ಹಸುವಿನ ಸಗಣಿ ಎಂಬ ಪವಾಡ; ಆರ್ಥಿಕ ಸಮಸ್ಯೆ ಹೋಗಿಸುವ Cow Dung

ಹಸುವಿನ ಸಗಣಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದರ ಉಪಯೋಗಗಳು ಹಲವು. ಗ್ರಾಮೀಣ ಭಾಗಗಳಲ್ಲಂತೂ ದೈನಂದಿನ ಜನಜೀವನದ ಭಾಗವೇ ಆಗಿವೆ ಹಸು, ಅದರ ಹಾಲು ಮೂತ್ರ ಹಾಗೂ ಸಗಣಿ. ಈ ಸಗಣಿಗೆ ವಾಸ್ತುವಿನಲ್ಲಿ ಹಾಗೂ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. 

Cow dung significance in astrology and vastu skr

ಹಿಂದೂ ಧರ್ಮದಲ್ಲಿ, ಹಸುವನ್ನು ದೇವತೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಹಸುವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತಾರೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಹಸು ಕಾಮಧೇನು. ಅದರ ಶಕ್ತಿ, ಹಾಲು, ಗೋಮೂತ್ರ, ಸಗಣಿ ಎಲ್ಲವೂ ಮನುಷ್ಯನಿಗೆ ಲಾಭ ಮಾಡಿಕೊಡುತ್ತದೆ. ಸಗಣಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಭಾವಿಸಲಾಗುತ್ತದೆ. ಮನೆಮನೆಗಳ ಮುಂದೆ ಸಗಣಿಯಿಂದ ಬಳಿದು ರಂಗೋಲಿ ಹಾಕಲಾಗುತ್ತದೆ. ಸಗಣಿಯನ್ನು ಬೆರಣಿ ತಟ್ಟಿ ಒಲೆಗಾಗಿ ಬಳಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಸಗಣಿಯಿಂದ ಮೂರ್ತಿಗಳನ್ನು ಮಾಡಿ ಪೂಜಿಸಲಾಗುತ್ತದೆ. ಆಯುರ್ವೇದದಲ್ಲಿ ಹಸುವಿನ ಸಗಣಿ ಔಷಧಿಗೂ ಬಳಸುತ್ತಾರೆ.

ಏಕೆಂದರೆ ಹಸುವಿನ ಸಗಣಿ ತುಂಬಾ ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ನಂಬಲಾಗಿದೆ. ಇಷ್ಟೇ ಅಲ್ಲ, ಗೋವಿನ ಸಗಣಿಯ ಮಹತ್ವವೇನು ಎಂಬುದನ್ನು ತಿಳಿಸುತ್ತೇವೆ.

ಹಸುವಿನ ಸಗಣಿ ಧಾರ್ಮಿಕ ಮಹತ್ವ(religious significance of Cow dung)
ಹಿಂದೂ ಧರ್ಮದಲ್ಲಿ ಹಸುವಿನ ಸಗಣಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಧನ ಲಕ್ಷ್ಮಿ ಹಸುವಿನ ಸಗಣಿಯಲ್ಲಿ ನೆಲೆಸಿದ್ದಾಳೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಇದು ತಲೆತಲಾಂತರದಿಂದ ಬಂದ ಧಾರ್ಮಿಕ ನಂಬಿಕೆ. ಹಸುವಿನ ಸಗಣಿ ಧನಾತ್ಮಕ ಶಕ್ತಿಯನ್ನು ಹೊಂದಿದೆ. ಅದಕ್ಕಾಗಿಯೇ ಇದನ್ನು ಪೂಜೆಯ ಸಮಯದಲ್ಲಿಯೂ ಬಳಸಲಾಗುತ್ತದೆ. ನೀವು ಯಾವುದೇ ಕೆಲಸದಲ್ಲಿ ಹಸುವಿನ ಸಗಣಿ ಬಳಸಿದರೆ, ಅದರ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ದೀಪಾವಳಿಯ ಎರಡನೇ ದಿನದಂದು ಬರುವ ಪರೇವಾದಲ್ಲಿ ಗೋವರ್ಧನ ಪೂಜೆಯನ್ನು ನಡೆಸಲಾಗುತ್ತದೆ. ಈ ಪೂಜೆಯಲ್ಲಿ ಗೋವಿನ ಸಗಣಿಯಿಂದ ಗೋವರ್ಧನಗಳನ್ನು ಮಾಡಿ ಪೂಜಿಸಲಾಗುತ್ತದೆ.
ಅಷ್ಟೇ ಅಲ್ಲ, ಗೋಮಯವನ್ನು ಹಚ್ಚಿದ ಸ್ಥಳವು ಶುದ್ಧವಾಗುತ್ತದೆ ಮತ್ತು ಅಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಹುದು.

ತಾಯಿ ಸರಸ್ವತಿಯ ನಕ್ಷತ್ರವೇ ಮೂಲಾ, ಮತ್ತೇಕೆ ಈ ಬಗ್ಗೆ ಭಯ, ಗೊಂದಲ?

