Vastu Tips: ಪೂರ್ವ ದಿಕ್ಕಿಗೂ ಮನೆಯ ಮುಖ್ಯಸ್ಥನಿಗೂ ಸಂಬಂಧವಿದೆ ಗೊತ್ತಾ?

ದಿಕ್ಕುಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಯಾವ ದಿಕ್ಕಿನಲ್ಲಿ ಯಾವ ವಸ್ತು ಇರಬೇಕು, ಮನೆಯ ಯಾವ ದಿಕ್ಕು ಹೆಚ್ಚು ಮಹತ್ವದ್ದು ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಸೂರ್ಯ ಹುಟ್ಟುವ ದಿಕ್ಕು ಎಷ್ಟು ವಿಶೇಷ ಎಂಬುದು ನಿಮಗೆ ಗೊತ್ತಾ?
 

How East Direction Is Connected With Your Head Of The Family

ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿದೆ. ಭಾರತೀಯ ಸಂಪ್ರದಾಯದಲ್ಲಿ ಕೂಡು ಕುಟುಂಬ ಅಂದರೆ ಜಾಯಿಂಟ್ ಫೆಮಿಲಿಗೆ ಹೆಚ್ಚಿನ ಮಹತ್ವವಿದೆ. ಎಲ್ಲರೂ ಒಗ್ಗಟ್ಟಾಗಿ ಇದ್ದರೆ, ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬ ದೃಢ ನಂಬಿಕೆ ಇಲ್ಲಿನ ಹಲವರಿಗಿದೆ. ಹಾಗಾಗಿಯೇ ಇಲ್ಲಿ ಅವಿಭಕ್ತ ಕುಟುಂಬಗಳನ್ನು ಇಂದಿಗೂ ಕಾಣಬಹುದು. ಅಂತಹ ಅವಿಭಕ್ತ ಕುಟುಂಬಗಳ ನಿರ್ವಹಣೆ ಮಾಡುವವನೇ ಆ ಕುಟುಂಬದ ಮುಖ್ಯಸ್ಥ. 

ಒಂದು ಕುಟುಂಬ (Family) ವೆಂದರೆ ಅಲ್ಲಿ ಹತ್ತಾರು ಮಂದಿ ಇರುತ್ತಾರೆ. ಹತ್ತಾರು ಮಂದಿ ಇರುವ ಕಡೆ ಅಭಿಪ್ರಾಯಗಳು ಕೂಡ ಭಿನ್ನವಾಗಿರುವುದು ಸಹಜ. ಅಂತಹ ಭಿನ್ನಾಭಿಪ್ರಾಯಗಳನ್ನು, ತಂಟೆ ತಕರಾರುಗಳನ್ನು ಸಂಬಾಳಿಸಿಕೊಂಡು ಕುಟುಂಬದ ಒಗ್ಗಟ್ಟನ್ನು ಭದ್ರಪಡಿಸುವ ಜವಾಬ್ದಾರಿ (Responsibility ) ಮನೆಯ ಯಜಮಾನನದಾಗಿರುತ್ತದೆ. ಒಬ್ಬ ಯಜಮಾನನಾದವನು ಭೇದ ಭಾವ ತೋರದೆ ಮನೆಯ ಎಲ್ಲ ಸದಸ್ಯರನ್ನೂ ಸಮಾನವಾಗಿ ಕಂಡಾಗ ಮಾತ್ರ ಆ ಸಂಸಾರ (Family) ಸುಖಿ ಕುಟುಂಬವಾಗಲು ಸಾಧ್ಯ. ಹಾಗಾಗಿ ಮನೆಯ ಯಜಮಾನನ ಮೇಲೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಮನೆಗೆ ಒಳ್ಳೆಯದಾಗಲೀ ಕೆಟ್ಟದಾಗಲೀ ಅದರ ಕ್ರೆಡಿಟ್ ಯಜಮಾನನಿಗೇ ಸಲ್ಲುತ್ತದೆ. ಒಳ್ಳೆಯದಾದರೆ ಆ ಮನೆಯ ಯಜಮಾನನ ಲಕ್ ಚೆನ್ನಾಗಿತ್ತು ಅನ್ಸತ್ತೆ ಅಂತ ಹೇಳ್ತಾರೆ. ಅದೇ ಕೆಟ್ಟದ್ದಾದರೆ ಯಜಮಾನನ ಬ್ಯಾಡ್ ಲಕ್ ಅಂತಾರೆ. ಹೀಗೆ ಎಲ್ಲವೂ ಯಜಮಾನನ ಲಕ್ ಮೇಲೆ ಮನೆಯ ಸುಖ, ಸಂತೋಷ ನಿರ್ಧಾರವಾಗುತ್ತದೆ. ಹಾಗಾದರೆ ಯಜಮಾನನ ಲಕ್ ಚೆನ್ನಾಗಿರಲು, ಅವನಿಂದ ಮನೆಗೆ ಒಳ್ಳೆಯದಾಗಲು ಏನು ಮಾಡ್ಬೇಕು? ವಾಸ್ತು ಶಾಸ್ತ್ರದಲ್ಲಿ ಇದಕ್ಕೂ ಪರಿಹಾರವಿದೆ..

