ಜನ್ಮರಾಶಿಗೆ ತಕ್ಕಂತೆ ನಿಮ್ಮ ಪರ್ಸನಾಲಿಟಿಯ ಎರಡು ಮುಖ ನಿಮಗೆ ಗೊತ್ತೇ?
ನಿಮ್ಮ ಜನ್ಮರಾಶಿಯ ಪರ್ಸನಾಲಿಟಿಗೆ ಎರಡು ಮುಖಗಳಿರುತ್ತವೆ ಎಂಬುದು ನಿಮಗೆ ಗೊತ್ತೇ? ನಿಮಗೇ ಗೊತ್ತಿಲ್ಲದಂತೆ ನಿಮ್ಮ ವ್ಯಕ್ತಿತ್ವದಲ್ಲಿ ಅವು ಹೆಣೆದುಕೊಂಡು ಇರಬಹುದು. ಬನ್ನಿ ನಿಮ್ಮ ಜನ್ಮರಾಶಿಗೆ ಅವುಗಳೇನು ಎಂಬುದನ್ನು ತಿಳಿಯೋಣ.
ಪ್ರತಿಯೊಬ್ಬರ ವ್ಯಕ್ತಿತ್ವಕ್ಕೂ ಎರಡು ಮುಖಗಳಿರುತ್ತವೆ. ಇದರಲ್ಲಿ ಒಂದು ಧನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಿದರೆ, ಇನ್ನೊಂದು ಋಣಾತ್ಮಕವಾಗಿರಬಹುದು. ಸಾಮಾನ್ಯವಾಗಿ, ವ್ಯಕ್ತಿತ್ವದ ಈ ಎರಡು ಬದಿಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ, ಇದರಿಂದ ವ್ಯಕ್ತಿಯ ನಿಜವಾದ ಸ್ವಭಾವವನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಸಂದರ್ಭಗಳು ನಮ್ಮಲ್ಲಿ ಸಂಪೂರ್ಣವಾಗಿ ವಿಭಿನ್ನ ಮತ್ತು ಅನಿರೀಕ್ಷಿತ ಪ್ರತಿಕ್ರಿಯೆ ಹುಟ್ಟಿಸಿದಾಗ ಇವುಗಳನ್ನು ಕಾಣಬಹುದು. ನಿಮ್ಮ ಜನ್ಮರಾಶಿಯ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವದ ಎರಡು ಮುಖಗಳು ಇಲ್ಲಿವೆ.
ಮೇಷ
ಇವರು ಜೀವನಕ್ಕೆ ಪೂರಕವಾದ ಅತ್ಯಂತ ಉತ್ಸಾಹಭರಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹೆಚ್ಚು ಪ್ರೇರಣೆ ಮತ್ತು ತಮ್ಮ ಗುರಿಗಳನ್ನು ತಲುಪಲು ದೃಢಸಂಕಲ್ಪ ಹೊಂದಿರುತ್ತಾರೆ. ತಮ್ಮ ಸುತ್ತಮುತ್ತಲಿನ ಬಗ್ಗೆ ಉತ್ಸುಕರಾಗಿರುತ್ತಾರೆ ಮತ್ತು ಸವಾಲುಗಳನ್ನು ತೆಗೆದುಕೊಳ್ಳುವಲ್ಲಿ ತುಂಬಾ ಆಸಕ್ತರು. ಆದಾಗ್ಯೂ, ಇವರಲ್ಲಿ ಇರುವ ತುಂಬಾ ನೆಗೆಟಿವ್ ಗುಣ ಎಂದರೆ ಸಣ್ಣ ಸಣ್ಣ ವಿಷಯಗಳಿಗೆ ಕೋಪಗೊಳ್ಳುತ್ತಾರೆ. ಅನೇಕ ಬಾರಿ ತಾವು ಪ್ರತಿಪಾದಿಸುವ ವಿಷಯಗಳಲ್ಲಿ ಆಕ್ರಮಣಕಾರಿಯಾಗಿರುತ್ತಾರೆ.
