Asianet Suvarna News Asianet Suvarna News

ರವಿ ಯೋಗದಲ್ಲಿ ಚಾತುರ್ಮಾಸ ಆರಂಭ ಈ ಮೂರು ರಾಶಿಯವರಿಗೆ ಧನಲಾಭ

 ಚಾತುರ್ಮಾಸದ ಆಚರಣೆಯು ಹಿಂದೂಗಳಿಗೆ ಅತ್ಯಂತ ವಿಶೇಷವಾದದ್ದಾಗಿದೆ. ಈ ಸಮಯದಲ್ಲಿ ರವಿಯೋಗವು ಬಂದಿರುವುದರಿಂದ ಕೆಲವು ರಾಶಿಗಳಿಗೆ ಅತ್ಯಂತ ಲಾಭವನ್ನು ತರಲಿದೆ. ಚಾತುರ್ಮಾಸದ ಈ ಅವಧಿಯು ಮೂರು ರಾಶಿಯವರಿಗೆ ಶುಭಫಲವನ್ನು ನೀಡಲಿದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

In Chaturmasa these zodiac sign will get many benefits
Author
Bangalore, First Published Jul 5, 2022, 5:53 PM IST

ಹಿಂದೂಗಳ ಪವಿತ್ರವಾದ ಆಚರಣೆಗಳಲ್ಲಿ ಚಾತುರ್ಮಾಸದ (Chaturmasa) ಆಚರಣೆಯು ಒಂದಾಗಿದೆ. ಶಾಸ್ತ್ರಗಳಲ್ಲಿ ಚಾತುರ್ಮಾಸಕ್ಕೆ ವಿಶೇಷವಾದ ಮಹತ್ವವಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಈ ಬಾರಿ ಜುಲೈ 10ರಂದು ಚಾತುರ್ಮಾಸ ಆರಂಭವಾಗುತ್ತದೆ. ಈ ದಿನ ಮಹಾವಿಷ್ಣುವು (Lord Vishnu) ಕ್ಷೀರಸಾಗರದಲ್ಲಿ ನಾಲ್ಕು ಮಾಸಗಳ ಕಾಲ ನಿದ್ರಿಸುತ್ತಾನೆ. ಹಾಗಾಗಿ ಈ ಅವಧಿಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ಅಂದರೆ ವಿವಾಹ, ಗೃಹ ಪ್ರವೇಶ, ನಾಮಕರಣ, ಚೌಲ, ಉಪನಯನ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ.

ಈ ಬಾರಿಯ ಚಾತುರ್ಮಾಸದ ಅವಧಿಯಲ್ಲಿ ವಿಶೇಷವಾದ ಗ್ರಹಗಳ (Planet) ಗೋಚಾರವಾಗಲಿದೆ. ಸೂರ್ಯನು ತನ್ನ ಹೆಚ್ಚಿನ ಪ್ರಭಾವವನ್ನು ಬೀರುವ ಸಮಯ ಇದಾಗಿದೆ. ಈ ಯೋಗವನ್ನು ಪ್ರಭಾವಶಾಲಿ ಯೋಗವೆಂದು ಸಹ ಕರೆಯುತ್ತಾರೆ.  ಸೂರ್ಯನ ಈ ಪ್ರಭಾವವು ಅನಿಷ್ಟಗಳನ್ನು ತೊಡೆದು ಹಾಕಿ ಶುಭಫಲವನ್ನು (Good luck) ನೀಡುತ್ತದೆ. ಇದರ ಪರಿಣಾಮ ಎಲ್ಲ ರಾಶಿಗಳ ಮೇಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮೂರು ರಾಶಿಗಳ ಮೇಲೆ ಈ ಗೋಚಾರವು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಶನಿ ಬರೀ ಕೆಟ್ಟದ್ದೇ ಮಾಡೋಲ್ಲ, ಈ ಶುಭ ಸಂಕೇತಗಳನ್ನೂ ಕೊಡುತ್ತಾನೆ!

ಮೇಷ ರಾಶಿ (Aries)
ಚಾತುರ್ಮಾಸವು ಮೇಷ ರಾಶಿಯವರಿಗೆ ಅತ್ಯಂತ ಶುಭಫಲವನ್ನು ನೀಡಲಿದೆ. ಈ ಸಮಯದಲ್ಲಿ ಈ ರಾಶಿಯ ವ್ಯಕ್ತಿಗಳಿಗೆ ಹೊಸ ಉದ್ಯೋಗ (Job) ದೊರಕುವ ಸಾಧ್ಯತೆ ಹೆಚ್ಚಿರುತ್ತದೆ. ಉದ್ಯೋಗದಲ್ಲಿರುವವರಿಗೆ ಉತ್ತಮ ಪದವಿ ಲಭಿಸಲಿದೆ. ಯಶಸ್ಸು (Success) ಗಳಿಸಲು ಅನೇಕ ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ಆದಾಯವು ಹೆಚ್ಚುವ ಯೋಗವಿದೆ. ವ್ಯಾಪಾರ ಮತ್ತು ವ್ಯವಹಾರಗಳ ವ್ಯಾಪ್ತಿ ಹೆಚ್ಚಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವಿದೇಶದ ಜೊತೆಗಿನ ವ್ಯಾಪಾರವಾಗಿದ್ದರೆ, ಆದಾಯವು (Income) ಮತ್ತಷ್ಟು ಹೆಚ್ಚುತ್ತದೆ. ಈ ಸಮಯದಲ್ಲಿ ಮೇಷ ರಾಶಿಯ ವ್ಯಕ್ತಿಗಳು ಹವಳವನ್ನು ಧರಿಸಿದರೆ ಮತ್ತಷ್ಟು ಉತ್ತಮವೆಂದು ಹೇಳಲಾಗುತ್ತದೆ.

