ವಾಸ್ತು ದೇವತೆ ಮನೆಯಲ್ಲಿ ಆನಂದವಾಗಿ ನೆಲಸೆಬೇಕಂದ್ರೆ ಹೀಗ್ ಮಾಡಿ ಅಂತಾರೆ ಸದ್ಗುರು!
ಕೆಲವೊಂದು ವಿಚಾರಗಳು ನಮ್ಮ ಅರಿವನ್ನೂ ಮೀರಿ ಮನೆಯಲ್ಲಿ ನೆಗೆಟಿವಿಟಿ ತುಂಬುತ್ತಿರುತ್ತೆ. ಅದನ್ನು ನಿವಾರಿಸಿ ಮನೆಯಲ್ಲಿ ಪಾಸಿಟಿವ್ ವೈಬ್ ತುಂಬೋದು ಹೇಗೆ? ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡಲು ಸದ್ಗುರು ನೀಡಿರುವ ವಾಸ್ತು ಟಿಪ್ಸ್ ಇಲ್ಲಿವೆ.
ಮನೆ ಅನ್ನುವುದು ನಮ್ಮ ನೆಮ್ಮದಿ ಹೆಚ್ಚಿಸುವ ತಾಣ. ಸುಸ್ತಾಗಿ ಬಂದಿರುವವರನ್ನು ಅಮ್ಮನಂತೆ ಕಂಫರ್ಟ್ ನೀಡುವ ಪ್ರೀತಿಯ ನೆಲೆ. ನಮ್ಮ ಸುಸ್ತು, ಸಂಕಟ ಹೋಗಲಾಡಿಸಿ, ಉಲ್ಲಾಸ, ಉತ್ಸಾಹ ತುಂಬ ಬೇಕಿರುವ ಮನೆ ನಮ್ಮ ಮನಃಶಾಂತಿ ಕಳೆದು ಹಾಕುವಂತಿದ್ದರೆ? ಹೆಚ್ಚಿನ ಮನೆಯಲ್ಲಿ ಈ ಸಮಸ್ಯೆ ಇರುತ್ತದೆ. ಇದರಿಂದ ಲೈಫಲ್ಲೂ ಮುಂದೆ ಬರೋದು ಕಷ್ಟ. ಹಾಗೆ ನೋಡಿದರೆ ನಾವು ಯೂನಿವರ್ಸ್ ಅಂತ ಹೇಳೋ ಬ್ರಹ್ಮಾಂಡದಲ್ಲಿ ನೆಗೆಟಿವ್ ಜೊತೆಗೆ ಪಾಸಿಟಿವ್ ಶಕ್ತಿಗಳಿವೆ. ಅಂಥಾ ಪವರ್ ಗಳು ನಮ್ಮನ್ನು ಸದಾ ಸುತ್ತುವರಿದು, ನಮ್ಮ ದೇಹ, ಮನಸ್ಸಿನ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ದುರ್ಬಲತೆ ಹೊಂದಿರುವ ಕೆಲವರು ನಕಾರಾತ್ಮಕ ಶಕ್ತಿಗಳಿಗೆ ಬಲಿಯಾಗುತ್ತಾರೆ. ಯಾರಾದರೂ ಉದ್ದೇಶಪೂರ್ವಕವಾಗಿ ನಮ್ಮ ಕಡೆಗೆ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತಾರೆ ಎನ್ನಲಾಗುವುದಿಲ್ಲ,ಆದರೆ ಇದು ದೇಹದಲ್ಲಿರುವ ಚಕ್ರಗಳ ಮೂಲಕ ನಮ್ಮ ದೇಹದೊಳಗೆ ಶಕ್ತಿಯ ಸುಗಮ ಹರಿವಿನ ಬಗ್ಗೆ ಪರಿಣಾಮ ಬೀರುತ್ತದೆ. ಆದರೆ ನಾವು ಈ ನಕಾರಾತ್ಮಕ ಶಕ್ತಿಗಳ ಸ್ವೀಕರಿಸಿ ಕೋಪ, ಜಗಳಗಳು ಮತ್ತು ಆಲಸ್ಯದಂತಹ ನಕಾರಾತ್ಮಕತೆಗೆ ತುತ್ತಾಗಬಾರದು.