ಮನೆಯನ್ನು ಕಟ್ಟಿಸುವಾಗ ನಾವು ಆಯಾ ದಿಕ್ಕಿಗೆ ಅನುಗುಣವಾಗಿ ಅಂದರೆ ಕುಬೇರ ಮೂಲೆ, ಅಗ್ನಿ ಮೂಲೆ ಹೀಗೆ ಎಲ್ಲವನ್ನು ಮನದಲ್ಲಿಟ್ಟುಕೊಂಡು ಮನೆ ಕಟ್ಟಿಸ್ತೇವೆ. ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಅಂದರೆ ಸೂರ್ಯ ಉದಯಿಸುವ ದಿಕ್ಕಿಗೆ ಇಡುತ್ತಾರೆ. ಪೂರ್ವ ದಿಕ್ಕನ್ನು ಸೂರ್ಯ ದೇವರ ದಿಕ್ಕು ಎಂದೇ ಹೇಳಲಾಗುತ್ತೆ. ಉಳಿದ ಎಲ್ಲ ದಿಕ್ಕಿಗಿಂತ ಪೂರ್ವ ದಿಕ್ಕಿಗೆ ಹೆಚ್ಚಿನ ಮಹತ್ವವಿದೆ. 

ಪೂರ್ವ ದಿಕ್ಕಿನ ಮಹತ್ವ : ಪೂರ್ವ ದಿಕ್ಕು ಕುಟುಂಬದವರ ಮೇಲೂ ಪರಿಣಾಮ ಬೀರುತ್ತದೆ. ಜೀವನದಲ್ಲಿ ಏನಾದರೂ ಸಾಧಿಸಿ ಮುಂದೆ ಬರಬೇಕು ಎನ್ನುವವರಿಗೆ ಈ ದಿಕ್ಕು ಬಹಳ ಮಹತ್ವದ್ದಾಗಿದೆ. ವಾಸ್ತುಪ್ರಕಾರ ಪೂರ್ವ ದಿಕ್ಕಿಗೆ ಹೆಚ್ಚಿನ ಮಹತ್ವ ಕೊಟ್ಟು ಮನೆ ಕಟ್ಟಿದರೆ ಅದು ಮನೆಯ ಸದಸ್ಯರ ಮೇಲೆ ಮತ್ತು ಮುಖ್ಯವಾಗಿ ಮನೆಯ ಯಜಮಾನನ ಮೇಲೆ ಬಹಳ ಒಳ್ಳೆಯ ಪರಿಣಾಮ ಬೀರುತ್ತೆ.

