ನಿಮ್ಮ‌ ಮನೆಯಲ್ಲಿ ಪೂಜಾ ಮಂದಿರ ಇಲ್ಲವೇ? ದೇವರ ಪೂಜೆಗೆ ಹೀಗೆ ಮಾಡಿ

ಒಂದು ವೇಳೆ ನಿಮ್ಮ ಹೊಸ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ಪೂಜಾ ಕೋಣೆಗೆ ಜಾಗವೇ ಇಲ್ಲದಿದ್ದಲ್ಲಿ, ನೀವು ಧಾರ್ಮಿಕ ಸ್ವಭಾವದವರಾಗಿದ್ದಲ್ಲಿ, ಏನು‌ ಮಾಡಬಹುದು? ಹಾಗೊಂದು ವೇಳೆ ಪೂಜಾ ಕಾರ್ನರ್ ಇಲ್ಲದಿದ್ದರೂ ನೀವು ನಿಮಗೆ ಅಗತ್ಯವಾದ ಒಂದು ಕಾರ್ನರ್ ಸೃಷ್ಟಿಸಿಕೊಳ್ಳಬಹುದು.

Do pooja like this if there is no worship room at home

ಸಾಮಾನ್ಯವಾಗಿ ಇತ್ತೀಚಿಗಿನ ಎಲ್ಲ ಹೊಸ ಅಪಾರ್ಟ್‌ಮೆಂಟ್‌ಗಳಲ್ಲೂ ಪೂಜಾ ಕೋಣೆಯೊಂದನ್ನು ಕಟ್ಟಿರುತ್ತಾರೆ. ಎಷ್ಟೇ ಚಿಕ್ಕ, ಒಂದೇ ಕೋಣೆಯ ಫ್ಲ್ಯಾಟ್ ಆಗಿದ್ದರೂ ಅಲ್ಲಿ ಪೂಜೆಗಾಗಿ ಒಂದು ಕಟ್ಟೆಯನ್ನಾದರೂ ನಿರ್ಮಿಸಿರುತ್ತಾರೆ. ಸಾಮಾನ್ಯವಾಗಿ ಇದು ಈಶಾನ್ಯ ದಿಕ್ಕಿನಲ್ಲಿ ಇದು ಇರುವುದು ವಾಡಿಕೆ. ಒಂದು ವೇಳೆ ನಿಮ್ಮ ಹೊಸ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ಪೂಜಾ ಕೋಣೆಗೆ ಜಾಗವೇ ಇಲ್ಲದಿದ್ದಲ್ಲಿ, ನೀವು ಧಾರ್ಮಿಕ ಸ್ವಭಾವದವರಾಗಿದ್ದಲ್ಲಿ, ಏನು‌ ಮಾಡಬಹುದು? ಪ್ರತಿನಿತ್ಯ ಮುಂಜಾನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿಯೇ ಆಹಾರ ಸೇವಿಸುವವರು, ಕಚೇರಿಗೆ ಹೋಗುವವರು ಆಗಿದ್ದರಂತೂ ಪೂಜಾ ರೂಮ್ ಅಗತ್ಯವಿದ್ದೇ ಇರುತ್ತದೆ. ಹಾಗೊಂದು ವೇಳೆ ಪೂಜಾ ಕಾರ್ನರ್ ಇಲ್ಲದಿದ್ದರೂ ನೀವು ನಿಮಗೆ ಅಗತ್ಯವಾದ ಒಂದು ಕಾರ್ನರ್ ಸೃಷ್ಟಿಸಿಕೊಳ್ಳಬಹುದು.

- ಮನೆಯಲ್ಲಿ ಪೂಜಾ ಕಾರ್ನರ್ ಸೃಷ್ಟಿಸಿಕೊಳ್ಳಲು ಉತ್ತಮ ಈಶಾನ್ಯ ದಿಕ್ಕು. ಅಲ್ಲದೆ ದೇವರನ್ನು ಪ್ರಾರ್ಥಿಸುವಾಗ ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕನ್ನು ಎದುರಿಸಬೇಕು. ಇದು ನಿಮಗೆ ಸಾಕಷ್ಟು ಸಕಾರಾತ್ಮಕತೆ ಮತ್ತು ಸರಿಯಾದ ರೀತಿಯ ಕಂಪನಗಳನ್ನು ನೀಡುತ್ತದೆ.

- ಈಶಾನ್ಯ ದಿಕ್ಕು ಲಭ್ಯವಿಲ್ಲದಿದ್ದರೆ ಮನೆಯ ಪೂರ್ವ ಅಥವಾ ಉತ್ತರ ದಿಕ್ಕನ್ನು ಸಹ ಪರಿಗಣಿಸಬಹುದು.

