Uttara Kannada: ಸ್ವಸ್ಥ ಭಾರತಕ್ಕಾಗಿ ಕಾಶ್ಮೀರ ಟು ಕನ್ಯಾಕುಮಾರಿ ರೋಲರ್ ಸ್ಕೇಟಿಂಗ್

ದೇಶದೆಲ್ಲೆಡೆ ಪರಿಸರ ಮಾಲಿನ್ಯ, ಅಪೌಷ್ಠಿಕತೆ, ಅನಕ್ಷರತೆ, ರಕ್ತ ಹೀನತೆಯಂತಹ ಪ್ರಕರಣಗ ವಿರುದ್ಧ ಜಾಗೃತಿಗೆ ಮುಂದಾಗಿರುವ ಮಹಿಳಾ ಹಾಗೂ ಪುರುಷರ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಹೊರಟಿದೆ.

Kashmir to Kanyakumari Roller Skating for Healthy India sat

ವರದಿ- ಭರತ್‌ರಾಜ್ ಕಲಡ್ಕ, ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಉತ್ತರ ಕನ್ನಡ (ಡಿ.7) : ಕೇಂದ್ರ, ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಯೋಜನೆ ಲಾಭ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪುತ್ತಿಲ್ಲ. ಇದರಿಂದ ದೇಶದೆಲ್ಲೆಡೆ ಪರಿಸರ ಮಾಲಿನ್ಯ, ಅಪೌಷ್ಠಿಕತೆ, ಅನಕ್ಷರತೆ, ರಕ್ತ ಹೀನತೆಯಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ, ಇದರ ವಿರುದ್ಧ ಜಾಗೃತಿಗೆ ಮುಂದಾಗಿರುವ ಮಹಿಳಾ ಹಾಗೂ ಪುರುಷರ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಹೊರಟಿದೆ. ಈ ಮೂಲಕ ಪ್ರತಿಯೊಬ್ಬ ಜನರಿಗೆ ಸಂದೇಶಗಳನ್ನು ಕೂಡಾ ನೀಡುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ, ಮಹಿಳೆಯರ ಸಶಕ್ತೀರಣಕ್ಕೊಸ್ಕರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಲೇ ಇವೆ. ಆದರೆ, ವಿವಿಧ ಕಾರಣಗಳಿಂದ ಅದು ತಲುಪಬೇಕಾದವರನ್ನು ತಲುಪದೇ ಅದೇಷ್ಟೋ ಕಡೆ ಯೊಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ. ದೇಶದ ಇಂತಹ ವಿವಿಧ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ 20 ಮಂದಿ ರೋಲರ್ ಸ್ಕೇಟರ್‌ಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅತುಲ್ಯ ಭಾರತ ರೋಲರ್ ಸ್ಕೇಟಿಂಗ್ ಸಂಕಲ್ಪಿತ ಯಾತ್ರೆಯೊಂದನ್ನು ಹಮ್ಮಿಕೊಂಡಿದ್ದಾರೆ. 

Uttarakannada: ಯೋಧನ ಸ್ಮಾರಕಕ್ಕೆ ಕಾರವಾರ ವಾರ್ಡ್ ಸದಸ್ಯನಿಂದ ಕಾಟ

ಕಾರವಾರ ಪ್ರವೇಶಿಸಿದ ಸ್ಕೇಟಿಂಗ್ ತಂಡ: ಈಗಾಗಲೇ ರಾಜಸ್ತಾನ್, ಗುಜರಾತ್, ಮಹಾರಾಷ್ಟ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳ ಮೂಲಕ 5 ಸಾವಿರ ಕಿ.ಮೀ.ಗೂ ಅಧಿಕ ದೂರ ಕ್ರಮಿಸಿ ಕರ್ನಾಟಕದ ಕಾರವಾರ ಪ್ರವೇಶಿಸಿದ್ದಾರೆ. ಸೋನಿ ಚೌರಾಸಿಯಾ ಅವರ ನೇತೃತ್ವದಲ್ಲಿ ಹೊರಟಿರುವ ರೋಲರ್ ಸ್ಕೇಟರ್‌ಗಳು ರಸ್ತೆ ಮಧ್ಯೆ ಸಿಗುವ ಹಳ್ಳಿಗಳಿಗೆ ತೆರಳಿ ಜನರಲ್ಲಿ ರಕ್ತಹೀನತೆ ಮುಕ್ತ, ಅಪೌಷ್ಠಿಕತೆ ಮುಕ್ತ ಭಾರತದ ಬಗ್ಗೆ, ಮಹಿಳಾ ಶಿಕ್ಷಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

100 ನಗರಗಳಲ್ಲಿ ಜಾಗೃತಿ ಸಂಕಲ್ಪ: ಯಾತ್ರೆಯು 30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಗಲು ಸಂಕಲ್ಪ ಮಾಡಲಾಗಿದೆ. ದಾರಿಯುದ್ದಕ್ಕೂ ಜಾಗೃತಿಗಾಗಿ ಕರಪತ್ರಗಳನ್ನು ಹಂಚಲಾಗುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸ್ಕೇಟಿಂಗ್ ಮೂಲಕವೇ ತೆರಳುವ ತಂಡವು ಸಂಜೆ ವಸತಿಗೃಹದಲ್ಲಿ ತಂಗಿ ಬೆಳಿಗ್ಗೆ ಪುನಃ ಹೊರಡುತ್ತದೆ. ಧಾರ್ಮಿಕ, ಐತಿಹಾಸಿಕ ಪರಂಪರೆಯ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಿ ಇಂತಹ ಪ್ರದೇಶಗಳಲ್ಲಿ ಪರಿಸರ ಜಾಗೃತಿಗಾಗಿ ಒಂದು ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಇವರ ಕಾರ್ಯಕ್ಕೆ ಅಖಿಲ ಭಾರತ ಗ್ರಾಹಕರ ಪಂಚಾಯತ್ ಕರ್ನಾಟಕ ಪ್ರಾಂತ ಸಂಘಟನೆಯಿಂದ ನೆರವು ನೀಡಲಾಗುತ್ತಿದೆ. ಒಳ್ಳೆಯ ಉದ್ದೇಶಕ್ಕೆ ಈ ವಿಶೇಷ ಯಾತ್ರೆ ಹೊರಟಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದು ಹೇಅತುಲ್ಯ ಭಾರತ್ ರೋಲರ್ ಸ್ಕೇಟರ್ಸ್ ಮುಖ್ಯಸ್ಥೆ ಸೋನಿ ಚೌರಾಸಿಯಾಳುತ್ತಾರೆ.

Karwar: ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವಿನ ರಕ್ಷಣೆ

ಒಟ್ಟಿನಲ್ಲಿ ದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು 10 ಮಂದಿ ಪುರುಷ, 10 ಮಂದಿ ಮಹಿಳೆಯರ ತಂಡವೊಂದು  ರೋಲರ್ ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಸಾಗಿ ಈ ತಂಡ ಮಾಡುತ್ತಿರುವ ಸತ್ಕಾರ್ಯ ಇತರರಿಗೂ ಮಾದರಿಯಾಗಿದೆ.

Latest Videos
Follow Us:
Download App:
  • android
  • ios