ಹಸುವಿನ ಸಗಣಿಯಿಂದ ಮನೆಗೆ ಲೇಪನದ ಪ್ರಾಮುಖ್ಯತೆ
ಪ್ರಾಚೀನ ಕಾಲದಲ್ಲಿ, ಹಸುವಿನ ಸಗಣಿಯಿಂದ ಮನೆಯ ಗೋಡೆಯ ಲೇಪನ ಮಾಡಲಾಗುತ್ತಿತ್ತು. ಇದು ಬಹಳ ಮಂಗಳಕರವೆಂದು ಪರಿಗಣಿಸಲಾಗಿತ್ತು. ಇಂದಿಗೂ ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಲಕ್ಷ್ಮಿ ದೇವಿ(Goddess Lakshmi)ಯು ಹಸುವಿನ ಸಗಣಿಯಲ್ಲಿ ನೆಲೆಸಿದ್ದಾಳೆ. ಅದಕ್ಕಾಗಿಯೇ ಮಹಿಳೆಯರು ಮನೆಯ ಮುಖ್ಯ ದ್ವಾರದಲ್ಲಿ ಗೋವಿನ ಸಗಣಿಯಿಂದ ಕಲೆ ಹಾಕುತ್ತಾರೆ ಅಥವಾ ಇಡೀ ಗೋಡೆಯನ್ನು ದನದ ಸಗಣಿಯಿಂದ ಲೇಪಿಸುತ್ತಾರೆ.
ಇಂದಿಗೂ ಅನೇಕ ಮನೆಗಳಲ್ಲಿ ಹಸುವಿನ ಸಗಣಿಯಿಂದ ಗೋಡೆಯ ಮೇಲೆ ಚೌಕಾಕಾರ ಮಾಡಿ ಪೂಜಿಸುತ್ತಾರೆ. ಅದೇ ಸಮಯದಲ್ಲಿ, ಹಳ್ಳಿಗಳಲ್ಲಿ ಗೋಡೆಗಳು, ಛಾವಣಿ ಮತ್ತು ಭೂಮಿಯನ್ನು ಸಹ ಹಸುವಿನ ಸಗಣಿಯಿಂದ ಲೇಪಿಸಲಾಗುತ್ತದೆ.
ನಗರಗಳಲ್ಲಿ, ಅನೇಕ ಜನರು ತಮ್ಮ ಮನೆಯ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಸ್ವಲ್ಪ ಹಸುವಿನ ಸಗಣಿ ಹಾಕಿ ಅದರ ಮೇಲೆ ಮಂಗಳಕರ ಸಂಕೇತ ಅಂಟಿಸುತ್ತಾರೆ, ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಬೆರಣಿಯಿಂದ ಹವನದ ಪ್ರಯೋಜನಗಳು
ಮನೆಯಲ್ಲಿ ಹಣದ ಕೊರತೆ ಇದೆ ಅಥವಾ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂದಾದರೆ ಒಣಗಿಸಿದ ಹಸುವಿನ ಸಗಣಿ ಉಂಡೆಗಳನ್ನು ಸುಡುವ ಮೂಲಕ, ನೀವು ಸಮಸ್ಯೆಗೆ ಪರಿಹಾರವನ್ನು ಕಾಣಬಹುದು.
ಹಸುವಿನ ಬೆರಣಿಯಿಂದ ಹವನ ಮಾಡುವ ಮೂಲಕ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಭಗವಾನ್ ಶ್ರೀ ವಿಷ್ಣುವಿನ ಆಶೀರ್ವಾದವೂ ಸಿಗುತ್ತದೆ.
ಬೆರಣಿಯಿಂದ ಹವನ ಮಾಡುವುದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ ಮತ್ತು ನಕಾರಾತ್ಮಕತೆ ನಾಶವಾಗುತ್ತದೆ.

Lucky zodiacs 2023: ಹೊಸ ವರ್ಷದ ಅತ್ಯಂತ ಅದೃಷ್ಟವಂತ ರಾಶಿಗಳಿವು!

ಹಸುವಿನ ಸಗಣಿ ವಾಸ್ತು(Vastu)
ವಾಸ್ತು ಪ್ರಕಾರ ಶುಕ್ರವಾರದಂದು ಹಸುವಿನ ಸಗಣಿ ಮನೆಗೆ ತಂದರೆ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಪೂಜೆ ಮಾಡಿದ ನಂತರ, ಹಸುವಿನ ಬೆರಣಿ ಸುಡಿ. ಇದರಿಂದ ರೋಗಿಯ ಆರೋಗ್ಯಕ್ಕೆ ಅನುಕೂಲವಾಗುತ್ತದೆ.
ವಾಸ್ತು ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಗೋಡೆ ಅಥವಾ ನೆಲಕ್ಕೆ ಗೋವಿನ ಸಗಣಿ ಬಳಿದರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.

Latest Videos
Follow Us:
Download App:
  • android
  • ios