Asianet Suvarna News Asianet Suvarna News

KPSC Recruitment Scam ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಕೋಟಿ ಕೋಟಿಗೆ ಸೇಲ್!

ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹಂತದ 'ಎ' ಗ್ರೇಡ್ ಹುದ್ದೆಗಳು ಕೋಟಿ ಕೋಟಿಗೆ ಮಾರಾಟ  ಆಗಿದೆ ಎಂದು  2015ನೇ ಬ್ಯಾಚ್ ನ ಕೆಪಿಎಸ್ಸಿ ಅಭ್ಯರ್ಥಿ ಮಂಗಳೂರಿನ ಯು.ಟಿ.ಫರ್ಝಾನ ಗಂಭೀರ ಆರೋಪ ಮಾಡಿದ್ದಾರೆ.

Karnataka Public Service Commission recruitment scam allegation gow
Author
Bengaluru, First Published Apr 27, 2022, 12:48 PM IST | Last Updated Apr 27, 2022, 12:48 PM IST

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು(ಎ.27): ಎಸಿ (assistant commissioner), ತಹಶೀಲ್ದಾರ್, ಡಿವೈಎಸ್ಪಿ ಹಂತದ 'ಎ' ಗ್ರೇಡ್ ಹುದ್ದೆಗಳು ಕೋಟಿ ಕೋಟಿಗೆ ಮಾರಾಟ ಮಾಡಿದ್ದಾರೆ. ಈ ಅಕ್ರಮದ ದಾಖಲೆಗಳನ್ನು ಯಾವುದೇ ತನಿಖಾಧಿಕಾರಿಗಳಿಗೆ ನೀಡಲು ಸಿದ್ದ ಎಂದು 2015ನೇ ಬ್ಯಾಚ್ ನ ಕೆಪಿಎಸ್ಸಿ (KPSC) ಅಭ್ಯರ್ಥಿ ಮಂಗಳೂರಿನ ಯು.ಟಿ.ಫರ್ಝಾನ ಗಂಭೀರ ಆರೋಪ ಮಾಡಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ 2015 ರ ಬ್ಯಾಚ್ ನ ಕೆಪಿಎಸ್ಸಿ ಅಭ್ಯರ್ಥಿ ಯು.ಟಿ.ಫರ್ಝಾನಾ ಹೇಳಿಕೆ ನೀಡಿದ್ದು, ಕರ್ನಾಟಕ ಲೋಕಸೇವಾ ಆಯೋಗದಲ್ಲಿ (Karnataka Public Service Commission) ಹುದ್ದೆಗಳು ಕೋಟಿ ಕೋಟಿಗೆ ಸೇಲ್ ಆಗಿವೆ ಎಂದು ಆರೋಪಿಸಿದ್ದಾರೆ. 2015ರ ಬ್ಯಾಚ್ ನ ಕೆಪಿಎಸ್ಸಿ ಪರೀಕ್ಷೆ (KPSC Exam) 2017ರಲ್ಲಿ ನಡೆದು ‌2019ರ ಡಿಸೆಂಬರ್ ನಲ್ಲಿ ಫಲಿತಾಂಶ ಬಂದಾಗ ಪ್ರತಿಭಾನ್ವಿತರ ಹೆಸರು ಲಿಸ್ಟ್ ನಲ್ಲಿ ಇರಲಿಲ್ಲ. ಈ ಅನುಮಾನದ ಹಿನ್ನೆಲೆ ನಮ್ಮ ಸಬ್ಜೆಕ್ಟ್ ವೈಸ್ ಅಂಕಗಳನ್ನು ಕೇಳಿದೆವು.

ಆದರೆ ಅವರು ನಮಗೆ ಅಂಕಗಳನ್ನು ಕೊಡದ ಕಾರಣ ಹೋರಾಟ ಮಾಡಿದೆವು. ಆ ಬಳಿಕ ಫಲಿತಾಂಶ ಬಂದ 62 ದಿನಗಳ ಬಳಿಕ ಅಂಕಗಳನ್ನು ಕೊಟ್ಟರು‌. ಆ ಅಂಕಗಳು ಮೂರ್ನಾಲ್ಕು ವಿಷಯಗಳಲ್ಲಿ ಒಂದೇ ರೀತಿ ಇತ್ತು. ನಮ್ಮ ಒಟ್ಟು ಅಂಕಕ್ಕೆ ಸರಿದೂಗಿಸಲು ಮನಸೋ ಇಚ್ಚೆ ಅಂಕ ಕೊಟ್ಟಿದ್ದರು. ಹೀಗಾಗಿ ಮತ್ತೆ ಅನುಮಾನ ಹೆಚ್ಚಾಗಿ ಉತ್ತರ ಪತ್ರಿಕೆ ತೋರಿಸಲು ಕೇಳಿದೆವು. ಆದರೆ ಅದನ್ನ ಕೊಡೋದೇ ಇಲ್ಲ ಅಂದಾಗ ನಾವು ಹೈ ಕೋರ್ಟ್ ರಿಟ್ ಹಾಕಿದೆವು. ಹೈ ಕೋರ್ಟ್ ಉತ್ತರ ಪತ್ರಿಕೆ ಕೊಡಿ ಅಂತ ಹೇಳಿದ್ರೂ ಕೆಪಿಎಸ್ಸಿ ಮೇಲ್ಮನವಿ ಸಲ್ಲಿಸಿ ತಪ್ಪಿಸಿಕೊಳ್ತಾ ಇದೆ.

