Asianet Suvarna News Asianet Suvarna News

ಈ ವರ್ಷ ರಾಹು ಗ್ರಹದ ನಕ್ಷತ್ರ ಪರಿವರ್ತನೆ - 5 ರಾಶಿಯವರಿಗೆ ಸಂಕಷ್ಟ, ಮತ್ತೆ ಕೆಲವರಿಗೆ ಅದೃಷ್ಟ!

ರಾಹು ಗ್ರಹವು ಇದೇ ವರ್ಷ ಜನವರಿ 27ರಂದು ರೋಹಿಣಿ ನಕ್ಷತ್ರಕ್ಕೆ ಕಾಲಿಟ್ಟಿದೆ. ಛಾಯಾ ಗ್ರಹವಾಗಿರುವ ರಾಹುವು ಎಲ್ಲ ರಾಶಿಗಳ ಮೇಲು ತನ್ನ ಪ್ರಭಾವವನ್ನು ಬೀರಲಿದೆ. ಕೆಲವು ರಾಶಿಯವರಿಗೆ ರಾಹು ಗ್ರಹದ ನಕ್ಷತ್ರ ಪರಿವರ್ತನೆಯಿಂದ ಶುಭವಾದರೆ, ಮತ್ತೆ ಕೆಲವು ರಾಶಿಯವರಿಗೆ  ಅಶುಭ ಪ್ರಭಾವವನ್ನು ಬೀರುವುದರಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ ಎಂಬುದನ್ನು ತಿಳಿಯೋಣ...

Rahu palnet will give bad effects to these 5 Zodiac sign people
Author
Bangalore, First Published Mar 19, 2021, 4:34 PM IST

ರಾಹು ಗ್ರಹವನ್ನು ಛಾಯಾ ಗ್ರಹವೆಂದು ಸಹ ಕರೆಯುತ್ತಾರೆ. ಈ ಗ್ರಹಕ್ಕೆ ತನ್ನದೇ ಆದ ಭೌತಿಕ ಸ್ವರೂಪ ಇಲ್ಲವಾದರು ರಾಹುವಿನ ಸ್ಥಾನ ಪರಿವರ್ತನೆಯು ಮನುಷ್ಯ ಜೀವನದ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಈಗ ರಾಹು ಗ್ರಹವು ರೋಹಿಣಿ ನಕ್ಷತ್ರದಲ್ಲಿದ್ದು, ರಾಹು ಗ್ರಹವು ಇದೇ ವರ್ಷ ಜನವರಿ 27ರಂದು ರೋಹಿಣಿ ನಕ್ಷತ್ರಕ್ಕೆ ಕಾಲಿಟ್ಟಿದೆ.

ಈ ನಕ್ಷತ್ರದ ಅಧಿಪತಿ ಚಂದ್ರದೇವನಾಗಿದ್ದಾನೆ. ಈ ವರ್ಷದ ಕೊನೆಯವರೆಗೂ ರಾಹು ಗ್ರಹವು ಇದೇ ನಕ್ಷತ್ರದಲ್ಲಿ ಸ್ಥಿತವಾಗಿರಲಿದೆ. ರೋಹಿಣಿ ನಕ್ಷತ್ರದಲ್ಲಿರುವ ರಾಹು ಗ್ರಹವು ಪ್ರತ್ಯೇಕ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರಲಿದೆ ಎಂಬುದನ್ನು ತಿಳಿಯೋಣ..

ಮೇಷ ರಾಶಿ
ರಾಹು ಗ್ರಹವು ಈ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಹಾಗಾಗಿ ಈ ರಾಶಿಯವರಿಗೆ ಧನಪ್ರಾಪ್ತಿಯ ಸುಯೋಗವಿದೆ. ಆಸ್ತಿ, ಜಮೀನು ಅಥವಾ ಮನೆಯನ್ನು ಖರೀದಿಸಲು ಈ ಸಮಯವು ಯೋಗ್ಯವಾಗಿದೆ. ಇದರಿಂದ ಲಾಭ ಪಡೆಯುವಲ್ಲಿ ಸಫಲರಾಗಬಹುದಾಗಿದೆ. ಕೌಟುಂಬಿಕ ನೆಮ್ಮದಿಯು ಸಿಗಲಿದೆ.

