Broom Vastu: ಪೊರಕೆ ಕಾಲಿಗೆ ತಾಗಿಸ್ಬಾರ್ದು ಅನ್ನೋದು ಇದೇ ಕಾರಣಕ್ಕೆ!
ಪೊರಕೆ ಮನೆಯನ್ನು ಸ್ವಚ್ಛಗೊಳಿಸುತ್ತದೆ. ಮನೆಯ ಅವ್ಯವಸ್ಥೆಯನ್ನು ಹೋಗಲಾಡಿಸುತ್ತದೆ. ಪೊರಕೆಯನ್ನು ಕಾಲಿಗೆ ತಾಕಿಸಬಾರದು, ಮನೆಯಲ್ಲಿ ಎಲ್ಲಿಡಬೇಕು, ಯಾವ ದಿನ ಪೊರಕೆ ಖರೀದಿಗೆ ಸೂಕ್ತ ಇತ್ಯಾದಿ ಹಲವು ವಿಷಯಗಳ ಬಗ್ಗೆ ವಾಸ್ತುವಿನಲ್ಲಿ ಹೇಳಲಾಗಿದೆ.
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ಉಳಿಯಬೇಕೆಂದರೆ ಮನೆಗೆ ಸಂಬಂಧಿಸಿದ ಪ್ರತಿ ವಸ್ತುವಿನ ವಾಸ್ತು ಕಡೆಗೂ ಗಮನ ವಹಿಸಬೇಕು. ಮನೆಯೆಲ್ಲಾ ಸುತ್ತಿ ಮೂಲೆಯಲ್ಲಿ ಹೋಗಿ ಕೂರುವ ಪೊರಕೆಗೆ ಕೂಡಾ ವಾಸ್ತುವಿನಲ್ಲಿ ಬಹಳ ಮಹತ್ವವಿದೆ. ಪೊರಕೆ ವಿಷಯವಾಗಿ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆಂದು ವಾಸ್ತುವಿನಲ್ಲಿ ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ- ಪೊರಕೆಯನ್ನು ಕೊಳ್ಳಲು, ಎಸೆಯಲು ಮತ್ತು ಇಡಲು ಕೆಲವು ನಿಯಮಗಳಿವೆ. ಪೊರಕೆಯನ್ನು ಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಆ ಸಮಯದಲ್ಲಿ ನಾವು ಹೊಸ ಪೊರಕೆಯನ್ನು ತೆಗೆದುಕೊಂಡು ಹಳೆಯದನ್ನು ಎಸೆಯುತ್ತೇವೆ. ಇದರಿಂದ ಬಡತನವು ಮನೆಯಿಂದ ಹೊರ ಹೋಗುತ್ತದೆ, ಜೊತೆಗೆ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುವುದಿಲ್ಲ ಎಂಬ ನಂಬಿಕೆ ಇದೆ. ಪೊರಕೆಯನ್ನು ಲಕ್ಷ್ಮೀ ಎಂದು ಪರಿಗಣಿಸುವುದರಿಂದಲೇ ಅದನ್ನು ಯಾರ ಕಾಲಿಗೂ ತಾಕಿಸಬಾರದು ಎನ್ನುವುದು.
ಪೊರಕೆ(Broom) ವಿಷಯವಾಗಿ ವಾಸ್ತು(Vastu)ವಿನಲ್ಲಿರುವ ನಿಯಮಗಳೇನು ನೋಡೋಣ.
ಪೊರಕೆಯನ್ನು ಯಾವಾಗ ಖರೀದಿಸಬೇಕು?
ವಾಸ್ತು ಶಾಸ್ತ್ರದಲ್ಲಿ, ಪೊರಕೆಗಳನ್ನು ಖರೀದಿಸಲು ಶನಿವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮನೆಗೆ ಪೊರಕೆಗಳನ್ನು ಖರೀದಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಕೃಷ್ಣ ಪಕ್ಷದಲ್ಲಿಯೇ ಯಾವಾಗಲೂ ಹೊಸ ಪೊರಕೆಯನ್ನು ಖರೀದಿಸಬೇಕು. ಶುಕ್ಲ ಪಕ್ಷದಲ್ಲಿ ಪೊರಕೆಯನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗಿದೆ.
Samudrik Shastra: ಹುಡುಗಿಯ ಮೈ ಮೇಲೆ ಈ ಗುರುತಿದ್ದರೆ ಆಕೆ ಮನೆಗೆ ಅದೃಷ್ಟದೇವತೆಯೇ ಸರಿ!
ಪೊರಕೆ ಇಡಲು ಸರಿಯಾದ ಸ್ಥಳ
ಸಂತೋಷ ಮತ್ತು ಸಮೃದ್ಧಿಗಾಗಿ, ಪೊರಕೆಯನ್ನು ಯಾವಾಗಲೂ ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಈಶಾನ್ಯದಲ್ಲಿ ಪೊರಕೆ ಇಡುವುದನ್ನು ತಪ್ಪಿಸಿ.
