Asianet Suvarna News Asianet Suvarna News

Astrology Tips: ಹನುಮಾನ್ ಚಾಲೀಸಾ ಪಠಣ ವೇಳೆ ಈ ವಿಷ್ಯ ನೆನಪಿರಲಿ

ಹನುಮಾನ್ ಚಾಲೀಸಾ ಓದಿದ್ರೆ ಹನುಮಂತ ಕೃಪೆ ತೋರ್ತಾನೆ ಎಂಬ ಕಾರಣಕ್ಕೆ ಅನೇಕರು ಇದನ್ನು ಪಠಿಸ್ತಾರೆ. ಆದ್ರೆ ಪ್ರತಿ ದಿನ ಹನುಮಾನ್ ಚಾಲೀಸ್ ಓದಿದ್ರೂ ಅನೇಕರ ಬಾಳು ಹಸನಾಗೋದಿಲ್ಲ. ಅದಕ್ಕೆ ಕೆಲ ಕಾರಣವಿದೆ. ಹನುಮಾನ್ ಚಾಲೀಸಾ ಓದಲು ನಿಯಮವಿದೆ. 
 

Mistakes To Avoid While Chanting Hanuman Chalisa At Home
Author
First Published Dec 1, 2022, 3:19 PM IST

ಹನುಮಂತನನ್ನು ಚಿರಂಜೀವಿ ಎಂದು ಕರೆಯಲಾಗುತ್ತದೆ. ಅಂದ್ರೆ ಕಲಿಯುಗದಲ್ಲೂ ಭಕ್ತರಿಗೆ ಬೇಗ ಒಲಿಯುವ, ಬೇಗ ಫಲ ನೀಡುವ ದೇವರೆಂದ್ರೆ ಹನುಮಂತ ಎಂದು ನಂಬಲಾಗಿದೆ. ಹಿಂದೂ ಧರ್ಮದ ಪ್ರಕಾರ, ಹನುಮಂತ ಪೂಜಿ ಮಾಡುವುದ್ರಿಂದ ಶುಭ ಫಲಿತಾಂಶ ಸಿಗುತ್ತದೆ. ಹನುಮಂತನ ಆರಾಧನೆಯನ್ನು ಭಕ್ತಿಯಿಂದ ಮಾಡಿದ್ರೆ  ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. 

ಜನರು ಹನುಮಂತ (Hanuman) ನನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಹನುಮಂತನ ದೇವಸ್ಥಾನ (Temple) ಕ್ಕೆ ಭೇಟಿ ನೀಡಿ, ದರ್ಶನ ಪಡೆಯುವ ಜೊತೆಗೆ ಹನುಮಾನ ಚಾಲೀಸಾ (Hanuman Chalisa ) ಪಠಣವನ್ನು ಭಕ್ತರು ಮಾಡ್ತಾರೆ. ನಿಯಮಿತವಾದ ಚಾಲೀಸಾವನ್ನು ಪಠಿಸುವುದರಿಂದ ಮಾರುತಿ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಹನುಮಾನ್ ಚಾಲೀಸಾ ಪಠಿಸುವಾಗ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಇಲ್ಲವೆಂದ್ರೆ ಪೂಜೆಯ ಫಲ ಪೂರ್ಣವಾಗಿ ಪಡೆಯಲು ಸಾಧ್ಯವಿಲ್ಲ. ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ನೀವು ಪಠಿಸುತ್ತಿದ್ದರೆ ಯಾವ ತಪ್ಪುಗಳನ್ನು ಮಾಡಬಾರದು ಎಂದು ನಾವು ಹೇಳ್ತೆವೆ.

ಹನುಮಾನ್ ಚಾಲೀಸಾ ಓದುವಾಗ ಈ ತಪ್ಪು ಮಾಡ್ಬೇಡಿ :

ಮಧ್ಯದಂದಿ ಓದುವುದು : ಜ್ಯೋತಿಷ್ಯ (Astrology) ನಂಬಿಕೆಗಳ ಪ್ರಕಾರ,  ಹನುಮಾನ್ ಚಾಲೀಸಾವನ್ನು ಸರಿಯಾದ ರೀತಿಯಲ್ಲಿ ಓದಿದ್ರೆ ಸಾಕಷ್ಟು ಪ್ರಯೋಜನವಿದೆ. ಕೆಲವರು ಸಮಯವಿಲ್ಲ ಎನ್ನುವ ಕಾರಣಕ್ಕೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಆರಂಭದಿಂದ ಹನುಮಾನ ಚಾಲೀಸಾ ಓದುವ ಬದಲು ಮಧ್ಯದಿಂದ ಪಠಣ ಶುರು ಮಾಡ್ತಾರೆ. ಹೀಗೆ ಮಾಡಿದ್ರೆ ನಿಮಗೆ ಯಾವುದೇ ಫಲ ಸಿಗುವುದಿಲ್ಲ. ಹಾಗೆ ಹನುಮಾನ ಚಾಲೀಸಾ ಓದುವ ವೇಳೆ ಮಧ್ಯ ಎದ್ದು ಹೋಗಬಾರದು.
ಹನುಮಾನ್ ಚಾಲೀಸಾ ಪಠಿಸಿದಾಗ ಎಂದಿಗೂ ಆತುರಪಡಬಾರದು. ಅದರ ಯಾವುದೇ ಪದ್ಯಗಳನ್ನು ತಪ್ಪಾಗಿ ಉಚ್ಚರಿಸಬಾರದು. ಅದನ್ನು ಯಾವಾಗಲೂ ತಾಳ್ಮೆಯಿಂದ ಓದಬೇಕು. ಹಾಗೆ ಪೂರ್ಣವಾಗಿ ಓದಿದ ನಂತ್ರವೇ ಮಾತನಾಡಬೇಕು. 