ವೃಷಭ
ಇವರು ಸ್ಥಿರತೆ ಮತ್ತು ಬದ್ಧತೆಗಳನ್ನು ನಂಬುತ್ತಾರೆ. ಜೀವನದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಯಾರಿಗೇ ಆದರೂ ನೆರವಾಗಬೇಕು ಎಂದು ಇವರು ಬಯಸುತ್ತಾರೆ. ತಮ್ಮ ಗುರಿಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ತುಂಬಾ ಶ್ರಮಿಸುತ್ತಾರೆ ಮತ್ತು ಇದು ಇವರ ವ್ಯಕ್ತಿತ್ವದ ಒಂದು ಭಾಗವಾಗಿದೆ. ಆದಾಗ್ಯೂ, ಅವರು ತಮ್ಮದೇ ಆದ ರೀತಿಯಲ್ಲಿ ಅತ್ಯಂತ ಹಠಮಾರಿಗಳಾಗಿರಬಹುದು. ಸಾಕಷ್ಟು ನಖರಾ ಮಾಡುವವರಾಗಿರಬಹುದು.
ಮಿಥುನ
ಇವರು ಉಭಯ ವ್ಯಕ್ತಿತ್ವ ಹೊಂದಿರುವವರು. ಇವರ ವ್ಯಕ್ತಿತ್ವದ ಒಂದು ಮುಖವು ಸಾಮಾಜಿಕವಾಗಿ ಸ್ನೇಹಶೀಲವಾಗಿದೆ. ಸುತ್ತಲೂ ಇರುವವರೊಂದಿಗೆ ತೀವ್ರವಾಗಿ ಬೆರೆಯಲು ಇಷ್ಟಪಡುತ್ತಾರೆ. ಎಂದಿಗೂ ಸಾಹಸಗಳಿಂದ ಹಿಂದೆ ಸರಿಯುವುದಿಲ್ಲ. ಆದರೆ ಇವರ ಇನ್ನೊಂದು ಮುಖ ಎಂದರೆ ಅಜಾಗರೂಕತೆ ಮತ್ತು ತುಂಬಾ ಹಠಾತ್ ಪ್ರತಿಕ್ರಿಯೆಯ ಪ್ರವೃತ್ತಿಯಾಗಿದೆ. ಇವರನ್ನು ನೋಯಿಸಿದಾಗ ಅಥವಾ ದುಃಖಿತರಾದಾಗ ಮಾತ್ರ ಇದು ಬೆಳಕಿಗೆ ಬರುತ್ತದೆ.
ಅಳಿಯ ಅಭಿಮನ್ಯುವನ್ನು ಶ್ರೀಕೃಷ್ಣ ಯಾಕೆ ಉಳಿಸಿಕೊಳ್ಳಲಿಲ್ಲ?
ಕಟಕ
ಇವರು ತುಂಬಾ ನಿಷ್ಠಾವಂತ ಮತ್ತು ಸೂಕ್ಷ್ಮ ಜನರು, ಇತರರೊಂದಿಗೆ ಬೆರೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅಗತ್ಯವಿರುವ ಸಮಯದಲ್ಲಿ ಇತರರಿಗೆ ಬೆಂಬಲ ನೀಡಲು ಇವರು ಎಂದಿಗೂ ಹಿಂಜರಿಯುವುದಿಲ್ಲ, ಯಾರಿಗಾದರೂ ಪ್ರೀತಿ ಮತ್ತು ಕಾಳಜಿ ಅಗತ್ಯವಿದ್ದಾಗ ನೆರವಾಗುತ್ತಾರೆ. ಇತರರು ಇವರ ಲಾಭವನ್ನು ಸುಲಭವಾಗಿ ಪಡೆಯಬಹುದು. ಇವರ ಇನ್ನೊಂದು ಮುಖವೆಂದರೆ ಇವರು ಸುಲಭವಾಗಿ ಖಿನ್ನತೆಗೆ ಒಳಗಾಗಬಹುದು, ಇದರಿಂದಾಗಿ ಅವರ ಒಳ್ಳೆಯ ಕೆಲಸದ ಪರಿಣಾಮ ಹಿನ್ನೆಲೆಗೆ ಸರಿಯುತ್ತದೆ.
ಸಿಂಹ
ಇವರು ತಮ್ಮ ಜನಪ್ರಿಯತೆಯೊಂದಿಗೆ ಬರುವ ಗಮನ ಮತ್ತು ಖ್ಯಾತಿಯನ್ನು ಪ್ರೀತಿಸುತ್ತಾರೆ. ಇವರು ತುಂಬಾ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಗಳಿಂದ ಕೂಡಿದವರು. ತುಂಬಾ ಉದಾರ ವ್ಯಕ್ತಿಗಳು ಎಂದೂ ಹೇಳಬಹುದು. ಆದಾಗ್ಯೂ, ಇವರು ಕೆಲವೊಮ್ಮೆ ತುಂಬಾ ಸ್ವಾರ್ಥಿಗಳಾಗಬಹುದು ಮತ್ತು ಮೇಲ್ನೋಟಕ್ಕೆ ಇದು ಕಾಣಿಸಲಾರದು.