ಆದರೆ ಮನೆಯಲ್ಲಿ ಅಥವಾ ನಾವಿರುವ ಪರಿಸರದ ಸುತ್ತಮುತ್ತ ನಕಾರಾತ್ಮತೆ ಇದ್ದರೆ ಸಮಸ್ಯೆಗಳು, ನೋವು (Pain), ಮಾನಸಿಕ ಅಶಾಂತಿ ಉಂಟಾಗುತ್ತದೆ. ಈ ನೆಗೆಟಿವ್ ವೈಬ್‌ಗಳನ್ನು ಕೆಲವೊಂದು ಸೂಚನೆಗಳ ಮೂಲಕ ತಿಳಿದುಕೊಳ್ಳಬಹುದು. ವೈದ್ಯಕೀಯ ಚಿಕಿತ್ಸೆಗೆ (Medical Treatment) ಸ್ಪಂದಿಸದಂತೆ ಮನೆಮಂದಿಗೆ ದೀರ್ಘಕಾಲದ ಕಾಯಿಲೆಗಳಾಗಿರಬಹುದು, ಎಷ್ಟೇ ಕಷ್ಟಪಟ್ಟರೂ ಯಶಸ್ಸು ಮರೀಚಿಕೆ ಆಗಬಹುದು. ಕೆಲಸ ಕಾರ್ಯಗಳು ಲಾಸ್ಟ್ ಮೊಮೆಂಟ್‌ನಲ್ಲಿ ಕೈ ತಪ್ಪಬಹುದು. ಒಳ್ಳೆಯ ಅವಕಾಶಗಳು ಪದೇ ಪದೇ ಕೈಜಾರಿ ಹೋಗುವುದು, ಕೆಲಸ ಮಾಡಲು ಆಲಸ್ಯ, ಕುಟುಂಬದಲ್ಲಿ ಪದೇ ಪದೇ ಅನಗತ್ಯ ಜಗಳ, ನಕಾರಾತ್ಮಕ ಭಾವನೆಗಳು ಕಾಡಬಹುದು. ಇದು ನೆಗೆಟಿವ್ ವೈಬ್‌ನ ಸಂಕೇತ ಸಹ. ಹಾಗಂತ ಇದೇ ಅಂತಿಮ ಅಲ್ಲ. ಸೂಕ್ತ ಪರಿಹಾರಗಳ ಮೂಲಕ ನಕಾರಾತ್ಮಕತೆ ನಿವಾರಿಸಬಹುದು. ವಾಸ್ತು ಈ ನೆಗೆಟಿವ್ ವೈಬ್ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮ ಆಹಾರದಲ್ಲಿ ಉಪ್ಪಿಗೆ ಪ್ರಧಾನ ಸ್ಥಾನ. ಈ ಲವಣ ಆದರೆ ಅಡುಗೆಯಲ್ಲಿ ಮಾತ್ರವಲ್ಲ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳೆರಡೂ ಸಹ ಅದೃಷ್ಟ, ಖ್ಯಾತಿ ಮತ್ತು ಸಂಪತ್ತನ್ನು ಹೆಚ್ಚಿಸುವ ಪರಿಹಾರ ಕ್ರಮವಾಗಿ ಗುರುತಿಸಲ್ಪಟ್ಟಿದೆ. ಊಟದ ಅಥವಾ ತಿನ್ನುವ ಮೇಜಿನ ಮೇಲೆ ಉಪ್ಪನ್ನು ಇಡುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಕುಟುಂಬದಲ್ಲಿ ಎಂದಿಗೂ ಹಣದ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಇದಕ್ಕೆ ಮನೆ ಮಾತ್ರ ಅಲ್ಲ, ಹೊಟೇಲ್‌ಗಳಲ್ಲೂ ಊಟದ ಟೇಬಲ್ ಮೇಲೆ ಉಪ್ಪನ್ನು ಇಟ್ಟಿರುತ್ತಾರೆ.