HPCL Recruitment 2022: ಒಟ್ಟು 186 ವಿವಿಧ ಹುದ್ದೆಗಳಿಗೆ ನೇಮಕಾತಿ

ಪಿಎಸ್ಸೈ ಅಕ್ರಮದ ತನಿಖಾಧಿಕಾರಿಗಳು ಕೆಪಿಎಸ್ಸಿ ಅಕ್ರಮದ ತನಿಖೆಯನ್ನೂ ನಡೆಸಲಿ. ಕೆಪಿಎಸ್ಸಿ ಒಳಗಿರೋ ಸಿಬ್ಬಂದಿಯೇ 2015ರ ಬ್ಯಾಚ್ ಅಕ್ರಮದ ಬಗ್ಗೆ ಹೇಳಿದ್ದಾರೆ. ಕೋಟಿ ಕೋಟಿಗೆ ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಸೇಲ್ ಮಾಡಿದ್ದಾರೆ. ಈ ಅಕ್ರಮದ ದಾಖಲೆ ತನಿಖಾಧಿಕಾರಿಗಳಿಗೆ ನೀಡಲು ಸಿದ್ದ. ಪಿಎಸ್ಸೈ ದಂಧೆಯಲ್ಲಿದ್ದವರನ್ನ ಮತ್ತಷ್ಟು ತನಿಖೆ ಮಾಡಿದ್ರೆ ಕೆಪಿಎಸ್ಸಿ ಅಕ್ರಮ ಹೊರಗೆ ಬರುತ್ತೆ.

ಈ ಹಿಂದೆ 2008, 2010, 2011, 2014ರ ಬ್ಯಾಚ್ ನ ಉತ್ತರ ಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ಕೊಡಲಾಗಿದೆ. ಮಾಹಿತಿ ಹಕ್ಕಿನಡಿ ಕೇಳಿದ್ದಕ್ಕೆ ಸಿಡಿ ಮುಖಾಂತರ ಕೊಡಲಾಗಿದೆ. ಆದ್ರೆ 2015ರ ಬ್ಯಾಚ್ ನಲ್ಲಿ ಅಕ್ರಮ ನಡೆದಿರೋ ಕಾರಣ ಉತ್ತರ ಪತ್ರಿಕೆ ಕೊಡ್ತಾ ಇಲ್ಲ. ಒಎಂಆರ್ ಶೀಟ್ ಗಳನ್ನ ತಿದ್ದುವ ಕೆಲಸ ಕೆಪಿಎಸ್ಸಿಯ ಕೆಲವರು ಮಾಡಿದ್ದಾರೆ. ಡಿಜಿಟಲ್ ಮೌಲ್ಯಮಾಪನ ನಡೆದರೂ ಎಡಿಟೆಟ್ ನೋಟ್ ಪ್ಯಾಡ್ ನಲ್ಲಿ ತಿದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಅಷ್ಟಕ್ಕೂ 2015ರ ಬ್ಯಾಚ್ ನ ಕೆಪಿಎಸ್ಸಿ ಅಕ್ರಮ ಏನು?
2015ರ ಬ್ಯಾಚ್ ನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಯಲ್ಲಿ ಅಕ್ರಮದ ಘಾಟು ಈ ಹಿಂದೆಯೇ ಬಡಿದಿತ್ತು. ಆದರೆ ಈ ಬಗ್ಗೆ ಅಭ್ಯರ್ಥಿಗಳು ಬಹಿರಂಗವಾಗಿ ಮಾಧ್ಯಮಗಳ ಎದುರು ಬಂದಿರಲಿಲ್ಲ. ಇದೀಗ ಪಿಎಸ್ಸೈ ಅಕ್ರಮದ ಬೆನ್ನಲ್ಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಎದುರು ಪರೀಕ್ಷೆ ಬರೆದಿದ್ದ ಯು.ಟಿ.ಫರ್ಝಾನ ಅಕ್ರಮ ನಡೆದಿದೆ ಅಂತ ದೂರಿದ್ದಾರೆ.

ECIL Recruitment 2022: ವಿವಿಧ 20 ಹುದ್ದೆಗಳಿಗೆ ನೇಮಕಾತಿ, ₹2.4 ಲಕ್ಷ ವೇತನ!