ಕನ್ಯಾ
ಇವರು ತಮ್ಮ ಸುತ್ತಲಿನ ಪ್ರತಿಯೊಂದು ವಿಷಯದ ಬಗ್ಗೆ ವಿಮರ್ಶಾತ್ಮಕ ನಿಲುವು ಹೊಂದಿರುವವರು ಮತ್ತು ಗಮನಿಸುವವರು. ಇದು ಅವರಿಗೆ ಉನ್ನತ ಸ್ಥಾನವನ್ನು ತಲುಪಲು ಸಹಾಯ ಮಾಡುತ್ತದೆ. ಇವರು ತಮ್ಮ ತೀಕ್ಷ್ಣ ಮನಸ್ಸಿನಿಂದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಇವರ ವ್ಯಕ್ತಿತ್ವದ ಇನ್ನೊಂದು ಭಾಗ ಎಂದರೆ ಕೆಲಸವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದು ಅವರ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವರು ಜೀವನದ ಹರಿವಿನೊಂದಿಗೆ ಸಾಗಲು ವಿಫಲರಾಗುತ್ತಾರೆ.
ತುಲಾ
ಇವರು ಶಾಂತಿಯುತ ಜೀವನವನ್ನು ನಡೆಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಪ್ರತಿಯೊಂದು ಸನ್ನಿವೇಶದಲ್ಲಿಯೂ ಇದಕ್ಕೆ ಸಮರ್ಥನೆ ಸಿಗುತ್ತದೆ. ಪರಿಹರಿಸಬೇಕಾದ ಸಮಸ್ಯೆಗಳು ಸ್ಪಷ್ಟವಾದಾಗ ಶಾಂತಿಯ ಕಡೆಗೆ ಅವರ ಒಲವು ಯಾವಾಗಲೂ ಇರುತ್ತದೆ. ಇವರು ಎಷ್ಟೇ ಸಮರ್ಥನೆ ಹೊಂದಿದ್ದರೂ, ಹೋರಾಟ ಮಾಡಿ ದಕ್ಕಿಸಿಕೊಳ್ಳಲು ಹಿಂಜರಿಯುತ್ತಾರೆ. ಕೆಲವೊಮ್ಮೆ ಇದು ಹೇಡಿತನಕ್ಕೆ ಸಮಾನವಾಗಿರುತ್ತದೆ.
ಮಹಾಭಾರತದಲ್ಲಿ ಶ್ರೀಕೃಷ್ಣನ ಎಂಬತ್ತು ಮಕ್ಕಳೆಲ್ಲಾ ಏನಾದರು?
ವೃಶ್ಚಿಕ
ಇವರು ಪ್ರಾಮಾಣಿಕ, ನಿಷ್ಠಾವಂತ ಮತ್ತು ಸಹಾನುಭೂತಿಯುಳ್ಳವರು. ಯಾವಾಗಲೂ ಪರಿಸರವನ್ನು ಹಗುರವಾಗಿ ಮತ್ತು ಹರ್ಷಚಿತ್ತದಿಂದ ಇರಿಸುತ್ತಾರೆ. ಅವರು ತಮ್ಮ ಪ್ರೀತಿಪಾತ್ರರನ್ನು ಗಾಢ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸ್ವತಂತ್ರ ಜೀವನಶೈಲಿಯನ್ನು ನಂಬುತ್ತಾರೆ. ಆದಾಗ್ಯೂ, ಅವರು ದ್ರೋಹ ಅಥವಾ ನೋವನ್ನು ಅನುಭವಿಸಿದಾಗ ಅತ್ಯಂತ ಪ್ರತೀಕಾರ ಮತ್ತು ಕಟು ಸ್ವಭಾವದಿಂದ ಹೊಡೆದಾಡಬಹುದು. ಕಟುವಾಗಿಬಿಟ್ಟರೆ ಇವರನ್ನು ಯಾರೂ ಎದುರಿಸಲು ಸಾಧ್ಯವಿಲ್ಲ!