ಮಹಾಭಾರತದಲ್ಲಿ ಶ್ರೀಕೃಷ್ಣನ ಎಂಬತ್ತು ಮಕ್ಕಳೆಲ್ಲಾ ಏನಾದರು?

- ಪೂಜಾ ಕಾರ್ನರ್ ಎಂದಿಗೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಒಂದು ವೇಳೆ ಮನೆಯಲ್ಲಿ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕುಗಳು ಭರ್ತಿಯಾಗಿದ್ದರೆ, ಪಶ್ಚಿಮವನ್ನು ಆರಿಸಿಕೊಳ್ಳಿ. ಆದರೆ ದಕ್ಷಿಣ ದಿಕ್ಕನ್ನು ಪರಿಗಣಿಸಬೇಡಿ.

- ಮಲಗುವ ಕೋಣೆಯಲ್ಲಿ, ಮೆಟ್ಟಿಲಿನ ಕೆಳಗೆ ಅಥವಾ ಸ್ನಾನ ಗೃಹದ ಗೋಡೆಯ ಪಕ್ಕದಲ್ಲಿ ಪೂಜೆ ಅಥವಾ ಧ್ಯಾನ ಮಾಡಬಾರದು. ಅಂತಹ ಸ್ಥಾನಗಳು ಸಕಾರಾತ್ಮಕತೆಗೆ ಅಡ್ಡಿಯಾಗಬಹುದು.

- ವಾಸ್ತು ಶಾಸ್ತ್ರದ ಪ್ರಕಾರ, ಪೂಜೆಯ ಜಾಗ ಮನೆಯ ನೆಲಮಹಡಿಯಲ್ಲಿದ್ದರೆ ಉತ್ತಮ.

- ಪೂಜೆ ಮಾಡುವಲ್ಲಿ ದೇವರ ಫೋಟೋ ಅಥವಾ ಮೂರ್ತಿಯು ನೀವು ನಡೆದಾಡುವ ನೆಲಕ್ಕಿಂತ ಕನಿಷ್ಠ ಆರು ಇಂಚು ಎತ್ತರದಲ್ಲಿ ಇರಬೇಕು. ಇಟ್ಟಿಗೆಯ ಕಟ್ಟೆ ಉತ್ತಮ. ಇಲ್ಲವಾದರೆ ಮರದ ಮಣೆ ಇಟ್ಟು, ಅದರ ಮೇಲೆ ದೇವರ ಫೋಟೋ ಅಥವಾ ಮೂರ್ತಿಗಳನ್ನು ಇಡಬೇಕು.

- ಪೂಜಾ ಕಾರ್ನರ್ ಅಡುಗೆ ಮನೆ ಅಥವಾ ವಾಸದ ಕೋಣೆಯಲ್ಲಿ ಇರಿಸಲು ಬಯಸಿದರೆ ಅದು ಈಶಾನ್ಯ ದಿಕ್ಕಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

- ಪೂಜಾ ಮಂದಿರವನ್ನು ಮಲಗುವ ಕೋಣೆಯಲ್ಲಿ ಮಾಡುವುದು ಒಳ್ಳೆಯದಲ್ಲವಾದರೂ ಯಾವುದೇ ಕಾರಣಗಳಿಂದಾಗಿ ನೀವು ಹಾಗೆ ಮಾಡುತ್ತಿದ್ದರೆ ಅದು ಮತ್ತೆ ಈಶಾನ್ಯ ದಿಕ್ಕಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

 

Do pooja like this if there is no worship room at home

- ನೀವು ವಿಗ್ರಹಗಳನ್ನು ಎಲ್ಲಿ ಇರಿಸಿದರೂ ಕುಳಿತುಕೊಳ್ಳುವಾಗ ಅಥವಾ ಮಲಗುವಾಗ ನಿಮ್ಮ ಕಾಲುಗಳು ಆ ದಿಕ್ಕಿನಲ್ಲಿ ಎದುರಾಗದಂತೆ ನೋಡಿಕೊಳ್ಳಿ.

- ದೇವರ ಪೂಜೆ ಸ್ಥಳವನ್ನು ಮತ್ತೆ ಮತ್ತೆ ಬದಲಾಯಿಸುತ್ತಿರಬೇಡಿ. ಪೂಜಾ ಕಾರ್ನರ್ ಬಣ್ಣವು ತಿಳಿ ಹಳದಿ ಅಥವಾ ಬಿಳಿ ಬಣ್ಣದಲ್ಲಿದ್ದರೆ ಉತ್ತಮ. ಗಾಢ ಬಣ್ಣವನ್ನು ಪೂಜೆ ಕೋಣೆಯಲ್ಲಿ ಬಳಸುವುದನ್ನು ತಪ್ಪಿಸಿ.

