ನಿಮ್ಮ ಮನೆಯ ಈ ದಿಕ್ಕಿನಲ್ಲಿ ಕಾಗೆ ಕುಳಿತು ಕಿರುಚಿದರೆ, ಹುಷಾರಾಗಿರಿ!
ಕಾಗೆ ಶನಿಯ ವಾಹನ. ಹಾಗೆಯೇ ಇದು ಯಮನ ಸಂದೇಶವಾಹಕ ಕೂಡ ಹೌದು. ಎಂದೂ ನಿಮ್ಮ ಮನೆಯ ಮೇಲೆ ಕುಳಿತು ಕೂಗುತ್ತಿರುವ ಕಾಗೆಯನ್ನು ನಿರ್ಲಕ್ಷಿಸಬೇಡಿ.
ನಾವು ಪ್ರತಿದಿನ ಕಾಗೆಯನ್ನು ನೋಡಿಯೇ ನೋಡುತ್ತೇವೆ. ಒಂದಾದರೂ ಕಾಗೆಯನ್ನು ನೋಡದ ದಿನ ಭಾರತೀಯರಾದ ನಮಗೆ ಇರಲಿಕ್ಕಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಕಾಗೆ ಪ್ರಮುಖ ಪಾತ್ರ ವಹಿಸುತ್ತದೆ. ಹೊಳೆಯುವ ಗರಿಗಳು, ಚೂಪಾದ ಕೊಕ್ಕು ಮತ್ತು ಕರ್ಕಶವಾದ ಧ್ವನಿಯೊಂದಿಗೆ, ಈ ಕಪ್ಪು ಹಕ್ಕಿ ನಮ್ಮ ಜೀವನದ ಅನಿವಾರ್ಯ ಭಾಗವಾಗಿದೆ. ಇದು ಭಾರತದ ಅತ್ಯಂತ ಸಾಮಾನ್ಯ ಪಕ್ಷಿಗಳಲ್ಲಿ ಒಂದು. ಕಾಗೆಗಳನ್ನು ಯಮನ ಸಂದೇಶವಾಹಕರೆಂದು ಪರಿಗಣಿಸಲಾಗುತ್ತದೆ. ಮುಂದೆ ಏನಾಗಲಿದೆ ಎಂಬ ಬಗ್ಗೆ ಕಾಗೆಗೆ ಮೊದಲೇ ಮಾಹಿತಿ ಇರುತ್ತದೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಸಾಂಪ್ರದಾಯಿಕ ಜನರು ಕಾಗೆಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ನಿರ್ಲಕ್ಷಿಸುವುದಿಲ್ಲ. ಕಾಗೆಗೆ ಸಂಬಂಧಿಸಿದ ಉತ್ತಮ ಅತವಾ ದುಷ್ಟ ಶಕುನಗಳೇನು ಎಂಬುದನ್ನು ಇಲ್ಲಿ ನೀವು ತಿಳಿಯಬಹುದು.
ಕಾಗೆಗೆ ಸಂಬಂಧಿಸಿದ ಶಕುನಗಳು ಹೀಗಿರುತ್ತವೆ:
- ಕಾಗೆಯು ನಿಮ್ಮ ಬಾಲ್ಕನಿಯಲ್ಲಿ ಕುಳಿತು ಜೋರಾಗಿ ಶಬ್ದ ಮಾಡಿದರೆ, ಅತಿಥಿಗಳು ನಿಮ್ಮ ಮನೆಗೆ ಆಗಮಿಸುವ ನಿರೀಕ್ಷೆಯಿದೆ ಎಂದರ್ಥ.
- ಸಗುಣ ಶಾಸ್ತ್ರದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಕಾಗೆಯು ಮನೆಯ ಉತ್ತರ ದಿಕ್ಕಿನಲ್ಲಿ ಕೂಗಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಪೂರ್ವ ದಿಕ್ಕಿಗೆ ಕಾಗೆ ಕೂಗಿದರೆ ಅದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
- ನೀವು ಪ್ರವಾಸ/ಪ್ರಯಾಣಕ್ಕೆ ಹೊರಡುತ್ತಿರುವಾಗ ಇದ್ದಕ್ಕಿದ್ದಂತೆ ನಿಮ್ಮ ಕಿಟಕಿ ಅಥವಾ ಬಾಲ್ಕನಿಯಲ್ಲಿ ಕಾಗೆ ಬಂದು ಕಾಗೆ ಕೂಗಿದರೆ, ನಿಮಗೆ ಉತ್ತಮ ಪ್ರವಾಸವಿದೆ ಎಂದರ್ಥ.
- ನಿಮ್ಮ ಬಾಲ್ಕನಿಯಲ್ಲಿ ಕಾಗೆಗಳ ಗುಂಪನ್ನು ಮತ್ತು ಅವು ಕೂಗುತ್ತಿರುವುದನ್ನು ನೀವು ನೋಡಿದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಏನಾದರೂ ಅಹಿತಕರ ಘಟನೆ ಸಂಭವಿಸಲಿದೆ ಎಂದು ಈ ಪಕ್ಷಿಗಳು ಎಚ್ಚರಿಸುತ್ತವೆ. ಇದರರ್ಥ ನಿಮ್ಮ ಕುಟುಂಬ ತೊಂದರೆಗೆ ಸಿಲುಕಬಹುದು ಅಥವಾ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.
- ಕಾಗೆಯು ದಕ್ಷಿಣ ದಿಕ್ಕಿನಲ್ಲಿ ಕುಳಿತು ಶಬ್ದ ಮಾಡಿದರೆ ಅದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಪೂರ್ವಜರು ನಿಮ್ಮ ಬಗ್ಗೆ ಸಂತೋಷವಾಗಿಲ್ಲ ಮತ್ತು ನೀವು ಪಿತೃ ದೋಷವನ್ನು ಹೊಂದಿರಬಹುದು.