ಧನು
ಇವರು ನಿಜವಾಗಿಯೂ ಅಲೆಮಾರಿ ಸ್ವಭಾವದವರು. ಜೀವನವಿಡೀ ಪ್ರಯಾಣ ಮತ್ತು ಸಾಹಸಕ್ಕಾಗಿ ಹಾತೊರೆಯುತ್ತಾರೆ. ಇವರು ಹೊಸ ಜನರನ್ನು ಭೇಟಿ ಮಾಡಲು ಮತ್ತು ಹೊಸ ಅನುಭವಗಳನ್ನು ಹೊಂದಲು ಇಷ್ಟಪಡುತ್ತಾರೆ. ಇದು ಅವರಿಗೆ ಪ್ರಪಂಚದ ಬಗ್ಗೆ ಸಂಪೂರ್ಣ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಇವರ ಇನ್ನೊಂದು ಮುಖವೆಂದರೆ ಕಾರ್ಯದಲ್ಲಿ ಭರವಸೆ ಮತ್ತು ಬದ್ಧತೆ ಖಚಿತಪಡಿಸುವಲ್ಲಿ ಕೊರತೆಯನ್ನು ಹೊಂದಿರುತ್ತಾರೆ. ಇವರು ಕೆಲಸ ಪೂರೈಸುತ್ತಾರೆ ಎಂದು ನಂಬಲಾಗದು.
ಮಕರ
ಇವರು ತಮ್ಮ ಮಹತ್ವಾಕಾಂಕ್ಷೆಗಳ ಮೇಲೆ ತಮ್ಮ ಮನಸ್ಸನ್ನು ಇಟ್ಟುಕೊಂಡಿರುತ್ತಾರೆ. ತಮ್ಮ ವೃತ್ತಿಪರ ಜೀವನದ ಉತ್ತುಂಗವನ್ನು ತಲುಪಲು ಅಗತ್ಯವಿರುವ ಎಲ್ಲಾ ಕಠಿಣ ಪರಿಶ್ರಮಗಳನ್ನು ಮಾಡಲು ಸಿದ್ಧರಾಗಿರುತ್ತಾರೆ. ಇವರು ಮಹಾನ್ ನಾಯಕರು ಎಂದು ಕೂಡ ಹೇಳಬಹುದು. ಆದರೆ, ಅವರಲ್ಲಿ ಸ್ವರ್ಥ ಕೂಡ ಇರುತ್ತದೆ. ಇವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವಲ್ಲಿ ಹಿಂದೆ ಬೀಳುತ್ತಾರೆ.
ಕುಂಭ
ಇವರು ತಮ್ಮದೇ ಆದ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸುತ್ತಾರೆ. ಸುತ್ತಾಡಲು ಬಹಳ ಆಸಕ್ತಿದಾಯಕ ಜನರು. ಇವರು ಎಲ್ಲದರಲ್ಲಿಯೂ ಉತ್ತೇಜನಕಾರಿಯಾದ ಹೊಸದನ್ನು ನಿರೀಕ್ಷಿಸುತ್ತಾರೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಇವರ ಇನ್ನೊಂದು ಮುಖವೆಂದರೆ ಸಾಕಷ್ಟು ಅಪ್ರಾಯೋಗಿಕತೆ. ಇವರ ಕೆಲವು ಪ್ರಯೋಗ- ಕನಸುಗಳು ವಿಚಿತ್ರವಾಗಿರುತ್ತವೆ. ಕೆಲವೊಮ್ಮೆ ತೊಂದರೆಗೀಡುಮಾಡಬಹುದು ಅಥವಾ ಕಿರಿಕಿರಿ ಉಂಟುಮಾಡಬಹುದು.
ಮೀನ
ಇವರು ಇತರರ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ. ಒಳ್ಳೆಯವರು, ಸೂಕ್ಷ್ಮ ಜನರು. ಇತರರು ಏನು ಹೇಳುತ್ತಾರೆ ಎಂಬುದನ್ನು ಬಹಳ ಗಮನದಲ್ಲಿಟ್ಟುಕೊಳ್ಳುತ್ತಾರೆ. ಇತರರು ಇಷ್ಟಪಡುವ ಸಾಂತ್ವನಕಾರಿ ಗುಣವನ್ನು ಹೊಂದಿರುತ್ತಾರೆ. ಆದಾಗ್ಯೂ, ಇವರು ವಾಸ್ತವವನ್ನು ಗ್ರಹಿಸಲು ವಿಫಲರಾಗುತ್ತಾರೆ ಮತ್ತು ಸಂಘರ್ಷಗಳನ್ನು ತಪ್ಪಿಸಲು, ಅಹಿತಕರ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮದೇ ಒಂದು ಗೂಡಿನಂಥ ಪ್ರತ್ಯೇಕ ವಾಸ್ತವದಲ್ಲಿ ಬದುಕಲು ಬಯಸುತ್ತಾರೆ.
ಯಾವ ಬೆರಳಿಗೆ ಉಂಗುರ ಧರಿಸೋದು ಉತ್ತಮ?