Astrology Tips: ಸಾವಿನ ನಂತ್ರವೂ ಪುಣ್ಯಬೇಕಂದ್ರೆ ಹೀಗೆ ಮಾಡಿ

ಪೂರ್ವ ಎಂದರೆ ಸೂರ್ಯದೇವನ ದಿಕ್ಕು : ಪೂರ್ವ ದಿಕ್ಕು ಸೂರ್ಯನಿಗೆ ಸಮರ್ಪಿತವಾದ ದಿಕ್ಕಾದ್ದರಿಂದ ಪೂರ್ವ ದಿಕ್ಕಿಗೆ ಹೆಚ್ಚಿನ ಮಹತ್ವ ಇದೆ. ಇದರಿಂದ ಇಂದ್ರ ದೇವ ಮತ್ತು ಸೂರ್ಯ ದೇವನ ಕೃಪೆ ಮನೆಯ ಮೇಲಿರುತ್ತದೆ ಹಾಗೂ ಸಮಾಜದಲ್ಲಿ ಗೌರವ ಹೆಚ್ಚಿ ಮನೆಯಲ್ಲಿ ಖುಷಿ ನೆಲೆಸುತ್ತದೆ.

ಅವಿಭಕ್ತ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸೋಕೆ ಇಷ್ಟ ಪಡೋ ಜನ ಇವ್ರು!

ಪೂರ್ವ ದಿಕ್ಕಿನಲ್ಲಿ ಈ ಬಣ್ಣದ ನೆಲವಿರಲಿ : ಮನೆಯ ಮುಖ್ಯ ಆಕರ್ಷಣೆಯೇ ಬಣ್ಣ. ಹೊರಗೆ ಚೆಂದವೆನಿಸುವ ಬಣ್ಣ ಎಲ್ಲರನ್ನೂ ಆಕರ್ಷಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲು ಮಾತ್ರವಲ್ಲ ಮನೆಯ ನೆಲದ ಬಣ್ಣವೂ ಕೂಡ ಮನೆಯ ಶುಭ ಅಶುಭವನ್ನು ನಿರ್ಧರಿಸುತ್ತದೆ. ನಾವು ಯಾವಾಗಲೂ ಮನೆಯ ಒಳಗಿನ ಗೋಡೆಯ ಬಣ್ಣಕ್ಕೆ ಹೊಂದುವಂತ ನೆಲವನ್ನೋ ಅಥವಾ ಬೆಳಕಿಗೆ ಹೊಂದುವಂತ ಬಣ್ಣದ ಟೈಲ್ಸ್ ಅಥವಾ ಗ್ರಾನೈಟ್ ಗಳನ್ನು ಅಳವಡಿಸುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನ ನೆಲಕ್ಕೆ ಗಾಢ ಹಸಿರು ಬಣ್ಣದ ಕಲ್ಲನ್ನು ಹಾಕಬೇಕು. ಆಗ್ನೇಯ ದಿಕ್ಕನ್ನು ಸೃಷ್ಟಿಕರ್ತ ಬ್ರಹ್ಮನ ದಿಕ್ಕೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ದಿಕ್ಕಿಗೆ ನೇರಳೆ ಬಣ್ಣದ ನೆಲವಿರುವುದು ಅತ್ಯಂತ ಶುಭವಾಗಿದೆ. ಜೀವನದಲ್ಲಿ ಒಮ್ಮೆ ಕಟ್ಟುವ ನಮ್ಮ ಕನಸಿನ ಮನೆ ಚೆನ್ನಾಗಿರಬೇಕು, ಕಟ್ಟಿದ ಮನೆಯಲ್ಲಿ ಕುಟುಂಬ ನೆಮ್ಮದಿ ಸಂತೋಷದಿಂದಿರಬೇಕು ಎಂದಾಗ ವಾಸ್ತು ಶಾಸ್ತ್ರದಲ್ಲಿನ ಇಂತಹ ಕೆಲವು ಟಿಪ್ಸ್ ಗಳನ್ನು ಪಾಲಿಸಬೇಕು.

Latest Videos
Follow Us:
Download App:
  • android
  • ios