ಅಳಿಯ ಅಭಿಮನ್ಯುವನ್ನು ಶ್ರೀಕೃಷ್ಣ ಯಾಕೆ ಉಳಿಸಿಕೊಳ್ಳಲಿಲ್ಲ?

- ಪೂಜಾ ಕಟ್ಟೆಯಲ್ಲಿ ಎಂದಿಗೂ ಗುಂಪು - ಗುಂಪು ದೇವರ ವಿಗ್ರಹವನ್ನು ಅಥವಾ ಫೋಟೋವನ್ನು ಇಡಬೇಡಿ. ನೀವು ಮುಖ್ಯವಾಗಿ ಪೂಜಿಸುವ ದೇವತೆ ಅಥವಾ ದೇವರ ಚಿತ್ರವನ್ನು ಅಥವಾ ಪ್ರತಿಮೆಯನ್ನು ಪೀಠದ ಮೇಲೆ ಅಥವಾ ಎತ್ತರವಾದ ಸ್ಥಳದಲ್ಲಿಡಿ. ಇತರೆ ದೇವರುಗಳನ್ನು, ದೇವತೆಗಳನ್ನು ಮುಖ್ಯ ದೇವರ ಅಕ್ಕ ಪಕ್ಕದಲ್ಲಿ ಇಡಬಹುದು. ಮೂರ್ತಿಯನ್ನು ಸ್ಥಾಪಿಸುವಾಗ ಅದು 12 ಅಂಗುಲಗಳಿಗಿಂತ ಹೆಚ್ಚಿರಬಾರದು, ಆದರೆ ದೇವರ ಫೋಟೋ ಎಷ್ಟು ದೊಡ್ಡದು ಬೇಕಾದರೂ ಇರಬಹುದು. ಪೂಜಾ ಸ್ಥಳದಲ್ಲಿ ಶಂಖ, ಗೋಮತಿ ಚಕ್ರ ಮತ್ತು ಒಂದು ಬಿಂದಿಗೆಯಲ್ಲಿ ನೀರನ್ನು ಹಾಕಿ ಇಡಬೇಕು.

- ಮುಂಜಾನೆ ಮತ್ತು ಸಂಜೆ ಸಮಯದ ಪೂಜೆಯಲ್ಲಿ ಒಂದೇ ರೀತಿಯ ನಿಯಮಗಳನ್ನು ಪಾಲಿಸಬೇಕು. ಸಂಜೆ ಪೂಜೆಯಲ್ಲಿ ದೇವರಿಗೆ ದೀಪವನ್ನು ಬೆಳಗಿ, ನಂತರ ದೀಪವನ್ನು ಪೂಜಾ ಸ್ಥಳದ ಮಧ್ಯದಲ್ಲಿಡಿ. ಪೂಜೆ ಮೊದಲು ದೇವರ ಕೀರ್ತನೆಯನ್ನು, ಭಜನೆಯನ್ನು ಅಥವಾ ಮಂತ್ರವನ್ನು ಉಚ್ಚರಿಸಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಿಕೊಳ್ಳುತ್ತದೆ.

- ಯಾವಾಗಲೂ ಪೂಜಾ ಮೂಲೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ. ಯಾವುದೇ ಪೂಜೆ ಮಾಡುವಾಗ ನಿಮಗೆ ಗುರು ಮಂತ್ರ ತಿಳಿಯದಿದ್ದರೆ, ಗಾಯತ್ರಿ ಮಂತ್ರವನ್ನು ಪಠಿಸಿ.

- ಪೂಜಾ ಸ್ಥಳದಲ್ಲಿ ಕೊಳೆಯನ್ನು ಇಟ್ಟುಕೊಳ್ಳಬೇಡಿ ಮತ್ತು ಪ್ರತಿದಿನ ಅಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಪೂಜಾ ಸ್ಥಳದಲ್ಲಿ ಪೂರ್ವಜರ ಚಿತ್ರಗಳನ್ನು ಇಡಬೇಡಿ. ಪೂಜಾ ಸ್ಥಳದಲ್ಲಿ ಧೂಪದ ಕಡ್ಡಿಗಳಿಂದ ಬೆಂಕಿಯನ್ನು ಬೇರಾವುದೋ ಕೆಲಸಕ್ಕೆ ಬೆಳಗಿಸಬೇಡಿ.

ಜನ್ಮರಾಶಿಗೆ ತಕ್ಕಂತೆ ನಿಮ್ಮ ಪರ್ಸನಾಲಿಟಿಯ ಎರಡು ಮುಖ ನಿಮಗೆ ಗೊತ್ತೇ?
 

 

Latest Videos
Follow Us:
Download App:
  • android
  • ios