Vastu Tips: ಶೀಘ್ರ ಮದುವೆ, ಗ್ರಹದೋಷ ನಿವಾರಣೆ ಮಾಡುತ್ತೆ ಅಶೋಕ ಗಿಡ
ವಾಸ್ತು ನಮ್ಮ ಜೀವನದಲ್ಲಿ ಬಹಳ ಮುಖ್ಯ. ರೋಗದಿಂದ ಹಿಡಿದು ಮನೆಯ ಕಲಹದವರೆಗೆ ಅನೇಕ ಸಮಸ್ಯೆಗೆ ವಾಸ್ತು ದೋಷ ಕಾರಣವಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ತಲೆಕಡೆಸಿಕೊಳ್ಳಬೇಕಾಗಿಲ್ಲ. ಮನೆಯಲ್ಲಿ ಅಶೋಕ ಗಿಡವಿದ್ರೆ ಎಲ್ಲದಕ್ಕೂ ಪರಿಹಾರ ಪಡೆಯಬಹುದು.
ಹಿಂದೂ ಧರ್ಮದಲ್ಲಿ ಗಿಡ – ಮರಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅಶ್ವತ್ಥ, ಮಾವಿನ ಮರ ಸೇರಿದಂತೆ ಅಶೋಕ ಗಿಡಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಅಶೋಕ ಗಿಡದ ಎಲೆಗಳನ್ನು ಮಂಗಳಕರವೆಂದು ಭಾವಿಸಲಾಗಿದೆ. ಹಾಗಾಗಿಯೇ ಅಶೋಕ ಎಲೆಗಳನ್ನು ಬಹುತೇಕ ಎಲ್ಲ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅಶೋಕ ಗಿಡದ ಎಲೆಗಳನ್ನು ಧರ್ಮದಲ್ಲಿ ಮಾತ್ರವಲ್ಲದೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲೂ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಮನೆ (House) ಯ ಅಂಗಳದಲ್ಲಿ ಅಶೋಕ (Ashoka) ಮರವನ್ನು ನೆಟ್ಟರೆ ಶುಭ ಸೂಚಕವೆಂದು ವಾಸ್ತು (Vastu) ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ (Astrology) ದಲ್ಲಿ ಕೂಡ ಅಶೋಕ ಗಿಡ ಹಾಗೂ ಅದ್ರ ಎಲೆಯ ಮಹತ್ವದ ಪ್ರಯೋಜನ ನೀಡುತ್ತದೆ ಎಂದು ಉಲ್ಲೇಖಿಸಲಾಗಿದೆ. ನಾವಿಂದು ಅಶೋಕ ಗಿಡ ಹಾಗೂ ಅದ್ರ ಎಲೆಯ ಪ್ರಯೋಜನಗಳನ್ನು ನಿಮಗೆ ಹೇಳ್ತೆವೆ.
ವಾಸ್ತು ದೋಷ ನಿವಾರಣೆಗೆ ಎಲೆ (Leaf) ಯ ತೋರಣ : ಮನೆಯ ಮುಖ್ಯ ದ್ವಾರಕ್ಕೆ ನೀವು ಅಶೋಕ ಎಲೆಗಳ ತೋರಣವನ್ನು ತಯಾರಿಸಿ ಹಾಕೋದ್ರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ನಕಾರಾತ್ಮಕ (Negative) ಶಕ್ತಿ ಮನೆಯನ್ನು ಪ್ರವೇಶಿಸುವುದಿಲ್ಲ. ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಲು ಇದು ಸಹಕಾರಿ.
ದೇವರಿಗೆ ಅಶೋಕ ಎಲೆ ಅರ್ಪಿಸಿ : ನೀವು ಪ್ರತಿ ದಿನ ಯಾವುದೇ ದೇವರನ್ನು ಪೂಜೆ ಮಾಡಿ. ನೀವು ನಂಬಿದ ದೇವರಿಗೆ ಅಶೋಕ ಎಲೆಯನ್ನು ಅರ್ಪಿಸಿ. ಅಶೋಕ ಎಲೆಗಳು ಶುದ್ಧತೆ ಮತ್ತು ಪಾವಿತ್ರ್ಯದ ಸಂಕೇತವಾಗಿದೆ. ನೀವು ದೇವರಿಗೆ ಅಶೋಕ ಎಲೆಗಳನ್ನು ಅರ್ಪಿಸುವುದ್ರಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ.