2015ರ ಬ್ಯಾಚ್ ಕೆಪಿಎಸ್ಸಿ ಅಕ್ರಮದ ವಿರುದ್ದ 52 ಅಭ್ಯರ್ಥಿಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. 2015ನೇ ಸಾಲಿನಲ್ಲಿ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಪರೀಕ್ಷೆ ನಡೆಸಿತ್ತು.‌ 2017ರಲ್ಲಿ ಪರೀಕ್ಷೆ ನಡೆದು 2019 ಡಿಸೆಂಬರ್ ನಲ್ಲಿ  ಕೆಪಿಎಸ್ಸಿ ಫಲಿತಾಂಶ ಪ್ರಕಟಿಸಿತ್ತು. ಫಲಿತಾಂಶದಲ್ಲಿ ಅನುಮಾನ ಬಂದ ಹಿನ್ನೆಲೆ ಅಭ್ಯರ್ಥಿಗಳು ಎಲ್ಲಾ ವಿಷಯಗಳ ಅಂಕ ಕೇಳಿದ್ದರು. ಈ ವೇಳೆ ಅಂಕ ಪಟ್ಟಿ ನೀಡಲು  ಕೆಪಿಎಸ್ಸಿ ನಿರಾಕರಿಸಿದ್ದು, ಬಳಿಕ ಅಭ್ಯರ್ಥಿಗಳ ಹೋರಾಟಕ್ಕೆ ಮಣಿದು ಅಂಕಪಟ್ಟಿ ಪ್ರಕಟಿಸಿತ್ತು. ಈ ವೇಳೆ ಕೆಲವು ಅಭ್ಯರ್ಥಿಗಳಿಗೆ ಮೂರಕ್ಕೂ ಹೆಚ್ಚು ವಿಷಯಗಳಿಗೆ ಏಕ ರೂಪದ ಅಂಕ ನೀಡಿದ್ದು ಬೆಳಕಿಗೆ ಬಂದಿದೆ.

ಐಚ್ಛಿಕ ಪತ್ರಿಕೆ-1’ ಮತ್ತು ‘ಐಚ್ಛಿಕ ಪತ್ರಿಕೆ-2’ ಈ ಎರಡು ವಿಷಯಗಳಲ್ಲೂ ತಲಾ 107 ಅಂಕ, ಸಾಮಾನ್ಯ ಅಧ್ಯಯನ-1, ಸಾಮಾನ್ಯ ಅಧ್ಯಯನ -2 ಎಲ್ಲದರಲ್ಲೂ ಸಮಾನ ಅಂಕ ಬಂದಿತ್ತು. ಮೂರಕ್ಕಿಂತ ಹೆಚ್ಚು ವಿಷಯಗಳಲ್ಲಿ ಒಂದೇ ರೀತಿಯಲ್ಲಿ ಅಂಕದ ಹಿನ್ನೆಲೆ ಅನುಮಾನಗೊಂಡ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ನಕಲು ಪ್ರತಿಗೆ ಮನವಿ ಮಾಡಿದ್ದರು. ಆದರೆ 2019ರಿಂದ ಮನವಿ ಸಲ್ಲಿಸಿದರೂ ಉತ್ತರ ಪತ್ರಿಕೆ ನೀಡದ ಹಿನ್ನೆಲೆ ಉತ್ತರ ಪತ್ರಿಕೆಗಾಗಿ 52 ಅಭ್ಯರ್ಥಿಗಳು ಹೈಕೋರ್ಟ್ ನಲ್ಲಿ‌ ರಿಟ್ ಸಲ್ಲಿಸಿದ್ದಾರೆ. ಉತ್ತರ ಪತ್ರಿಕೆ ಅಭ್ಯರ್ಥಿಗಳಿಗೆ ತೋರಿಸಲು ಹೈ ಕೋರ್ಟ್ ಆದೇಶಿಸಿದ್ದರೂ ಕೆಪಿಎಸ್ಸಿ ನಿರ್ಲಕ್ಷ್ಯ ವಹಿಸಿದ್ದು, ಉತ್ತರ ಪತ್ರಿಕೆಗಳ ಡಿಜಿಟಲ್‌ ಮೌಲ್ಯಮಾಪನದ ವೇಳೆ ಭಾರೀ ಗೋಲ್ ಮಾಲ್ ಆರೋಪ ವ್ಯಕ್ತವಾಗಿದೆ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿರೋ ಹಿನ್ನೆಲೆ ಉತ್ತರ ಪತ್ರಿಕೆ ನೀಡಲು ಕೆಪಿಎಸ್ಸಿ ಹಿಂದೇಟು ಹಾಕ್ತಿದೆ ಎಂದು ದೂರಲಾಗಿದೆ.

Latest Videos
Follow Us:
Download App:
  • android
  • ios