ವಿವಾಹೇತರ ಸಂಬಂಧ : ವಿವಾಹಿತರಾಗಿದ್ದು, ಹನುಮಾನ ಚಾಲೀಸಾ ಪಠಣೆ ಮಾಡುತ್ತಿದ್ದರೆ ಸಂಗಾತಿಯ ಜೊತೆ ಮಾತ್ರ ಸಂಬಂಧ ಬೆಳೆಸಬೇಕು. ಯಾವುದೇ ಕಾರಣಕ್ಕೂ ಸಂಗಾತಿ ಹೊರತುಪಡಿಸಿ ಬೇರೆಯವರ ಜೊತೆ ಸಂಬಂಧ ಬೆಳೆಸಬಾರದು. ಹೀಗೆ ಮಾಡಿದ್ರೆ ಹನುಮಾನ್ ಚಾಲೀಸಾ ಪಠಣೆಯ ಫಲ ಸಿಗುವುದಿಲ್ಲ.

ಶುದ್ಧ ದೇಹ ಮತ್ತು ಮನಸ್ಸು (Mind) ಮುಖ್ಯ :  ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರೆ ಶುದ್ಧ ದೇಹ ಮತ್ತು ಮನಸ್ಸು ಹೊಂದಿರಬೇಕು. ಪಠಣೆ ಮಾಡ್ತಾ ಬೇರೆಯವರಿಗೆ ಕಟ್ಟದ್ದು ಬಯಸಬಾರದು. ಕೆಟ್ಟ ಆಲೋಚನೆ (Thought) ಮಾಡಬಾರದು. ಮನಸ್ಸು ಶುದ್ಧವಾಗಿರಬೇಕು. ಹಾಗೆಯೇ ದೇಹ ಕೂಡ ಶುದ್ಧವಾಗಿರಬೇಕು. ದೇವರ ಮನೆಯಲ್ಲಿ  ದೀಪ ಹಚ್ಚಿದ ನಂತ್ರ ಹನುಮಾನ ಚಾಲೀಸಾ ಓದಲು ಶುರು ಮಾಡಬೇಕು. 

ಆಹಾರ, ಚಟದ ಬಗ್ಗೆ ಎಚ್ಚರಿಕೆ : ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರೆ ತಾಮಸಿಕ ಆಹಾರವನ್ನು ಸೇವನೆ ಮಾಡಬಾರದು. ಹಾಗೆಯೇ  ಮದ್ಯ ಸೇವನೆ ನಿಲ್ಲಿಸಬೇಕು. ನೀವು ತಾಮಸಿಕ ಆಹಾರ ಸೇವನೆ ಮಾಡಿ, ಮದ್ಯಪಾನ ಮಾಡ್ತಿದ್ದರೆ ಹನುಮಂತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. 

Astrology Tips: ಮಾನಸಿಕ ಆರೋಗ್ಯ ಹಾಳು ಮಾಡುತ್ತೆ ಈ ಗ್ರಹ

ಬಡವರು, ಪ್ರಾಣಿಗಳ ಹಿಂಸೆ ಸಲ್ಲದು : ಮನೆಯ ಸಮೃದ್ಧಿಗಾಗಿ ನೀವು ಹನುಮಾನ್ ಚಾಲೀಸವನ್ನು ಪಠಿಸುತ್ತಿದ್ದರೆ ಯಾವುದೇ ಪ್ರಾಣಿ ಅಥವಾ ಬಡವರಿಗೆ ತೊಂದರೆ ಕೊಡಬೇಡಿ. ಇದ್ರಿಂದ ಸಂತೋಷದ ಬದಲು ದುಃಖ ಹೆಚ್ಚಾಗುತ್ತದೆ. ಮನೆಯ ವಾತಾವರಣ ಕಲುಷಿತಗೊಳ್ಳುತ್ತದೆ.

ASTROLOGY: ಸಹಾನುಭೂತಿಯೇ ಇಲ್ಲದ ರಾಶಿಗಳಿವು!

ಅಪರಾಧದಿಂದ ದೂರವಿರಿ : ಹನುಮಾನ ಚಾಲೀಸಾ ಪಠಿಸುವವರು ಯಾವಾಗ್ಲೂ ಅಪರಾಧ ಮಾಡಬಾರದು. ಸತ್ಯಕ್ಕೆ ಆದ್ಯತೆ ನೀಡ್ಬೇಕು. ಮೋಸ ಮಾಡಬಾರದು. ದುರ್ಬಲರ ಜೊತೆ ಅನಗತ್ಯ ಜಗಳ ಮಾಡಬಾರದು. ಬೇರೆಯವರನ್ನು ನಿಂದಿಸಬಾರದು. ಕೆಟ್ಟ ಪದಗಳ ಬಳಕೆ ಮಾಡಬಾರದು. ಅನಗತ್ಯ ಜಗಳ, ಅಪರಾಧ ಮಾಡುವ ವ್ಯಕ್ತಿಗೆ ಹನುಮಂತ ಒಲಿಯುವುದಿಲ್ಲ. 

Follow Us:
Download App:
  • android
  • ios