Snake Bite: ಹಾವು ಕಚ್ಚಿ ಇಮ್ಮಡಿ ಗುರುಮಲ್ಲ ಸ್ವಾಮೀಜಿ ಸಾವು
* ಹಾವು ಕಚ್ಚಿ ಸಾವಿಗೀಡಾದ ಸ್ವಾಮೀಜಿ
* ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಚ್ಚಿದ ಹಾವು
* ಚಾಮರಾಜನಗರ ಜಿಲ್ಲೆಯ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಮಠಾಧೀಶ
ಚಾಮರಾಜನಗರ, (ಡಿ.11): ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಮಠಾಧೀಶ ಹಾವು ಕಚ್ಚಿ (Snake Bite) ಸಾವನ್ನಪ್ಪಿದ್ದಾರೆ.
ಇಮ್ಮಡಿ ಗುರುಮಲ್ಲಸ್ವಾಮೀಜಿ(42) ಸಾವನ್ನಪ್ಪಿದವರು. ಶನಿವಾರ ಸಂಜೆ ಮಠದ ಜಮೀನಿನಲ್ಲಿ ಕೃಷಿ ಕಾರ್ಮಿಕರೊಂದಿಗೆ ಕಳೆ ಕೀಳುತ್ತಿದ್ದಾಗ ಇಮ್ಮಡಿ ಗುರುಮಲ್ಲಸ್ವಾಮೀಜಿಯ ಪಾದಕ್ಕೆ ಹಾವು(Snake) ಕಚ್ಚಿದೆ.
Maryland : ಹಾವುಗಳಿಗೆ ಬೆಂಕಿ ಇಟ್ಟ, 13 ಕೋಟಿ ಬೆಲೆಬಾಳುವ ತನ್ನದೇ ಮನೆ ಸುಟ್ಟು ಕೆಟ್ಟ!
ಕೂಡಲೇ ಅವರನ್ನ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ(Hospital) ಕರೆದೊಯ್ಯಲಾಗಿದೆ. ಬಳಿಕ ಅಲ್ಲಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ವಾಮೀಜಿಗಳ ಅನುಯಾಯಿಗಳು, ಮಠದ ಭಕ್ತರು ಕಣ್ಣೀರು ಹಾಕಿದ್ದಾರೆ.
ಶ್ರೀಗಳ ಅಂತ್ಯಕ್ರಿಯೆ ಗೋಪಾಲಪುರದ ಮಠದ ಬಳಿ ಭಾನುವಾರ ನಡೆಯಲಿದ್ದು, ಜಿಲ್ಲೆಯ ವಿವಿಧ ಮಠಗಳ ಶ್ರೀಗಳು ಬರಲಿದ್ದಾರೆ. ಶಿವೈಕ್ಯರಾದ ಗುರುಮಲ್ಲ ಸ್ವಾಮೀಜಿ ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸೂರಹಳ್ಳಿ ಗ್ರಾಮದವರಾಗಿದ್ದಾರೆ.
ನಿಧನಕ್ಕೆ ಶಾಸಕ ಸಿ.ಎಸ್.ನಿರಂಜನಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ ಸೇರಿದಂತೆ ಇನ್ನಿತರ ಸಂತಾಪ ಸೂಚಿಸಿದ್ದಾರೆ.
ಕಾಯಿಲೆ ವಾಸಿ ಮಾಡ್ತೇನೆ ಮಹಿಳೆಯ ಪ್ರಾಣ ತೆಗೆದ ಪೂಜಾರಿ
ಹಾಸನ: ತಲೆನೋವು (Headache) ಎಂದು ಬಂದ ಮಹಿಳೆಗೆ (Woman) ಸಮಸ್ಯೆ ನಿವಾರಿಸುವುದಾಗಿ ನಂಬಿಸಿ ದೇವಾಲಯಕ್ಕೆ (Temple) ಬಾ ಎಂದು ಹೇಳಿದ ರಕ್ಕಸ ಪೂಜಾರಿ (Priest), ನಂತರ ಮನಬಂದಂತೆ ಥಳಿಸಿ ಜೀವವನ್ನೇ ತೆಗೆದಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ (Channarayapattana) ತಾಲ್ಲೂಕಿನ ಗೌಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾರ್ವತಿ (37) ಪೂಜಾರಿಯಿಂದ ಪೆಟ್ಟು ತಿಂದು ಮೃತಪಟ್ಟ ನತದೃಷ್ಟ ಮಹಿಳೆ.