ಪೊರಕೆಯನ್ನು ಯಾವಾಗಲೂ ಮರೆ ಮಾಡಬೇಕು. ಜನರ ಕಣ್ಣಿಗೆ ಬೀಳುವಂಥ ಯಾವುದೇ ಸ್ಥಳದಲ್ಲಿ ಪೊರಕೆ ಇಡುವುದನ್ನು ತಪ್ಪಿಸಿ.
ಹಿಡಿಯನ್ನು ಅಡುಗೆಮನೆಯಲ್ಲಿ ಇಡುವುದನ್ನು ಸಹ ತಪ್ಪಿಸಬೇಕು.
ಪೊರಕೆಯನ್ನು ಮಲಗುವ ಕೋಣೆಯಲ್ಲಿ ಕೂಡಾ ಇಟ್ಟುಕೊಳ್ಳಬೇಡಿ.
ಪೊರಕೆಯನ್ನು ಎಂದಿಗೂ ನಿಲ್ಲಿಸಿ ಇಡಬಾರದು. ಮಲಗಿಸಿಯೇ ಇಡಬೇಕು.
ಗುಡಿಸುವಾಗ ಪೊರಕೆ ಬೀಳಬಾರದು.
ಹಳೆಯ ಪೊರಕೆ ಕುರಿತ ವಾಸ್ತು
ಒಡೆದ ಅಥವಾ ಹಳತಾದ ಪೊರಕೆಯನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಹಳೆಯ ಪೊರಕೆಯು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮುರಿದ ಪೊರಕೆ ಮನೆಗೆ ತೊಂದರೆಯನ್ನು ಆಹ್ವಾನಿಸುತ್ತದೆ. ಸಾಕಷ್ಟು ಜನರು ಹೊಸ ಪೊರಕೆ ಬಂದ ನಂತರವೂ ಹಳೆಯ ಪೊರಕೆ ಬಿಸಾಡುವುದಿಲ್ಲ. ಇದನ್ನು ಮಾಡಬಾರದು, ಏಕೆಂದರೆ ಹಳೆಯ ಪೊರಕೆಯನ್ನು ಇಟ್ಟುಕೊಳ್ಳುವುದರಿಂದ ಮನೆಗೆ ಬಡತನ ಬರುತ್ತದೆ.
ಹಳೆ ಪೊರಕೆ ಎಸೆಯಲು ಶನಿವಾರ ಅಥವಾ ಅಮವಾಸ್ಯೆ ಉತ್ತಮ ದಿನ. ಅಮವಾಸ್ಯೆಯ ದಿನ ಮನೆಯಿಂದ ಪೊರಕೆ ಎಸೆದರೆ ಯಾವುದೇ ದೋಷ ಉಂಟಾಗುವುದಿಲ್ಲ.
ಹಳೆಯ ಮನೆಯಿಂದ ಹೊಸ ಮನೆಗೆ ಹೋಗುವಾಗ ಅಥವಾ ಮನೆ ಬದಲಿಸುವಾಗ ಹಳೆಯ ಪೊರಕೆಯನ್ನು ಯಾವುದೇ ಕಾರಣಕ್ಕೂ ಅಲ್ಲಿಗೆ ತೆಗೆದುಕೊಂಡು ಹೋಗಬೇಡಿ. ಹೊಸ ಮನೆಯಲ್ಲಿ ಹೊಸ ಪೊರಕೆಯಿಂದಲೇ ಸ್ವಚ್ಛತೆ ಆರಂಭಿಸಿ. ಈ ತಂತ್ರದಿಂದ ಮನೆಯಲ್ಲಿ ಸಕಾರಕಾತ್ಮಕ ವಾತಾವರಣ ಇರುತ್ತದೆ.
Vidur Niti: ಈ 4 ಭಾವಗಳಿಂದ ದೂರವಿರದಿದ್ದರೆ ಲೈಫ್ ಹಾಳಾಗೋದು ಗ್ಯಾರಂಟಿ!
ಈ ಸಮಯದಲ್ಲಿ ಗುಡಿಸಬೇಡಿ
ಸೂರ್ಯಾಸ್ತದ ನಂತರ ಗುಡಿಸುವುದನ್ನು ತಪ್ಪಿಸಿ. ಇದಲ್ಲದೇ ಮನೆಯ ಪೊರಕೆಯನ್ನು ಬೇರೆಯವರಿಗೆ ನೀಡುವುದನ್ನು ತಪ್ಪಿಸಬೇಕು. ನಿಮ್ಮ ಮನೆಯನ್ನು ಬೇರೆಯವರು ಗುಡಿಸಲು ಬಿಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.