- ಕಾಗೆ ನೀರು ಕುಡಿಯುವುದನ್ನು ನೋಡುವುದು ಒಳ್ಳೆಯದು. ಯಾರಾದರೂ ನಿಮಗೆ ಅಂದು ಹಣ ಪಾವತಿ ಮಾಡಬಹುದು. ಧನಲಾಭ ಇದೆ.
- ಯಾವುದಾದರೂ ಕೆಲಸಕ್ಕೆ ಹೋಗುವಾಗ ಕಾಗೆ ನೀರು ಕುಡಿಯುವುದನ್ನು ಕಂಡರೆ ಆ ಕೆಲಸದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ.
- ಕಾಗೆಯು ರೊಟ್ಟಿಯ ತುಂಡನ್ನು ಹೊತ್ತುಕೊಂಡು ಹಾರಿಹೋಗುವುದನ್ನು ನೀವು ನೋಡಿದರೆ, ನಿಮ್ಮ ಬಹುನಿರೀಕ್ಷಿತ ಮಹಾನ್ ಆಸೆ ಈಡೇರುತ್ತದೆ ಎಂಬುದಕ್ಕೆ ಇದು ಉತ್ತಮ ಸಂಕೇತವಾಗಿದೆ.
ಮನೇಲಿ ಹನುಮಂತನ ಫೋಟೋ ಇಡೋದಾದ್ರೆ ಈ ವಿಷಯ ಮರೆಯಲೇ ಬಾರ್ದು!
ಶನಿಯೊಂದಿಗಿನ ಸಂಪರ್ಕ
ಜಾತಕದಲ್ಲಿ ಶನಿಯು ಬಲವಾಗಿದ್ದಾಗ, ದೀರ್ಘಾವಧಿಯ ಮೌಲ್ಯದ ಕೆಲಸವನ್ನು ಪೂರ್ಣಗೊಳಿಸಲು ಮತ್ತು ಅತ್ಯಂತ ಕಷ್ಟಕರವಾದ ಕೆಲಸವನ್ನು ಮಾಡಲು ಸಹ ಸಿದ್ಧರಾಗಿರಬೇಕು. ಕಾಗೆಗೆ ಆಹಾರವನ್ನು ನೀಡುವುದರಿಂದ ಶನಿಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದ್ದರಿಂದ ಶನಿ ದೋಷದಿಂದ ಬಳಲುತ್ತಿರುವವರು ಇದನ್ನು ಮಾಡಲು ಶಿಫಾರಸು ಮಾಡುತ್ತಾರೆ.
ಜ್ಯೋತಿಷ್ಯದಲ್ಲಿ, ವಾರದ ವಿವಿಧ ದಿನಗಳಲ್ಲಿ ವಿವಿಧ ಆಹಾರವನ್ನು ಕಾಗೆಗಳಿಗೆ ನೀಡುವುದು ವಿಭಿನ್ನ ಗ್ರಹಗಳನ್ನು ತೃಪ್ತಿಪಡಿಸುತ್ತದೆ ಎಂದು ಹೇಳಲಾಗುತ್ತದೆ. ವಾರದ ಪ್ರತಿ ದಿನವೂ ಒಂದೊಂದು ಗ್ರಹದೊಂದಿಗೆ ಸಂಬಂಧಿಸಿದೆ. ಆದ್ದರಿಂದ ಶನಿಯು ಶನಿವಾರವನ್ನು ಆಳುತ್ತಾನೆ ಎಂದು ನಂಬಲಾಗಿದೆ. ಇದು ನಮ್ಮ ಆತ್ಮದಲ್ಲಿ ಶನಿಯ ಕಾರ್ಯವನ್ನು ಬಲಪಡಿಸುತ್ತದೆ. ಅಂದು ಎಳ್ಳು ಸೇರಿಸಿದ ಅನ್ನವನ್ನು ಕಾಗೆಗೆ ನೀಡಬಹುದು. ಪಿತೃಕಾರ್ಯ ಅಥವಾ ಶ್ರಾದ್ಧ ಮಾಡುವಾಗ ಕಾಗೆಗಳಿಗೆ ಪಿಂಡವನ್ನು ಇಡುತ್ತಾರೆ. ಪಿತೃಗಳೇ ಕಾಗೆಯ ರೂಪದಲ್ಲಿ ಬಂದು ಅದನ್ನು ಸೇವಿಸುತ್ತಾರೆ ಎಂಬ ನಂಬಿಕೆ.
ರಾಹು ಜೊತೆಗಿನ ಒಡನಾಟ
ರಾಹು ಮಹಾ ದಶಾ ಸಮಯದಲ್ಲಿ ಕಾಗೆಗಳಿಗೆ ಆಹಾರವನ್ನು ನೀಡುವುದು ರಾಹುವಿನ ಪ್ರಕ್ಷುಬ್ಧ ಶಕ್ತಿಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ನಿಮ್ಮ ಜಾತಕದಲ್ಲಿ ರಾಹುವು ಕೋಪಿಷ್ಟನಾಗಿದ್ದರೆ ನೀವು ಕಾಗೆಗಳಿಗೆ ಆಹಾರ ನೀಡುವುದು ಒಳಿತು.
ಸುಖ, ನೆಮ್ಮದಿ ಜೊತೆಗೆ ಸುಂದರ ಮನೆ ಸರ್ವನಾಶ ಆಗೋಕೆ ಇವಿದ್ದರೆ ಸಾಕು!