ಮನೆಯಲ್ಲಿ ನೆಮ್ಮದಿ ನೆಲೆಸಿರಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕೆಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಮನೆಯ ನಿರ್ಮಾಣ ಮತ್ತು ಅಲಂಕಾರವಿದ್ದರೆ ಅಲ್ಲಿ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ಮನೆಯಲ್ಲಿ ಅಲಂಕಾರಕ್ಕಾಗಿ ಅಥವಾ ದಿನ ಬಳಕೆಯ ಅಗತ್ಯಕ್ಕಾಗಿ ಗಾಜಿನ ವಸ್ತುಗಳನ್ನು ಉಪಯೋಗಿಸುತ್ತಾರೆ. ಗಾಜಿನ ವಸ್ತುಗಳನ್ನು ಮನೆಯಲ್ಲಿ ಇಡಲು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಕನ್ನಡಿಯನ್ನು ಬಳಸದವರೇ ಇಲ್ಲ. ಅಲಂಕಾರ ಮಾಡಿಕೊಳ್ಳಲು ಮುಖ್ಯವಾಗಿ ಬೇಕಾಗುವ ಕನ್ನಡಿಯನ್ನು ಇಡುವುದಕ್ಕು ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ. ಎಲ್ಲೆಂದರಲ್ಲಿ ಕನ್ನಡಿಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಗಾಜಿನ ಟೇಬಲ್, ಲೋಟ, ಇತರ ಶೋ ವಸ್ತುಗಳು ಸಾಮಾನ್ಯವಾಗಿ ಮನೆಯಲ್ಲಿರುತ್ತವೆ. ಅಂತಹ ಗಾಜಿನ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇದ್ದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಇದನ್ನು ಓದಿ: ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು... 

ವಾಸ್ತು ಶಾಸ್ತ್ರದಲ್ಲಿ ಹೇಳುವ ಪ್ರಕಾರ ಗಾಜಿನಲ್ಲಿ ಅಥವಾ ಕನ್ನಡಿಯಲ್ಲಿ ಒಂದು ರೀತಿಯ ಶಕ್ತಿ ಇರುತ್ತದೆ. ಹಾಗಾಗಿ ಅದನ್ನು ಸರಿಯಲ್ಲದ ದಿಕ್ಕಿನಲ್ಲಿ ಇಡುವುದರಿಂದ ಮತ್ತು ಒಡೆದ ಗಾಜನ್ನು ಇಟ್ಟಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.  ಮನೆಯಲ್ಲಿ ಗಾಜಿನ ವಸ್ತುಗಳನ್ನು, ಕನ್ನಡಿಯನ್ನು ಇಡುವ ಮೊದಲು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿರುವ ಕೆಲವು ನಿಯಮಗಳನ್ನು ಅರಿಯುವುದು ಅತಿ ಅವಶ್ಯಕ. ಹಾಗಾಗಿ ಕನ್ನಡಿಯನ್ನು ಇಡುವ ಮೊದಲು ಅನುಸರಿಸಬೇಕಾದ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ...- ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಡೆದ ಗಾಜನ್ನು ಇಡಬಾರದು. ಒಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಂಡಿರುವುದರಿಂದ  ಮನೆಯಲ್ಲಿ ಸಮಸ್ಯೆಗಳು ಪರಿಹಾರವಾಗದೆ ಉಳಿಯುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಒಡೆದ ಕನ್ನಡಿ ಅಥವಾ ಇತರ ಗಾಜಿನ ವಸ್ತುಗಳನ್ನು ತಕ್ಷಣವೇ ಮನೆಯಿಂದ ಹೊರಹಾಕಬೇಕು. ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

- ಮನೆಯಲ್ಲಿ ಕನ್ನಡಿಯನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಿರುವುದರಿಂದ, ಆ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿಯು ಮನೆಯ ವಾತಾವರಣದಲ್ಲಿ ಹೆಚ್ಚಿರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಕನ್ನಡಿಯನ್ನು ಈ ದಿಕ್ಕಿನಲ್ಲಿಡುವುದು ಶುಭವೆಂದು ಸಹ ಹೇಳಲಾಗುತ್ತದೆ.

ಇದನ್ನು ಓದಿ: ಈ ವರ್ಷ ರಾಹು ಗ್ರಹದ ನಕ್ಷತ್ರ ಪರಿವರ್ತನೆ - 5 ರಾಶಿಯವರಿಗೆ ಸಂಕಷ್ಟ, ಮತ್ತೆ ಕೆಲವರಿಗೆ ಅದೃಷ್ಟ! 

- ಅಸ್ಪಷ್ಟವಾಗಿರುವ ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡುವುದರಿಂದ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಮಂದವಾಗಿ ಅಥವಾ ಸರಿಯಾಗಿ ಕಾಣಿಸದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುವುದರಿಂದ ತೇಜಸ್ಸು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಅಸ್ಪಷ್ಟವಾಗಿ ಕಾಣಿಸುವ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.

- ಮನೆಯಲ್ಲಿ ಚೌಕ ಆಕಾರದಲ್ಲಿರುವ ಕನ್ನಡಿಯನ್ನೇ ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೆ ಮನೆಯ ಲಾಕರ್ ಅಥವಾ ಕಪಾಟಿನ ಎದುರು ಕನ್ನಡಿಯನ್ನು ಹಾಕುವುದರಿಂದ  ಮನೆಯಲ್ಲಿ ಧನವೃದ್ಧಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ  ಹೇಳಲಾಗಿದೆ

- ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕನ್ನಡಿಯನ್ನು ಅಥವಾ ಯಾವುದೆ ಗಾಜಿನ ವಸ್ತುವನ್ನು ಇಡಬಾರದು. ಇದರಿಂದ ಮನೆಯಲ್ಲಿ ಕಲಹ ಉಂಟಾಗುತ್ತದೆ ಮತ್ತು ಗೃಹ ಕ್ಲೇಶಗಳು ಹೆಚ್ಚುತ್ತವೆ.

- ಮನೆಯಲ್ಲಿ ಗೋಡೆಗಳ ಎದುರು-ಬದುರಿಗೆ ಕನ್ನಡಿಯನ್ನು ಹಾಕಬಾರದು. ಇದರಿಂದ ಮನೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಹೆಚ್ಚುತ್ತದೆ. ಎರಡು ಕನ್ನಡಿ ಪರಸ್ಪರ ಎದುರಿಗೆ ಇದ್ದರೆ ಮನೆಯಲ್ಲಿ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತವೆ ಎಂದು ಸಹ ಹೇಳಲಾಗುತ್ತದೆ.

ಇದನ್ನು ಓದಿ: ಮಾರ್ಚ್‌ನಲ್ಲಿ ಜನಿಸಿದವರು ಹೀಗೆ ಇರ್ತಾರಂತೆ ....! 

- ವಾಸ್ತು ಶಾಸ್ತ್ರದ ಅನುಸಾರ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳಬಾರದು. ಅಷ್ಟೇ ಅಲ್ಲದೆ ಮನೆಯಲ್ಲಿ ಕನ್ನಡಿಯನ್ನು ಇಟ್ಟಿರುವ ಗೋಡೆ ತುಂಬಾ ಎತ್ತರ ಮತ್ತು ತುಂಬಾ ಗಿಡ್ಡವಾಗಿಯೂ ಇರಬಾರದೆಂದು ಹೇಳಲಾಗುತ್ತದೆ.