Vastu Tips : ಯಶಸ್ಸಿಗೆ ಅಡ್ಡಿ ತರುತ್ತಿರುವ ವಸ್ತು ನಿಮ್ಮ ಟೇಬಲ್ ಮೇಲಿರಬಹುದು!
ಯಶಸ್ಸು ನಮ್ಮ ಹಿಂದೆ ಬರುವುದಿಲ್ಲ. ನಾವು ಯಶಸ್ಸಿಗಾಗಿ ಹೋರಾಟ ನಡೆಸಬೇಕು. ಅನೇಕ ಬಾರಿ ಎಷ್ಟು ಪ್ರಯತ್ನಿಸಿದ್ರೂ ಅದೃಷ್ಟ ಕೈ ಹಿಡಿಯುವುದಿಲ್ಲ. ಇದಕ್ಕೆ ನೀವು ಬಳಸುತ್ತಿರುವ ಟೇಬಲ್ ಕೂಡ ಕಾರಣವಾಗಿರಬಹುದು.
ಅಧ್ಯಯನ (Study)ವಿರಲಿ ಇಲ್ಲ ಕೆಲಸ (Work)ವಿರಲಿ, ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ಕಠಿಣ ಪರಿಶ್ರಮದ ನಂತ್ರವೂ ಅನೇಕ ಬಾರಿ ಯಶಸ್ಸು (Success) ಲಭಿಸುವುದಿಲ್ಲ. ಪರೀಕ್ಷೆ (Exam)ಯಲ್ಲಿ ಕಡಿಮೆ ಅಂಕ ಅಥವಾ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ನಮ್ಮ ಪರಿಶ್ರಮದ ಜೊತೆ ಅನೇಕ ಗ್ರಹ ದೋಷಗಳು ಕಾರಣವಾಗುತ್ತದೆ. ವಾಸ್ತುದೋಷದಿಂದಲೂ ನಮ್ಮ ಯಶಸ್ಸಿಗೆ ಅಡ್ಡಿಯುಂಟಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ವಾಸ್ತುಶಾಸ್ತ್ರದಲ್ಲಿ ನಾವು ಓದಲು ಹಾಗೂ ಕಚೇರಿ ಕೆಲಸಕ್ಕೆ ಬಳಸುವ ಟೇಬಲ್ ಹಾಗೂ ಖುರ್ಚಿಯ ಬಗ್ಗೆಯೂ ಹೇಳಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ, ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಮತ್ತು ಕಚೇರಿ ವಾತಾವರಣವನ್ನು ಫ್ರೆಶ್ ಆಗಿಡಲು ಕಚೇರಿ ಟೇಬಲ್ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಕಚೇರಿಯ ಟೇಬಲ್ ಹಾಗೂ ಖುರ್ಚಿ ಎಲ್ಲಿಡಬೇಕು ಹಾಗೂ ಅದ್ರ ಮೇಲೆ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ನಾವು ಹೇಳ್ತೇವೆ.
ವಾಸ್ತು ಶಾಸ್ತ್ರದ ಪ್ರಕಾರ, ಕಚೇರಿಯಲ್ಲಿ ಅಥವಾ ಸ್ಟಡಿ ರೂಮಿನಲ್ಲಿ ಹಾಕುವ ಟೇಬಲನ್ನು ನಿಮ್ಮ ಬೆನ್ನು ಗೋಡೆಯ ಕಡೆಗೆ ಇರುವ ರೀತಿಯಲ್ಲಿ ಇಡಬೇಕು. ಯಾವಾಗಲೂ ಟೇಬಲ್ ನೇರವಾಗಿ ಬಾಗಿಲಿನ ಮುಂದೆ ಇರಬಾರದು.
FULL MOON DAY: ಹುಣ್ಣಿಮೆಯ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡ್ಬೇಡಿ!
- ಅಗತ್ಯವಿರುವ ಪುಸ್ತಕಗಳು ಮತ್ತು ಫೈಲ್‌ಗಳನ್ನು ಕಚೇರಿಯ ಮೇಜಿನ ಬಲಭಾಗದಲ್ಲಿ ಇಡುವುದು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ. ಇದರಿಂದ ಕಚೇರಿ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕಚೇರಿಯಲ್ಲಿ ಸದಾ ಸಕಾರಾತ್ಮಕತೆ ಶಕ್ತಿ ನೆಲೆಸಿರುತ್ತದೆ.
- ಕಚೇರಿಯ ಮೇಜಿನ ಹಿಂದೆ ಗೋಡೆಗಳ ಮೇಲೆ ಉತ್ತಮ ಪೋಸ್ಟರ್ ಅಥವಾ ಚಿತ್ರವನ್ನು ಹಾಕಬೇಕು.
- ಸ್ಟಡಿ ಟೇಬಲ್ ಮೇಲೆ ಯಾವತ್ತೂ ಕನ್ನಡಿಯನ್ನು ಇಡಬೇಡಿ. ಹಾಗೆಯೇ ಗಾಜಿನ ವಸ್ತುಗಳನ್ನು ಟೇಬಲ್ ಮೇಲಿಡುವುದನ್ನು ತಪ್ಪಿಸಿ.