ಇದನ್ನು ಓದಿ: ಮಾರ್ಚ್‌ನಲ್ಲಿ ಜನಿಸಿದವರು ಹೀಗೆ ಇರ್ತಾರಂತೆ ....! 

ವೃಷಭ ರಾಶಿ
ಈ ರಾಶಿಯವರು ಮಾನಸಿಕ ಖಿನ್ನತೆಯನ್ನು ಅನುಭವಿಸಬೇಕಾಗುತ್ತದೆ. ಈ ರಾಶಿಯವರು ಯಾರನ್ನು ಸಹ ಅತಿಯಾಗಿ ನಂಬುವುದು ಒಳ್ಳೆಯದಲ್ಲ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಮುಂದುವರಿಯುತ್ತವೆ. ಯೋಚಿಸಿ ಹೆಜ್ಜೆಯನ್ನಿಡುವುದು ಉತ್ತಮ.

ಮಿಥುನ ರಾಶಿ
ರಾಹು ಗ್ರಹದ ಪ್ರಭಾವದಿಂದ ಈ ರಾಶಿಯವರಿಗೆ ಖರ್ಚು ಹೆಚ್ಚಲಿದೆ.  ಅಕಸ್ಮಾತ್ ಆಗಿ ಹಣ ಕಳೆದುಕೊಳ್ಳುವ ಸಂಭವವಿದೆ. ಆರ್ಥಿಕ ಸ್ಥಿತಿಯ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಹಣಕ್ಕೆ ಸಂಬಂಧಿಸಿದಂತೆ ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದು ಒಳ್ಳೆಯದು.

Rahu palnet will give bad effects to these 5 Zodiac sign people



ಕರ್ಕಾಟಕ ರಾಶಿ
ರಾಹುವಿನ ಶುಭ ಪ್ರಭಾವದಿಂದ ಈ ರಾಶಿಯವರ ಆದಾಯ ಹೆಚ್ಚಲಿದೆ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭವನ್ನು ಪಡೆಯುವ ಯೋಗವಿದೆ. ವೈವಾಹಿಕ ಜೀವನವು ಅತ್ಯಂತ ಖುಷಿಯನ್ನು ನೀಡಲಿದೆ. ಕರ್ಕಾಟಕ ರಾಶಿಯವರ ಮಕ್ಕಳು ಯಶಸ್ಸನ್ನು ಪಡೆಯುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಒಳಿತಾಗುತ್ತದೆ.

ಇದನ್ನು ಓದಿ: ಮಾನಸಿಕ ಒತ್ತಡ, ಕೋರ್ಟ್ ಕಲಹ ಮುಕ್ತಿಗೆ ಈ ಮಂತ್ರ ಜಪಿಸಿ! 

ಸಿಂಹ ರಾಶಿ
ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಸಂಭವವಿರುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಸಿಗುವುದಿಲ್ಲ. ವ್ಯಾಪಾರ ಕ್ಷೇತ್ರದಲ್ಲಿರುವವರು ಕೊಂಚ ನೆಮ್ಮದಿಯನ್ನು ಕಾಣಬಹುದಾಗಿದೆ. ಖರ್ಚು ಹೆಚ್ಚುವ ಸಂಭವವಿದೆ.

ಕನ್ಯಾ ರಾಶಿ
ಈ ರಾಶಿಯವರು ಕಷ್ಟಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ. ಗೌರವಾದರಗಳು ಕಡಿಮೆಯಾಗುತ್ತವೆ. ತಂದೆಯೊಂದಿಗಿನ ಬಾಂಧವ್ಯ ಹದಗೆಡುವ ಸಂಭವವಿದೆ. ದೂರದ ಪ್ರಯಾಣದಿಂದ ಅಶುಭವಾಗುವ ಸಾಧ್ಯತೆ ಇದೆ.