ಎರಡು ತಿಂಗಳ ಹಿಂದೆ ಪಾರ್ವತಿಗೆ ವಿಪರೀತ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ವೇಳೆ ಪರೀಕ್ಷಿಸಿದ ವೈದ್ಯರು ಯಾವುದೇ ಕಾಯಿಲೆ ಇಲ್ಲ ಎಂದು ತಿಳಿಸಿದ್ದರು. ಆದರೆ ಪಾರ್ವತಿಗೆ ತಲೆ ನೋವು ಕಡಿಮೆಯಾಗಿಲ್ಲ ಎಂದು ತನ್ನ ಸಂಬಂಧಿಕರ ಜೊತೆ ಹೇಳಿಕೊಂಡಿದ್ದರು. ಇದನ್ನು ಕೇಳಿದ ಕೆಲವರು ಬೆಕ್ಕ ಗ್ರಾಮದಲ್ಲಿ ಪಿರಿಯಪಟ್ಟಲದಮ್ಮ ದೇವರಿದೆ. ಅಲ್ಲಿಗೆ ಹೋಗಿ ಬರೋಣ ಬಾ ಎಂದು ಬೆಂಗಳೂರಿನಿಂದ ಕರೆಸಿಕೊಂಡರು. ಅದರಂತೆ ಡಿ.2 ರಂದು ಪಾರ್ವತಿ ಊರಿಗೆ ಬಂದಿದ್ದರು. ಸುದ್ದಿ ತಿಳಿದು ಅಲ್ಲಿಗೆ ಬಂದ ಪೂಜಾರಿ ಮನು ಎಂಬಾತ, ನಿಂಬೆ ಹಣ್ಣು ಮಂತ್ರಿಸಿ ಕೊಟ್ಟು ಡಿ.3 ರಂದು ದೇವಸ್ಥಾನಕ್ಕೆ ಬರಲು ಹೇಳಿ ಹೋಗಿದ್ದ. ಅದರಂತೆ ಪಾರ್ವತಿ ಅವರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.
ಪೂಜೆ ಮಾಡಿದ ಮನು ಮತ್ತೆ ಡಿ.7 ರಂದು ಉತ್ಸವವಿದೆ, ಅಂದು ಬನ್ನಿ ಎಂದು ಹೇಳಿ ಕಳುಸಿದ್ದಾನೆ. ಅದರಂತೆ ಮಂಜುಳಾ, ಪಾರ್ವತಿ ಹಾಗೂ ಇತರರು ಅಲ್ಲಿಗೆ ತೆರಳಿದ್ದಾರೆ. ಪಾರ್ವತಿಗೆ ತಲೆನೋವು (ಶಂಕೆ) ಇದೆ, ಇದನ್ನು ಬಿಡಿಸಬೇಕು ಎಂದು ಹೇಳಿ ಕೈಯಲ್ಲಿದ್ದ ಬೆತ್ತದ ಕೋಲಿನಿಂದ ತಲೆ, ಕೈಕಾಲು ಸೇರಿದಂತೆ ಮೈಮೇಲೆ ಮನಬಂದಂತೆ ಥಳಿಸಿದ್ದು, ಬೆತ್ತದೇಟಿಗೆ ಪಾರ್ವತಿ ಸುಸ್ತಾಗಿ ಬಿದ್ದಿದ್ದಾಳೆ. ನಂತರ ನಿಂಬೆಹಣ್ಣಿನ ರಸ ಕುಡಿಸಿ ಸರಿಹೋಗುತ್ತೆ ಎಂದು ಮನೆಗೆ ಕಳುಹಿಸಿದ್ದಾನೆ.
ನಂತರ ಪಾರ್ವತಿ ಸ್ಥಿತಿ ಗಂಭೀರವಾಗಿ ಡಿ.8 ರಂದು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾರ್ವತಿ ಮೃತಪಟ್ಟಿದ್ದಾಳೆ. ಪೂಜಾರಿಯೇ ಎಲ್ಲವನ್ನೂ ಪರಿಹಾರ ಮಾಡಿ ಬಿಡುತ್ತಾನೆ ಎಂದುಕೊಂಡಿದ್ದ ಪಾರ್ವತಿ ಮನೆಯವರು, ಇದೀಗ ಮಹಿಳೆ ಸಾವಿಗೆ ಪೂಜಾರಿಯೇ ಕಾರಣ, ಆತನ ವಿರುದ್ಧ ಕ್ರಮ ಜರುಗಿಸಬೇಕೆಂದು ಶ್ರವಣಬೆಳಗೊಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.