ವಾಸ್ತುವಿನಲ್ಲಿ ನಕಾರಾತ್ಮಕತೆ ಕಡಿಮೆಯಾಗಲು ಕೆಲವು ವಿಧಾನಗಳನ್ನು ಅಳವಡಿಸಲಾಗುತ್ತದೆ. ಮನೆಯಲ್ಲಿ ವಾಸ್ತುವಿನ ಬಗ್ಗೆ ಗಮನ ಹರಿಸಿದರೆ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ಮನೆಯಲ್ಲಿ ವಾಸ್ತು ದೋಷ ಕಂಡು ಬಂದರೆ ಮನೆಯ ಮುಂಬಾಗಿಲಿನಲ್ಲಿ ಈ ವಸ್ತುಗಳನ್ನಿಡಿ ಅಥವಾ ಇದ್ದರೆ ತೆಗೆದಿಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆವರಿಸುತ್ತದೆ. 

  • ಮನೆ ಮುಖ್ಯ ದ್ವಾರದಲ್ಲಿ ಡಸ್ಟ್ ಬಿನ್ ಇಡಬೇಡಿ. ಮನೆಯ ಮುಂಭಾಗ ಸದಾ ಸುಂದರವಾಗಿರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕ ಅಂಶ ಹೆಚ್ಚುತ್ತದೆ. 
  • ಸಕಾರಾತ್ಮಕತೆ ಹೆಚ್ಚಿಸಲು ಮನೆಯ ಬಾಗಿಲಿನಲ್ಲಿ ಸ್ವಸ್ತಿಕ್, ಓಂ, ಶ್ರೀಗಣೇಶ್ ಮೊದಲಾದ ಶುಭ ಚಿಹ್ನೆ ಇರಲಿ. ಈ ಚಿಹ್ನೆ ಪ್ರಭಾವದಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. 
  • ಮನೆಯ ಮುಖ್ಯ ದ್ವಾರದಲ್ಲಿ ಗಾಳಿ ಗಂಟೆ ಇರಲಿ. ಇದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. 
  • ಮುಖ್ಯದ್ವಾರದ ಅಕ್ಕ ಪಕ್ಕ ತುಳಸಿ ಗಿಡಗಳನ್ನು ನೆಡುವುದು ಶುಭ. ಇದರಿಂದ ಮನೆಗೆ ಪ್ರವೇಶಿಸುವ ನೆಗೆಟಿವ್ ಎನರ್ಜಿ ಪಾಸಿಟಿವ್ ಆಗಿ ಪರಿವರ್ತನೆಯಾಗುತ್ತದೆ. 
  • ಮನೆ ಎದುರು ಅಶೋಕ ಎಲೆ ಇಟ್ಟರೆ ಅಥವಾ ಗಿಡವನ್ನೇ ಬೆಳೆಸಿದರೆ ಒಳಿತು. ಇದರಿಂದ ಮನೆಯ ಒಳಗೆ ನೆಗೆಟಿವ್ ಎನೆರ್ಜಿ ಬರೋದಿಲ್ಲ. 
  • ಮನೆ ಮುಖ್ಯದ್ವಾರದ ಬಳಿ ಕೆಂಪು ದಾರದಿಂದ ಕಟ್ಟಿದ ಪವಿತ್ರ ಕಾಯಿನ್ ಇಟ್ಟರೂ ಶುಭ. 

ಸುಖ ಶಾಂತಿಗೆ ಮನಿಪ್ಲ್ಯಾಂಟ್‌ ಹೇಗೆ ನೆಡಬೇಕು?