ತುಲಾ ರಾಶಿ
ರಾಹು ಗ್ರಹವು ಈ ರಾಶಿಯವರ ಮಾರ್ಗದಲ್ಲಿ ತೊಡಕನ್ನು ಉಂಟುಮಾಡುವುದರಿಂದ, ಎಚ್ಚರಿಕೆಯಿಂದ ಮುನ್ನಡೆಯುವುದು ಉತ್ತಮ. ಮಾನಸಿಕ ಕಷ್ಟವು ಎದುರಾಗುವ ಸಾಧ್ಯತೆ ಇದೆ. ಹಣ ಮಾಡಲು ಸುಲಭದ ಮಾರ್ಗವನ್ನು ಹಿಡಿಯುವುದರಿಂದ, ನಷ್ಟ ಸಂಭವಿಸುವ ಸಂಭವವಿದೆ.

ವೃಶ್ಚಿಕ ರಾಶಿ
ಈ ರಾಶಿಯವರು ಸಾಲ ಕೊಡುವುದು ಅಥವಾ ತೆಗೆದುಕೊಳ್ಳುವ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ರಾಹುವಿನ ಅಶುಭ ಪ್ರಭಾವದಿಂದ ದಾಂಪತ್ಯ ಜೀವನದಲ್ಲಿ  ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದವರಿಗೆ ಈ ವರ್ಷ ಅತ್ಯಂತ ಶುಭವಾಗಿದೆ. ಅಷ್ಟೇ ಅಲ್ಲದೆ ಕಾರ್ಯಕ್ಷೇತ್ರದಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ.

ಧನು ರಾಶಿ
ಈ ರಾಶಿಯವರಿಗೆ ರಾಹು ಗ್ರಹದ ಈ ಪ್ರಭಾವವು ಉತ್ತಮವಾಗಿರುತ್ತದೆ. ಅಕಸ್ಮಾತ್ ಖರ್ಚು ಹೆಚ್ಚುವ ಸಂಭವವಿದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ.

ಮಕರ ರಾಶಿ
ಈ ರಾಶಿಯವರು ಕಷ್ಟಗಳನ್ನು ಎದುರಿಸ ಬೇಕಾಗುವ ಸಂಭವವಿದೆ. ಕೌಟುಂಬಿಕ ಜೀವನವು ಸಾಧಾರಣವಾಗಿರುತ್ತದೆ. ಆದಾಯವು ಹೆಚ್ಚುವ ಸಂಭವವಿದೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚುತ್ತದೆ. 

ಇದನ್ನು ಓದಿ: ಈ ಮೂರು ವಸ್ತುಗಳು ಮನೆಯಲ್ಲಿದ್ದರೆ ಹಣಕ್ಕೆ ಕೊರತೆನೇ ಆಗಲ್ವಂತೆ....! 

ಕುಂಭ ರಾಶಿ
ಈ ರಾಶಿಯವರ ಸುಖ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ. ಕೋರ್ಟ್ ಕಚೇರಿಗೆ ಸಂಬಂಧಿಸಿದ ಕೆಲಸಗಳು ಸುಗಮವಾಗಿ ಆಗಲಿವೆ.

ಮೀನ ರಾಶಿ
ಈ ರಾಶಿಯವರ ಸಾಹಸ ಮತ್ತು ಶಕ್ತಿ ವೃದ್ಧಿಸಲಿದೆ. ಶತೃಗಳಿಂದ ಜಯ ಸಿಗಲಿದೆ. ಹೆಚ್ಚೆಚ್ಚು ಪ್ರಯಾಣ ಮಾಡುವ ಸಂಭವವಿದ್ದು, ಅದರಿಂದ ಲಾಭವನ್ನು ಪಡೆಯಬಹುದಾಗಿದೆ.

Follow Us:
Download App:
  • android
  • ios