ಮನೆಯ ದಕ್ಷಿಣ ದಿಕ್ಕಿನದಲ್ಲಿ ಈ ವಸ್ತು ಇಟ್ರೆ ಹಣ, ನೆಮ್ಮದಿಗೆ ಕೊರತೆ ಇರೋದಿಲ್ಲ
ಯಾಕೋ ಹಣವೇ ಕೈಯಲ್ಲಿ ನಿಲ್ಲುತ್ತಿಲ್ಲ. ಹಣದ ಹರಿವು ತಪ್ಪಿ ಹೋಗಿದೆ ಅನ್ನುವ ಫೀಲ್ ನಿಮ್ಮನ್ನು ಕಾಡಬಹುದು. ಮನೆಯಲ್ಲಿ ನಿರಂತರ ಹಣದ ಹರಿವನ್ನು (Money flow) ಕಾಪಾಡಿಕೊಳ್ಳಲು, ಗಾಜಿನ ಲೋಟದಲ್ಲಿ (Glass Cup) ನೀರು ತುಂಬಿಸಿ ಮತ್ತು ಅದರಲ್ಲಿ ಚಿಟಿಕೆ ಉಪ್ಪನ್ನು ಬೆರೆಸಿ. ಅದರ ನಂತರ ಮನೆಯ ನೈಋತ್ಯ ಮೂಲೆಯಲ್ಲಿ ಇರಿಸಿ. ಗಾಜಿನ ಹಿಂದೆ ಕೆಂಪು ಬಲ್ಬ್ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಗ್ಲಾಸ್‌ನಲ್ಲಿರುವ ನೀರು ಒಣಗಿದಾಗಲೆಲ್ಲಾ ನೀರು ಮತ್ತು ಉಪ್ಪನ್ನು ಪದೇ ಪದೇ ಸ್ವಚ್ಛಗೊಳಿಸಿ. ಇಲ್ಲವೇ ಪ್ರತೀ ದಿನ ಈ ನೀರನ್ನು ಬದಲಿಸಿ. ಹೊಸ ನೀರಿಗೆ ಉಪ್ಪು ಹಾಕಿ ಇದೆ. ಮಕ್ಕಳನ್ನು ದುಷ್ಟ ಕಣ್ಣಿನಿಂದ ದೂರವಿಡಲು ಉಪ್ಪು ಪರಿಹಾರವಾಗಿ ಕೆಲಸ ಮಾಡುತ್ತದೆ. ಒಂದು ಹಿಡಿ ಉಪ್ಪು ಮತ್ತು ಸ್ವಲ್ಪ ಸಾಸಿವೆಯನ್ನು ಒಟ್ಟಿಗೆ ತೆಗೆದುಕೊಂಡು ಅದನ್ನು ಮಗುವಿನ ತಲೆಯ ಮೇಲೆ ಏಳು ಬಾರಿ ನಿವಾಳಿಸಿ ನಂತರ ಅದನ್ನು ವಾಶ್ ಬೇಸಿನ್‌ನಲ್ಲಿ ಸುರಿಯಿರಿ. ಈ ಪರಿಹಾರವು ತಕ್ಷಣದ ಪ್ರಯೋಜನಗಳನ್ನು ತರುತ್ತದೆ. ಮನೆಯ ಪ್ರವೇಶದ್ವಾರದಲ್ಲಿ ಸಮುದ್ರದ ಉಪ್ಪನ್ನು ಹಾಕಿ ಮತ್ತು ಯಾವುದೇ ನಕಾರಾತ್ಮಕ ಶಕ್ತಿಯು ನಿಮ್ಮ ಆವರಣವನ್ನು ಪ್ರವೇಶಿಸುವುದನ್ನು ತಡೆಯಲು ಅದನ್ನು ಡೋರ್‌ಮ್ಯಾಟ್‌ನಿಂದ ಮುಚ್ಚಿ.
ಮನೆಯಲ್ಲಿ ಪಾಸಿಟಿವ್ ವೈಬ್ (Positive Vibes) ತುಂಬಿಸಬೇಕು ಅಂದರೆ ಕರ್ಪೂರ, ಅಗರಬತ್ತಿ ಮತ್ತು ಧೂಪವನ್ನು ಉರಿಸುವುದು ಉತ್ತಮ. ಇದು ಮಂಗಳ ವಾತಾವರಣ ಸೃಷ್ಟಿಸುವ ಜೊತೆಗೆ ಮನೆಯಲ್ಲಿ ಪಾಸಿಟಿವ್ ವೈಬ್ ತುಂಬಿಸುತ್ತದೆ. ಅಗರಬತ್ತಿಗಳನ್ನು ಪ್ರತಿದಿನ ಎರಡು ಬಾರಿ ಮನೆಯ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಬೇಕು. ಇದು ನಕಾರಾತ್ಮಕತೆಯನ್ನು ಕಡಿಮೆ ಮಾಡಲು ಮತ್ತು ಮನೆಯಲ್ಲಿ ಶುಭವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಕರ್ಪೂರದ ನೀರನ್ನು ಮುಖ್ಯದ್ವಾರದಲ್ಲಿ ಸಿಂಪಡಿಸಿದ್ರೆ ಮನೆಯಲ್ಲಿ ಸಂಪತ್ತು, ಸಕಾರಾತ್ಮಕತೆ ಸದಾ ಇರುತ್ತೆ !