Uttara Kannada ಒಂಟಿ ಮರ್ಕಟನ ಕಾಟ, ಜನರಿಗೆ ಪ್ರಾಣ ಸಂಕಟ!

ಅಂಕೋಲಾದಲ್ಲಿ ಬೊಬ್ರುವಾಡ ಎಂಬಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಮಂಗವೊಂದು  ಜನರಿಗೆ ಕಾಟ ಕೊಡುತ್ತಿದ್ದು, ಮಂಗದ ಕಾಟಕ್ಕೆ ಜನ ಹೈರಾಣರಾಗಿದ್ದಾರೆ.

monkey attack on people in Uttara Kannada near Ankola gow

ಉತ್ತರ ಕನ್ನಡ(ಎ.27): ಅಂಕೋಲಾದಲ್ಲಿ ಬೊಬ್ರುವಾಡ ಎಂಬಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಮಂಗವೊಂದು  ಜನರಿಗೆ ಕಾಟ ಕೊಡುತ್ತಿದ್ದು, ಮಂಗದ ಕಾಟಕ್ಕೆ ಜನ ಹೈರಾಣರಾಗಿದ್ದಾರೆ. ಚಿಕ್ಕ ಮಕ್ಕಳು, ವೃದ್ಧರು ಎನ್ನದೆ ಕಂಡ ಕಂಡವರನ್ನು ಮಂಗ ಗಾಯಗೊಳಿಸುತ್ತಿದೆ. ಹೀಗಾಗಿ ಮರ್ಕಟನ ಕಾಟ ಅಂಕೋಲಾದ  ಸಾರ್ವಜನಿಕರಿಗೆ ಪ್ರಾಣ ಸಂಕಟವಾಗಿದೆ.

ಸುಮಾರು 12 ದಿನಗಳಿಂದ  ಸುಮಾರು 10ಕ್ಕೂ ಹೆಚ್ಚು ಜನರ ಮೇಲೆ ಈ ಒಂಟಿ ಮಂಗ ದಾಳಿ ನಡೆಸಿ ಗಾಯಗೊಳಿಸಿದೆ. ಎಪ್ರಿಲ್ 26 ರಂದು ಏಕಾಏಕಿ ವೃದ್ಧೆಯೊಬ್ಬಳ ಕಾಲಿಗೆ ಕಚ್ಚಿ ಕೋತಿ ಗಾಯಗೊಳಿಸಿದ್ದು, ಚಿಕಿತ್ಸೆ ಕೊಡಿಸಲಾಗಿದೆ.

ಜನರಿಗೆ ಕಾಟ ಕೊಡುತ್ತಿರುವ ಮಂಗನನ್ನು ಹಿಡಿಯಲು ಕಳೆದ 2 ದಿನಗಳಿಂದ ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ ಅರವಳಿಕೆ ಮದ್ದು ನೀಡುವ ತಜ್ಞರಿಲ್ಲದೇ ಕಾರ್ಯಾಚರಣೆ  ಫಲಕಾರಿಯಾಗಿಲ್ಲ. ಇನ್ನು ಮಂಗನನ್ನು ಹಿಡಿಯಲು ಪ್ರಯತ್ನಿಸಿದ ಡೇರಿಂಗ್ ಟೀಂ ಮುಖ್ಯಸ್ಥ ಅಶೋಕ್ ನಾಯ್ಕ್ ಕೈ ಕಾಲಿಗೂ ಕಚ್ಚಿ ಕೋತಿ ಪರಾರಿಯಾಗಿದೆ.  ಕಾರ್ಯಾಚರಣೆಯಲ್ಲಿ  ಉರಗ ತಜ್ಞ ಮಹೇಶ್ ನಾಯ್ಕ್, ಅರಣ್ಯ ಇಲಾಖೆ ಸಿಬ್ಬಂದಿ ಸಿ.ಅರ್. ನಾಯ್ಕ್, ಬಸವನಗೌಡ ಬಗಲಿ ತೊಡಗಿಕೊಂಡಿದ್ದಾರೆ.

KPSC RECRUITMENT SCAM ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಕೋಟಿ ಕೋಟಿಗೆ ಸೇಲ್! 

Udupiಯಲ್ಲಿ ಸುರಂಗ ಪತ್ತೆ!: ಐತಿಹಾಸಿಕ ಮಹತ್ವದ ಹಲವು ಸಾಕ್ಷಿಗಳಿಗೆ ಕಾರಣವಾಗಿರುವ ಉಡುಪಿ (Udupi) ಜಿಲ್ಲೆಯ ಪರ್ಕಳದಲ್ಲಿ ಸುರಂಗವೊಂದು ( Tunnel ) ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಈ ಪರಿಸರದಲ್ಲಿ ಇದ್ದಕ್ಕಿದ್ದಂತೆ ಸುಮಾರು ಐದು ಅಡಿ ಉದ್ದದ ಸುರಂಗ ಕಂಡುಬಂದಿದೆ.

ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ಈಗಾಗಲೇ ಹಲವು ಐತಿಹಾಸಿಕ ರಚನೆಗಳು ಪತ್ತೆಯಾಗಿವೆ. ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಪರಿಸರದಲ್ಲಿ ಈಗಾಗಲೇ ಕೆಲವೇ ಎಕರೆ ಪ್ರದೇಶದಲ್ಲಿ ನೂರಾರು ಬಾವಿಗಳು ಕಂಡುಬಂದಿತ್ತು. ಪಾಳುಬಿದ್ದ ಗುಡ್ಡೆ ಪರಿಸರದ ಗಿಡಗಂಟಿಗಳ ನಡುವೆ ಒಂದು ಸುತ್ತು ಬಂದಾಗ ಅಕ್ಕಪಕ್ಕದಲ್ಲೇ ಸುಮಾರು 36 ಬಾವಿಗಳು ಪತ್ತೆಯಾಗಿದ್ದವು. ಇದೇ ಪರಿಸರದಲ್ಲಿ ನೂರಕ್ಕೂ ಅಧಿಕ ಬಾವಿಗಳಿವೆ ಎಂದು ಸ್ಥಳೀಯರು ಹೇಳುತ್ತಾ ಬಂದಿದ್ದರು. ಇದೀಗ ಮತ್ತೆ ಪರ್ಕಳ ಮತ್ತೊಂದು ಐತಿಹಾಸಿಕ ಸಾಕ್ಷಿಯನ್ನು ಬಿಚ್ಚಿಟ್ಟಿದೆ.

ಸದ್ಯ ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸುವ ವೇಳೆ ಇಲ್ಲಿನ ಕೃಷಿ ಗದ್ದೆ ಪರಿಸರದಲ್ಲಿ ದೊಡ್ಡಗಾತ್ರದ ಸುರಂಗ ಪತ್ತೆಯಾಗಿದೆ.‌ ಸುಮಾರು ಐದು ಅಡಿಗಳಷ್ಟು ಉದ್ದವಿರುವ ಸುರಂಗದೊಳಗೆ ವ್ಯಕ್ತಿಯೊಬ್ಬ ಆರಾಮವಾಗಿ ಓಡಾಡಬಹುದು. ಈ ಸುರಂಗದ ಒಂದು ಭಾಗ ಮುಚ್ಚಿದ್ದು ಕಾಮಗಾರಿಯಿಂದಾಗಿ ಮತ್ತೊಂದು ಭಾಗ ತೆರೆದುಕೊಂಡಿದೆ. 

BELAGAVI FARMERS ಆಕ್ರೋಶದ ನಡುವೆಯೇ ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ

ಕೃಷಿ ಕಾರ್ಯ ನಡೆಯುತ್ತಿದ್ದ ಈ ಗದ್ದೆ ಪರಿಸರವನ್ನು ತುಳುವಿನಲ್ಲಿ ಪೆರ್ಮರಿ ಖಂಡ ಎಂದು ಕರೆಯುತ್ತಾರೆ. ಅಂದರೆ ಹೆಬ್ಬಾವಿನ ಗದ್ದೆ ಎಂದರ್ಥ! ಈ ಪರಿಸರದಲ್ಲಿ ಹೆಬ್ಬಾವಿನ ಸಂಚಾರ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ವ್ಯಕ್ತಿಯೊಬ್ಬರು ಇದೇ ಪರಿಸರದಲ್ಲಿ ಏಕಕಾಲದಲ್ಲಿ ಸುಮಾರು ಏಳು ಹೆಬ್ಬಾವುಗಳನ್ನು ಕೂಡ ಈ ಹಿಂದೆ ಕಂಡಿದ್ದರಂತೆ. ಸದ್ಯ ಇದೇ ಗದ್ದೆಯಲ್ಲಿ ಈ ಸುರಂಗ ಕೂಡ ಪತ್ತೆಯಾಗಿದೆ.

ಕರಾವಳಿ ಭಾಗದಲ್ಲಿ ಈ ತೆರನಾದ ಸುರಂಗಗಳು ಆಗ್ಗಾಗ್ಗೆ ಕಾಣಿಸಿಕೊಳ್ಳುವುದುಂಟು. ಹೆಚ್ಚಾಗಿ ಗುಹಾ ಸಮಾಧಿ ಎಂದು ಇಂತಹ ಸುರಂಗಗಳನ್ನು ಕರೆಯಲಾಗುತ್ತದೆ. ಆದರೆ ಈ ಸುರಂಗದಲ್ಲಿ ಗುಹಾ ಸಮಾಧಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇತಿಹಾಸಜ್ಞ ಮುರುಗೇಶಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸುರಂಗದ ರಚನೆಯನ್ನು ಅಧ್ಯಯನ ಮಾಡಿದ್ದಾರೆ. ಸದ್ಯ ಅವರಿಗೂ ಕೂಡ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ಸುರಂಗದ ರಚನೆ ಗಟ್ಟಿಮುಟ್ಟಾಗಿದೆ. ಇದರ ಮೇಲ್ಭಾಗದಲ್ಲಿ ಇಬ್ಬರು ವ್ಯಕ್ತಿಗಳು ನಿಂತರೂ ಕುಸಿದಿಲ್ಲ. ದಿನಗಳೆದಂತೆ ಈ ಸುರಂಗದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ. 

Latest Videos
Follow Us:
Download App:
  • android
  • ios