ಸುಖ ಶಾಂತಿಗೆ ಮನಿಪ್ಲ್ಯಾಂಟ್ ಹೇಗೆ ನೆಡಬೇಕು?
ಅನೇಕ ಆರೋಗ್ಯ ಗುಣಗಳಿರುವ ತುಳಸಿಯನ್ನು ಎಲ್ಲರೂ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಜತೆಗೆ ಕೆಲವು ಗಿಡಗಳು ಮನೆಯಲ್ಲಿ ಅಶಾಂತಿ ಸೃಷ್ಟಿಸಿದರೆ, ಮತ್ತೆ ಕೆಲವು ಸುಖ, ಶಾಂತಿ ಹೆಚ್ಚಿಸುತ್ತದೆ. ಅಂಥದ್ರಲ್ಲಿ ಮನಿ ಪ್ಲ್ಯಾಂಟ್ ಸಹ ಒಂದು.
ಮನೆಯಲ್ಲಿ ಸುಖ ಶಾಂತಿ ತುಂಬಿರಲು ವಾಸ್ತು ಟಿಪ್ಸ್ ಪಾಲಿಸಲಾಗುತ್ತದೆ. ವಾಸ್ತು ಅನುಸಾರ ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟರೆ ವಾತಾವರಣದಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ. ಅಲ್ಲದೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ. ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಏನೇನು ಲಾಭ?
- ಮನಿ ಪ್ಲಾಂಟ್ ಎಷ್ಟು ಹಸಿರಾಗಿರುತ್ತದೋ, ಅಷ್ಟು ಶುಭ ಎನ್ನುತ್ತಾರೆ. ಇದರ ಎಲೆಗಳು ಒಣಗಿ ಹೋಗುವುದು, ಹಳದಿ, ಬಿಳಿಯಾಗುವುದು ಅಶುಭ. ಆದುದರಿಂದ ಎಲೆ ಹಾಳಾದ ಕೂಡಲೇ ಅದನ್ನು ಕಿತ್ತುಬಿಡಿ.
- ಮನಿ ಪ್ಲಾಂಟ್ ಸಮೃದ್ಧಿಯ ಸಂಕೇತ. ಆದುದರಿಂದ ಇದನ್ನು ಮೇಲಕ್ಕೆ ಏರುವಂತೆ ಬೆಳೆಸಲಾಗುತ್ತದೆ. ನೆಲದ ಮೇಲೆ ಬೆಳೆದ ಮನಿ ಪ್ಲಾಂಟ್ ವಾಸ್ತು ದೋಷ ಹೆಚ್ಚಿಸುತ್ತದೆ.
- ಮನಿ ಪ್ಲಾಂಟನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಬೆಳೆಸಿ. ಇದರಿಂದ ಹಣ ವೃದ್ಧಿಯಾಗುತ್ತದೆ. ಅಲ್ಲದೆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ.
- ಆಗ್ನೇಯ ದಿಕ್ಕಿನಲ್ಲಿ ಶುಕ್ರ ದೇವನ ಅದಿಪತ್ಯವಿದೆ. ಶುಕ್ರ ಗ್ರಹದ ಜಾಗದಲ್ಲಿ ಮನಿ ಪ್ಲಾಂಟ್ ಗಿಡ ನೆಟ್ಟರೆ ಶುಭ.
- ಮನಿ ಪ್ಲಾಂಟನ್ನು ಈಶಾನ್ಯ ದಿಕ್ಕಿನಲ್ಲಿ ಬೆಳೆಸಬಾರದು. ಈ ತಾಣದ ಅಧಿಪತಿ ಬೃಹಸ್ಪತಿ. ಶುಕ್ರ ಮತ್ತು ಬೃಹಸ್ಪತಿ ಶತ್ರುಗಳು. ಆದುದರಿಂದ ಈಶಾನ್ಯ ದಿಕ್ಕಿನಲ್ಲಿ ಶುಕ್ರ ಗ್ರಹದ ಗಿಡ ನೆಡಬಾರದು.
- ಮನಿ ಪ್ಲಾಂಟನ್ನು ಹೆಚ್ಚು ಬೆಳಕಿರುವ ಜಾಗದಲ್ಲಿ ಬೆಳೆಸಬೇಡಿ. ಇದನ್ನು ಮನೆ ಒಳಗೂ ಬೆಳೆಸಬಹುದು. ಈ ಗಿಡವನ್ನು ನೀರಿನಲ್ಲಿಟ್ಟರೆ ಉತ್ತಮ. ಇದರ ನೀರನ್ನು ಪ್ರತಿ ವಾರ ಬದಲಾಯಿಸಬೇಕು.