ಕನ್ಯಾ ರಾಶಿ (Virgo)
ಚಾತುರ್ಮಾಸ ಆರಂಭವಾಗುತ್ತಿದ್ದಂತೆ ಕನ್ಯಾ ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆಗಳು ಕಾಣಲಿವೆ. ಈ ಅವಧಿಯಲ್ಲಿ ಈ ರಾಶಿಯ ವ್ಯಕ್ತಿಗಳಿಗೆ ಅದೃಷ್ಟವು (Luck) ಸಾಥ್ ನೀಡಲಿದೆ. ಅರ್ಧಕ್ಕೆ ನಿಂತಿದ್ದ ಎಲ್ಲ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಅಷ್ಟೇ ಅಲ್ಲದೆ ಆಕಸ್ಮಿಕ ಧನಲಾಭವಾಗುವ (Money) ಸಾಧ್ಯತೆ ಹೆಚ್ಚಿರುತ್ತದೆ. ಸಾಲ (Loan) ನೀಡಿರುವ ಹಣ ಬರಬೇಕಿದ್ದರೆ ಅದು ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ಈ ಸಮಯದಲ್ಲಿ ಭೂಮಿ ಮತ್ತು ವಾಹನವನ್ನು ಖರೀದಿಸುವ ಬಗ್ಗೆ ಸಹ ಯೋಚಿಸಬಹುದಾಗಿದೆ. ವಾಕ್ಚಾತುರ್ಯಕ್ಕೆ ಸಂಬಂಧಿಸಿದ ಕ್ಷೇತ್ರವಾಗಿದ್ದರೆ ಅಂದರೆ ಮೀಡೀಯಾ (Media), ಫಿಲ್ಮ್ ಫೀಲ್ಡ್, ಮಾರ್ಕೆಟಿಂಗ್ ಇತ್ಯಾದಿ ಆಗಿದ್ದರೆ ಉತ್ತಮ ಲಾಭವಾಗುವ ಯೋಗವಿದೆ. ಈ ರಾಶಿಯ ವ್ಯಕ್ತಿಗಳು ಪಚ್ಚೆ ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಇಷ್ಟಾರ್ಥ ಸಿದ್ಧಿಗೆ ಗ್ರಹಗಳ ಪೂಜೆ ಹೀಗೆ ಮಾಡಿ

ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳಿಗೂ ಸಹ ಚಾತುರ್ಮಾಸ ಅತ್ಯಂತ ಶುಭವನ್ನು ತಂದುಕೊಡಲಿದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಅಂದಕೊಂಡದ್ದನ್ನು ಸಾಧಿಸಿದ ಹೆಮ್ಮೆ ಮತ್ತು ವ್ಯಾಪಾರದಲ್ಲಿ (Business) ಉತ್ತಮ ಲಾಭ ದೊರೆಯಲಿದೆ. ಅಷ್ಟೇ ಅಲ್ಲದೆ ಪ್ರೇಮ ವಿವಾಹ ಮತ್ತು ವೈವಾಹಿಕ ಜೀವನಗಳಲ್ಲಿ ಮಧುರತೆ ಉಂಟಾಗಲಿದೆ. ಮನೆಯಲ್ಲಿ ಮಂಗಳಕರವಾದ ವಾತಾವರಣ ಉಂಟಾಗುತ್ತದೆ. ಜೀವನದಲ್ಲಿ ಸುಖ (Happiness) ಮತ್ತು ನೆಮ್ಮದಿ ನೆಲೆಸಲಿದೆ. ವ್ಯಾಪಾರದಲ್ಲಿ ಉತ್ತಮ ಆದಾಯ ಬರಲಿದೆ ಮತ್ತು ಹೊಸ ಆರ್ಡರ್‌ಗಳು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರಾಶಿಯವರು ಸಹ ಹವಳವನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ. ಇದು ಈ ವ್ಯಕ್ತಿಗಳಿಗೆ ಅದೃಷ್ಟವನ್ನು ಸಹ ತಂದುಕೊಡಲಿದೆ.   

Follow Us:
Download App:
  • android
  • ios