ಮನೆಯ ದಕ್ಷಿಣ ದಿಕ್ಕಿನದಲ್ಲಿ ಈ ವಸ್ತು ಇಟ್ರೆ ಹಣ, ನೆಮ್ಮದಿಗೆ ಕೊರತೆ ಇರೋದಿಲ್ಲ
ವಾಸ್ತು ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡೋದರಿಂದ ಮನೆಯಲ್ಲಿ ಸುಖ ಸಮೃದ್ಧಿ ಸದಾ ಇರುತ್ತದೆ. ಹಾಗಿದ್ರೆ ಯಾವ ವಸ್ತುಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು ನೋಡೋಣ.
ವಾಸ್ತು(vaastu) ಪ್ರಕಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವುದು ಅಗತ್ಯ ಎಂದು ವಾಸ್ತುವಿನಲ್ಲಿ ಹೇಳಲಾಗುತ್ತದೆ. ನೀವು ಇದನ್ನು ಮಾಡದಿದ್ದರೆ, ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಬಹುದು. ಜೊತೆಗೆ, ಈ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ದಕ್ಷಿಣ ದಿಕ್ಕು (South direction): ದಕ್ಷಿಣ ದಿಕ್ಕನ್ನು ವಾಸ್ತುವಿನ ಅನುಸಾರ ಶುಭ ಎಂದು ಹೇಳಲಾಗೋದಿಲ್ಲ. ಆದರೆ ಈ ದಿಕ್ಕಿನಲ್ಲಿ ಕೆಲವೊಂದು ವಿಶೇಷ ವಸ್ತುಗಳನ್ನು ಇಡೋದರಿಂದ ಶುಭಫಲ ನಿಮ್ಮದಾಗುತ್ತದೆ. ಇನ್ನೂ ಕೆಲವು ವಸ್ತುಗಳನ್ನು ಇಡೋದರಿಂದ ನಕಾರಾತ್ಮಕತೆ ಹೆಚ್ಚುತ್ತದೆ.
ಪೊರಕೆ(Broomstick): ವಾಸ್ತುವಿನ ಅನುಸಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಪೊರಕೆಯನ್ನು ಇಡೋಕು ತುಂಬಾನೆ ಶುಭ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಯಾವಾಗಲೂ ತುಂಬಿರುತ್ತದೆ, ಜೊತೆಗೆ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ.
ಜೇಡ್ ಪ್ಲ್ಯಾಂಟ್ (Jade plant): ಮನೆಯಲ್ಲಿ ಜೇಡ್ ಪ್ಲ್ಯಾಂಟನ್ನು ದಕ್ಷಿಣ ದಿಕ್ಕಿನಲ್ಲಿಯೇ ಇಡಬೇಕು. ಈ ದಿಕ್ಕು ಧನಲಾಭಕ್ಕೆ ಕಾರಣವಾಗುತ್ತದೆ. ಅಲ್ಲದೇ ಮನೆಯಲ್ಲಿ ಸುಖ ಶಾಂತಿ ಯಾವಾಗಲೂ ಇರುತ್ತದೆ.
ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿ: ಹಾಸಿಗೆಯನ್ನು ದಕ್ಷಿಣ ದಿಕ್ಕಿಗೆ ತಲೆ ಇರುವಂತೆ ಹಾಕಿ, ನೀವು ಕೂಡ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗೋದು ಶುಭ ಎನ್ನಲಾಗುವುದು. ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದ್ರೆ ಚೆನ್ನಾಗಿ ನಿದ್ರೆ ಬರುತ್ತೆ, ಜೊತೆಗೆ ಕೆಟ್ಟಕನಸುಗಳು ಬೀಳೋದಿಲ್ಲ ಎಂದು ನಂಬಲಾಗಿದೆ.
ಫೀನಿಕ್ಸ್ ಪಕ್ಷಿ (Phoenix): ವಾಸ್ತುವಿನ ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಫೀನಿಕ್ಸ್ ಪಕ್ಷಿಯ ಫೋಟೋವನ್ನು ಇಡುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ಸದಾ ಇರುತ್ತದೆ.
ಜ್ಯುವೆಲ್ಲರಿ (Jewellery): ವಾಸ್ತುವಿನ ಅನುಸಾರ ಜ್ಯುವೆಲ್ಲರಿಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡೋದು ಶುಭ ಎನ್ನಲಾಗುವುದು. ಇದರಿಂದ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಉಂಟಾಗೋದಿಲ್ಲ.
ನಕಾರಾತ್ಮಕ ಶಕ್ತಿ ದೂರ ಆಗುತ್ತೆ (negative energy): ಈ ವಸ್ತುಗಳನ್ನೆಲಾ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸೋದು ಶುಭ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ.