ಮನೆ ಬಾಡಿಗೆ ಪಡೆಯುವವರು ತಿಳಿದಿರಲಿ ಈ Vastu Tips
ಜನರು ಒಂದಲ್ಲ ಒಂದು ಕಾರಣಕ್ಕೆ ಬಾಡಿಗೆ ಮನೆಗೆ ಶಿಫ್ಟ್ ಆಗ್ತಾರೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗ್ತಿದ್ದಂತೆ ಅನೇಕ ಸಮಸ್ಯೆ ಎದುರಾಗುತ್ತವೆ. ಅದ್ಯಾಕೆ ಎಂಬುದು ನಮಗೆ ತಿಳಿಯೋದಿಲ್ಲ. ಇದಕ್ಕೆ ಬಾಡಿಗೆ ಮನೆ ವಾಸ್ತು ಕೂಡ ಕಾರಣವಾಗಿರುತ್ತದೆ. ಹಾಗಾಗಿ ಮನೆ ಬಾಡಿಗೆ ಪಡೆಯುವ ಮುನ್ನ ಕೆಲವೊಂದನ್ನು ಗಮನಿಸಬೇಕಾಗುತ್ತದೆ.
ಎಲ್ಲರಿಗೂ ಸ್ವಂತ ಮನೆ (Home) ಖರೀದಿಸಲು ಸಾಧ್ಯವಿಲ್ಲ. ಹಾಗೆ ಹೋದಲ್ಲೆಲ್ಲ ಒಂದೊಂದು ಸ್ವಂತ ಮನೆ ಇರಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಜನರು ಉದ್ಯೋಗ, ವ್ಯಾಪಾರ ಅಥವಾ ಇನ್ನಾವುದೇ ಕೆಲಸದ ಕಾರಣಕ್ಕೆ ಬಾಡಿಗೆ (Rent) ಮನೆಯಲ್ಲಿ ವಾಸ ಶುರು ಮಾಡ್ತಾರೆ. ಅನೇಕ ಜನರು ತಮ್ಮ ಇಡೀ ಜೀವನ (Life) ವನ್ನು ಬಾಡಿಗೆ ಮನೆಯಲ್ಲಿ ಕಳೆಯುತ್ತಾರೆ. ಮನೆ ಸ್ವಂತವಾಗಿರಲಿ ಅಥವಾ ಬಾಡಿಗೆಗೆ ಇರಲಿ, ಅದರಲ್ಲಿ ವಾಸ್ತು ದೋಷಗಳಿದ್ದರೆ, ವ್ಯಕ್ತಿಯು ಜೀವನ (Life) ದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬಾಡಿಗೆ ಮನೆಗೆ ಅಡ್ವಾನ್ಸ್ ನೀಡುವ ಮೊದಲು ಆ ಮನೆಯ ವಾಸ್ತುವನ್ನು ಸರಿಯಾಗಿ ಗಮನಿಸಿ.. ಇಂದು ನಾವು ಬಾಡಿಗೆ ಮನೆಗೆ ಹೋಗುವ ಮೊದಲು ವ್ಯಕ್ತಿ ಯಾವೆಲ್ಲ ವಿಷ್ಯವನ್ನು ನೆನಪಿನಲ್ಲಿಡಬೇಕು ಎಂಬುದನ್ನು ಹೇಳ್ತೇವೆ.
ಬಾಡಿಗೆ ಮನೆಗೆ ಹೋಗುವ ಮೊದಲು ಇದನ್ನು ನೋಡಿ :
ಈಶಾನ್ಯ ದಿಕ್ಕಿಗೆ ದೇವರ ಮನೆ : ಮೊದಲನೆಯದಾಗಿ ಮನೆಯಲ್ಲಿ ಪೂಜೆ ಮಾಡುವ ಸ್ಥಳಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಅನೇಕ ಬಾಡಿಗೆ ಮನೆಯಲ್ಲಿ ಮೊದಲೇ ಪೂಜಾ ಸ್ಥಳವಿರುತ್ತದೆ. ನೀವು ಪೂಜೆ ಸ್ಥಳ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನಿಸಿ. ಒಂದ್ವೇಳೆ ಪೂಜಾ ಸ್ಥಳ ಇಲ್ಲವೆಂದ್ರೆ ನೀವು ಬಾಡಿಗೆ ಮನೆಯಲ್ಲಿ ಪೂಜಾ ಸ್ಥಳವನ್ನು ಈಶಾನ್ಯ ದಿಕ್ಕಿನಲ್ಲಿ ಮಾಡಬಹುದು. ಈ ದಿಕ್ಕಿನಲ್ಲಿ ದೇವರ ವಿಗ್ರಹವನ್ನು ಇರಿಸಬಹುದು. ಇಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸುವುದರಿಂದ ನಿಮ್ಮ ಜೀವನದ ದುಃಖಗಳು ದೂರವಾಗುತ್ತವೆ ಮತ್ತು ನೀವು ರೋಗಗಳಿಂದ ದೂರವಿರುತ್ತೀರಿ.
ಈ ರತ್ನಗಳನ್ನು ತಪ್ಪಿಯೂ ಜೊತೆಯಾಗಿ ಧರಿಸಬೇಡಿ!
ಮಲಗಲು ದಿಕ್ಕಿಗೂ ಇದೆ ಮಹತ್ವ : ಬಾಡಿಗೆ ಮನೆಯಾಗಿರಲಿ ಅಥವಾ ಸ್ವಂತ ಮನೆಯಾಗಿರಲಿ, ಮಲಗುವ ದಿಕ್ಕು ಕೂಡ ಮಹತ್ವ ಪಡೆಯುತ್ತದೆ. ಮಲಗುವ ಕೋಣೆಯಲ್ಲಿ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿಗೆ ಮತ್ತು ಪಾದಗಳನ್ನು ಉತ್ತರ ದಿಕ್ಕಿಗೆ ಇರಿಸಿ. ನಿದ್ರೆ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ದಕ್ಷಿಣ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಹಾಗಾಗಿ ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ಕಾಲು ಹಾಕ್ಬೇಡಿ.
ನೈಋತ್ಯ ದಿಕ್ಕಿನಲ್ಲಿರಲಿ ಅನಗತ್ಯ ವಸ್ತು : ಮನೆಯಲ್ಲಿ ಬಳಕೆಯಾಗದ ವಸ್ತುಗಳೇ ಜಾಸ್ತಿ ಇರುತ್ತವೆ. ಅದನ್ನು ಎಲ್ಲಿಡಬೇಕೆಂಬ ಸಮಸ್ಯೆ ಅನೇಕರನ್ನು ಕಾಡುತ್ತದೆ. ಮನೆಯ ನೈಋತ್ಯ ದಿಕ್ಕಿನಲ್ಲಿ ಈ ಅನಗತ್ಯ ವಸ್ತುಗಳನ್ನು ಇಡಿ. ಇದಲ್ಲದೆ, ನಿಮ್ಮ ಮನೆಯಲ್ಲಿ ಯಾವುದೇ ಭಾರವಾದ ವಸ್ತು ಇದ್ದರೆ ಅದನ್ನು ಕೂಡ ನೀವು ನೈಋತ್ಯ ದಿಕ್ಕಿನಲ್ಲಿ ಇಡಬಹುದು.
ಈಶಾನ್ಯ ದಿಕ್ಕನ್ನು ಖಾಲಿ ಬಿಡಿ : ಮನೆಯ ಈಶಾನ್ಯ ಮೂಲೆಯನ್ನು ಯಾವಾಗ್ಲೂ ಖಾಲಿ ಬಿಡಬೇಕು. ಅದನ್ನು ಸದಾ ಅಚ್ಚುಕಟ್ಟಾಗಿ ಇಡಬೇಕು. ಈ ಜಾಗದಲ್ಲಿ ಯಾವುದೇ ಸಾಮಾನುಗಳು ಇರಬಾರದು ಎಂದು ಬಯಸಿದ್ರೆ ನೀವು ಈ ಜಾಗವನ್ನು ಪೂಜಾ ಸ್ಥಳ ಮಾಡುವುದು ಸೂಕ್ತ. ಈ ದಿಕ್ಕನ್ನು ಸಂಪತ್ತಿನ ದೇವರು ಕುಬೇರನ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಖಾಲಿಯಿದ್ದರೆ ಮನೆಯಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ದಿನ ಭವಿಷ್ಯ: ಮೇಷಕ್ಕೆ ನಿರ್ಲಕ್ಷದಿಂದ ಕೈ ತಪ್ಪುವ ಅವಕಾಶ, ಮೀನದ ಅವಿವಾಹಿತರಿಗೆ ಶುಭ ಸುದ್ದಿ
ಅಡುಗೆ ಮನೆ ವಾಯುವ್ಯ ದಿಕ್ಕಿನಲ್ಲಿರಲಿ : ಮನೆಯನ್ನು ಖರೀದಿಸುವಾಗ, ಅಡುಗೆ ಮನೆಯ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಡುಗೆ ಮನೆಯ ವಾಸ್ತು ದೋಷಗಳಿಂದಾಗಿ ನೀವು ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ಆರೋಗ್ಯ ಸಂಬಂಧಿತ ಕಾಯಿಲೆಗಳನ್ನು ಸಹ ಎದುರಿಸಬೇಕಾಗುತ್ತದೆ. ಹಾಗಾಗಿ ವಾಯುವ್ಯ ದಿಕ್ಕಿನಲ್ಲಿ ನೀವು ಅಡುಗೆ ಮನೆ ಮಾಡಬೇಕು. ಬಾಡಿಗೆ ಮನೆ ಖರೀದಿ ವೇಳೆ ನೀವು ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ. ಈ ವಾಸ್ತು ಪ್ರಕಾರ ಮನೆ ನಿರ್ಮಾಣವಾಗಿಲ್ಲ ಅಥವಾ ಅದನ್ನು ಬದಲಿಸಲು ಸಾಧ್ಯವಿಲ್ಲವೆಂದಾದ್ರೆ ನೀವು ಆ ಮನೆಗೆ ಶಿಫ್ಟ್ ಆಗುವ ಆಲೋಚನೆ ಬಿಡುವುದು ಒಳ್ಳೆಯದು.