ್ಲಿ ದೀಪ ಹಚ್ಚುವ ಅಭ್ಯಾಸ ಇಟ್ಟುಕೊಳ್ಳಿ. ಮನೆಯ ಆಗ್ನೇಯ ಇಲ್ಲವೇ  ವಾಯುವ್ಯ ದಿಕ್ಕಿನಲ್ಲಿ ದೀಪ ಬೆಳಗಬೇಕು. ಇದರಿಂದ ಅಂದಕಾರ ನಿರ್ಮೂಲನೆಯಾಗುವುದು. ಮನೆಯ ನಕಾರಾತ್ಮಕ ಶಕ್ತಿಯನ್ನು ಇದು ಸುಡುತ್ತದೆ. ಈ ದೀಪದ ಉರಿಯ ಬಣ್ಣವು ಮನೆಯ ಹಾಗೂ ಬದುಕಿನ ಮೇಲೆ ಅದು ಬೀರುವ ಪರಿಣಾಮದ ಪ್ರತಿನಿಧಿಯಾಗಿದೆ. 

Shiva Karma: ಸಂತೋಷವಾಗಿರಲು ಶಿವ ಹೇಳಿದ ನಿಯಮಗಳಿವು..
 
8. ದಿಕ್ಕುಗಳ ಪ್ರಾಮುಖ್ಯತೆ
ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸರಿ ಇಲ್ಲವೆಂದರೆ ಅವರ ಕೋಣೆಯಲ್ಲಿ ಹುಷಾರಾಗುವವರೆಗೂ ದೀಪ ಹಚ್ಚಿಡುವ ಅಭ್ಯಾಸ ಮಾಡಿ. ಆರೋಗ್ಯಕ್ಕಾಗಿ ದೀಪ ಹಚ್ಚುವಾಗ ಅದನ್ನು ಕೋಣೆಯ ಪೂರ್ವ ದಿಕ್ಕಿನಲ್ಲಿರಿಸಬೇಕು. 

9. ಆರೋಗ್ಯದ ಬಾಗಿಲು
ಮನೆಯ ಮುಖ್ಯ ದ್ವಾರಕ್ಕೆ ವಾಸ್ತುವಿನಲ್ಲಿ ವಿಶೇಷ ಮಹತ್ವವಿದೆ. ಮನೆಯ ಸುತ್ತ ಇರುವ ಗೋಡೆಯಷ್ಟೇ ಎತ್ತರ ಮುಖ್ಯ ದ್ವಾರವಿರಬೇಕು. ಇದರಿಂ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ. 

10. ದೇವರ ಫೋಟೋ
ಮನೆಯ ದೇವರ ಕೋಣೆಯಲ್ಲಿ ಇಲ್ಲವೇ ಎಲ್ಲಿಯಾದರೂ ದೇವರ ಫೋಟೋ ಇರಲೇಬೇಕು. ಅದು ದಕ್ಷಿಣ ದಿಕ್ಕಿಗೆ ಮುಖ ಹಾಕಿರಬೇಕು. ಇದರಿಂದ ಕುಟುಂಬದ ಸದಸ್ಯರು ಕಾಯಿಲೆ ಬೀಳದಂತೆ ನೋಡಿಕೊಳ್ಳಬಹುದು. 
 

Latest Videos
Follow Us:
Download App:
  • android
  • ios