New Year 2023: ಹೊಸ ವರ್ಷ ಮೇಷ ರಾಶಿಗೆ ಕೊಂಚ ಸಿಹಿ, ಕೊಂಚ ಕಹಿ
ದಂಪತಿ ಮಧ್ಯೆ ಹೆಚ್ಚಾಗುತ್ತೆ ಪ್ರೀತಿ : ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಅಶೋಕ ಎಲೆಗಳು ಉತ್ತಮ ಪರಿಹಾರವಾಗಿವೆ. ಪತಿ-ಪತ್ನಿಯರ ನಡುವೆ ಆಗಾಗ ಜಗಳವಾಗ್ತಿದ್ದರೆ ಅಥವಾ ಪ್ರೀತಿಯ ಕೊರತೆಯಿದ್ದರೆ ನೀವು ಅಶೋಕ ಎಲೆಯ ಉಪಾಯವನ್ನು ಮಾಡಬಹುದು. ಮಲಗುವ ಹಾಸಿಗೆಯ ಕೆಳಗೆ 7 ಅಶೋಕ ಎಲೆಗಳನ್ನು ಇಡಬೇಕು. ಇದು ಪತಿ ಪತ್ನಿ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ. ಮನೆಯ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇಬ್ಬರ ಮಧ್ಯೆ ಹೊಂದಾಣಿಕೆ ತರುವ ಕೆಲಸವನ್ನು ಮಾಡುತ್ತದೆ.
ಶೀಘ್ರ ಮದುವೆಗೆ ಈ ಉಪಾಯ ಮಾಡಿ : ಕಂಕಣ ಭಾಗ್ಯ ಕೂಡಿ ಬರ್ತಿಲ್ಲ, ವಿವಾಹಕ್ಕೆ ಸದಾ ಒಂದಿಲ್ಲೊಂದು ಅಡ್ಡಿಯಾಗ್ತಿದೆ ಎನ್ನುವವರು ಅಶೋಕ ಎಲೆಗಳ ಉಪಾಯವನ್ನು ಮಾಡಬಹುದು. 7 ಅಶೋಕ ಎಲೆಗಳನ್ನು ನೀರಿನಲ್ಲಿ ನೆನೆಸಿಡಬೇಕು. ಒಂದು ತಿಂಗಳ ನಂತರ, ಅಶೋಕ ಎಲೆಗಳನ್ನು ನೆನೆಸಿಟ್ಟ ನೀರನ್ನು ಹರಿಯುವ ನದಿಯಲ್ಲಿ ಬಿಡಬೇಕು. ಒಂದ್ವೇಳೆ ನದಿಯಲ್ಲಿ ಬಿಡಲು ಸಾಧ್ಯವಿಲ್ಲ ಎನ್ನುವವರು ನೀರನ್ನು ಅಶ್ವತ್ಥ ಗಿಡಕ್ಕೆ ಹಾಕಬೇಕು. ಅಶ್ವತ್ಥ ಗಿಡದ ಬೇರಿಗೆ ಈ ನೀರು ತಾಗಬೇಕು. ಇದ್ರಿಂದ ನಿಮಗೆ ಶೀಘ್ರವೇ ಮದುವೆ ಭಾಗ್ಯ ಕೂಡಿ ಬರಲಿದೆ.
Astrology Tips: ಹನುಮಾನ್ ಚಾಲೀಸಾ ಪಠಣ ವೇಳೆ ಈ ವಿಷ್ಯ ನೆನಪಿರಲಿ
ರೋಗಕಾರಕ ಗ್ರಹ ದೋಷ ನಿವಾರಣೆಗೆ ಹೀಗೆ ಮಾಡಿ : ಅಶೋಕ ವೃಕ್ಷದ ಎಲೆಗಳನ್ನು ಕಿತ್ತು ಒಣಗಿಸಿ ಪುಡಿ ಮಾಡಬೇಕು. ನಂತ್ರ ಆ ಪುಡಿಯನ್ನು ಸ್ನಾನದ ನೀರಿಗೆ ಹಾಕಿ ಪ್ರತಿದಿನ ಆ ನೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಮಾಡಿದ್ರೆ ರೋಗಕಾರಕ ಗ್ರಹ ದೋಷ ನಿವಾರಣೆಯಾಗುತ್ತದೆ. ರೋಗಗಳು ಇದ್ರಿಂದ ಗುಣವಾಗುತ್ತದೆ. ಬೇಗ ಆರೋಗ್ಯದಲ್ಲಿ ವೃದ್ಧಿ ಕಾಣಬಹುದು.
ಮನೆಯಲ್ಲಿ ಸದಾ ಸಂತೋಷ ಇರಬೇಕೆಂದ್ರೆ ಹೀಗೆ ಮಾಡಿ : ಅಶೋಕ ಗಿಡದ ಎಲೆಗಳನ್ನು ಕಿತ್ತು ಪೂಜೆ ಮಾಡುವ ಸ್ಥಳದಲ್ಲಿ ಇಡಬೇಕು. ಈ ಎಲೆಗಳಿಗೆ ಕುಂಕುಮ ಹಚ್ಚಿ ದೇವರ ಮನೆಯಲ್ಲಿ ಇಟ್ಟರೆ ದೇವರು ಪ್ರಸನ್ನನಾಗುತ್ತಾನೆ. ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡುತ್ತದೆ.