- ಅನೇಕರು ಟೇಬಲ್ ಮೇಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುತ್ತಾರೆ. ಬೆಡ್ ಲ್ಯಾಂಪ್ ಸೇರಿದಂತೆ ಕೆಲ ಆಕರ್ಷಕ ಎಲೆಕ್ಟ್ರಿಕ್ ವಸ್ತುಗಳನ್ನು ಮೇಜಿನ ಮೇಲಿಟ್ಟುಕೊಂಡಿರುತ್ತಾರೆ. ವಾಸ್ತು ಪ್ರಕಾರ ಇದು ಒಳ್ಳೆಯದಲ್ಲ.
- ಕತ್ತರಿ, ಸೂಜಿಗಳಂತಹ ಚೂಪಾದ ವಸ್ತುಗಳನ್ನು ಟೇಬಲ್ ಮೇಲೆ ಇಟ್ಟುಕೊಳ್ಳುವುದನ್ನು ತಪ್ಪಿಸಿ. ಇದು ಏಕಾಗ್ರತೆಗೆ ಅಡ್ಡಿಯಾಗುತ್ತದೆ. ಒಂದು ವೇಳೆ ಈ ವಸ್ತುಗಳ ಅಗತ್ಯವಿದೆ ಎಂದಾದ್ರೆ ಅವುಗಳನ್ನು ಟೇಬಲ್ ನ ಡ್ರಾಯರ್ ನಲ್ಲಿಡಿ. ಚೂಪಾದ ವಸ್ತುಗಳು ಡ್ರಾಯರ್ ನಲ್ಲಿ ಇರುವುದರಿಂದ ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ನಿಮ್ಮ ಏಕಾಗ್ರತೆಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ.
- ಕಚೇರಿ ಹಾಗೂ ಸ್ಟಡಿ ಟೇಬಲ್ ಮೇಲೆ ಬೇಡದ ವಸ್ತುಗಳನ್ನು ಇಟ್ಟುಕೊಂಡಿರುತ್ತೇವೆ. ಅದ್ರಲ್ಲಿ ಪತ್ರಿಕೆ ಚೂರು, ಹಳೆಯ ಡೈರಿಗಳು, ತ್ಯಾಜ್ಯ ಕಾಗದಗಳು, ಕರಪತ್ರಗಳು ಸೇರಿವೆ. ನಿಮ್ಮ ಟೇಬಲ್ ಮೇಲೆಯೂ ಈ ವಸ್ತುಗಳಿದ್ದರೆ ಅದನ್ನು ತಕ್ಷಣವೇ ತೆಗೆದು ಹಾಕಿ. ಇದು ನಕಾರಾತ್ಮಕ ಶಕ್ತಿ ಹರಡಲು ಕಾರಣವಾಗುತ್ತದೆ.
- ಟೇಬಲ್ ಅಂದ ಹೆಚ್ಚಿಸಲು ಅನೇಕರು ಗಿಡಗಳನ್ನು ಇಡುತ್ತಾರೆ. ಅದ್ರಲ್ಲೂ ಮುಳ್ಳಿನ ಗಿಡಗಳು ಸೌಂದರ್ಯ ಹೆಚ್ಚಿಸುತ್ತವೆ ಎಂಬ ಕಾರಣಕ್ಕೆ ಅದನ್ನು ಇಡುವವರಿದ್ದಾರೆ. ಆದ್ರೆ ಟೇಬಲ್ ಮೇಲೆ ಮುಳ್ಳಿನ ಗಿಡಗಳನ್ನು ಇಡಬೇಡಿ. ಈ ಸಸ್ಯಗಳು ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಸೃಜನಶೀಲತೆಯನ್ನು ಕಡಿಮೆ ಮಾಡುತ್ತವೆ. ಇದ್ರಿಂದ ಕೆಲಸ ಹಾಗೂ ಅಭ್ಯಾಸಕ್ಕೆ ತೊಂದರೆಯಾಗುತ್ತದೆ.
Planet Jupiter: ಶುಭ ಕೆಲಸಕ್ಕೆ ಕೈಹಾಕುವ ಮುನ್ನ ಗುರುಬಲ ತಿಳಿಯುವುದು ಹೇಗೆ?
- ಸ್ಟಡಿ ಟೇಬಲ್ ಅಥವಾ ಕಚೇರಿಯ ಟೇಬಲ್ ಮೇಲೆ ಪುರಾತನ ಪ್ರತಿಮೆಗಳು ಅಥವಾ ಹಳೆಯ ವಿಗ್ರಹಗಳು, ಚಿತ್ರಗಳನ್ನು ಇಡಬೇಡಿ. ಇದು ಕೂಡ ನಿಮ್ಮ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.
- ಆಹಾರ ಸೇವನೆ ಮಾಡ್ತಾ ಕೆಲಸ ಮಾಡ್ತಿರುತ್ತೇವೆ. ಟೀ ಕುಡಿಯುತ್ತ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಟೀ ಕುಡಿದ ನಂತ್ರ ಕೊಳಕು ಲೋಟವನ್ನು ಅಲ್ಲಿಯೇ ಇಡ್ತೇವೆ. ಈ ತಪ್ಪನ್ನು ಮಾಡಬೇಡಿ. ತುಂಬಾ ಸಮಯ ಕೊಳಕು ಲೋಟ, ತಟ್ಟೆ ಟೇಬಲ್ ಮೇಲಿದ್ದರೆ ನಕಾರಾತ್ಮಕ ಪ್ರಭಾವ ನಮ್ಮ ಮೇಲಾಗುತ್ತದೆ.